Connect with us

DEATH

ಪ್ರಸಿದ್ಧ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಸಿ.ಜೆ.ರಾಯ್ ಆತ್ಮಹತ್ಯೆ; ರಿಯಾಲಿಟಿ ಶೋಗೆ 50ಲಕ್ಷದ ಫ್ಲ್ಯಾಟ್ ಗಿಫ್ಟ್ ಪ್ರೈಝ್ ಕೊಡುತ್ತಿದ್ದ ಸಿ.ಜೆ.ರಾಯ್ ; ತನ್ನ ಕಛೇರಿಯಲ್ಲೇ ತಲೆಗೆ ಶೂಟ್ ಮಾಡ್ಕೊಂಡು ಸಾವಿಗೆ ಶರಣಾದ ಕೋಟ್ಯಾಧಿಪತಿ.

Published

on

ಕೇರಳ ಮೂಲದ ರಾವ್ ಅವರು ಕಾನ್ಫಿಡೆಂಟ್ ಗ್ರೂಪ್ ಎಂಬ ಪ್ರಮುಖ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಂಪನಿಯ ಸಂಸ್ಥೆಯನ್ನು ಹುಟ್ಟು ಹಾಕಿ ರಾಜ್ಯದಲ್ಲೇ ಪ್ರಸಿದ್ಧ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು.ಇವರು ರಿಯಾಲಿಟಿ ಶೋಗೆ 50ಲಕ್ಷದ ಫ್ಲ್ಯಾಟ್ ಗಿಫ್ಟ್ ಪ್ರೈಝ್ ಕೊಡುತ್ತಿದ್ದು ನಿರಂತರ ಪ್ರೋತ್ಸಾಹವನ್ನೂ ನೀಡುತ್ತಿದ್ದು, ಕಲಾಭಿಮಾನಿಗಳ ಮನೆಮಾತಾಗಿ ಅಭಿಮಾನಿಯಾಗಿದ್ದರು.

ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ತಲೆಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಂದು ಸಂಜೆ ಬೆಂಗಳೂರಿನ ಆನೇಪಾಳ್ಯದಲ್ಲಿರುವ ತಮ್ಮ ಕಚೇರಿಯಲ್ಲಿ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಅಶೋಕನಗರ ಠಾಣೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ತಮ್ಮ ಕುಟುಂಬದ ಮೇಲೆ ಪದೇ ಪದೇ ಆದಾಯ ತೆರಿಗೆ ಇಲಾಖೆ ನಡೆಸುತ್ತಿದ್ದ ದಾಳಿಗೆ ತತ್ತರಿಸಿದ ಸಿ.ಜೆ.ರಾಯ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಇಂದೂ ಸಹ ಐಟಿ ಇಲಾಖೆ ಅಧಿಕಾರಿಗಳ ತಂಡ ರಾಯ್ ಸಂಪತ್ತಿನ ಕೋಟೆಗೆ ದಾಳಿ ಮಾಡಿದ್ದು, ಈ ವೇಳೆ ಪಿಸ್ತೂಲಿನಿಂದ ತಲೆಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

2005ರಲ್ಲಿ ಆರಂಭವಾದ ಈ ಸಂಸ್ಥೆ ಕೇವಲ ಇಪ್ಪತ್ತು ವರ್ಷಗಳಲ್ಲಿ 65ಕ್ಕೂ ಹೆಚ್ಚು ಐಷಾರಾಮಿ ಯೋಜನೆಗಳನ್ನು ಪೂರ್ಣಗೊಳಿಸಿದೆ. ವಸತಿ ಅಪಾರ್ಟ್ಮೆಂಟ್, ವಿಲ್ಲಾಗಳು, ವಾಣಿಜ್ಯ ಸಂಕೀರ್ಣಗಳು, ಶಿಕ್ಷಣ, ಆತಿಥ್ಯ ಮತ್ತು ಮನರಂಜನಾ ಕ್ಷೇತ್ರಗಳಲ್ಲಿ ಕಾನ್ಫಿಡೆಂಟ್ ಗ್ರೂಪ್ ಕಾರ್ಯನಿರ್ವಹಿಸುತ್ತಿದೆ.
ಸಿಜೆ ರಾಯ್ ಅವರು ಸ್ವಿಟ್ಜರ್ಲೆಂಡ್‌ನ SBS ಬಿಸಿನೆಸ್ ಸ್ಕೂಲ್‌ನಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಡಾಕ್ಟರೇಟ್ ಪಡೆದಿದ್ದರು. ಕಾನ್ಫಿಡೆಂಟ್ ಗ್ರೂಪ್ ಎಂಬ ಸಂಸ್ಥೆ ಸ್ಥಾಪಿಸಿ, ಕೇರಳ ಮತ್ತು ಬೆಂಗಳೂರಿನಲ್ಲಿ ಪ್ರಮುಖ ಐಷಾರಾಮಿ ಯೋಜನೆಗಳನ್ನು ಪೂರ್ಣಗೊಳಿಸಿದ್ದು, ದುಬೈ ಮಾರುಕಟ್ಟೆಗೂ ತನ್ನ ರಿಯಲ್ ಎಸ್ಟೇಟ್ ಉದ್ಯಮವನ್ನು ವಿಸ್ತರಿಸಿದ್ದಾರೆ.

Continue Reading
Advertisement

accident

ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ, ಪುಣಚ ನಿವಾಸಿ ನಿಶಿತ್ ನಾಯ್ಕ್ (25)ರೈಲಿನಿಂದ ಬಿದ್ದು ದುರ್ಮರಣ..

Published

on

ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ, ಪುಣಚ ನಿವಾಸಿ ನಿಶಿತ್ ನಾಯ್ಕ್ (25)ರೈಲಿನಿಂದ ಬಿದ್ದು ನಿಧನರಾಗಿದ್ದಾರೆ. ಬೆಂಗಳೂರಿನ ಕಲ್ಯಾಣ್ ಜ್ಯುವೆಲ್ಲರ್ಸ್ ನಲ್ಲಿ ಉದ್ಯೋಗದಲ್ಲಿದ್ದ ನಿಶಿತ್ ಊರಿಗೆ ಬರಲು ಸೋಮವಾರ ರಾತ್ರಿ ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಜನರಲ್ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದ ಅವರು ತಡರಾತ್ರಿ 2-30ರ ಸುಮಾರಿಗೆ ಚೆನ್ನರಾಯಪಟ್ಟಣ ಹೊರವಲಯದಲ್ಲಿ ರೈಲಿನಿಂದ ಹೊರಕ್ಕೆಸೆಯಲ್ಪಟ್ಟು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪುತ್ತೂರು ವಿವೇಕಾನಂದ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದ ನಿಶಿತ್ ನಾಯ್ಕ್ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರರಾಗಿ ಗುರುತಿಸಿಕೊಂಡಿದ್ದರು.


ಪುಣಚ ಗ್ರಾಮದ ಬುಡಲೆ ನಿವಾಸಿ, ಮಾಜಿ ಸೈನಿಕರಾಗಿರುವ ಕುಂಞಣ್ಣ ನಾಯ್ಕ್ ಪುತ್ರ ನಿಧನದ ಸುದ್ದಿ ಗ್ರಾಮಸ್ಥರ ಅತೀವ ದು:ಖಕ್ಕೆ ಕಾರಣವಾಗಿದೆ. ಮೃತರು ತಂದೆ ಕುಂಞಣ್ಣ ನಾಯ್ಕ, ತಾಯಿ ರಾಧಾ ಹಾಗೂ ಓರ್ವ ಸಹೋದರಿ ನಿಶಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇದೀಗ ಹಾಸನದಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು ರಾತ್ರಿ ಹತ್ತು ಗಂಟೆಯ ಸುಮಾರಿಗೆ ಪ್ರಾರ್ಥಿವ ಶರೀರ ಪುಣಚ ಗ್ರಾಮ ತಲುಪಲಿದೆ ಎಂದು ಮೂಲಗಳು ತಿಳಿಸಿವೆ.

Continue Reading

DEATH

ಮನೆಯಲ್ಲಿ ಒಬ್ಬಂಟಿಯಾಗಿದ್ದ ವೃದ್ಧ ಸಂಶಯಾಸ್ಪದ ಸಾವು..ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು.

Published

on

ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಕೊಪ್ಪ ಮಾದೇರಿ ನಿವಾಸಿ ಕೆ.ಸಿ. ವರ್ಗೀಸ್ (73)ಎಂಬವರು ಮನೆಯಲ್ಲಿ ಒಬ್ಬಂಟಿಯಾಗಿದ್ದ ಸಂದರ್ಭ ಕಳೆದ ರಾತ್ರಿ(ಫೆ.8) ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಸಾವಿನ ಹಿಂದೆ ಹಲವು ರೀತಿಯ ಅನುಮಾನಗಳು ಹುಟ್ಟಿಕೊಂಡ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಸ್ಥಳಕ್ಕಾಗಮಿಸಿದ ಉಪ್ಪಿನಂಗಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗಳು, ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ಕಾರ್ಯದಲ್ಲಿ ತೊಡಗಿದ್ದಾರೆ. ಕೆ.ಸಿ. ವರ್ಗೀಸ್ ಅವರ ಮೂವರು ಗಂಡು ಮಕ್ಕಳ ಪೈಕಿ ಇಬ್ಬರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಆಟೋ ಚಾಲಕರಾಗಿರುವ ಕಿರಿಯ ಪುತ್ರ ಕೆ.ವಿ. ಥೋಮಸ್ ತನ್ನ ಪತ್ನಿ, ಮಕ್ಕಳ ಜೊತೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ವೃದ್ಧ ದಂಪತಿಗಳಾದ ಕೆ.ಸಿ. ವರ್ಗೀಸ್ ಹಾಗೂ ಅವರ ಪತ್ನಿ ಎಸ್ತರಾ ವರ್ಗೀಸ್ ಕೊಪ್ಪ ಮಾದೇರಿಯ ಮನೆಯಲ್ಲಿ ವಾಸವಾಗಿದ್ದು, ಮದ್ಯ ಸೇವಿಸುತ್ತಿರುವ ಕೆ.ಸಿ. ವರ್ಗೀಸ್ ಪ್ರತಿನಿತ್ಯ ಪತ್ನಿ ಜೊತೆಗೆ ಜಗಳ ಮಾಡುತ್ತಿದ್ದರೆಂಬ ಮಾಹಿತಿ ಕೇಳಿಬರುತ್ತಿದೆ. ಫೆ.8ರಂದು ಹಗಲು ವೇಳೆ ಇವರಿಬ್ಬರ ಮಧ್ಯೆ ಜಗಳ ನಡೆದಿದ್ದು, ಎಸ್ತರಾ ಅವರು ಮಗ ಕೆ.ವಿ. ಥೋಮಸ್ ಅವರ ಮನೆಗೆ ಹೋಗಿದ್ದರು.ರಾತ್ರಿ ಆಟೋ ಬಾಡಿಗೆ ಮುಗಿಸಿ ಇದೇ ರಸ್ತೆಯಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ತಂದೆ ಕೆ.ಸಿ. ವರ್ಗೀಸ್ ಅವರ ಮನೆಯಲ್ಲಿ ಲೈಟ್ ಉರಿಯುತ್ತಿರುವುದನ್ನು ಗಮನಿಸಿ ಬಂದು ಪರಿಶೀಲನೆ ನಡೆಸಿದ ವೇಳೆ ತಂದೆ ಮಂಚದಿಂದ ಬಿದ್ದು ಗಾಯಗೊಂಡಿದ್ದರೆನ್ನಲಾಗಿದೆ. ತಕ್ಷಣವೇ ಅವರನ್ನು ಅಂಬುಲೆನ್ಸ್ ವಾಹನದಲ್ಲಿ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ ಎಂದು ಪುತ್ರ ಕೆ.ವಿ. ಥೋಮಸ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.ವರ್ಗೀಸ್ ಸಾವಿನ ಹಿಂದೆ ಹಲವು ರೀತಿಯ ಅನುಮಾನಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ಕೈಗೊಂಡಿದ್ದಾರೆ. ಹೊರಗಿನಿಂದ ಮನೆಗೆ ಬಂದವರು ಹಲ್ಲೆ ನಡೆಸಿರುವುದರಿಂದಲೇ ಕೆ.ಸಿ. ವರ್ಗೀಸ್ ಸಾವನ್ನಪ್ಪಿರಬಹುದು ಎಂಬ ಮಾತುಗಳು ಪರಿಸರದಲ್ಲಿ ಕೇಳಿ ಬರುತ್ತಿವೆ. ಕೆ.ಸಿ. ವರ್ಗೀಸ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಗಿದ್ದು, ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗಳೂ ಆಗಮಿಸಿ ತನಿಖೆ ಕಾರ್ಯದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ UDR 07/2026, ಕಲಂ : 194(III) (IV)BNSS 2023ರಂತೆ ಪ್ರಕರಣ ದಾಖಲಾಗಿದೆ.

Continue Reading

accident

ಕನ್ಯಾನದ ಹೋಟೆಲ್ ಕಾರ್ಮಿಕ ಮುನೀರ್ ದುರ್ಮರಣ.. ಕುಂಬಳೆ ಆರಿಕ್ಕಾಡಿಯಲ್ಲಿ ಕಾರು-ದ್ವಿಚಕ್ರ ವಾಹನ ಮಧ್ಯೆ ಭೀಕರ ಅಪಘಾತ..

Published

on

ರಾಷ್ಟ್ರೀಯ ಹೆದ್ದಾರಿಯ ಕುಂಬಳೆ-ಆರಿಕ್ಕಾಡಿಯಲ್ಲಿ ಕಾರು ಮತ್ತು ಡಿಯೋ ಸ್ಕೂಟರ್ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಡಿಯೋ ಸವಾರ ಮುನೀರ್(40) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂಲತಃ ಕೇರಳದ ಪಚ್ಚಂಬಳ ನಿವಾಸಿಯಾಗಿರುವ ಮುನೀರ್ ಕನ್ಯಾನ ಪರಿಸರದ ಯುವತಿಯನ್ನು ವಿವಾಹವಾಗಿದ್ದು ಬಳಿಕ ಇಲ್ಲೇ ವಾಸವಾಗಿದ್ದರು. ಕನ್ಯಾನ ಪೇಟೆಯಲ್ಲಿರುವ ಹೋಟೆಲಲ್ಲಿ ಕಾರ್ಮಿಕರಾಗಿರುವ ಮುನೀರ್ ಸಂಜೆ ಮಾಲಿಕನ KA19 EW 9003ಸಂಖ್ಯೆಯ ಡಿಯೋ ಸ್ಕೂಟರ್ ಪಡೆದು ಕುಂಬಳೆ ಕಡೆ ಹೋಗಿದ್ದರೆನ್ನಲಾಗಿದೆ.

ಮರಳಿ ಬರುವ ಸಂದರ್ಭ ಆರಿಕ್ಕಾಡಿಯಲ್ಲಿ ಮಿತಿಮೀರಿದ ವೇಗದಲ್ಲಿ ಬಂದ ಕಾರು ಡಿಯೋಗೆ ಡಿಕ್ಕಿ ಹೊಡೆದು ಸವಾರ ಮೃತಪಟ್ಟಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Continue Reading

Trending

Copyright © 2025 Deevatige