Connect with us

Bantawala

ವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..

Published

on

ವಿಟ್ಲ-ಮಂಗಳೂರು ಮುಖ್ಯರಸ್ತೆಯ ಶ್ರೀ ಎಲೆಕ್ಟ್ರಾನಿಕ್ಸ್ l ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ.


ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹತ್ತಿಕೊಂಡ ಬೆಂಕಿ ಶ್ರೀ ಎಲೆಕ್ಟ್ರಾನಿಕ್ಸ್ ಅಂಗಡಿಯಿಂದ ಆರಂಭವಾಗಿ ಪಕ್ಕದ ಅಮಿತ್ ಹೋಟೆಲ್ ಕೂಡಾ ವ್ಯಾಪಿಸಿದೆ. ಎರಡು ಕೋಟಿಗೂ ಅಧಿಕ ನಷ್ಟ ಅಂದಾಜಿಸಲಾಗಿದೆ. ವಿಟ್ಲದಲ್ಲಿ ಅಗ್ನಿಶಾಮಕ ದಳ ಇಲ್ಲದಿರುವುದೇ ಪ್ರಮುಖ ಸಮಸ್ಯೆಯಾಗಿದೆ. ಬೆಂಕಿಯನ್ನು ನಂದಿಸಲು ಸಾರ್ವಜನಿಕರು ಹರಸಾಹಸ ಪಡುತ್ತಿದ್ದಾರೆ.

ಹೊಸ ವರ್ಷದ ಆರಂಭಕ್ಕೆ ಮುನ್ನವೇ ವಿಟ್ಲದಲ್ಲಿ ಬೆಂಕಿ ದುರಂತ ಸಂಭವಿಸಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

Continue Reading
Advertisement

Bantawala

ವಿಟ್ಲದಲ್ಲಿ ಬಡಕಾರ್ಮಿಕೆ ರಾಜೇಶ್ವರಿಯವರ ಮನೆ ಬೆಂಕಿಗಾಹುತಿ

Published

on

ವಿಟ್ಲ ಸಮೀಪದ ವೀರಕಂಬ ಗ್ರಾಮದ ಗಣೇಶ್ ಕೋಡಿ ನಿವಾಸಿ ಕಾರ್ಮಿಕೆಯಾಗಿರುವ ರಾಜೇಶ್ವರಿ ಎಂಬವರ ಮನೆ ಆಕಸ್ಮಿಕ ಬೆಂಕಿ ಅನಾಹುತಕ್ಕೆ ಹೊತ್ತಿ ಉರಿದ ಘಟನೆಯೊಂದು ಪೆ.10ರಂದು ಸಂಭವಿಸಿದ್ದು, ಬಡ ನಿರ್ಗತಿಕ ಕುಟುಂಬದ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.


ಮನೆಯೊಡತಿ ರಾಜೇಶ್ವರಿ ಅವರು ಎಂದಿನಂತೆ ಬೆಳಗ್ಗೆ ಬೀಗ ಹಾಕಿ ಅಡಿಕೆ ಗಾರ್ಬನ್ ಕೆಲಸಕ್ಕೆ ಹೋಗಿದ್ದರೆ ಮಕ್ಕಳಿಬ್ಬರು ಶಾಲೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡು ಮನೆಯನ್ನು ಭಸ್ಮ ಮಾಡಿದೆ.

ಮನೆಯಿಂದ ವಿಪರೀತ ಹೊಗೆ ಬರುತ್ತಿರುವುದನ್ನು ಕಂಡ ಸ್ಥಳೀಯರು ತಕ್ಷಣ ಜಮಾಯಿಸಿ ಬೆಂಕಿಯನ್ನು ನಂದಿಸುವಷ್ಟರಲ್ಲಿಯೇ ಮನೆಯೊಳಗಿದ್ದ ಮಕ್ಕಳ ಬಟ್ಟೆಬರೆ ಶಾಲಾ ಪುಸ್ತಕಗಳು, ಮನೆಯ ದಾಖಲೆಪತ್ರಗಳು ಸೇರಿದಂತೆ ಮನೆಯೊಳಗಿದ್ದ ವಸ್ತುಗಳು ಕರಟಿಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.


ಬಡ ಕಾರ್ಮಿಕೆ ಗಾರ್ಬಲ್‌ ಕೆಲಸಕ್ಕೆ ಹೋಗಿ ದುಡಿದು ಜೀವನ ಸಾಗಿಸುತ್ತಿದ್ದು, ಮನೆ ಬೆಂಕಿಗಾಹುತಿಯಾದ ಘಟನೆಯಿಂದ ತೀವ್ರ ಅಸ್ವಸ್ಥರಾಗಿದ್ದು, ಅವರ ಕುಟುಂಬದ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.

Continue Reading

accident

ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ, ಪುಣಚ ನಿವಾಸಿ ನಿಶಿತ್ ನಾಯ್ಕ್ (25)ರೈಲಿನಿಂದ ಬಿದ್ದು ದುರ್ಮರಣ..

Published

on

ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ, ಪುಣಚ ನಿವಾಸಿ ನಿಶಿತ್ ನಾಯ್ಕ್ (25)ರೈಲಿನಿಂದ ಬಿದ್ದು ನಿಧನರಾಗಿದ್ದಾರೆ. ಬೆಂಗಳೂರಿನ ಕಲ್ಯಾಣ್ ಜ್ಯುವೆಲ್ಲರ್ಸ್ ನಲ್ಲಿ ಉದ್ಯೋಗದಲ್ಲಿದ್ದ ನಿಶಿತ್ ಊರಿಗೆ ಬರಲು ಸೋಮವಾರ ರಾತ್ರಿ ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಜನರಲ್ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದ ಅವರು ತಡರಾತ್ರಿ 2-30ರ ಸುಮಾರಿಗೆ ಚೆನ್ನರಾಯಪಟ್ಟಣ ಹೊರವಲಯದಲ್ಲಿ ರೈಲಿನಿಂದ ಹೊರಕ್ಕೆಸೆಯಲ್ಪಟ್ಟು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪುತ್ತೂರು ವಿವೇಕಾನಂದ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದ ನಿಶಿತ್ ನಾಯ್ಕ್ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರರಾಗಿ ಗುರುತಿಸಿಕೊಂಡಿದ್ದರು.


ಪುಣಚ ಗ್ರಾಮದ ಬುಡಲೆ ನಿವಾಸಿ, ಮಾಜಿ ಸೈನಿಕರಾಗಿರುವ ಕುಂಞಣ್ಣ ನಾಯ್ಕ್ ಪುತ್ರ ನಿಧನದ ಸುದ್ದಿ ಗ್ರಾಮಸ್ಥರ ಅತೀವ ದು:ಖಕ್ಕೆ ಕಾರಣವಾಗಿದೆ. ಮೃತರು ತಂದೆ ಕುಂಞಣ್ಣ ನಾಯ್ಕ, ತಾಯಿ ರಾಧಾ ಹಾಗೂ ಓರ್ವ ಸಹೋದರಿ ನಿಶಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇದೀಗ ಹಾಸನದಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು ರಾತ್ರಿ ಹತ್ತು ಗಂಟೆಯ ಸುಮಾರಿಗೆ ಪ್ರಾರ್ಥಿವ ಶರೀರ ಪುಣಚ ಗ್ರಾಮ ತಲುಪಲಿದೆ ಎಂದು ಮೂಲಗಳು ತಿಳಿಸಿವೆ.

Continue Reading

Bantawala

ಕುಟುಂಬದ ಯಜಮಾನರಾಗಿ ಪೂಂಜರಬೆಟ್ಟು ಕೇಶವ ಭಂಡಾರಿ; ಕುದ್ರಿಯ ಗುತ್ತು ತರವಾಡು ಟ್ರಸ್ಟಿನ ಪುನರ್‌ ರಚನಾ ಸಭೆ

Published

on

ವಿಟ್ಲ: ಕೊಳ್ನಾಡು ಗ್ರಾಮದ ಕುಡ್ತಮುಗೇರು ಸಮೀಪದ ಕುದ್ರಿಯ ತರವಾಡಿನ ನೂತನ ಯಜಮಾನರಾಗಿ ಹಿರಿಯ ದೈವ ಚಾಕಿರಿಯವರಾದ ಪೂಂಜರಬೆಟ್ಟು ಕೇಶವ ಭಂಡಾರಿ ಆಯ್ಕೆಯಾಗಿದ್ದಾರೆ. ಟ್ರಸ್ಟಿಗಳು ಮತ್ತು ಕುಟುಂಬಿಕರ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಕುದ್ರಿಯ ಗುತ್ತು ತರವಾಡು ಟ್ರಸ್ಟಿನ ಪುನರ್‌ ರಚನೆಯ ಸಭೆ ನಡೆಯಿತು.

ಹಿಂದಿನ ಟ್ರಸ್ಟಿಗಳ ಮರಣ, ರಾಜೀನಾಮೆ, ಹಾಗೂ ವಜಾಗೊಂಡ ಸದಸ್ಯರ ಸ್ಥಾನಕ್ಕೆ ನೂತನ ಟ್ರಸ್ಟಿಗಳನ್ನು ಆಯ್ಕೆ ಮಾಡಲಾಯಿತು. ಕುದ್ರಿಯ ಗುತ್ತು ಟ್ರಸ್ಟಿನ ನೂತನ ಗೌರವಾಧ್ಯಕ್ಷರಾಗಿ ವಿಠಲ ಮೋನಪ್ಪ ಶೆಟ್ಟಿ ನಾಂದೇಡ್, ಅಧ್ಯಕ್ಷರಾಗಿ ಚಂದ್ರಹಾಸ ಎಂ ಶೆಟ್ಟಿ ಅಳಕೆಮಜಲು, ಉಪಾಧ್ಯಕ್ಷರಾಗಿ ರೋಹಿಣಿ ರೈ ನೇರಳಕಟ್ಟೆ, ಹಾಗೂ ಚಂದ್ರಹಾಸ ರೈ ಮುಲ್ಕಾಜೆ ಮಾ ಡ, ಕಾರ್ಯದರ್ಶಿಯಾಗಿ ಗಣೇಶ್‌ ರೈ, ಕೋಶಾಧಿಕಾರಿಯಾಗಿ ಧನಂಜಯ ಶೆಟ್ಟಿ ಮುತ್ತೂರು, ಇವರನ್ನು ಟ್ರಸ್ಟಿಗಳ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇವರನ್ನು ಕುಟುಂಬಿಕರ ಮತ್ತು ಟ್ರಸ್ಟಿಗಳ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.

Continue Reading

Trending

Copyright © 2025 Deevatige