Condolences
ಪತ್ನಿ ಸಾವಿನ ಬಳಿಕೆ ಪತಿ ಸೂರಜ್ ಕೂಡಾ ನೇಣಿಗೆ ಶರಣು;ಎರಡೂ ಕುಟುಂಬಗಳನ್ನು ಛಿಧ್ರ ಮಾಡಿದ ಗಾನವಿ ಸಾವು
- Share
- Tweet /home/u338848369/domains/deevatigenews.com/public_html/wp-content/plugins/mvp-social-buttons/mvp-social-buttons.php on line 72
https://deevatigenews.com/wp-content/uploads/2025/12/WhatsApp-Image-2025-12-27-at-9.18.58-AM-1000x600.jpg&description=ಪತ್ನಿ ಸಾವಿನ ಬಳಿಕೆ ಪತಿ ಸೂರಜ್ ಕೂಡಾ ನೇಣಿಗೆ ಶರಣು;ಎರಡೂ ಕುಟುಂಬಗಳನ್ನು ಛಿಧ್ರ ಮಾಡಿದ ಗಾನವಿ ಸಾವು', 'pinterestShare', 'width=750,height=350'); return false;" title="Pin This Post">
ಬೆಂಗಳೂರು : ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದ ನವವಿವಾಹಿತೆ ಆತ್ಮಹತ್ಯೆ ಪ್ರಕರಣ ಇದೀಗ ಭೀಕರ ತಿರುವು ಪಡೆದುಕೊಂಡಿದೆ. ಈಗ ಇಡೀ ಕುಟುಂಬವನ್ನೇ ಬಲಿಪಡೆದಿದೆ. ಗಾನವಿ ಆತ್ಮಹತ್ಯೆ ಬೆನ್ನಲ್ಲೇ ಅವರ ಪತಿ ಸೂರಜ್ ಕೂಡ ಮಹಾರಾಷ್ಟ್ರದ ನಾಗಪುರದಲ್ಲಿ ನೇಣಿಗೆ ಶರಣಾಗಿದ್ದಾರೆ. ಇಷ್ಟಕ್ಕೇ ನಿಲ್ಲದ ಈ ಸಾವಿನ ಸರಣಿ, ಮಹಾರಾಷ್ಟ್ರದ ನಾಗ್ಪುರದಲ್ಲಿ ಸೂರಜ್ ಅವರ ತಾಯಿ (ಅತ್ತೆ) ಜಯಂತಿ ಅವರ ಆತ್ಮಹತ್ಯೆ ಯತ್ನದವರೆಗೂ ತಲುಪಿದೆ.
ಪತ್ನಿಯ ಸಾವಿನ ನಂತರ ಸೂರಜ್ ತೀವ್ರ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಗಾನವಿ ಅವರ ಸಾವಿಗೆ ಪತಿ ಮತ್ತು ಅವರ ಕುಟುಂಬದವರೇ ಕಾರಣ ಎಂಬ ಆರೋಪಗಳು ಮತ್ತು ಅದರಿಂದ ಉಂಟಾದ ಸಾಮಾಜಿಕ ಅವಮಾನವನ್ನು ತಾಳಲಾರದೆ ಸೂರಜ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ನಾಗ್ಪುರದಲ್ಲಿದ್ದಾಗಲೇ ಸೂರಜ್ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ನಡೆಯಬೇಕಿದ್ದ ತನಿಖೆ ಈಗ ನಾಗಪುರಕ್ಕೂ ಲಿಂಕ್ ಆಗಿದೆ. ಗಾನವಿ ಸಾವು ಈ ಕುಟುಂಬವನ್ನ ಛಿದ್ರ ಮಾಡಿದೆ.

ಮಗನ ಜೊತೆಯಲ್ಲೇ ತಾಯಿ ಜಯಂತಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಅವರಿಗೆ ನಾಗಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅತ್ತ ಗಾನವಿ ಮನೆಯಲ್ಲಿ ಸೂತಕದ ಛಾಯೆ ಇದ್ರೆ, ಇತ್ತ ಸೂರಜ್ ಮನೆಯವರ ಕಥೆ ದೇವರಿಗೇ ಪ್ರೀತಿ ಎನ್ನುವಂತಾಗಿದೆ.
ಸೂರಜ್ ಮತ್ತು ಕುಟುಂಬ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಅನ್ನೋದು ಈಗ ಚರ್ಚೆಯಾಗ್ತಿದೆ. ಗಾನವಿ ಆತ್ಮಹತ್ಯೆ ಮಾಡಿಕೊಂಡ ನಂತರ, ಆಕೆಯ ಪೋಷಕರು ಮತ್ತು ಸಂಬAಧಿಕರು ಸೂರಜ್ ಕುಟುಂಬಕ್ಕೆ ಧಿಕ್ಕಾರ ಕೂಗಿ, ಅವಮಾನ ಮಾಡಿದ್ದರು ಎನ್ನಲಾಗಿದೆ. ಪತ್ನಿ ಕಡೆಯವರಿಂದ ಆದ ಅವಮಾನ ಮತ್ತು ಟೀಕೆಗಳನ್ನು ತಡೆದುಕೊಳ್ಳಲಾಗದೆ ಮನನೊಂದು ಸೂರಜ್ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಶಂಕಿಸಲಾಗಿದೆ
ರಾಮಮೂರ್ತಿನಗರ ಪೊಲೀಸರು ಮೊದಲು ಗಾನವಿ ಅವರ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದರು. ಈಗ ಪತಿ ಕೂಡ ಆತ್ಮಹತ್ಯೆ ಮಾಡಿಕೊಂಡಿರುವುದರಿoದ ಪ್ರಕರಣದ ಸ್ವರೂಪ ಬದಲಾಗಿದೆ. ಗಾನವಿ ಅವರ ಮನೆಯವರು ಸೂರಜ್ ಕುಟುಂಬದ ಮೇಲೆ ನೀಡಿದ್ದ ದೂರು ಮತ್ತು ಈಗ ಸಂಭವಿಸಿರುವ ಈ ಸರಣಿ ಆತ್ಮಹತ್ಯೆಗಳ ನಡುವೆ ಏನಾದರೂ ಸಂಬoಧವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
accident
ಮಂತ್ರಾಲಯದ ಬಳಿ ಘೋರ ದುರಂತ: ತುಂಗಭದ್ರಾ ನದಿಗೆ ಸ್ನಾನಕ್ಕಿಳಿದ ಹೈದರಾಬಾದ್ ಮೂಲದ ತಂದೆ-ಮಗ ಸೇರಿ ಐವರು ನೀರುಪಾಲು!
ರಾಯಚೂರು/ಮಂತ್ರಾಲಯ: ರಾಯಚೂರು ಜಿಲ್ಲೆಯ ಗಡಿಭಾಗದಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಂತ್ರಾಲಯದ ಬಳಿ ಭೀಕರ ದುರಂತವೊಂದು ಸಂಭವಿಸಿದೆ. ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ಒಂದೇ ಕುಟುಂಬದ ಐವರು ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ.

ಮೃತರನ್ನು ಹೈದರಾಬಾದ್ ಮೂಲದ ಸತೀಶ್ (35) ಮತ್ತು ಅವರ 5 ವರ್ಷದ ಪುತ್ರ ಯುವನ ಚಂದ್ರ, ಮಂತ್ರಾಲಯ ಗ್ರಾಮದ ರಾಘವೇಂದ್ರ (25) ಹಾಗೂ ಧನುಷ್ (23) ಮತ್ತು ಉರವಕೊಂಡದ ಸಂಧ್ಯಾ (22) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅಪರ್ಣಾ ಎಂಬ ಮಹಿಳೆ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸತ್ಯನಾರಾಯಣ ಪೂಜೆಗೆ ಬಂದಿದ್ದಾಗ ದುರಂತ: ಪೊಲೀಸ್ ಮೂಲಗಳ ಪ್ರಕಾರ, ಸುಮಾರು 10 ಜನರಿದ್ದ ಸಂಬಂಧಿಕರ ಗುಂಪೊಂದು ಮಂತ್ರಾಲಯದಲ್ಲಿ ಸಂಬಂಧಿಕರ ಮನೆಯಲ್ಲಿ ಆಯೋಜಿಸಲಾಗಿದ್ದ ಕೌಟುಂಬಿಕ ಕಾರ್ಯಕ್ರಮ ಹಾಗೂ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಲು ಬಂದಿತ್ತು. ಪೂಜೆಯ ಬಳಿಕ ನದಿಯ ದಂಡೆಗೆ ತೆರಳಿದ್ದ ಇವರಲ್ಲಿ ಆರು ಜನರು ತುಂಗಭದ್ರಾ ನದಿಗೆ ಈಜಲು ಮತ್ತು ಸ್ನಾನ ಮಾಡಲು ಇಳಿದಿದ್ದಾರೆ. ಆದರೆ, ನೀರಿನ ಆಳದ ಅಂದಾಜು ಸಿಗದೆ ತೀವ್ರ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.

ನದಿ ದಂಡೆಯಲ್ಲಿದ್ದ ಇತರ ಸಂಬಂಧಿಕರು ತಕ್ಷಣವೇ ಕೂಗಾಡಲು ಆರಂಭಿಸಿದಾಗ, ಸ್ಥಳೀಯ ಮೀನುಗಾರರು ಮತ್ತು ಮಂತ್ರಾಲಯ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಸದ್ಯ ಹೈದರಾಬಾದ್ ಮೂಲದ ತಂದೆ ಸತೀಶ್ ಹಾಗೂ ಮಗ ಯುವನ ಚಂದ್ರ ಸೇರಿದಂತೆ ಮೂವರ ಮೃತದೇಹಗಳು ಪತ್ತೆಯಾಗಿದ್ದು, ಇನ್ನುಳಿದವರಿಗಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ವಿಪತ್ತು ನಿರ್ವಹಣಾ ತಂಡದ (SDRF) ಸಹಾಯದೊಂದಿಗೆ ತೀವ್ರ ಶೋಕ ಕಾರ್ಯ ಮುಂದುವರಿದಿದೆ.

ಎಮ್ಮಿಗನೂರು ಡಿವೈಎಸ್‌ಪಿ ಭಾರ್ಗವಿ ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ. ನದಿಯಲ್ಲಿ ನೀರುಪಾಲಾದವರ ಹುಡುಕಾಟ ವೇಳೆ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು ಮಂತ್ರಾಲಯಂ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿವೆ.

ಪವಿತ್ರ ಕ್ಷೇತ್ರಕ್ಕೆ ಬಂದು ದೇವರ ದರ್ಶನ ಹಾಗೂ ಪೂಜೆ ಮುಗಿಸಿದ ತಕ್ಷಣವೇ ಇಡೀ ಕುಟುಂಬ ದುರಂತಕ್ಕೀಡಾಗಿರುವುದು ಸ್ಥಳದಲ್ಲಿ ಜಮಾಯಿಸಿರುವ ಭಕ್ತರಲ್ಲಿ ಹಾಗೂ ಸಾರ್ವಜನಿಕರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ. ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ



Condolences
ಚಾಮರಾಜನಗರದಲ್ಲಿ ಉಬಾರ್ ಮಂಜ ಬೈದ್ಯನ ಸಂಸ್ಮರಣೆ ಅಗೋಚರ ಕ್ರಾಂತಿಕಾರಿಗಳ ಇತಿಹಾಸ ಯುವ ಸಮುದಾಯಕ್ಕೆ ತಲುಪಲಿ: ಸುರೇಶ್ ಎನ್. ಋಗ್ವೇದಿ
ಚಾಮರಾಜನಗರ: ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಅಗೋಚರವಾಗಿ ದೇಶಕ್ಕಾಗಿ ಹೋರಾಡಿದ ಕ್ರಾಂತಿಕಾರಿಗಳ ಜೀವನ ಚರಿತ್ರೆಯನ್ನು ಯುವ ಸಮುದಾಯಕ್ಕೆ ಪರಿಚಯಿಸುವ ಜಾಗೃತಿಯ ಕಾರ್ಯವಾಗಬೇಕಿದೆ. ವಿವಿಧ ಪ್ರಾಂತ್ಯಗಳಲ್ಲಿ ಹೋರಾಡಿ ಬಲಿದಾನಗೈದ ಕ್ರಾಂತಿಕಾರಿಗಳನ್ನು ಗೌರವಿಸುವ ಜೊತೆಗೆ, ಅವರ ಇತಿಹಾಸವನ್ನು ಸಮಗ್ರವಾಗಿ ಅನಾವರಣಗೊಳಿಸುವ ಸಂಶೋಧನೆಗಳು ಹೆಚ್ಚಾಗಬೇಕು ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್. ಋಗ್ವೇದಿ ತಿಳಿಸಿದರು.
ನಗರದ ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂತ್ ಕ್ಲಬ್ ವತಿಯಿಂದ ‘ಜೈ ಹಿಂದ್ ಕಟ್ಟೆ’ಯಲ್ಲಿ ಹಮ್ಮಿಕೊಂಡಿದ್ದ, ಭಾರತದ ಸ್ವಾತಂತ್ರ್ಯ ಚಳುವಳಿಯ ವೀರ ಕ್ರಾಂತಿಕಾರಿ ಉಬಾರ್ ಮಂಜ ಬೈದ್ಯ ರವರ ಕೊಡುಗೆಗಳ ಕುರಿತ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
13 ದಿನಗಳ ಕಾಲ ತುಳುನಾಡನ್ನು ಬ್ರಿಟಿಷರಿಂದ ಮುಕ್ತಗೊಳಿಸಿದ್ದ ಮಹಾವೀರ!
ಮಂಜ ಬೈದ್ಯರವರ ಸಾಹಸಗಾಥೆಯನ್ನು ಸ್ಮರಿಸಿದ ಸುರೇಶ್ ಎನ್. ಋಗ್ವೇದಿ, “ಉಪ್ಪಿನಂಗಡಿ ಗ್ರಾಮದವರಾದ ಮಂಜ ಬೈದ್ಯರವರು ಬ್ರಿಟಿಷರ ದೌರ್ಜನ್ಯ, ಶೋಷಣೆ ಮತ್ತು ದಬ್ಬಾಳಿಕೆಯನ್ನು ವಿರೋಧಿಸಿ ತಮ್ಮ ಖಜಾನೆಯ ಹುದ್ದೆಗೆ ರಾಜೀನಾಮೆ ನೀಡಿ ಕ್ರಾಂತಿಯ ಹಾದಿ ಹಿಡಿದರು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನವೇ, ಅಂದರೆ 1837 ರಲ್ಲೇ ಬ್ರಿಟಿಷರನ್ನು ತುಳುನಾಡಿನಲ್ಲಿ ಕಟ್ಟಿಹಾಕುವ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟದ ದಿಕ್ಕನ್ನೇ ಬದಲಿಸಿದವರು ಇವರು” ಎಂದರು.
“ಖಜಾನೆಯ ಹಣ ಮತ್ತು ಚಿನ್ನವನ್ನು ವಶಪಡಿಸಿಕೊಂಡು, ಅದನ್ನು ಮತ್ತೊಬ್ಬ ಕ್ರಾಂತಿಕಾರಿ ಕಲ್ಯಾಣ ಸ್ವಾಮಿಗೆ ತಲುಪಿಸಿ ಅವರ ಮೂಲಕ ಶಸ್ತ್ರಾಸ್ತ್ರ ಹೋರಾಟ ಸಂಘಟಿಸಿದವರು ಮಂಜ ಬೈದ್ಯರು. ಬ್ರಿಟಿಷರನ್ನು ಮಟ್ಟಹಾಕಿ ಬರೋಬ್ಬರಿ 13 ದಿನಗಳ ಕಾಲ ತುಳುನಾಡನ್ನು ಬ್ರಿಟಿಷರ ಮುಕ್ತ ವಲಯವನ್ನಾಗಿ ಮಾಡಿದ ಮಹಾ ಕ್ರಾಂತಿಕಾರಿ ಅವರು. ತುಳುನಾಡಿನಲ್ಲಿ ಹಾಲೇರಿ ವಂಶಸ್ಥರ ಧ್ವಜವನ್ನು ಹಾರಿಸುವ ಮೂಲಕ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಂತಿಮವಾಗಿ 1837ರ ಮೇ 27ರಂದು ಇವರನ್ನು ಬ್ರಿಟಿಷರು ನೇಣುಗಂಬಕ್ಕೇರಿಸಿದರು. ಈ ದೌರ್ಜನ್ಯವನ್ನು ಭಾರತೀಯರು ಎಂದಿಗೂ ಮರೆಯಲಾರರು” ಎಂದು ಅವರು ಮಾರ್ಮಿಕವಾಗಿ ನುಡಿದರು.
ಸ್ಪೂರ್ತಿದಾಯಕ ಇತಿಹಾಸ ಹೊರಬರಲಿ:
ಸ್ವಾತಂತ್ರ್ಯ ಚಳುವಳಿಯ ಇತಿಹಾಸವು ಅತ್ಯಂತ ಸ್ಪೂರ್ತಿದಾಯಕವಾಗಿದ್ದು, ಯುವಕರಲ್ಲಿ ದೇಶಾಭಿಮಾನ ಹಾಗೂ ಹೋರಾಟದ ಮಾನಸಿಕತೆಯನ್ನು ಬೆಳೆಸುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಅಡಗಿರುವ ಇಂತಹ ನೈಜ ಇತಿಹಾಸ ಹಾಗೂ ಸ್ವಾತಂತ್ರ್ಯ ಪ್ರೇಮಿಗಳ ಸಮಗ್ರ ಹೋರಾಟದ ವಿವರಗಳು ಬೆಳಕಿಗೆ ಬರಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಶ್ರದ್ಧಾಂಜಲಿ ಸಲ್ಲಿಕೆ:
ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಡಿ. ಮುರುಗೇಶ್ ಅವರು ಉಭಾರ ಮಂಜ ಬೈದ್ಯರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ಕ್ರಾಂತಿಕಾರಿಯ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷಗಳ ಕಾಲ ಮೌನಾಚರಣೆ ನಡೆಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಪ್ರಮುಖರಾದ ರವಿ, ಭೋಜರಾಜ್, ಸಾನಿಕ ಹಾಗೂ ಶ್ರಾವ್ಯ ಋಗ್ವೇದಿ ಉಪಸ್ಥಿತರಿದ್ದರು.



Condolences
ಬ್ರಿಟಿಷರ ವಿರುದ್ಧ ಸಿಡಿದೆದ್ದ ಕ್ರಾಂತಿಕಾರಿ ಉಬಾರ್ ಮಂಜ ಬೈದ್ಯರ 190ನೇ ವರ್ಷದ ಸಂಸ್ಮರಣೆ: ಮಂಜ ಬೈದ್ಯರ ಹೆಸರನ್ನು ಶಾಶ್ವತವಾಗಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ – ಸಂಸದ ಕೋಟ ಶ್ರೀನಿವಾಸ ಪೂಜಾರಿ
ಉಪ್ಪಿನಂಗಡಿ: “ದೇಶದ ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ಮಾಡಿದ ತ್ಯಾಗ ಮತ್ತು ಬಲಿದಾನಗಳನ್ನು ನೆನಪಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ 20 ವರ್ಷಗಳ ಮೊದಲೇ ಬ್ರಿಟಿಷರ ವಿರುದ್ಧ ಧೀರೋದಾತ್ತ ಹೋರಾಟ ನಡೆಸಿ ಹುತಾತ್ಮರಾದ ಉಪ್ಪಿನಂಗಡಿಯ ಮಂಜ ಬೈದ್ಯರ ದೇಶಪ್ರೇಮದ ಚರಿತ್ರೆ 190 ವರ್ಷಗಳ ಬಳಿಕ ಮುನ್ನೆಲೆಗೆ ಬರುತ್ತಿರುವುದು ವಿಶೇಷವಾಗಿದೆ. ಅವರ ಹೆಸರನ್ನು ಸಮಾಜದಲ್ಲಿ ಶಾಶ್ವತವಾಗಿ ಉಳಿಸುವ ಕಾರ್ಯದತ್ತ ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕಾಗಿದೆ,” ಎಂದು ಸಂಸದ ಹಾಗೂ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಅವರು ಉಪ್ಪಿನಂಗಡಿಯ ನೇತ್ರಾವತಿ ಸಭಾಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಸಮಿತಿ ಮತ್ತು ಬೆಳ್ತಂಗಡಿಯ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ “ಕ್ರಾಂತಿಕಾರಿ ಉಬಾರ್ ಮಂಜ ಬೈದ್ಯರ 190ನೇ ವರ್ಷದ ಸಂಸ್ಮರಣಾ ಕಾರ್ಯಕ್ರಮ”ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಅಧ್ಯಯನ ವರದಿ ಮಂಡನೆ ಮತ್ತು ಗಣ್ಯರ ಅನಿಸಿಕೆ: ಕಾರ್ಯಕ್ರಮದಲ್ಲಿ ಪತ್ರಕರ್ತ ಉದಯಕುಮಾರ್ ಅವರು ಮಂಜ ಬೈದ್ಯರ ಕುರಿತಾದ ಸುದೀರ್ಘ ಅಧ್ಯಯನ ವರದಿಯನ್ನು ಮಂಡಿಸಿದರು. ವೈದ್ಯರಾದ ಡಾ. ಸುಪ್ರೀತ್ ಲೋಬೋ, ಪುತ್ತೂರು ತಾಲೂಕು ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹಾಗೂ ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಅಝೀಝ್ ಬಸ್ತಿಕಾರ್ ಮಾತನಾಡಿ ವಿಚಾರ ಮಂಡಿಸಿದರು.

1837ರಲ್ಲಿ ಅಂದಿನ ತಾಲೂಕು ಕೇಂದ್ರವಾಗಿದ್ದ ಉಪ್ಪಿನಂಗಡಿಯ ಖಜಾನೆಯಲ್ಲಿ ಗುಮಾಸ್ತರಾಗಿದ್ದ ಮಂಜ ಬೈದ್ಯರು, ಬ್ರಿಟಿಷ್ ಕಂಪೆನಿ ಸರ್ಕಾರದ ಅಮಾನುಷ ನಡಾವಳಿಗಳನ್ನು ಸಹಿಸದೆ ತಾವೇ ಕರ್ತವ್ಯ ನಿರ್ವಹಿಸುತ್ತಿದ್ದ ಖಜಾನೆಯ ಅಧಿಕಾರಿಗಳನ್ನು ಕಟ್ಟಿಹಾಕಿದ್ದರು. ಬಳಿಕ ಖಜಾನೆಯಲ್ಲಿದ್ದ ಧನಕನಕಗಳನ್ನು ಬಾಚಿಕೊಂಡು, ಆ ವೇಳೆ ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟ ನಡೆಸುತ್ತಿದ್ದ ಕಲ್ಯಾಣಸ್ವಾಮಿಗೆ ತಲುಪಿಸಿದ್ದರು. ಆ ಮೂಲಕ 13 ದಿನಗಳ ಕಾಲ ತುಳುನಾಡನ್ನು ಬ್ರಿಟಿಷರಿಂದ ಮುಕ್ತಗೊಳಿಸಿದ ಇತಿಹಾಸವನ್ನು ಸ್ಮರಿಸಿದ ಗಣ್ಯರು, ಇತಿಹಾಸದ ಪುಟಗಳಲ್ಲಿ ಮರೆಯಾಗಿದ್ದ ಇವರ ತ್ಯಾಗ 190 ವರ್ಷಗಳ ಬಳಿಕ ಮತ್ತೆ ಮುನ್ನೆಲೆಗೆ ಬಂದಿರುವುದು ಹೆಮ್ಮೆಯ ವಿಚಾರ ಎಂದರು.

ಸರ್ಕಾರದ ಮಟ್ಟದಲ್ಲಿ ಶಾಶ್ವತ ಯೋಜನೆ: ಕೋಟ ಭರವಸೆ ಮುಂದುವರಿದು ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿಯವರು, “ಮಂಜ ಬೈದ್ಯರ ಸಂಸ್ಮರಣೆ ಮಾಡುವ ಈ ದಿನ ನಮ್ಮೆಲ್ಲರ ಬದುಕಿನ ಸಾರ್ಥಕ್ಯದ ಕ್ಷಣವಾಗಿದೆ. ಇವರ ನೆನಪನ್ನು ಶಾಶ್ವತವಾಗಿ ಅಮರವಾಗಿಸಲು ಸರ್ಕಾರದ ನೆಲೆಯಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ನಾನು ಮತ್ತು ಮಂಗಳೂರು ಸಂಸದರಾದ ಬ್ರಿಜೇಶ್ ಚೌಟ ಅವರು ಚರ್ಚಿಸಿ, ಪೂರಕವಾದ ಯೋಜನೆಗಳನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ,” ಎಂದು ಭರವಸೆ ನೀಡಿದರು.
ಕಲ್ಲೇರಿಯಲ್ಲಿ ವೃತ್ತ ಮತ್ತು ಸ್ಮಾರಕ ನಿರ್ಮಾಣಕ್ಕೆ ಸಹಕಾರ: ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ, “ಬ್ರಿಟಿಷರ ದೌರ್ಜನ್ಯ ಮತ್ತು ಕಪಿಮುಷ್ಟಿಯಿಂದ ನಮ್ಮ ಸಮಾಜ ಹಾಗೂ ಜನರನ್ನು ಪಾರು ಮಾಡಲು ಕ್ರಾಂತಿಯ ಕಿಚ್ಚು ಹೊತ್ತಿಸಿ ಪ್ರಾಣತ್ಯಾಗ ಮಾಡಿದ ಅಪ್ರತಿಮ ವೀರ ಮಂಜ ಬೈದ್ಯರು. ಸಂಸ್ಮರಣಾ ಸಮಿತಿಯ ಬೇಡಿಕೆಯಂತೆ ನನ್ನ ಕ್ಷೇತ್ರ ವ್ಯಾಪ್ತಿಯ ಕಲ್ಲೇರಿಯಲ್ಲಿ ವೃತ್ತ (ಸರ್ಕಲ್) ನಿರ್ಮಿಸಿ ಅದಕ್ಕೆ ಮಂಜ ಬೈದ್ಯರ ಹೆಸರಿಡಲು ಸಂಪೂರ್ಣ ಸಹಕಾರ ನೀಡಲಾಗುವುದು. ಇದರೊಂದಿಗೆ ಬೆಳ್ತಂಗಡಿ ತಾಲೂಕಿನ ಸರ್ಕಾರಿ ಕಟ್ಟಡವೊಂದಕ್ಕೆ ಇವರ ಹೆಸರಿಡುವ ಹಾಗೂ ಅವರ ಮೂಲ ಮನೆಯ ಬಳಿ ಸ್ಮಾರಕ ನಿರ್ಮಿಸುವ ಕಾರ್ಯಕ್ಕೆ ಎಲ್ಲರ ಸಲಹೆ ಪಡೆದು ಮುಂದುವರಿಯಲಾಗುವುದು,” ಎಂದರು.
ಒಗ್ಗಟ್ಟಿನಿಂದ ಹೋರಾಡಿದ್ದರೆ ಬ್ರಿಟಿಷರು ಆಳುತ್ತಿರಲಿಲ್ಲ: ಪ್ರತಾಪ್ ಸಿಂಹ ನಾಯಕ್ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, “ಮಂಜ ಬೈದ್ಯರಂತಹ ಕ್ರಾಂತಿಕಾರಿಗಳ ಹೋರಾಟದ ಸಮಯದಲ್ಲಿ ಇಡೀ ದೇಶವೇ ಒಂದಾಗಿ ನಿಂತಿದ್ದರೆ ಬ್ರಿಟಿಷರು ನಮ್ಮನ್ನು ಆಳಲು ಸಾಧ್ಯವಿರುತ್ತಿರಲಿಲ್ಲ. ಮಂಜ ಬೈದ್ಯರ ಬಲಿದಾನ ಇತಿಹಾಸದ ಪುಟಗಳಲ್ಲಿ ಮುನ್ನೆಲೆಗೆ ಬರಲು 190 ವರ್ಷಗಳು ಬೇಕಾಯಿತು. ಈಗಲಾದರೂ ಅವರ ತ್ಯಾಗವನ್ನು ಅಮರವಾಗಿಸುವ ಯೋಜನೆಗಳು ಅನುಷ್ಠಾನಗೊಳ್ಳಬೇಕಿದೆ,” ಎಂದರು.
ಭವ್ಯ ಚಾಲನೆ ಹಾಗೂ ಇತಿಹಾಸದ ಹಿನ್ನೆಲೆ: ‘ವಂದೇ ಮಾತರಂ’ ಗೀತೆಯ ಗಾಯನದೊಂದಿಗೆ ಆರಂಭವಾದ ಈ ಅಪೂರ್ವ ಕಾರ್ಯಕ್ರಮಕ್ಕೆ ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣ ನಾಯಕ್ ಅವರು ಗಣ್ಯರ ಸಮ್ಮುಖದಲ್ಲಿ ದೀಪ ಬೆಳಗಿಸಿ, ಮಂಜ ಬೈದ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಭವ್ಯ ಚಾಲನೆ ನೀಡಿದರು.
1837ರಲ್ಲಿ ನಡೆದ ಐತಿಹಾಸಿಕ ‘ಅಮರ ಸುಳ್ಯ ದಂಗೆ’ಯ ಮೂಲಕ ಮಂಗಳೂರಿನ ಬಾವುಟಗುಡ್ಡದಲ್ಲಿ ಬ್ರಿಟಿಷ್ ಧ್ವಜವನ್ನು ಕೆಳಗಿಳಿಸಿ, ಹಾಲೇರಿ ರಾಜವಂಶಸ್ಥರ ಧ್ವಜ ಹಾರಿಸಿ ಕೇವಲ 13 ದಿನಗಳ ಕಾಲ ತುಳುನಾಡಿಗೆ ಸ್ವಾತಂತ್ರ್ಯ ತಂದುಕೊಡಲಾಗಿತ್ತು. ತದನಂತರ ಬ್ರಿಟಿಷ್ ಸೈನ್ಯ ಇವರನ್ನು ಬಂಧಿಸಿ 1837ರ ಮೇ 27ರಂದು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಬಹಿರಂಗವಾಗಿ ನೇಣುಗಂಬಕ್ಕೇರಿಸಿತು. ತಾಯ್ನಾಡಿನ ದಾಸ್ಯ ಮುಕ್ತಿಗಾಗಿ ಬಲಿದಾನಗೈದ ಈ ಮಹಾನ್ ಚೇತನದ ಸ್ಮರಣೆ ಇಂದಿನ ಯುವ ಪೀಳಿಗೆಗೆ ಸದಾ ಸ್ಫೂರ್ತಿಯಾಗಿದೆ.
ಕಾರ್ಯಕ್ರಮದಲ್ಲಿ ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಸಮಿತಿ ಅಧ್ಯಕ್ಷ ಸಂಪತ್ ಸುವರ್ಣ, ವಿವಿಧ ಸಂಘಟನೆಗಳ ಪ್ರಮುಖರು, ಮಂಜ ಬೈದ್ಯರ ವಂಶಸ್ಥರು ಹಾಗೂ ನೂರಾರು ಸಾರ್ವಜನಿಕರು ಭಾಗವಹಿಸಿ ವೀರ ಹೋರಾಟಗಾರನಿಗೆ ಭಾವಪೂರ್ಣ ನಮನ ಸಲ್ಲಿಸಿದರು.ಜಾತಿ, ಧರ್ಮ ಮತ್ತು ರಾಜಕೀಯ ಭೇದ ಮರೆತು ಇತಿಹಾಸದ ವೀರನನ್ನು ಸ್ಮರಿಸಿದ ಕ್ಷಣಕ್ಕೆ ಉಪ್ಪಿನಂಗಡಿ ಸಾಕ್ಷಿಯಾಯಿತು.



-
crime2 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime4 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala2 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala5 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 weeks agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Dakshina Kannada6 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala4 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala5 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
