Connect with us

Condolences

ಶ್ರೀಪೆರಂಬದೂರಿನಲ್ಲಿ ರಾಜೀವ್ ಗಾಂಧಿ ಜ್ಯೋತಿ ಯಾತ್ರೆ ಭವ್ಯ ಸಮಾರೋಪ: 35ನೇ ವರ್ಷದ ಐತಿಹಾಸಿಕ ಯಾತ್ರೆ ಸಂಪನ್ನ

Published

on

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದ (INTUC) ನೇತೃತ್ವದಲ್ಲಿ ಕಳೆದ 35 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿರುವ ಐತಿಹಾಸಿಕ ‘ರಾಜೀವ್ ಗಾಂಧಿ ಜ್ಯೋತಿ ಯಾತ್ರೆ’ಯು ಮೇ 21ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಅತ್ಯಂತ ಯಶಸ್ವಿಯಾಗಿ ಸಮಾರೋಪಗೊಂಡಿದೆ.

ಭಾರತದ ಮಾಜಿ ಪ್ರಧಾನಮಂತ್ರಿ ದಿವಂಗತ ಶ್ರೀ ರಾಜೀವ್ ಗಾಂಧೀಜಿ ಅವರ 35ನೇ ವರ್ಷದ ಸ್ಮರಣಾ ದಿನ ಹಾಗೂ ಮರಣ ವಾರ್ಷಿಕೋತ್ಸವದ ಅಂಗವಾಗಿ, ಅವರ ಹುತಾತ್ಮ ಸ್ಥಳದ ಮುಂದೆ ಈ ಜ್ಯೋತಿಯನ್ನು ಇರಿಸುವ ಮೂಲಕ ಗೌರವ ಸಲ್ಲಿಸಲಾಯಿತು.

ಅದ್ಧೂರಿ ಚಾಲನೆ ಮತ್ತು ಸಾಗಿದ ಮಾರ್ಗ:

ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ , ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ , ಸಾರಿಗೆ ಸಚಿವ ಶ್ರೀ ರಾಮಲಿಂಗಾರೆಡ್ಡಿ ಅವರ ಮಾರ್ಗದರ್ಶನದಲ್ಲಿ ಮೇ 15, 2026 ರಂದು ಬೆಳಿಗ್ಗೆ 10:00 ಗಂಟೆಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಈ ಜ್ಯೋತಿ ಯಾತ್ರೆಗೆ ಸಲೀಂ ಅಹಮದ್ ಮತ್ತು ಮಾಜಿ ಸಚಿವ ಎಚ್‌ ಎಂ. ರೇವಣ್ಣ ರವರ ಉಸ್ತುವಾರಿಯಲ್ಲಿ ಅದ್ಧೂರಿ ಚಾಲನೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಶಾಸಕರು ಮತ್ತು ಅನೇಕ ಇತರ ನಾಯಕರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ಉದ್ಘಾಟನೆಗೊಂಡಿತ್ತು.

ಬೆಂಗಳೂರಿನಿಂದ ಹೊರಟ ಜ್ಯೋತಿ ಯಾತ್ರೆಯು ನೆಲಮಂಗಲ, ಕುಣಿಗಲ್, ಯಡಿಯೂರು, ಚನ್ನರಾಯಪಟ್ಟಣ, ಹಾಸನ, ಹೊಳೇನರಸೀಪುರ, ಕೆ.ಆರ್. ನಗರ ಮತ್ತು ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಮೂಲಕ ಸಾಗಿತು. ನಂತರ ತಮಿಳುನಾಡಿನ ಸತ್ಯಮಂಗಲಂ, ಕೋಯಂಬತ್ತೂರು, ಅವಿನಾಶಿ, ಪೆರುಮನಲ್ಲೂರು, ಈರೋಡ್, ಭವಾನಿ, ಸೇಲಂ, ಅತ್ತೂರು, ಧರ್ಮಪುರಿ, ಕೃಷ್ಣಗಿರಿ, ತಿರುಪತ್ತೂರು, ಉತ್ತಂಗರಾಯ್, ಸಿಂಗಾರಪೇಟೆ, ಚೆಂಗಂ, ತಿರುವಣ್ಣಾಮಲೈ, ಜಿಂಜಿ, ತಿಂಡಿವನಂ ಮೂಲಕ ಪಾಂಡಿಚೇರಿಗೆ ಪ್ರವೇಶಿಸಿತು. ಅಲ್ಲಿಂದ ಮೇ 21ರಂದು ಬೆಳಿಗ್ಗೆ 8:30ಕ್ಕೆ ತಮಿಳುನಾಡಿನ ಶ್ರೀಪೆರಂಬದೂರನ್ನು ತಲುಪಿ ಮುಕ್ತಾಯಗೊಂಡಿತು.

ಜ್ಯೋತಿ ಸ್ವೀಕಾರ ಮತ್ತು ಯಾತ್ರೆಯ ಉದ್ದೇಶ:

ಮೇ 21ರಂದು ಬೆಳಿಗ್ಗೆ 8:30ಕ್ಕೆ ಶ್ರೀಪೆರಂಬದೂರಿನಲ್ಲಿ ತಮಿಳುನಾಡು ಪ್ರದೇಶ ಕಾಂಗ್ರೆಸ್ ಸಮಿತಿಯ (TNCC) ಮಾನ್ಯ ಅಧ್ಯಕ್ಷರಾದ ಶ್ರೀ ಕೆ. ಸೆಲ್ವಪೆರುಂತಗೈ ಜಿ ಅವರು ಜ್ಯೋತಿಯನ್ನು ಅಧಿಕೃತವಾಗಿ ಸ್ವೀಕರಿಸಿದರು.

ಈ ಯಾತ್ರೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದ ಅಧ್ಯಕ್ಷರು ಹಾಗೂ ಅಖಲ ಭಾರತ ರಾಜೀವ ಗಾಂಧೀ ಜ್ಯೋತಿ ಯಾತ್ರಾ ಸಮಿತಿಯ ಅಧ್ಯಕ್ಷರಾದ ಶ್ರೀ ಆರ್. ದೊರೈವೇಲು ಮತ್ತು ಭಾರತ ರಾಜೀವ ಗಾಂಧೀ ಜ್ಯೋತಿ ಯಾತ್ರಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಬಗ್ಗು ಮೂಲೆ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಯಾತ್ರೆಯುದ್ದಕ್ಕೂ ಮಾರ್ಗಮಧ್ಯದಲ್ಲಿ ಅನೇಕ ರಸ್ತೆಬದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರಾಜೀವ್ ಗಾಂಧೀಜಿಯವರ ಸಂದೇಶ, ಜೀವನ ಮತ್ತು ದೇಶಕ್ಕೆ ಅವರು ನೀಡಿದ ಕೊಡುಗೆಯನ್ನು ಪ್ರಚಾರ ಮಾಡಲಾಯಿತು.

ರಾಷ್ಟ್ರೀಯ ಐಕ್ಯತೆ, ಏಕತೆಯನ್ನು ಬಲಪಡಿಸುವುದು, ಸಹೋದರತ್ವದ ಸಂದೇಶವನ್ನು ಸಾರುವುದು ಹಾಗೂ ದೇಶದ ಶತ್ರುಗಳ ವಿರುದ್ಧ ಹೋರಾಡಲು ಜನರಲ್ಲಿ ಜಾಗೃತಿ ಮೂಡಿಸಿ, ಧೈರ್ಯ ಮತ್ತು ಬದ್ಧತೆಯನ್ನು ಬೆಳೆಸುವುದು ಈ ಯಾತ್ರೆಯ ಮುಖ್ಯ ಧ್ಯೇಯವಾಗಿತ್ತು ಎಂದು ಆಯೋಜಕರು ತಿಳಿಸಿದ್ದಾರೆ.

ಈ ಐತಿಹಾಸಿಕ ಜ್ಯೋತಿ ಯಾತ್ರೆಯನ್ನು ಅಖಿಲ ಭಾರತ ಆರ್.ಜಿ.ಜೆ.ವೈ. ಸಮಿತಿಯ (All India R.G.J.Y. Committee) ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಆರ್. ದೊರೈವೇಲು ಅವರ ಸಮರ್ಥ ನೇತೃತ್ವದಲ್ಲಿ ಆಯೋಜಿಸಲಾಗಿದ್ದು, ಇವರೊಂದಿಗೆ ಕಾರ್ಮಿಕ ವಿಭಾಗದ (Labour Cell) ರಾಜ್ಯ ಅಧ್ಯಕ್ಷರಾದ ಶ್ರೀ ಪುಟ್ಟಸ್ವಾಮಿ ಗೌಡ ಹಾಗೂ ಐಎನ್‌ಟಿಯುಸಿ (INTUC) ರಾಜ್ಯ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ವೆಂಕಟೇಶ್ ಅವರು ಪ್ರಮುಖವಾಗಿ ಭಾಗವಹಿಸಿ ಯಾತ್ರೆಯ ಯಶಸ್ಸಿಗೆ ಶ್ರಮಿಸಿದರು. ಸಮಾರೋಪ ಕಾರ್ಯಕ್ರಮದ ಕೊನೆಯಲ್ಲಿ, ಯಾತ್ರೆಯುದ್ದಕ್ಕೂ ಸಾಥ್ ನೀಡಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹನೀಫ್ ಬಗ್ಗು ಮೂಲೆ, ರಾಜ್ಯ ಉಪಾಧ್ಯಕ್ಷರಾದ ಸಿದ್ದಿಕ್ ಸೂರ್ಯ ಹಾಗೂ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರಿಗೆ ಧನ್ಯವಾದಗಳನ್ನು ಅರ್ಪಿಸಲಾಯಿತು. ಅಂತಿಮವಾಗಿ, “ನಾವು ವಿಶ್ವ ಶಾಂತಿಗಾಗಿ ಪ್ರಾರ್ಥಿಸುತ್ತೇವೆ” ಎಂಬ ಉದಾತ್ತ ಸಂದೇಶದೊಂದಿಗೆ ಈ ಬಾರಿಯ 35ನೇ ವರ್ಷದ ಜ್ಯೋತಿ ಯಾತ್ರೆಯು ಅತ್ಯಂತ ಭವ್ಯವಾಗಿ ಮುಕ್ತಾಯಗೊಂಡಿದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ಕೆಲಿಂಜ ಶಾಲೆಯ ಮುಖ್ಯಶಿಕ್ಷಕಿ ವನಿತಾ ಶೆಟ್ಟಿಗಾರ್ ಹೃದಯಾಘಾತಕ್ಕೆ ಬಲಿ: ವಾರದೊಳಗೆ ಇಬ್ಬರು ಮುಖ್ಯಶಿಕ್ಷಕಿಯರ ಸಾವು!

Published

on

ಬಂಟ್ವಾಳ: ಶಿಕ್ಷಣ ಕ್ಷೇತ್ರಕ್ಕೆ ಆಘಾತಕಾರಿ ಸುದ್ದಿ. ಕೆಲಿಂಜ ಶಾಲೆಯ ಮುಖ್ಯಶಿಕ್ಷಕಿ ವನಿತಾ ಶೆಟ್ಟಿಗಾರ್ (58) ಅವರು ಹೃದಯಾಘಾತದಿಂದ ನ.2ರಂದು ರಾತ್ರಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಿಶೇಷವೆಂದರೆ, ವಾರದ ಹಿಂದಷ್ಟೇ ಸಮೀಪದ ಒಕ್ಕೆತ್ತೂರು ಸರಕಾರಿ ಶಾಲೆಯ ಮುಖ್ಯಶಿಕ್ಷಕಿ ಯಮುನಾ ಅವರು ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದು, ಇದೀಗ ಮತ್ತೋರ್ವ ಮುಖ್ಯಶಿಕ್ಷಕಿಯ ಸಾವು ಶಿಕ್ಷಣ ವಲಯದಲ್ಲಿ ತೀವ್ರ ಶೋಕ ಮೂಡಿಸಿದೆ.

ಗುರುಪುರ ಕೈಕಂಬದ ಕಂದಾವರ ಬೈಲು ನಿವಾಸಿಯಾಗಿದ್ದ ವನಿತಾ ಶೆಟ್ಟಿಗಾರ್ ಅವರು ನ.2ರಂದು ಎಂದಿನಂತೆ ಶಾಲೆಗೆ ತೆರಳಿ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಮನೆಗೆ ಮರಳಿದ್ದರು. ರಾತ್ರಿ ಮನೆಯಲ್ಲಿ ತೀವ್ರ ಎದೆನೋವು ಕಾಣಿಸಿಕೊಂಡು, ಬಳಿಕ ವಾಂತಿಯಾಗಿದ್ದು, ತಕ್ಷಣ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

34 ವರ್ಷಗಳ ಸುದೀರ್ಘ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿದ್ದ ವನಿತಾ ಶೆಟ್ಟಿಗಾರ್ ಅವರು ಅನೇಕ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದರು. ಅವರ ನಿಧನದಿಂದ ಶಿಕ್ಷಕ ವಲಯದಲ್ಲಿ ಶೋಕ ಆವರಿಸಿದೆ. ಸಹೋದ್ಯೋಗಿ ಶಿಕ್ಷಕರು, ಹಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣಾಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಇದಕ್ಕೂ ಮೊದಲು ಅಕ್ಟೋಬರ್ 27ರಂದು ಕೆಲಿಂಜ ಶಾಲೆಯ ಸಮೀಪದ ಒಕ್ಕೆತ್ತೂರು ಸರಕಾರಿ ಶಾಲೆಯ ಮುಖ್ಯಶಿಕ್ಷಕಿ ಯಮುನಾ ಅವರು ಅನಾರೋಗ್ಯದಿಂದ ನಿಧನರಾಗಿದ್ದರು. ಈ ಘಟನೆ ನಡೆದು ವಾರ ಕಳೆಯುವ ಮುನ್ನವೇ ಮತ್ತೊಂದು ಶಾಲೆಯ ಮುಖ್ಯಶಿಕ್ಷಕಿ ವನಿತಾ ಶೆಟ್ಟಿಗಾರ್ ಅವರು ಹೃದಯಾಘಾತಕ್ಕೆ ಬಲಿಯಾಗಿರುವುದು ಸ್ಥಳೀಯ ಶಿಕ್ಷಣ ಸಮುದಾಯಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ.

ವಾರದ ಅಂತರದಲ್ಲಿ ಇಬ್ಬರು ಶಾಲಾ ಮುಖ್ಯಸ್ಥೆಯರನ್ನು ಕಳೆದುಕೊಂಡಿರುವುದು ಶಿಕ್ಷಕ ಸಮುದಾಯದಲ್ಲಿ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ.

Continue Reading

accident

MRPL ಉದ್ಯೋಗಿ ರಾಜೇಶ್ ಎ. ಡಿ’ಸಿಲ್ವಾ ನಿಧನ: ಸಂಸ್ಥೆಯಿಂದ ತೀವ್ರ ಸಂತಾಪ, ಕುಟುಂಬಕ್ಕೆ ₹1.20 ಕೋಟಿ ಪರಿಹಾರ ಘೋಷಣೆ

Published

on

ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಸ್ಥೆಯ ಉದ್ಯೋಗಿ ಶ್ರೀ ರಾಜೇಶ್ ಎ. ಡಿ’ಸಿಲ್ವಾ ಅವರು ಸುಟ್ಟ ಗಾಯಗಳಿಂದಾಗಿ 2026ರ ಅಕ್ಟೋಬರ್ 17ರಂದು ನಿಧನರಾಗಿದ್ದು, ಅವರ ಅಗಲಿಕೆಗೆ MRPL ಆಡಳಿತ ಮಂಡಳಿ ತೀವ್ರ ಕಂಬನಿ ಮಿಡಿದಿದೆ.

ಕಳೆದ ಸೆಪ್ಟೆಂಬರ್ 30, 2026ರಂದು ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋಟ್ರೀಟರ್ (CHT) ಘಟಕದಲ್ಲಿ ನಡೆದ ದುರದೃಷ್ಟಕರ ಘಟನೆಯಲ್ಲಿ ರಾಜೇಶ್ ಅವರು ತೀವ್ರವಾಗಿ ಸುಟ್ಟ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಅಕ್ಟೋಬರ್ 17ರಂದು ಕೊನೆಯುಸಿರೆಳೆದಿದ್ದಾರೆ.

ಕುಟುಂಬಕ್ಕೆ ₹1.20 ಕೋಟಿ ಆರ್ಥಿಕ ನೆರವು

ಈ ಕಷ್ಟದ ಸಮಯದಲ್ಲಿ ಮೃತರ ಕುಟುಂಬದೊಂದಿಗೆ ಆಡಳಿತ ಮಂಡಳಿ ದೃಢವಾಗಿ ನಿಲ್ಲಲಿದ್ದು, ತನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದೆ. ಮೃತರ ಕುಟುಂಬದ ಭವಿಷ್ಯ ಹಾಗೂ ಆರ್ಥಿಕ ಭದ್ರತೆಯ ಹಿತದೃಷ್ಟಿಯಿಂದ ಸಂಸ್ಥೆಯು ₹90 ಲಕ್ಷಗಳ ಎಕ್ಸ್‌ಗ್ರೇಷಿಯಾ (ವಿಶೇಷ) ಪರಿಹಾರ ಘೋಷಿಸಿದೆ. ಇದರೊಂದಿಗೆ, ವಿವಿಧ ಮೂಲಗಳಿಂದ ಸಿಗುವ ಪರಿಹಾರ ಸೇರಿದಂತೆ ಮೃತರ ಕುಟುಂಬಕ್ಕೆ ತಲುಪುವ ಒಟ್ಟು ಆರ್ಥಿಕ ನೆರವಿನ ಮೊತ್ತ ₹1.20 ಕೋಟಿ ಆಗಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

Continue Reading

Condolences

ಮಂಡ್ಯದಲ್ಲಿ ಕಣ್ಣೀರು ತರಿಸುವ ಘಟನೆ: ಬದುಕಿದ್ದಾಗ ಕಡೆಗಣಿಸಿ ಸತ್ತಾಗ ಲಕ್ಷಾಂತರ ರೂ. ಹಂಚಿಕೊಂಡ ಸಂಬಂಧಿಕರು!

Published

on

ಮಂಡ್ಯ: ಮಾನವೀಯತೆ ಮರೆತು, ಹಣಕ್ಕಷ್ಟೇ ಬೆಲೆ ನೀಡುವ ಕಟು ಸತ್ಯಕ್ಕೆ ಸಾಕ್ಷಿಯಾಗುವಂತಹ ಹೃದಯವಿದ್ರಾವಕ ಘಟನೆಯೊಂದು ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿ ನಡೆದಿದೆ. ಆಸರೆ ನೀಡಬೇಕಾದ ಕುಟುಂಬಸ್ಥರಿದ್ದರೂ ಭಿಕ್ಷೆ ಬೇಡಿ ಬದುಕುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟ ನಂತರ, ಅವರ ಮನೆಯಲ್ಲಿ ಬರೋಬ್ಬರಿ ₹8 ಲಕ್ಷಕ್ಕೂ ಅಧಿಕ ನಗದು ಪತ್ತೆಯಾಗಿದ್ದು, ಸತ್ತ ಮೇಲೆ ಆ ಹಣವನ್ನು ಸಂಬಂಧಿಕರು ಹಂಚಿಕೊಂಡಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮಂಡ್ಯ ನಗರದ ಗುತ್ತಲು ನಿವಾಸಿಯಾಗಿದ್ದ ನೂರ್‌ ಎಂಬ ವೃದ್ಧೆ, ಕುಟುಂಬದವರ ನೆರವಿಲ್ಲದೆ ದಶಕಗಳಿಂದ ಊರೂರು ಅಲೆದು ಭಿಕ್ಷಾಟನೆ ಮಾಡುತ್ತಿದ್ದರು. ಸಿಕ್ಕರೆ ಊಟ, ಇಲ್ಲದಿದ್ದರೆ ಉಪವಾಸ ಎಂಬಂತೆ ದಿನ ದೂಡುತ್ತಿದ್ದ ಇವರು, ವಯೋಸಹಜ ಕಾಯಿಲೆಯಿಂದ ತಮ್ಮ ಪುಟ್ಟ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಸಾವಿನ ನಂತರ ಬೆಳಕಿಗೆ ಬಂದ ಲಕ್ಷಾಂತರ ರೂಪಾಯಿ! ವೃದ್ಧೆ ಮೃತಪಟ್ಟ ಸುದ್ದಿ ತಿಳಿದು ಸ್ಥಳೀಯರು ಹಾಗೂ ಸಂಬಂಧಿಕರು ಸೇರಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಬಳಿಕ ಮನೆಯನ್ನು ಪರಿಶೀಲಿಸಿದಾಗ ಮೂಟೆಗಳು ಹಾಗೂ ಪೆಟ್ಟಿಗೆಗಳಲ್ಲಿ ಕಂತೆ ಕಂತೆ ನೋಟುಗಳು ಮತ್ತು ನಾಣ್ಯಗಳು ಪತ್ತೆಯಾಗಿವೆ. ಎಣಿಕೆ ಮಾಡಿದಾಗ ಒಟ್ಟು ಮೊತ್ತ ₹8 ಲಕ್ಷಕ್ಕೂ ಅಧಿಕ ಇರುವುದು ತಿಳಿದುಬಂದಿದೆ.

ಆಶ್ಚರ್ಯ ಎಂದರೆ, ಅಜ್ಜಿ ಬದುಕಿದ್ದಾಗ ತಿರುಗಿಯೂ ನೋಡದ, ಅವರ ಕಷ್ಟಕ್ಕೆ ಸ್ಪಂದಿಸದ ಸಂಬಂಧಿಕರು, ಈ ಹಣ ಪತ್ತೆಯಾಗುತ್ತಿದ್ದಂತೆಯೇ ಅದನ್ನು ಹಂಚಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವೃದ್ಧೆ ಬದುಕಿದ್ದಾಗ ಅನ್ನ ಹಾಕದವರು, ಸತ್ತ ಮೇಲೆ ಅವರ ಕಷ್ಟದ ಹಣಕ್ಕೆ ಮುಗಿಬಿದ್ದಿರುವುದು ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಯಾಗುತ್ತಿದೆ. “ಹಣಕ್ಕೆ ಕೊಡುವ ಬೆಲೆಯನ್ನು ಮನುಷ್ಯತ್ವಕ್ಕೆ ನೀಡದ ಇವರೆಲ್ಲಾ ಮನುಷ್ಯರಾ?” ಎಂದು ಸಾರ್ವಜನಿಕರು ಹಾಗೂ ನೆಟ್ಟಿಗರು ಸಂಬಂಧಿಕರ ಅನಾಗರಿಕ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!