Connect with us

Belthangady

ಧರ್ಮಸ್ಥಳ ಪ್ರಕರಣ | ಎಸ್ಐಟಿಯಿಂದ ಬಂಗ್ಲೆಗುಡ್ಡೆಯಲ್ಲಿ ಮತ್ತೆ ಕಾರ್ಯಾಚರಣೆ

Published

on

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (SIT) ಅಧಿಕಾರಿಗಳು ಧರ್ಮಸ್ಥಳದ ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಮತ್ತೆ ಕಾರ್ಯಾಚರಣೆ ಹಾಗೂ ಸ್ಥಳ ಪರಿಶೀಲನೆ ಆರಂಭಿಸಿದ್ದಾರೆ.

ಘಟನೆಯ ಹಿನ್ನೆಲೆ: ಈ ಪ್ರಕರಣದಲ್ಲಿ ಸಾಕ್ಷಿ ದೂರುದಾರನಾಗಿದ್ದ ಚಿನ್ನಯ್ಯ ಎಂಬಾತ ಆರಂಭದಲ್ಲಿ ನ್ಯಾಯಾಲಯಕ್ಕೆ ಮಾನವನ ‘ತಲೆಬುರುಡೆ’ಯೊಂದನ್ನು ತಂದಿದ್ದನು. ಆ ತಲೆಬುರುಡೆಯನ್ನು ಬಂಗ್ಲೆಗುಡ್ಡೆಯಲ್ಲಿ ತೆಗೆಯಲಾಗಿತ್ತು ಎನ್ನಲಾಗಿದೆ. ಸೌಜನ್ಯಾಳ ಮಾವ ವಿಠಲ ಗೌಡ ಮತ್ತು ಬಂಟ್ವಾಳ ನಿವಾಸಿ ಪ್ರದೀಪ್ ಕುಲಾಲ್ ಎಂಬುವವರು ಬಂಗ್ಲೆಗುಡ್ಡೆಯಲ್ಲಿ ತಲೆಬುರುಡೆ ತೆಗೆದ ಸ್ಥಳದಲ್ಲಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು.

ಮರು ಸೃಷ್ಟಿ ಮತ್ತು ಮಹಜರು: ಈ ವಿಡಿಯೋ ವೈರಲ್ ಆದ ಘಟನೆಯ ಮರು ಸೃಷ್ಟಿ (Recreation) ಮಾಡಲು ಮತ್ತು ಸ್ಥಳ ಪರಿಶೀಲನೆ ನಡೆಸಲು ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ.

ತಜ್ಞರ ತಂಡ ಭೇಟಿ: ಘಟನಾ ಸ್ಥಳವನ್ನು ಖಚಿತಪಡಿಸಿ ವರದಿ ನೀಡಲು ಬೆಂಗಳೂರಿನಿಂದ ಆಗಮಿಸಿದ ಎಫ್‌ಎಸ್‌ಎಲ್ (FSL) ತಜ್ಞರು ಮತ್ತು ಸೋಕೋ (SOCO) ತಂಡದವರೊಂದಿಗೆ ಎಸ್‌ಐಟಿ ಅಧಿಕಾರಿಗಳು ಮೇ 21 ರಂದು ಅಪರಾಹ್ನ 2:40ಕ್ಕೆ ಪ್ರಕರಣದ ಸಾಕ್ಷಿಯಾದ ಪ್ರದೀಪ್ ಕುಲಾಲ್‌ನನ್ನು ಕರೆದುಕೊಂಡು ಬಂದು ಸ್ಥಳ ಪರಿಶೀಲನೆ ನಡೆಸಿ ಮಹಜರು ಕಾರ್ಯ ಆರಂಭಿಸಿದ್ದಾರೆ.

ಕಾರಣ: ಆರಂಭದಲ್ಲಿ ನಡೆಸಲಾಗಿದ್ದ ಸ್ಥಳ ಮಹಜರು ಪ್ರಕ್ರಿಯೆಯು ಸಮರ್ಪಕವಾಗಿ ನಡೆದಿಲ್ಲ ಎಂಬ ಕಾರಣಕ್ಕೆ, ಇದೀಗ ಮತ್ತೊಮ್ಮೆ ಎಸ್‌ಐಟಿ ಅಧಿಕಾರಿಗಳು ಈ ಜಂಟಿ ಕಾರ್ಯಾಚರಣೆ ಹಾಗೂ ಮಹಜರು ಪ್ರಕ್ರಿಯೆಯನ್ನು ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Belthangady

ಬೆಳ್ತಂಗಡಿ: 50 ಲಕ್ಷದ ರಸ್ತೆ 9 ವರ್ಷಕ್ಕೆ ಗುಂಡಿಮಯ – ಕೈಕಂಬ–ಫಾರೆಸ್ಟ್ ಬಂಗಲೆ ರಸ್ತೆ ದುಸ್ಥಿತಿ

Published

on

ಬೆಳ್ತಂಗಡಿ: 2017ರಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಡಾಮರೀಕರಣಗೊಂಡ ನಾವೂರು ಗ್ರಾಮದ ಕೈಕಂಬ ಜಂಕ್ಷನ್‌ನಿಂದ ಫಾರೆಸ್ಟ್ ಬಂಗಲೆಗೆ ಸಂಪರ್ಕಿಸುವ 1.40 ಕಿ.ಮೀ ರಸ್ತೆ ಇದೀಗ ಗುಂಡಿಯಿಂದ ಗುಂಡಿಯಾಗಿ ಸಂಪೂರ್ಣ ಹದಗೆಟ್ಟಿದೆ. “ಇಲ್ಲಿ ರಸ್ತೆಯಲ್ಲಿ ಗುಂಡಿ ಇದೆಯೋ, ಅಥವಾ ಗುಂಡಿಯಲ್ಲಿ ರಸ್ತೆ ಇದೆಯೋ ಅರ್ಥವಾಗದ ಸ್ಥಿತಿ” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಬೆಳ್ತಂಗಡಿ ಮೂಲಕ 2017ರಲ್ಲಿ ನಿರ್ಮಾಣವಾದ ಈ 1 ಕಿ.ಮೀ ರಸ್ತೆ ಇದೀಗ ಇಂಚಿಂಚಿಗೂ ಗುಂಡಿಯಾಗಿದೆ. ಬೇಸಿಗೆಯಲ್ಲಿ ಗುಂಡಿ ಮುಚ್ಚಲು ಮಣ್ಣು ಹಾಕಲಾಗಿತ್ತು. ಆದರೆ ಮಳೆ ಆರಂಭವಾಗುತ್ತಿದ್ದಂತೆ ರಸ್ತೆ ಪೂರ್ತಿ ಕೆಸರುಮಯವಾಗಿ ಕಂಬಳ ಗದ್ದೆಯನ್ನು ನಾಚಿಸುವಂತಾಗಿದೆ.

ಜನರ ಸಂಕಷ್ಟ:
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿ ಸೇರಿದಂತೆ ಫಾರೆಸ್ಟ್ ಬಂಗಲೆ, ಕಣಾಲು, ಕಾರಿಂಜ, ಕುಂಡಡ್ಕ, ಸುಳ್ಳೊಡಿ ಮುಂತಾದ ಪ್ರದೇಶಗಳನ್ನು ಸಂಪರ್ಕಿಸುವ ಏಕೈಕ ಪ್ರಮುಖ ರಸ್ತೆ ಇದಾಗಿದೆ. ದಿನನಿತ್ಯ ನೂರಾರು ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ, ನೂರಾರು ಜನರು ಕೆಲಸಕ್ಕೆ ಇದೇ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಅಂಗನವಾಡಿ, ಕಿ.ಪ್ರಾ ಶಾಲೆ, ಹಾಲು ಉತ್ಪಾದಕರ ಸಂಘವೂ ಇದೆ.

ಗುಂಡಿ ತಪ್ಪಿಸುವ ಭರದಲ್ಲಿ ದ್ವಿಚಕ್ರ ವಾಹನ, ಆಟೋ, ಖಾಸಗಿ ವಾಹನಗಳು ಅಡ್ಡಾದಿಡ್ಡಿ ಚಲಿಸುತ್ತಿದ್ದು, ಅಪಘಾತಗಳೂ ಸಂಭವಿಸಿವೆ. ಆದರೂ ರಸ್ತೆ ದುರಸ್ತಿ ಆಗದಿರುವುದು ದುರಂತ ಎಂದು ಸ್ಥಳೀಯರು ಬೇಸರಿಸಿದ್ದಾರೆ.

ಒತ್ತಾಯ:
“ಕೈಕಂಬದಿಂದ ಮೂರು ಮಾರ್ಗದವರೆಗಿನ ರಸ್ತೆ ಜನ, ವಾಹನ ಸಂಚರಿಸಲು ಅಯೋಗ್ಯವಾಗಿದೆ. ದಿತ್ಯೋಪಯೋಗಿ ರಸ್ತೆಯನ್ನು ತಕ್ಷಣ ದುರಸ್ತಿ ಮಾಡಬೇಕು. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆಯೂ ಅಗತ್ಯ” ಎಂದು ಆಟೋ ರಿಕ್ಷಾ ಚಾಲಕ-ಮಾಲೀಕರಾದ ದಿನೇಶ್ ಗೌಡ ಆಗ್ರಹಿಸಿದ್ದಾರೆ.




Continue Reading

accident

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯ ಚರಂಡಿಗೆ ಉರುಳಿದ ಕಾರು; ಮೂವರಿಗೆ ಗಾಯ

Published

on

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆಬದಿಯ ಆಳವಾದ ಚರಂಡಿಗೆ ಬಿದ್ದ ಘಟನೆ ಬೆಳ್ತಂಗಡಿ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಕಾಶಿಬೆಟ್ಟು ಎಂಬಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.

ಅಪಘಾತದ ಸಮಯದಲ್ಲಿ ಕಾರಿನಲ್ಲಿ ಮೂವರು ಪ್ರಯಾಣಿಕರಿದ್ದು, ಕಾರು ನಿಯಂತ್ರಣ ತಪ್ಪಿ ನೇರವಾಗಿ ಚರಂಡಿಗೆ ಇಳಿದಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ಮೂವರಿಗೂ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಜಖಂಗೊಂಡಿದೆ. ಸ್ಥಳಕ್ಕೆ ಸ್ಥಳೀಯರು ಧಾವಿಸಿ ಗಾಯಾಳುಗಳ ರಕ್ಷಣೆಗೆ ನೆರವಾಗಿದ್ದಾರೆ. ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Continue Reading

arrest

ಬೆಳ್ತಂಗಡಿ: ಸರಣಿ ಕಳ್ಳತನದ ಅಂತರಾಜ್ಯ ಗ್ಯಾಂಗ್ ಪತ್ತೆ; ಇಬ್ಬರ ಬಂಧನ, ₹23.67 ಲಕ್ಷ ಮೌಲ್ಯದ ಸೊತ್ತು ವಶ

Published

on

ಬೆಳ್ತಂಗಡಿ: ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಅಂತರಾಜ್ಯ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಟ್ಟು ರೂ. 23,67,000/- ಮೌಲ್ಯದ ಚಿನ್ನಾಭರಣ, ನಗದು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP) ತಿಳಿಸಿದ್ದಾರೆ.

ಬಂಧಿತ ಆರೋಪಿಗಳ ವಿವರ:

ಹಮೀದ್ (42): ಕಾಸರಗೋಡು ನಿವಾಸಿ (ಮೂಲತಃ ಬಂಟ್ವಾಳ ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕರಾಯಿ ನಿವಾಸಿ). ಈತನನ್ನು ಮೇ 15, 2026 ರಂದು ಬಂಧಿಸಲಾಗಿತ್ತು.

ಜಾಬೀರ್ @ ಜಾಬೀ (38): ಕಾಸರಗೋಡು ನಿವಾಸಿ (ಮೂಲತಃ ಕೊಳ್ನಾಡು ಗ್ರಾಮದ ಬಾರೆಬೆಟ್ಟು ನಿವಾಸಿ). ಹಮೀದ್ ನೀಡಿದ ಮಾಹಿತಿ ಮೇರೆಗೆ ಈತನನ್ನು ಜೂನ್ 07, 2026 ರಂದು ಕಾಸರಗೋಡಿನಲ್ಲಿ ಬಂಧಿಸಲಾಗಿದೆ.

    ಪ್ರಕರಣದ ಹಿನ್ನೆಲೆ ಮತ್ತು ತನಿಖೆ:

    ಕಳೆದ ಏಪ್ರಿಲ್ 5, 2026 ರಂದು ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಚಿನ್ನಾಭರಣ ಮತ್ತು ನಗದು ಕಳ್ಳತನವಾಗಿತ್ತು. ಈ ಕುರಿತು ದಾಖಲಾಗಿದ್ದ ಅ.ಕ್ರ: 38/2026 ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸ್ ತಂಡ ಮೊದಲು ಹಮೀದ್‌ನನ್ನು ತಡೆದು ವಿಚಾರಣೆ ನಡೆಸಿದಾಗ ಕಳ್ಳತನದ ಜಾಲ ಪತ್ತೆಯಾಗಿದೆ.

    ವಶಪಡಿಸಿಕೊಂಡ ಸೊತ್ತುಗಳು: ಆರೋಪಿಗಳಿಂದ ಈ ಕೆಳಗಿನ ಸೊತ್ತುಗಳನ್ನು ಜಪ್ತಿ ಮಾಡಲಾಗಿದೆ:

    ಪುಂಜಾಲಕಟ್ಟೆ ಠಾಣಾ ಪ್ರಕರಣಕ್ಕೆ ಸಂಬಂಧಿಸಿ: 68.690 ಗ್ರಾಂ ಚಿನ್ನಾಭರಣ ಮತ್ತು ರೂ. 2,00,000/- ನಗದು.

    ಉಪ್ಪಿನಂಗಡಿ ಠಾಣಾ ಪ್ರಕರಣಕ್ಕೆ (ಅ.ಕ್ರ: 28/2025) ಸಂಬಂಧಿಸಿ: 21.810 ಗ್ರಾಂ ಚಿನ್ನಾಭರಣ.

    ಇತರ: ಕೃತ್ಯಕ್ಕೆ ಬಳಸಿದ ಕಾರು. (ವಶಪಡಿಸಿಕೊಂಡ ಒಟ್ಟು ಸೊತ್ತಿನ ಮೌಲ್ಯ ರೂ. 23,67,000/-)

    5 ಕಳ್ಳತನ ಪ್ರಕರಣಗಳ ಸುಳಿವು:

    ಪೊಲೀಸ್ ತನಿಖೆಯ ವೇಳೆ ಈ ಆರೋಪಿಗಳು ಕರಾವಳಿಯ ವಿವಿಧೆಡೆ ಸರಣಿ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಕುಂಬಳೆ, ಉಪ್ಪಿನಂಗಡಿ, ಬಂಟ್ವಾಳ ನಗರ ಮತ್ತು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು 5 ಕಳ್ಳತನ ಪ್ರಕರಣಗಳಲ್ಲಿ ಈ ಇಬ್ಬರು ಭಾಗಿಯಾಗಿರುವುದು ದೃಢಪಟ್ಟಿದೆ. ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

    ಕಾರ್ಯಾಚರಣೆ ನಡೆಸಿದ ತಂಡ:

    ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಅವರ ಮಾರ್ಗದರ್ಶನದಲ್ಲಿ, ಬೆಳ್ತಂಗಡಿ ಉಪವಿಭಾಗಾಧೀಕ್ಷಕಿ (DySP) ಶ್ರೀಮತಿ ರೋಹಿಸಿ ಸಿ.ಕೆ. ಅವರ ನೇತೃತ್ವದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.

    ತಂಡದಲ್ಲಿ ಬೆಳ್ತಂಗಡಿ ಗ್ರಾಮಾಂತರ ಸಿ.ಪಿ.ಐ ರವಿ ಬಿ.ಎಸ್, ಉಪ್ಪಿನಂಗಡಿ ಗ್ರಾಮಾಂತರ ಸಿ.ಪಿ.ಐ ನಾಗರಾಜ್ ಹೆಚ್.ಇ, ಪುಂಜಾಲಕಟ್ಟೆ ಪಿ.ಎಸ್.ಐ ರಾಜೇಶ್ ಕೆ.ವಿ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್ ಮತ್ತು ಸಂಪತ್ ಅವರು ತಾಂತ್ರಿಕ ನೆರವು ನೀಡಿದ್ದಾರೆ. ಪೊಲೀಸರ ಈ ಸಮಯಪ್ರಜ್ಞೆ ಮತ್ತು ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.




    Continue Reading

    Trending

    Copyright © 2025 Deevatige

    error: Content is protected !!