crime
ಪುತ್ತೂರು ದರ್ಭೆ ಗಲಾಟೆ ಪ್ರಕರಣ: ಧಾರ್ಮಿಕ ವೈಮನಸ್ಸಿಗೆ ಪ್ರಚೋದನೆ ಮತ್ತು ಬಂದ್ಗೆ ಕರೆ – ವ್ಯಕ್ತಿಯ ವಿರುದ್ಧ ಎಫ್.ಐ.ಆರ್ ದಾಖಲು
ಪುತ್ತೂರು: ಇತ್ತೀಚೆಗೆ ದರ್ಭೆಯ ಅಂಗಡಿಯೊಂದರಲ್ಲಿ ನಡೆದಿದ್ದ ಗಲಾಟೆಗೆ ಸಂಬಂಧಿಸಿದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ವೈಮನಸ್ಸು ಕೆರಳಿಸುವ ಹಾಗೂ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಸಂದೇಶಗಳನ್ನು ಹರಡಿಸಿ ಬಂದ್ಗೆ ಕರೆ ನೀಡಿದ ವ್ಯಕ್ತಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿನೇಶ್ ಪಂಜಿಗ ಎಂಬ ವಾಟ್ಸಾಪ್ ಖಾತೆ ಹೊಂದಿರುವ ವ್ಯಕ್ತಿಯು ದರ್ಭೆ ಘಟನೆಯನ್ನು ಆಧರಿಸಿ, ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುವಂತಹ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಸಂದೇಶಗಳನ್ನು ವಾಟ್ಸಾಪ್ ಗ್ರೂಪ್ಗಳಲ್ಲಿ ಪ್ರಸಾರ ಮಾಡಿದ್ದ ಎನ್ನಲಾಗಿದೆ. ಅಲ್ಲದೆ, ಬಂದ್ಗೆ ಕರೆ ನೀಡುವ ಮೂಲಕ ಜನರು ಅಕ್ರಮಕೂಟ ಸೇರಿ ಕಾನೂನುಬಾಹಿರ ಕೃತ್ಯಗಳನ್ನು ಎಸಗಲು ದುಷ್ಪ್ರೇರಣೆ ನೀಡಿರುವುದು ಕಂಡುಬಂದಿದೆ.
ಸಾರ್ವಜನಿಕ ಶಾಂತಿಗೆ ಭಂಗ ತರಲು ಯತ್ನಿಸಿದ ಆರೋಪದ ಮೇಲೆ ಪುತ್ತೂರು ನಗರ ಪೊಲೀಸರು ದಿನೇಶ್ ಪಂಜಿಗ ವಿರುದ್ಧ ಅಕ್ರ: 100/2026 ರಂತೆ ಭಾರತೀಯ ನ್ಯಾಯ ಸಂಹಿತೆ (BNS), 2023 ರ ಕಲಂ 353(2), 57 ಹಾಗೂ 189 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಅಥವಾ ಸಮಾಜದಲ್ಲಿ ವೈಮನಸ್ಸು ಮೂಡಿಸುವಂತಹ ಸಂದೇಶಗಳನ್ನು ಹಂಚಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ
arrest
ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಗೆ ಬೆದರಿಕೆಯೊಡ್ಡಿ ಹಣ ಸುಲಿಗೆ – ಹೊಯ್ಸಳ ವಾಹನದ ಮೂವರು ಪೊಲೀಸರ ಬಂಧನ.!
ಮಂಗಳೂರು: ನೆಹರು ಮೈದಾನದಲ್ಲಿ ವಾಕಿಂಗ್ ಮಾಡುತ್ತಿದ್ದ ಸಾರ್ವಜನಿಕರೊಬ್ಬರನ್ನು ಬೆದರಿಸಿ ಹಣ ಸುಲಿಗೆ ಮಾಡಿದ ಆರೋಪದಡಿ ಹೊಯ್ಸಳ ವಾಹನದಲ್ಲಿದ್ದ ಮೂವರು ಪೊಲೀಸ್ ಸಿಬ್ಬಂದಿಯನ್ನು ಪಾಂಡೇಶ್ವರ ಠಾಣೆಯ ಪೊಲೀಸರು ಬಂಧಿಸಿ, ಜೈಲಿಗಟ್ಟಿರುವ ಶ್ಲಾಘನೀಯ ಹಾಗೂ ರೋಚಕ ಘಟನೆ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಗಳನ್ನು ಬಾಗಲಕೋಟೆ ಮೂಲದ ಈರಣ್ಣ ಬೆನ್ನಿ, ಸುಳ್ಯ ಮೂಲದ ಉಮಾನಾಥ ಹಾಗೂ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಮೂಲದ ಶಿವರಾಜ್ ಎಂದು ಗುರುತಿಸಲಾಗಿದೆ.
ವಿಟ್ಲ ಮುಡ್ನೂರು ಗ್ರಾಮದ ನಿವಾಸಿಯಾಗಿದ್ದು, ಪ್ರಸ್ತುತ ಪಾಂಡೇಶ್ವರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಎಲೆಕ್ಟ್ರೀಷಿಯನ್ ನೀಡಿದ ದೂರಿನನ್ವಯ ಈ ಕ್ರಮ ಜರುಗಿಸಲಾಗಿದೆ.
ಸತತ ಕಿರುಕುಳ, ಬೆದರಿಕೆ ಒಡ್ಡಿ ಸುಲಿಗೆ:
ಕಳೆದ ಆಗಸ್ಟ್ 25ರಂದು ರಾತ್ರಿ ಸಂತ್ರಸ್ತ ವ್ಯಕ್ತಿ ನೆಹರು ಮೈದಾನದಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಹೊಯ್ಸಳ ವಾಹನದಲ್ಲಿ ಬಂದ ಸಿಬ್ಬಂದಿಗಳಾದ ಈರಣ್ಣ ಬೆನ್ನಿ ಮತ್ತು ಶಿವರಾಜ್, ಸಕಾರಣವಿಲ್ಲದೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ವ್ಯಕ್ತಿಯ ಮೊಬೈಲ್ ಕಸಿದು ಕವರ್ನಲ್ಲಿದ್ದ 300 ರೂಪಾಯಿ ತೆಗೆದುಕೊಂಡು, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಳುಹಿಸಿದ್ದರು.
ಇದಾಗಿ ಎರಡು ದಿನಗಳ ಬಳಿಕ ಮತ್ತೆ ಅದೇ ವ್ಯಕ್ತಿಯನ್ನು ತಡೆದು ನಿಲ್ಲಿಸಿದ ಆರೋಪಿಗಳು, ಅವರ ಬೈಕ್ ಕೀ ಹಾಗೂ ಎಟಿಎಂ ಕಾರ್ಡ್ ಕಿತ್ತುಕೊಂಡಿದ್ದರು. ಎಟಿಎಂನಲ್ಲಿ ಹಣವಿಲ್ಲ ಎಂದಾಗ, ಬಲವಂತವಾಗಿ ಎಟಿಎಂ ಕೇಂದ್ರಕ್ಕೆ ಕರೆದೊಯ್ದು 2,000 ರೂಪಾಯಿ ಡ್ರಾ ಮಾಡಿಸಿಕೊಂಡು ಸುಲಿಗೆ ಮಾಡಿದ್ದರು. ಹಣ ನೀಡದಿದ್ದರೆ ಸುಳ್ಳು ಕೇಸ್ ಹಾಕಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಒಡ್ಡಿದ್ದರು.
ನವೆಂಬರ್ 4ರಂದು ಮರುಕಳಿಸಿದ ದೌರ್ಜನ್ಯ:
ನವೆಂಬರ್ 4ರಂದು ರಾತ್ರಿ ವ್ಯಕ್ತಿ ಮತ್ತೆ ವಾಕಿಂಗ್ ಮಾಡುತ್ತಿದ್ದಾಗ ಈರಣ್ಣ ಮತ್ತು ಶಿವರಾಜ್ ತಡೆದು, ಮೊಬೈಲ್ ಹಾಗೂ ಬೈಕ್ ಕೀ ಕಸಿದುಕೊಂಡಿದ್ದಾರೆ. ಬಲವಂತವಾಗಿ ಹೊಯ್ಸಳ ವಾಹನದಲ್ಲಿ ಕುಳ್ಳಿರಿಸಿ “ಫೈನ್ ಕಟ್ಟದಿದ್ದರೆ ಬಿಡುವುದಿಲ್ಲ” ಎಂದು ಗದರಿಸಿ ಪಾಂಡೇಶ್ವರ ಕಡೆಗೆ ಕರೆದೊಯ್ದು ದಬಾಯಿಸಿದ್ದಾರೆ. ಬಳಿಕ ವ್ಯಕ್ತಿಯನ್ನು ಅಲ್ಲಿಯೇ ಬಿಟ್ಟು, ನಾಳೆ ಠಾಣೆಗೆ ಬರುವಂತೆ ಹೇಳಿ ಅವರ ಬೈಕನ್ನು ಆರೋಪಿ ಶಿವರಾಜ್ ಚಲಾಯಿಸಿಕೊಂಡು ಹೋಗಿದ್ದ. ಅದೇ ರಾತ್ರಿ 10:30ರ ಸುಮಾರಿಗೆ ಉಮಾನಾಥ ಎಂಬ ಮತ್ತೊಬ್ಬ ಸಿಬ್ಬಂದಿ ಕರೆ ಮಾಡಿ, ಬೈಕ್ ಹಿಂತಿರುಗಿಸಲು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ.
ರಕ್ಷಣೆ ನೀಡಬೇಕಾದ ಪೊಲೀಸರೇ ಈ ರೀತಿ ನಿರಂತರವಾಗಿ ಬೆದರಿಸಿ ಹಣ ಸುಲಿಗೆ ಮಾಡುತ್ತಿರುವುದರಿಂದ ಬೇಸತ್ತ ವ್ಯಕ್ತಿ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳೇ ಆದ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.
arrest
ಬಿಸಲೆ ಘಾಟಿಯಲ್ಲಿ ಗರ್ಭಿಣಿ ಯುವತಿಗೆ ಹಲ್ಲೆ ನಡೆಸಿ ಚರಂಡಿಗೆ ಎಸೆದ ಪ್ರಿಯಕರ..ನರರಾಕ್ಷಸ ಆರೋಪಿ ಬಂಧನ.
ಮಂಗಳೂರು : ಹಾಸನ ಜಿಲ್ಲೆಯ ಯಸಳೂರು ಮಣಿಮುಂಡ ನಿವಾಸಿ ಯುವತಿಯ ಮೇಲೆ ಬಿಸಿಲೆ ಘಾಟಿಯ ನಿರ್ಜನ ಪ್ರದೇಶದಲ್ಲಿ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೊಲೀಸರು ಶೀಘ್ರ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆಗಾಗಿ ಹಾಸನ ಜಿಲ್ಲೆಯ ಯಸಳೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
ಘಟನೆಯ ವಿವರ:
ಕಡಬ ತಾಲೂಕಿನ ಕೊಣಾಜೆ ಗ್ರಾಮದ ಪ್ರಸಾದ್ ಎಂಬಾತನೊಂದಿಗೆ ಸಂತ್ರಸ್ತ ಯುವತಿಯು ಕಳೆದ ಸುಮಾರು 3 ವರ್ಷಗಳಿಂದ ಸ್ನೇಹ ಹಾಗೂ ಪ್ರೇಮ ಸಂಬಂಧ ಹೊಂದಿದ್ದಳು. ದಿನಾಂಕ 04-11-2026 ರಂದು ಸಂಜೆ ಆರೋಪಿ ಪ್ರಸಾದ್, ಯುವತಿಯನ್ನು ಉಪ್ಪಿನಂಗಡಿಯಿಂದ ತನ್ನ ಕಾರಿನಲ್ಲಿ ಕರೆದುಕೊಂಡು ಕುಲ್ಕುಂದ ಮಾರ್ಗವಾಗಿ ಬಿಸಿಲೆ ಘಾಟಿ ರಸ್ತೆಯಲ್ಲಿ ಕರೆದೊಯ್ದಿದ್ದಾನೆ.
ರಾತ್ರಿ ವೇಳೆ ಬಿಸಿಲೆ ಘಾಟಿಯ ಕಾಡಿನ ಮಧ್ಯೆ ದಾರಿಹೋಕರ ಗಮನಕ್ಕೆ ಬಾರದ ಸ್ಥಳದಲ್ಲಿ, ಯುವತಿಯನ್ನು ಕೊಲೆ ಮಾಡುವ ಸ್ಪಷ್ಟ ಉದ್ದೇಶದಿಂದ ಕಬ್ಬಿಣದ ರಾಡ್ನಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ತೀವ್ರತೆಗೆ ಯುವತಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ಆಕೆಯನ್ನು ಅಲ್ಲಿಯೇ ಚರಂಡಿಗೆ ಎಸೆದು ಆರೋಪಿ ಕಾಲ್ಕಿತ್ತಿದ್ದಾನೆ.
ಅದ್ಭುತ ಜಾಗೃತಿ ಮತ್ತು ದೂರು ಸಲ್ಲಿಕೆ:
ರಾತ್ರಿಯಿಡೀ ಕಾಡಿನ ನಡುವಿನ ಚರಂಡಿಯಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಗರ್ಭಿಣಿ ಯುವತಿಗೆ, ಮರುದಿನ (05-11-2026) ಬೆಳಿಗ್ಗೆ ಪ್ರಜ್ಞೆ ಮರಳಿದೆ. ತೀವ್ರ ಗಾಯಗಳ ನಡುವೆಯೂ ಧೈರ್ಯ ತಳೆದು ಬಸ್ ಮೂಲಕ ಸುಬ್ರಹ್ಮಣ್ಯಕ್ಕೆ ತಲುಪಿದ ಯುವತಿ, ತಕ್ಷಣವೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಹಾಗೂ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಪೊಲೀಸ್ ಕಾನೂನು ಕ್ರಮಗಳು:
ಎಫ್ಐಆರ್ ದಾಖಲು: ದೂರು ಸ್ವೀಕರಿಸಿದ ಸುಬ್ರಹ್ಮಣ್ಯ ಪೊಲೀಸರು ತಕ್ಷಣವೇ ಜೀರೊ ಎಫ್ಐಆರ್ (ಅ.ಕ್ರ: Zero-1/2026) ದಾಖಲಿಸಿಕೊಂಡಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ (BNS 2023) ಕಾಯ್ದೆಯಡಿ ಪ್ರಕರಣ:
Section 118(1): ಅಪಾಯಕಾರಿ ಆಯುಧಗಳಿಂದ ತೀವ್ರ ಗಾಯಗೊಳಿಸುವುದು/ಹಲ್ಲೆ.
Section 109(1): ಕೊಲೆ ಯತ್ನ (Attempt to Murder).
Supreme Today AI
ಪ್ರಕರಣ ವರ್ಗಾವಣೆ ಮತ್ತು ಬಂದನ: ಕೃತ್ಯ ನಡೆದ ಸ್ಥಳವು ಹಾಸನ ಜಿಲ್ಲೆಯ ವ್ಯಾಪ್ತಿಗೆ ಬರುವುದರಿಂದ, ಪ್ರಕರಣವನ್ನು ಮುಂದಿನ ಕಾನೂನು ತನಿಖೆಗಾಗಿ ಹಾಸನ ಜಿಲ್ಲೆಯ ಯಸಳೂರು ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ಆರೋಪಿ ವಶಕ್ಕೆ: ಸುಬ್ರಹ್ಮಣ್ಯ ಪೊಲೀಸರು ಆರೋಪಿ ಪ್ರಸಾದ್ನನ್ನು ತ್ವರಿತವಾಗಿ ವಶಕ್ಕೆ ಪಡೆದು, ಯಸಳೂರು ಠಾಣೆಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಆರೋಪಿಗೆ ಬೇರೆ ಮದುವೆ ನಿಶ್ಚಯವಾಗಿದ್ದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾನೆ ಎಂಬ ಆರೋಪಗಳಿದ್ದು, ಯಸಳೂರು ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
arrest
ಬೆಂಗಳೂರಿನಲ್ಲಿ ಭೀಕರ ಸರಣಿ ಹತ್ಯಾಕಾಂಡ: ಕೌಟುಂಬಿಕ ಕಲಹಕ್ಕೆ ಪತ್ನಿ ಸೇರಿ ಏಳು ಮಂದಿಯ ಬಲಿ ಪಡೆದ ಕ್ಯಾಬ್ ಚಾಲಕ!
ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ತಲೆಬಾಗಿಸುವಂತಹ ಭೀಕರ ಹಾಗೂ ದುರಂತಮಯ ಘಟನೆಯೊಂದು ಬೆಳಕಿಗೆ ಬಂದಿದೆ. ಕೌಟುಂಬಿಕ ಮನಸ್ತಾಪ ಹಾಗೂ ದ್ವೇಷದ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕನೊಬ್ಬ ತನ್ನ ಪತ್ನಿ ಸೇರಿದಂತೆ ಆಕೆಯ ಕುಟುಂಬದ ಏಳು ಮಂದಿಯನ್ನು ರುಬ್ಬುಗುಂಡಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಎರಡು ದಿನಗಳ ಹಿಂದೆ ನಡೆದಿರುವ ಈ ಸರಣಿ ಹತ್ಯಾಕಾಂಡ ನಗರದ ಜನತೆಯನ್ನು ಬೆಚ್ಚಿಬೀಳಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಪಿ ಇಂದುಶೇಖರ್ ಎಂಬುವವನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ದುರ್ದೈವಿಗಳು:
ಶ್ರೀರಾಮಪುರದ ನಿವಾಸಿಗಳಾದ:
- ರೂಪವತಿ (ಅತ್ತೆ)
- ಸುನೀತಾ (ಪತ್ನಿ)
- ಶಿವಕುಮಾರ್ (ಭಾವ)
- ಶಂಕರ್ (ಭಾವ)
- ದಿವ್ಯಾ (ಶಿವಕುಮಾರ್ ಪತ್ನಿ/ಸೊಸೆ)
- ನಳಿನಿ (ಶಂಕರ್ ಪತ್ನಿ/ಸೊಸೆ)
- ಪುನೀತ್ (ಮೊಮ್ಮಗ)
ದುರಂತದ ಹಿನ್ನೆಲೆ: ತವರು ಮನೆಯ ಒಡನಾಟವೇ ಕೊಲೆಗೆ ಕಾರಣ?
ಸುಮಾರು 20 ವರ್ಷಗಳ ಹಿಂದೆ ಇಂದುಶೇಖರ್ ಮತ್ತು ಸುನೀತಾ ಅವರ ವಿವಾಹವಾಗಿತ್ತು. ರಾಜಾಜಿನಗರದ ಭಾಷ್ಯಂ ವೃತ್ತದ ಸಮೀಪ ಈ ದಂಪತಿ ವಾಸವಾಗಿದ್ದರು. ಆರಂಭದಲ್ಲಿ ಚನ್ನಾಗಿದ್ದ ಸಂಸಾರದಲ್ಲಿ ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ವಿಷಯಗಳಿಗೆ ಸಂಬಂಧಿಸಿದಂತೆ ತೀವ್ರ ಭಿನ್ನಾಭಿಪ್ರಾಯಗಳು ಮೂಡಿದ್ದವು.
ಸುನೀತಾ ಅವರು ತಮ್ಮ ತಾಯಿ ರೂಪಾವತಿ ಹಾಗೂ ಸಹೋದರರಾದ ಶಿವಕುಮಾರ್ ಮತ್ತು ಶಂಕರ್ ಜೊತೆ ಹೆಚ್ಚು ನಿಕಟ ಬಾಂಧವ್ಯ ಹೊಂದಿದ್ದರು. ತವರು ಮನೆಗೆ ಆಗಾಗ್ಗೆ ತೆರಳುತ್ತಿದ್ದ ಪತ್ನಿಯ ನಡವಳಿಕೆಗೆ ಇಂದುಶೇಖರ್ ನಿರ್ಬಂಧ ವಿಧಿಸಿದ್ದ. ಆದಾಗ್ಯೂ ಸುನೀತಾ ತವರಿನೊಂದಿಗಿನ ಸಂಬಂಧವನ್ನು ಕಡಿದುಕೊಂಡಿರಲಿಲ್ಲ. ಇದರಿಂದ ಆಕ್ರೋಶಗೊಂಡಿದ್ದ ಆರೋಪಿ, ತನ್ನ ಬದುಕಿನ ಎಲ್ಲಾ ಸಮಸ್ಯೆಗಳಿಗೆ ಪತ್ನಿಯ ತವರು ಮನೆಯವರೇ ಕಾರಣ ಎಂದು ನಂಬಿ, ಇಡೀ ಕುಟುಂಬವನ್ನೇ ಮುಗಿಸಲು ಸಂಚು ರೂಪಿಸಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಹಂತ ಹಂತವಾಗಿ ನಡೆದ ಭೀಕರ ಹತ್ಯಾಕಾಂಡ:
ಪತ್ನಿಯ ಕೊಲೆ ಹಾಗೂ ಶವ ವಿಲೇವಾರಿ:ಮೊದಲು ಪತ್ನಿ ಸುನೀತಾಳ ತಲೆಗೆ ರುಬ್ಬುಗುಂಡಿನಿಂದ ಹೊಡೆದು ಹತ್ಯೆ ಮಾಡಿದ ಆರೋಪಿ, ಶವವನ್ನು ತನ್ನ ಕಾರಿನಲ್ಲಿ ಸಾಗಿಸಿ ನಂದಿ ಬೆಟ್ಟದ ತಪ್ಪಲಿನಲ್ಲಿ ಎಸೆದಿದ್ದಾನೆ. ಯಾರಿಗೂ ಅನುಮಾನ ಬಾರದಂತೆ “ಆಕೆ ಸ್ನೇಹಿತೆಯರೊಂದಿಗೆ ಪ್ರವಾಸಕ್ಕೆ ಹೋಗಿದ್ದಾಳೆ” ಎಂದು ನೆರೆಹೊರೆಯವರಿಗೆ ಸುಳ್ಳು ಹೇಳಿ, ಆಕೆಯ ಮೊಬೈಲ್ ಸ್ವಿಚ್ ಆಫ್ ಮಾಡಿದ್ದ.
ಮದ್ಯದ ಪಾರ್ಟಿ ನೆಪದಲ್ಲಿ ಇಬ್ಬರ ಹತ್ಯೆ:ತನ್ನ ಸಂಚಿನ ಎರಡನೇ ಹಂತವಾಗಿ ಪತ್ನಿಯ ಸಹೋದರರಾದ ಶಿವಕುಮಾರ್ ಮತ್ತು ಶಂಕರ್ ಅವರನ್ನು ಮನೆಗೆ ಕರೆಸಿಕೊಂಡು ಮದ್ಯದ ಪಾರ್ಟಿ ಏರ್ಪಡಿಸಿದ್ದ. ಕುಡಿತದ ಅಮಲಿನಲ್ಲಿದ್ದಾಗ ಅವರಿಬ್ಬರನ್ನೂ ಅದೇ ರುಬ್ಬುಗುಂಡಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ.
ಸೊಸೆಯಂದಿರು, ಅತ್ತೆ ಮತ್ತು ಮಗುವಿನ ಬಲಿ:ಬಳಿಕ ಶಂಕರ್ ಪತ್ನಿ ನಳಿನಿ, ಶಿವಕುಮಾರ್ ಪತ್ನಿ ದಿವ್ಯಾ, ಅತ್ತೆ ರೂಪಾವತಿ ಹಾಗೂ ಶಂಕರ್ ಅವರ ಸಣ್ಣ ಮಗ ಪುನೀತ್ನನ್ನು ಒಬ್ಬೊಬ್ಬರಾಗಿ ಮನೆಗೆ ಕರೆಸಿಕೊಂಡು ಅತ್ಯಂತ ಪಾತಕ ರೀತಿಯಲ್ಲಿ ಹತ್ಯೆ ಮಾಡಿದ್ದಾನೆ.
ಸಾಕ್ಷ್ಯ ನಾಶಕ್ಕೆ ಕಠಿಣ ಪ್ರಯತ್ನ:ಕೊಲೆಯ ಬಳಿಕ ಏಳೂ ಮೃತದೇಹಗಳನ್ನು ಒಂದೇ ಸ್ಥಳದಲ್ಲಿ ಇರಿಸದೆ, ಕಾರಿನಲ್ಲಿ ಸಾಗಿಸಿ ಬೇರೆ ಬೇರೆ ಪ್ರದೇಶಗಳಲ್ಲಿ ಎಸೆದಿದ್ದಾನೆ. ಮನೆಗೆ ಮರಳಿ ರಕ್ತದ ಕಲೆಗಳನ್ನು ತಳೆದು ಶುಚಿಗೊಳಿಸಿದ್ದಲ್ಲದೆ, ಕೃತ್ಯಕ್ಕೆ ಬಳಸಿದ್ದ ರುಬ್ಬುಗುಂಡನ್ನು ಕೆಮಿಕಲ್ ಬಳಸಿ ಸ್ವಚ್ಛಗೊಳಿಸಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾನೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಮಗಳು ನಳಿನಿ ದಿಢೀರನೆ ನಾಪತ್ತೆಯಾಗಿದ್ದರಿಂದ ಆತಂಕಗೊಂಡ ಆಕೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿ ಇಂದುಶೇಖರ್ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಈ ಅಸಲಿ ಭೀಕರ ಸರಣಿ ಹತ್ಯೆಯ ಕರಾಳ ಮುಖ ಅನಾವರಣಗೊಂಡಿದೆ.
ಮೃತದೇಹಗಳಿಗಾಗಿ ಶೋಧ ಕಾರ್ಯಾಚರಣೆ ಚುರುಕು:
ಪ್ರಸ್ತುತ ಆರೋಪಿಯನ್ನು ಬಂಧಿಸಿರುವ ಪೊಲೀಸರು ಕೃತ್ಯಕ್ಕೆ ಬಳಸಿದ ಕಾರು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ನೀಡಿದ ಮಾಹಿತಿ ಆಧಾರದ ಮೇಲೆ ನಂದಿ ಬೆಟ್ಟ ಸೇರಿದಂತೆ ಹಲವು ಕಡೆ ಶೋಧ ನಡೆಸಲಾಗಿದ್ದು, ಮಗು ಪುನೀತ್ನ ಮೃತದೇಹ ಪತ್ತೆಯಾಗಿದೆ.
ಉಳಿದ ಆರು ಮಂದಿಯ ಮೃತದೇಹಗಳ ಪತ್ತೆಗಾಗಿ ಉತ್ತರ ವಿಭಾಗದ ಮೂವರು ಎಸಿಪಿಗಳನ್ನೊಳಗೊಂಡ ವಿಶೇಷ ತಂಡಗಳನ್ನು ರಚಿಸಲಾಗಿದೆ. ಹತ್ಯೆ ನಡೆದ ಸ್ಥಳ, ಶವ ಸಾಗಿಸಿದ ಮಾರ್ಗ ಹಾಗೂ ಸಾಕ್ಷ್ಯ ನಾಶದ ಪ್ರಯತ್ನಗಳ ಬಗ್ಗೆ ಸಮಗ್ರ ತನಿಖೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ
-
accident3 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala4 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime9 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime7 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala7 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala10 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident4 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident6 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
