Connect with us

Uncategorized

ಕುಖ್ಯಾತ ಕಳವು ಪ್ರಕರಣದ ಆರೋಪಿ ಪೊಲೀಸ್‌ ಬಲೆಗೆಆರೋಪಿತನಿಂದ ನಗದು, ಬೈಕ್ ಹಾಗೂ ಮೊಬೈಲ್ ಫೋನ್ ವಶಕ್ಕೆ.ಕ್ಷೀಪ್ರ ಕಾರ್ಯಾಚರಣೆಯನ್ನು ನಡೆಸಿ ಆರೋಪಿತನ ಬಂಧನ.

Published

on

ಮಂಗಳೂರು ಬಂದರ್‌ ನ ಜೆ.ಎಂ.ರೋಡ್ ನಲ್ಲಿ ಎರಡು ದಿನಗಳ ಹಿಂದೆ ನಡೆದ ನಗದು ಕಳವು ಪ್ರಕರಣದಲ್ಲಿ ಪ್ರಕರಣವನ್ನು ಭೇಧಿಸಿ, ಕ್ಷೀಪ್ರ ಕಾರ್ಯಾಚರಣೆಯನ್ನು ನಡೆಸಿದ ಪೊಲೀಸರು ಮಂಗಳೂರು ಕಸಬ ಬೆಂಗ್ರೆ ನಿವಾಸಿ ಆರೋಪಿ ಝಾಕೀರ್ ಹುಸೈನ್ @ ಜಾಕಿ ಹಾಲಿಃ ಜಪ್ಪು ಮಾರ್ಕೆಟ್ ಹತ್ತಿರ, ಗುಜ್ಜರೆ ಕೆರೆ ಜಪ್ಪು, ಮಂಗಳೂರು ಎಂಬಾತನನ್ನು ನಗರದ ಮಣ್ಣಗುಡ್ಡ ಜಂಕ್ಷನ್ ಬಳಿ ವಶಕ್ಕೆ ಪಡೆದು ಕಳವು ಮಾಡಿದ ನಗದು ಹಣ ರೂ. 70,000/ ಮತ್ತು ಕೃತ್ಯಕ್ಕೆ ಬಳಸಿದ ದ್ವಿಚಕ್ರವಾಹನ, ಹಾಗೂ ಕಳ್ಳತನದ ಹಣದಿಂದ ಖರೀದಿಸಿದ ವಿವೋ ಕಂಪನಿಯ ಮೊಬೈಲ್ ಪೋನ್ ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಮಹಮ್ಮದ್ ನಿಜಾಮುದ್ದಿನ್ ಎಂಬವರು ದಿನಾಂಕ 07/02/2026 ರಂದು ಶ್ರೀಧರ ಆಳ್ವರವರಿಗೆ ಸೇರಿದ ಅಡಿಕೆಯನ್ನು ಕೆಎ-19-AE-8663 ನೇ ಟಾಟಾ ಇಂಟ್ರಾ ವಾಹನದಲ್ಲಿ ತುಂಬಿಸಿಕೊಂಡು ಬೀಭಿ ಅಲಾಬಿಯಲ್ಲಿರುವ ಅಂಬಾರ ಸುಪಾರಿ ಅಂಗಡಿಗೆ ಮಾರಾಟ ಮಾಡಿ ಅವರು ನೀಡಿದ ರೂ 1,28740/- ನ್ನು ತನ್ನ ವಾಹನದ ಡ್ಯಾಶ್ ಬೋರ್ಡ್ ನಲ್ಲಿಟ್ಟು, ಸದ್ರಿ ವಾಹನವನ್ನು ಚಲಾಯಿಸಿಕೊಂಡು 10.30 ಗಂಟೆಗೆ ಬಂದರ್ ನ ಜೆ.ಎಂ.ರೋಡ್ ನಲ್ಲಿರುವ ಸದರ್ನ್ ಏಜೆನ್ಸಿಯಲ್ಲಿ ಎಸಿಪಿ ಶೀಟ್ ಖರೀದಿ ಮಾಡಿ ವಾಹನದಲ್ಲಿ ಕುಳಿತು ಡ್ಯಾಶ್ ಬೋರ್ಡ್ ತೆರೆದಿದ್ದು, ಅದರಲ್ಲಿಟ್ಟಿದ್ದ ರೂ 1,28740/- ಕಳ್ಳತನವಾಗಿರುವುದು ಕಂಡು ಬಂದಿದ್ದು, ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ನಂಬ್ರ 18/2026 ಕಲಂ 303(2) ಬಿ.ಎನ್.ಎಸ್ ಯಂತೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಆರೋಪಿ ಹಾಗೂ ಸೊತ್ತು ಪತ್ತೆಯ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಸಚಿನ್ ಕುಮಾರ್, ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ಶೀತಲ್ ಅಲಗೂರು, ಎ,ಎಸ್,ಐ ಗಳಾದ ಶಶಿಧರ, ದಾಮೋದರ್ ಹಾಗೂ ಉತ್ತರ ಪೊಲೀಸ್ ಠಾಣಾ ಸಿಬ್ಬಂದಿಗಳನ್ನು ಒಳಗೊಂಡ ತಂಡ ದಿನಾಂಕ: 08.02.2026 ರಂದು ಪ್ರಕರಣದ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಆರೋಪಿತನ ವಿರುದ್ದ ಉಡುಪಿ ಜಿಲ್ಲೆಯ ಕುಂದಾಪುರ ಪೊಲೀಸ್ ಠಾಣೆಯಲ್ಲಿ ರಾತ್ರಿ ಮನೆ ಕಳವು ಪ್ರಕರಣದಲ್ಲಿ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ವ್ಯಾಪ್ತಿಯಲ್ಲಿ ಅಟೋರಿಕ್ಷಾದ ಶೀಟ್ ನಲ್ಲಿ ಇಟ್ಟಿದ ನಗದು ಹಣವನ್ನು ಕಳವು ಮಾಡಿದ ಪ್ರಕರಣದ ಆರೋಪಿತನಾಗಿರುತ್ತಾನೆ.

Continue Reading
Advertisement

crime

ಬಜ್ಪೆ ಠಾಣಾ ವ್ಯಾಪ್ತಿಯ ಕೆಂಜಾರು ಜೋಕಟ್ಟೆಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣ..ಮೆಹಂದಿಗೆ ಹೋಗಿದ್ದಾಗ ಮನೆಗೆ ನುಗ್ಗಿ 23ಲಕ್ಷದ ಚಿನ್ನಾಭರಣ, 1,25,000ನಗದು ಹಣ ಎಗರಿಸಿದ ಖದೀಮರಿಬ್ಬರು ಅಂದರ್.

Published

on

.

ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಜೋಕಟ್ಟೆಯಲ್ಲಿ ಮೊಹಮ್ಮದ್ ಷರೀಫ್ ಎಂಬವರು ತನ್ನ ಸಂಬಂಧಿಕರ ಮನೆಯ ಮೆಹಂದಿ ಕಾರ್ಯಕ್ರಮಕ್ಕೆ ಕಳವಾರಿಗೆ ಹೋಗಿದ್ದ ಸಂದರ್ಭ ರಾತ್ರಿ ಮನೆಗೆ ನುಗ್ಗಿ 23 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 1,25,000/- ರೂಪಾಯಿ ನಗದು ಹಣ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಖದೀಮರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಮೊ.ನಂ 176/2025 ಕಲಂ ಕಲಂ 331(3), 331(4), 305 BNS 2023 ರಂತೆ ಪ್ರಕರಣ ದಾಖಲಾಗಿತ್ತು.

ಬಜ್ಪೆ ಪೊಲೀಸರು ಆರೋಪಿತರ ಪತ್ತೆಗಾಗಿ ಬಲೆ ಬೀಸಿದಾಗ ಮೂಲತಃ ಕಳವಾರು ಚರ್ಚ್ ಬಳಿ ನಿವಾಸಿ, ಪ್ರಸ್ತುತ ಬಜ್ಪೆ ಗ್ರಾಮದ ಜರಿನಗರ ಬಾಡಿಗೆ ಮನೆಯಲ್ಲಿರುವ ಯೂಸುಫ್ ಪುತ್ರ ಅಬ್ದುಲ್ ನಾಸಿರ್@ಸಾಸಿರ್@ನಾಚಿ(31)ಎಂಬಾತ ಕಳ್ಳತನ ಮಾಡಿ ಬಳಿಕ ವಿದೇಶಕ್ಕೆ ಪರಾರಿಯಾಗಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು.
ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಸಂಗ್ರಹಿಸಿದ ಪೊಲೀಸರು LOC ಹೊರಡಿಸಿದ್ದರು. ಅಬ್ದುಲ್ ನಾಸೀರ್ @ ನಾಚಿ ಎಂಬಾತನನ್ನು LOC ಯಲ್ಲಿ ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ಪ್ರಕರಣದ ಪಿರ್ಯಾದಿದಾರರಾದ ಮೊಹಮ್ಮದ್ ಷರೀಫ್ ಎಂಬವರ ಸಂಬಂಧಿ ಕಳವಾರು ನಿವಾಸಿ ಮಯ್ಯದ್ದಿ ಇಮ್ರಾನ್ ಮತ್ತು ತಾನು ಸೇರಿ ಈ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದನು.
ಆರೋಪಿತರಿಂದ ಸುಮಾರು 27 ಲಕ್ಷ ರೂಪಾಯಿ ಮೌಲ್ಯದ 222 ಗ್ರಾಂ ತೂಕದ ಚಿನ್ನವನ್ನು, 20,000/- ರೂಪಾಯಿ ನಗದು ಹಣ, ಸುಮಾರು 50,000/- ರೂಪಾಯಿ ಮೌಲ್ಯದ ಸ್ಕೂಟರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ .

ಆರೋಪಿತರನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

Continue Reading

crime

ಡ್ರಗ್ಸ್ ಪ್ರಕರಣದಲ್ಲಿ ತಮಿಳು ಚಿತ್ರರಂಗದ ಮಾದಕ ನಟಿ ಅಂಜು ಕೃಷ್ಣ ಅಂದರ್ ; ಚಿತ್ರರಂಗದ ಸಹಾಯಕ ನಿರ್ದೇಶಕಿ ಸಹಿತ ಎಂಟು ಜನ ಪೊಲೀಸ್‌ ಬಲೆಗೆ ; ತಮಿಳುನಾಡು ಮಾದಕ ವಸ್ತು ನಿಯಂತ್ರಣ ವಿಭಾಗದ ಬಲೆಗೆ ಬಿದ್ದ ನಶೆಕೋರರು..

Published

on

ತಮಿಳು ಚಿತ್ರರಂಗದ ಮಾದಕ ನಟಿ ಅಂಜು ಕೃಷ್, ಸಹಾಯಕ ನಿರ್ದೇಶಕಿ ವಿನ್ಸಿ ನಿವೇತಾ ಸಹಿತ ಒಟ್ಟು 8 ಮಂದಿಯನ್ನು ಡ್ರಗ್ಸ್ ಪ್ರಕರಣದಲ್ಲಿ ಚೆನ್ನೈ ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ.

ಮಾದಕ ವಸ್ತು ನಿಯಂತ್ರಣ ವಿಭಾಗದ ಪೊಲೀಸ್ ತಂಡ ವಲಸರವಕ್ಕಂ ಎಂಬಲ್ಲಿ ವಿಘ್ನೇಶ್ವರನ್(33)ಎಂಬಾತನನ್ನು ಬಂಧಿಸಿದ್ದರು. ಆತನನ್ನು ತೀವ್ರ ವಿಚಾರಣೆ ಮಾಡಿದಾಗ ವೆಂಕಟೇಶ್ ಎಂಬಾತನಿಂದ ಮಾದಕ ವಸ್ತುಗಳನ್ನು ಖರೀದಿ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ.

ತಕ್ಷಣವೇ ಎಚ್ಚೆತ್ತ ಪೊಲೀಸರು ವೆಂಕಟೇಶ್ ಎಂಬಾತನ ಬಳಿ ಗ್ರಾಹಕನ ವೇಷದಲ್ಲಿ ಭೇಟಿಯಾಗಿ ಡ್ರಗ್ಸ್ ಖರೀದಿಗೆ ಮುಂದಾಗಿ ನಿಗದಿತ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಆ ವ್ಯಕ್ತಿ ಡ್ರಗ್ಸ್ ಜೊತೆ ಬಂದಾಗ ಆತನನ್ನು ಬಂಧಿಸಿ, ಆತನಿಂದ ಆರು ಗ್ರಾಂ ಮೆಥಾಫೆಟಮೈನ್, ಏಳು ಗ್ರಾಂ ಓಜಿ ಗಾಂಜಾ, ಹದಿನೈದು ಗ್ರಾಂ ಗಾಂಜಾ, ಸ್ಮೋಕಿಂಗ್ ಬಾಂಗ್, ಸ್ಟ್ಯಾಂಪ್ ಮತ್ತು ಒಂಬತ್ತು ಮೊಬೈಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಆ ಬಳಿಕ ಬಂಧಿತ ಆರೋಪಿಗಳು ವಿಚಾರಣೆ ಸಂದರ್ಭ ನೀಡಿದ ಖಚಿತ ಮಾಹಿತಿಯಂತೆ ಪೊಲೀಸರು ವಾಹನ ತಪಾಸಣೆ ನಡೆಸಿದಾಗ ಈ ಎಂಟು ಮಂದಿ ಡ್ರಗ್ಸ್ ಸಮೇತ ಸಿಕ್ಕಿಬಿದ್ದಿದ್ದಾರೆ. ನಟಿ ಅಂಜು ಕೃಷ್ಣ, ಮಲಯಾಳಂ ನಟ ಜೋಜು ನಾಯಕರಾಗಿದ್ದ ‘ಆರೋ’ ಸಿನಿಮಾದಲ್ಲಿ ನಟಿಸಿದ್ದರು.

ನಟಿ ಅಂಜು ಕೃಷ್ಣ ಮತ್ತು ಕೆಲವು ತಮಿಳು ಸಿನಿಮಾಗಳಿಗೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿರುವ ವಿನ್ಸಿ ನಿವೇತಾ, ಕಾರ್ತಿಕ್ ರಾಜ, ಯಶವಂತ್, ಶ್ರೀರಾಮ್ ಮತ್ತು ಅಲ್ವಿಬಿನ್ಶಾ ಎಂಬವರನ್ನು ತಮಿಳುನಾಡು ಪೊಲೀಸ್ ಇಲಾಖೆಯ ಮಾದಕ ವಸ್ತು ನಿಯಂತ್ರಣ ವಿಭಾಗದ ತಂಡ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಾನಿ ಚೆಲ್ಲಪ್ಪ ಹೆಸರಿನ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ನಡೆದ ಆಪರೇಷನ್ನಲ್ಲಿ ನಟಿ ಸೇರಿದಂತೆ ಇತರರ ಬಂಧನವಾಗಿದೆ.

Continue Reading

Dakshina Kannada

ಪಿಲಿಕುಳಕ್ಕೆ ಈಗ ಸಂಕಷ್ಟ, ಅವ್ಯವಸ್ಥೆಯಿಂದ ನರಳುತ್ತಿವೆ ಪ್ರಾಣಿಗಳು! ಸಂಕಷ್ಟದಲ್ಲಿ ಕರ್ನಾಟಕದ ಅತ್ಯಂತ ಸುಂದರ ಮೃಗಾಲಯ ಪಿಲಿಕುಳ

Published

on

ಪ್ರಾಣಿಗಳನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗದಿದ್ದರೆ ಮೃಗಾಲಯವನ್ನು ತಕ್ಷಣವೇ ಮುಚ್ಚಿಬಿಡಿ” ಪಿಲಿಕುಳದಲ್ಲಿ ಪ್ರಾಣಿಗಳ ದಯಾನೀಯ ಸ್ಥಿತಿ ಕಂಡು ಶಾಕ್‌ ಆದ ನ್ಯಾಯಾದೀಶರು
ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿಗಳ ಅವ್ಯವಸ್ಥೆ ಮತ್ತು ನಿರ್ಲಕ್ಷ್ಯದ ಬಗ್ಗೆ ದೂರು. ಪ್ರವಾಸಿಗರ ಮೊದಲ ಆಯ್ಕೆ ಆಗಿದ್ದ ಈ ಜಾಗಕ್ಕೆ ಈಗ ಸಂಕಷ್ಟ, ಅವ್ಯವಸ್ಥೆಯಿಂದ ನರಳುತ್ತಿವೆ ಪ್ರಾಣಿಗಳು!
ಈಗ ಅವ್ಯವಸ್ಥೆಯಿಂದ ಸಂಕಷ್ಟ ಅನುಭವಿಸುತ್ತಿದೆ. ತುಕ್ಕುಪಂಜರ, ಅಶುಚಿ ನೀರು, ಲೈಸೆನ್ಸ್ ಇಲ್ಲದೆ ಕಾರ್ಯನಿರ್ವಹಣೆ, ಪ್ರಾಣಿಗಳ ದಯನೀಯ ಸ್ಥಿತಿ ಹೈಕೋರ್ಟ್ ನ್ಯಾಯಾಧೀಶರನ್ನು ಶಾಕ್ ಮಾಡಿದೆ.

ಮಂಗಳೂರು: ಅರಬ್ಬಿ ಸಮುದ್ರದ ತಡಿಯ ಮಂಗಳೂರಿನಲ್ಲಿರೋ (Mangaluru) ಈ ಪಿಲಿಕುಳ ದೇಶದ ಅತ್ಯಂತ ನೈಸರ್ಗಿಕವಾದ ಮೃಗಾಲಯಗಳಲ್ಲಿ ಒಂದು ಅಂತಲೇ ಹೆಸರುವಾಸಿ. ಮಂಗಳೂರು ಪಿಲಿಕುಳ ಪಾರ್ಕ್,270 ಎಕರೆಗಳಲ್ಲಿ ಹಬ್ಬಿದ್ದು, ‘ಪಿಲಿ’ ಅಂದ್ರೆ ಹುಲಿ, ‘ಕುಳ’ ಅಂದ್ರೆ ಕೆರೆ. ಒಂದು ಕಾಲದಲ್ಲಿ ಹುಲಿಗಳು (Tigers) ಬಂದು ನೀರು ಕುಡಿಯುತ್ತಿದ್ದ ಈ ಜಾಗವನ್ನ ಇಂದು ಅಂತರಾಷ್ಟ್ರೀಯ ಮಟ್ಟದ ಜೈವಿಕ ಉದ್ಯಾನವನವಾಗಿ ರೂಪಿಸಲಾಗಿದೆ. ಪಶ್ಚಿಮ ಘಟ್ಟಗಳ ಅಳಿವಿನಂಚಿನಲ್ಲಿರೋ ವನ್ಯಜೀವಿಗಳಿಗೆ ಆಶ್ರಯ ತಾಣವಾಗಿರೋ ಪಿಲಿಕುಳ, ಕರಾವಳಿಗೆ ಬರೋ ಪ್ರವಾಸಿಗರ ಮೊದಲ ಆಯ್ಕೆ. ಅಂತಹ ಸುಂದರ ತಾಣ ಇಂದು ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟಿದೆ. ಪಿಲಿಕುಳದ ಪರಿಸ್ಥಿತಿ ಯಾವ ಹಂತಕ್ಕೆ ತಲುಪಿದೆ ಅಂದ್ರೆ, ಇಲ್ಲಿನ ಅವ್ಯವಸ್ಥೆ, ಪ್ರಾಣಿಗಳ ದಯಾನೀಯ ಸ್ಥಿತಿ ಕಂಡು ಹೈಕೋರ್ಟ್ ನ್ಯಾಯಧೀಶರೇ ಶಾಕ್ ಆಗಿದ್ದಾರೆ. ಮಂಗಳೂರಿನ ಪ್ರವಾಸಿಗರ ಹಾಟ್ ಫೇವರೆಟ್ ಪಿಲಿಕುಳ ಮೃಗಾಲಯಕ್ಕೀಗ ಇಂತಹದೊಂದು ಸಂಕಷ್ಟ ಎದುರಾಗಿದೆ. ಇದು ಇಲ್ಲಿರೋ ಮೂಕ ಪ್ರಾಣಿಗಳಿಂದಾದ ತಪ್ಪಲ್ಲ. ಬದಲಾಗಿ ಇಲ್ಲಿನ ಆಡಳಿತ ವ್ಯವಸ್ಥೆಯಿಂದ ಸ್ವಯಂ ಕೃತ ಅಪರಾಧ. ತುಕ್ಕು ಹಿಡಿದ ಪಂಜರ, ತುಕ್ಕು ಹಿಡಿದ ಪಂಜರ, ಕಲುಷಿತ ನೀರು ಅಶುಚಿ ವಾತಾವರಣ ಇದು ಪಿಲಿಕುಳ ಮೃಗಾಲಯದ ಸದ್ಯದ ಸ್ಥಿತಿ.

ವನ್ಯಜೀವಿ ಸಂರಕ್ಷಕ ಭುವನ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ವನ್ಯಜೀವಿ ಸಂರಕ್ಷಕ ಭುವನ್ ದೇವಾಡಿಗ ಅವರು ಕೇವಲ ದೂರು ನೀಡದೆ, ಮೃಗಾಲಯದ ಒಳಗಿನ ಭೀಕರ ಸ್ಥಿತಿಯನ್ನು ಎತ್ತಿ ತೋರಿಸುವ ಭದ್ರ ಸಾಕ್ಷ್ಯಗಳನ್ನು ಹೈಕೋರ್ಟ್‌ಗೆ ನೀಡಿದ್ದಾರೆ. ಸೊರಗಿದ ಪ್ರಾಣಿಗಳ ಫೋಟೋಗಳು: ಸರಿಯಾದ ಆಹಾರವಿಲ್ಲದೆ ಎಲುಬು ಕಾಣುವಂತಾಗಿರುವ ಚಿರತೆ ಮತ್ತು ಹುಲಿಗಳ ಫೋಟೋಗಳು. ಅಸುರಕ್ಷಿತ ಪಂಜರಗಳು, ತುಕ್ಕು ಹಿಡಿದು ಕಿತ್ತುಹೋಗಿರುವ ಕಬ್ಬಿಣದ ಸರಳುಗಳು, ಇದರಿಂದ ಪ್ರಾಣಿಗಳು ಹೊರಬರುವ ಅಥವಾ ಗಾಯ ಮಾಡಿಕೊಳ್ಳುವ ಅಪಾಯವಿದೆ ಎಂದು ತೋರಿಸಿದ್ದಾರೆ. ಪ್ರಾಣಿಗಳ ಕುಡಿಯುವ ನೀರಿನ ತೊಟ್ಟಿಗಳಲ್ಲಿ ಪಾಚಿ ಕಟ್ಟಿರುವುದು ಮತ್ತು ಪ್ರಾಣಿಗಳ ಮಲ-ಮೂತ್ರ ವಿಲೇವಾರಿ ಆಗದೆ ಪಂಜರದಲ್ಲೇ ಕೊಳೆಯುತ್ತಿರುವುದು. ಅನಾರೋಗ್ಯಕ್ಕೀಡಾದ ಪ್ರಾಣಿಗಳಿಗೆ ಸರಿಯಾದ ಸಮಯದಲ್ಲಿ ವೈದ್ಯಕೀಯ ನೆರವು ಸಿಗುತ್ತಿಲ್ಲ ಎಂಬುದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಅವರು ಸಂಗ್ರಹಿಸಿ ದಾಖಲೆಯಾಗಿ ನೀಡಿದ್ದಾರೆ.

ಪಿಲಿಕುಳ ಮೃಗಾಲಯದ ಕರ್ಮ ಕಾಂಡಗಳು ಹೈಕೋರ್ಟ್‍ನಲ್ಲಿ ಹೊರಬಿದ್ದಿವೆ. ಪ್ರಾಣಿಗಳನ್ನು ಇರಿಸಿರುವ ಪಂಜರಗಳು ಸಂಪೂರ್ಣ ತುಕ್ಕು ಹಿಡಿದಿವೆ, ಅಲ್ಲಿ ಸರಿಯಾದ ಭದ್ರತೆಯೇ ಇಲ್ಲ. ಅಶುಚಿಯಾದ ಪರಿಸರದಲ್ಲಿ ಪ್ರಾಣಿಗಳು ನರಳುತ್ತಿರೋ ಫೋಟೋಗಳನ್ನು ನೋಡಿ ನ್ಯಾಯಪೀಠ ಕೆಂಡಾಮಂಡಲವಾಗಿದೆ. ಇಲ್ಲಿ ಮತ್ತೊಂದು ದುರಂತ ಅಂದ್ರೆ ಜನಮನ್ನಣೆ ಪಡೆದ ಈ ಪಾರ್ಕ್‍ನ ಲೈಸೆನ್ಸ್ ಅವಧಿ 2025ರ ಡಿಸೆಂಬರ್ 1ಕ್ಕೇ ಮುಕ್ತಾಯವಾಗಿದೆ. ಅಂದ್ರೆ ಸದ್ಯ ಯಾವುದೇ ಪರವಾನಗಿ ಇಲ್ಲದೇ ಪಿಲಿಕುಳ ಮೃಗಾಲಯ ನಡೀತಿದೆ. ಇಷ್ಟೆಲ್ಲಾ ಅವ್ಯವಸ್ಥೆ ಬಗ್ಗೆ ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರ 2023 ಮತ್ತು 2025ರಲ್ಲಿ ಶೋಕಾಸ್ ನೋಟಿಸ್ ನೀಡಿದ್ರೂ ಅಧಿಕಾರಿಗಳು ಮಾತ್ರ ಕ್ಯಾರೆ ಅಂದಿಲ್ಲ. ಮಲೀನಗೊಂಡ ನೀರು ಕುಡಿದು, ಸರಿಯಾದ ಚಿಕಿತ್ಸೆ ಸಿಗದೆ ಮೂಕ ಪ್ರಾಣಿಗಳು ಸಾವು-ಬದುಕಿನ ನಡುವೆ ಹೋರಾಟ ಮಾಡ್ತಿವೆ ಅನ್ನೋದು ಅರ್ಜಿದಾರರ ಗಂಭೀರ ಆರೋಪಕ್ಕೆ ಹೈಕೋರ್ಟ್‍ ಗರಂ ಆಗಿದೆ. ಇವುಗಳನ್ನು ನೋಡಿದ ನ್ಯಾಯಾಧೀಶರು ಆಘಾತ ಮತ್ತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಪ್ರಾಣಿಗಳನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗದಿದ್ದರೆ ಮೃಗಾಲಯವನ್ನು ತಕ್ಷಣವೇ ಮುಚ್ಚಿ” ಎಂದು ಸರ್ಕಾರಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಹೈಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಮುಂದುವರಿಸಿದ್ದು, ಮೃಗಾಲಯದ ಆಡಳಿತವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತೆ ಅಥವಾ ವ್ಯವಸ್ಥಿತವಾಗಿ ಸುಧಾರಿಸುವಂತೆ ಸೂಚಿಸಿದೆ. ಕರ್ನಾಟಕ ಹೈಕೋರ್ಟ್ ಫೆಬ್ರವರಿ ಮೊದಲ ವಾರದಲ್ಲಿ ಪಿಲಿಕುಳ ಮೃಗಾಲಯದ ಬಗ್ಗೆ ಅತ್ಯಂತ ಕಠಿಣವಾದ ನಿಲುವನ್ನು ತಳೆದಿದೆ.

ಹೈಕೋರ್ಟ್ ಸರ್ಕಾರಕ್ಕೆ ಈ ಮೂರು ಪ್ರಶ್ನೆಗಳನ್ನು ಕೇಳಿದ್ದು, ಪರವಾನಗಿ ಇಲ್ಲದೆ ಇಷ್ಟು ದಿನ ಮೃಗಾಲಯವನ್ನು ಹೇಗೆ ನಡೆಸಲು ಬಿಟ್ಟಿದ್ದೀರಿ? ಪ್ರಾಣಿಗಳಿಗೆ ನೀಡುತ್ತಿರುವ ಆಹಾರದ ಗುಣಮಟ್ಟ ಪರೀಕ್ಷೆಯ ವರದಿ ಎಲ್ಲಿದೆ? ಪ್ರಾಣಿಗಳ ಅಸಹಜ ಸಾವುಗಳ ಬಗ್ಗೆ ಪೋಸ್ಟ್ ಮಾರ್ಟಂ (Post-mortem) ವರದಿಯನ್ನು ತಕ್ಷಣ ಸಲ್ಲಿಸಿ. ಎಂದು ಉತ್ತರ ನೀಡಲು ತಿಳಿಸಿದೆ. ಮೃಗಾಲಯದ ನಿರ್ದೇಶಕರು ಮತ್ತು ಅಧಿಕಾರಿಗಳು ಇತ್ತೀಚೆಗೆ ತಮ್ಮ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು, ಅಧಿಕ ಮಳೆಯಿಂದಾಗಿ ತಡೆಗೋಡೆ ಕುಸಿದು ಸಮಸ್ಯೆ ಉಂಟಾಗಿದೆ ಎಂದು ಸಮಜಾಯಿಷಿ ನೀಡಿದ್ದರು. ಆದರೆ, ನ್ಯಾಯಾಲಯವು ಇದನ್ನು “ಆಡಳಿತಾತ್ಮಕ ವೈಫಲ್ಯ” ಎಂದು ಕರೆದಿದೆ. ಸರಿಯಾದ ಹಣಕಾಸಿನ ಹಂಚಿಕೆ ಇಲ್ಲದಿರುವುದೇ ಈ ಪರಿಸ್ಥಿತಿಗೆ ಕಾರಣ ಎಂದು ಮಾಜಿ ನಿರ್ದೇಶಕರು (ಜಯಪ್ರಕಾಶ್ ಭಂಡಾರಿ) ಈ ಹಿಂದೆ ರಾಜೀನಾಮೆ ನೀಡುವಾಗ ತಿಳಿಸಿದ್ದರು.

ಮುಂದಿನ ಕ್ರಮ ಏನಾಗಬಹುದು?
ನ್ಯಾಯಾಲಯದ ಸೂಚನೆಯಂತೆ ಸರ್ಕಾರವು ಮೃಗಾಲಯದ ನಿರ್ವಹಣೆಯನ್ನು ಸಂಪೂರ್ಣವಾಗಿ ಅರಣ್ಯ ಇಲಾಖೆ ಅಥವಾ ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ (KZA) ಹಸ್ತಾಂತರಿಸುವ ಸಾಧ್ಯತೆಯಿದೆ. ಇಲ್ಲದಿದ್ದರೆ ಪ್ರಾಣಿಗಳನ್ನು ಬೇರೆ ಸುರಕ್ಷಿತ ಮೃಗಾಲಯಗಳಿಗೆ ವರ್ಗಾಯಿಸುವ ಆದೇಶ ಹೊರಬರುವ ಸಾಧ್ಯತೆಯಿದೆ. ಕರ್ನಾಟಕ ಹೈಕೋರ್ಟ್ ಈ ಪ್ರಕರಣವನ್ನು (PIL) ಅತ್ಯಂತ ತುರ್ತು ವಿಷಯವೆಂದು ಪರಿಗಣಿಸಿದೆ. ಮುಂದಿನ ವಿಚಾರಣೆಯನ್ನು ಫೆಬ್ರವರಿ ತಿಂಗಳ ಮೂರನೇ ವಾರದಲ್ಲಿ ನಡೆಸಲು ನ್ಯಾಯಾಲಯ ನಿಗದಿಪಡಿಸಿದೆ. ಅಲ್ಲಿಯವರೆಗೆ ಪ್ರಾಣಿಗಳ ಪರಿಸ್ಥಿತಿಯ ಬಗ್ಗೆ ಸಮಗ್ರ ವರದಿ ನೀಡುವಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ (CZA) ಸೂಚಿಸಿದೆ ಒಂದು ವೇಳೆ ಮೃಗಾಲಯದ ಪರವಾನಗಿಯನ್ನು ನವೀಕರಿಸಲು ಕೇಂದ್ರ ಮೃಗಾಲಯ ಪ್ರಾಧಿಕಾರ ನಿರಾಕರಿಸಿದರೆ, ಅಲ್ಲಿರುವ ಪ್ರಾಣಿಗಳನ್ನು ಶ್ರೀ ಚಾಮರಾಜೇಂದ್ರ ಮೃಗಾಲಯ (ಮೈಸೂರು) ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮ ಅಥವಾ ಬನ್ನೇರುಘಟ್ಟ ಜೈವಿಕ ಉದ್ಯಾನವನ (ಬೆಂಗಳೂರು) ಕ್ಕೆ ವರ್ಗಾಯಿಸುವ ಸಾಧ್ಯತೆಯಿದೆ

ಪಿಲಿಕುಳ ಒಂದು ಕಾಲದಲ್ಲಿ ಜಿಲ್ಲಾಡಳಿತದ ಅಡಿಯಲ್ಲಿದ್ದ ಪಿಲಿಕುಳ ನಿಸರ್ಗಧಾಮ ಪ್ರಾಧಿಕಾರ (PNDA) ಮೂಲಕ ನಿರ್ವಹಿಸಲ್ಪಡುತ್ತಿತ್ತು. ಆದರೆ ಈಗ ಉಂಟಾಗಿರುವ ಅವ್ಯವಸ್ಥೆಯಿಂದಾಗಿ, ಇದನ್ನು ಸಂಪೂರ್ಣವಾಗಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ (KZA) ಸುಪರ್ದಿಗೆ ಪಡೆಯುವಂತೆ ಪರಿಸರವಾದಿಗಳು ಒತ್ತಾಯಿಸುತ್ತಿದ್ದಾರೆ. ಕೆ.ಜೆಡ್.ಎ ಅಡಿಯಲ್ಲಿ ಬಂದರೆ ಪ್ರಾಣಿಗಳಿಗೆ ನಿರಂತರ ಅನುದಾನ ಮತ್ತು ಪರಿಣಿತ ವೈದ್ಯರ ಸೇವೆ ಸಿಗಲಿದೆ.

ಪಿಲಿಕುಳ ಮೃಗಾಲಯ ಒಂದು ಕಾಲದಲ್ಲಿ ಇದು ಕರ್ನಾಟಕದ ಅತ್ಯಂತ ಸುಂದರ ಮೃಗಾಲಯಗಳಲ್ಲಿ ಒಂದಾಗಿತ್ತು ಇದನ್ನು 1990ರ ದಶಕದ ಉತ್ತರಾರ್ಧದಲ್ಲಿ ಮಂಗಳೂರಿನ ವಾಮಂಜೂರಿನಲ್ಲಿ ಸ್ಥಾಪಿಸಲಾಯಿತು. ‘ಪಿಲಿಕುಳ’ ಎಂದರೆ ತುಳು ಭಾಷೆಯಲ್ಲಿ “ಹುಲಿಗಳ ಕೆರೆ” ಎಂದರ್ಥ. ಇಲ್ಲಿ ಅಪರೂಪದ ರಾಜನಾಗ (King Cobra) ಸಂತಾನೋತ್ಪತ್ತಿ ಕೇಂದ್ರವಿದ್ದು, ಇದು ಏಷ್ಯಾದಲ್ಲೇ ಪ್ರಸಿದ್ಧವಾಗಿದೆ. ಸುಮಾರು 150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹರಡಿಕೊಂಡಿರುವ ಈ ಉದ್ಯಾನವನವು ಕರಾವಳಿಯ ಜೀವವೈವಿಧ್ಯದ ಕೇಂದ್ರವಾಗಿತ್ತು.
ಪಿಲಿಕುಳ ರೀಜನಲ್ ಸೈನ್ಸ್ ಸೆಂಟರ್ ಮೃಗಾಲಯಕ್ಕೆ ಹೋಲಿಸಿದರೆ ವಿಜ್ಞಾನ ಕೇಂದ್ರದ ಸ್ಥಿತಿ ಉತ್ತಮವಾಗಿದೆ. ಈಗ ಹೈಕೋರ್ಟ್‌ನ ಫೆಬ್ರವರಿ 3ನೇ ವಾರದ ವಿಚಾರಣೆಯ ಮೇಲೆ ಎಲ್ಲರ ಕಣ್ಣಿದೆ. ಅಲ್ಲಿ ಹೊರಬರುವ ತೀರ್ಪು ಪಿಲಿಕುಳದ ಪ್ರಾಣಿಗಳ ಭವಿಷ್ಯವನ್ನು ನಿರ್ಧರಿಸಲಿದೆ.

Continue Reading

Trending

Copyright © 2025 Deevatige