Connect with us

Uncategorized

ಪುತ್ತೂರು ಗ್ರಾಮಾಂತರ ಪೊಲೀಸರ ಬಲೆಗೆ ಬಿದ್ದ ನಾಲ್ವರು ಮಾದಕ ವಸ್ತು ಕ್ರಿಮಿಗಳು..MDMA, ಗಾಂಜಾ, ಕಾರು ಸಹಿತ ಒಟ್ಟು 6,50,000/-ಮೌಲ್ಯದ ಸೊತ್ತುಗಳು ವಶ.

Published

on

ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ, ಇರ್ದೆ, ರೆಂಜ, ಅರ್ಲಪದವು ಪರಿಸರದಲ್ಲಿ ಅಕ್ರಮವಾಗಿ ಮಾದಕ ವಸ್ತು ಎಂಡಿಎಂಎ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಖೆಡ್ಡಾಗೆ ಕೆಡಹುವಲ್ಲಿ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರ ತಂಡ ಯಶಸ್ವಿಯಾಗಿದೆ.

ಆರೋಪಿಗಳಾದf
ಮೊಹಮ್ಮದ್ ಹರ್ಷದ್ (33), ಪುತ್ತೂರು, ಮಹಮ್ಮದ್ ಆರೀಶ್ (31), ಪುತ್ತೂರು, ಇಬ್ರಾಹಿಂ ಅಶ್ರಫ್ ಅಲಿಯಾಸ್ ರೋಜಾ ಅಶ್ರಫ್ (46), ಪುತ್ತೂರು ಎಂಬವರುಗಳನ್ನು ಹಾಗೂ ಆರೋಪಿಗಳಿಗೆ ಮಾದಕ ವಸ್ತು ಎಂಡಿಎಂಎ ನೀಡುತ್ತಿದ್ದ ಬಂಟ್ವಾಳ ನಿವಾಸಿ ಮುಸ್ತಾಫ (46) ಎಂಬವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಅಂದಾಜು ರೂ. 50,000/- ಮೌಲ್ಯದ ಸುಮಾರು 6.39 ಗ್ರಾಂ ಎಂಡಿಎಂಎ, ಗಾಂಜಾ 0.87 ಗ್ರಾಂ, ಮೊಬೈಲ್ ಫೋನ್ ಗಳು ಹಾಗೂ ಕೃತ್ಯಕ್ಕೆ ಬಳಸಿದ ಅಂದಾಜು ರೂ ಆರು ಲಕ್ಷ ಮೌಲ್ಯದ 02 ಕಾರುಗಳನ್ನು ಹಾಗೂ ಇತರ ಸೊತ್ತುಗಳನ್ನು ವಶಕ್ಕೆ ಪಡೆದಿರುತ್ತಾರೆ. ವಶಪಡಿಸಿಕೊಂಡ ಒಟ್ಟು ಸೊತ್ತುಗಳ ಅಂದಾಜು ಮೌಲ್ಯ 6,50,000/-ರೂ ಗಳಾಗಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಿನಾಂಕ: 24.01.2026 ರಂದು ಅ.ಕ್ರ ನಂ: 13-2026, ಕಲಂ : – 8(c)21(b) NDPS Act.25(1B)(B) Arms Act ರಂತೆ ಪ್ರಕರಣ ದಾಖಲಾಗಿರುತ್ತದೆ.


ಕಾರ್ಯಾಚರಣೆಯಲ್ಲಿ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಗುಣಾಪಾಲ ಜೆ. ನೇತೃತ್ವದ ತನಿಖಾ ತಂಡದಲ್ಲಿ ಪುತ್ತೂರು ಗ್ರಾಮಾಂತರ ಠಾಣಾ ಉಪ ನಿರೀಕ್ಷಕರಾದ ಸುಶ್ಮಾ ಭಂಡಾರಿ ಹಾಗೂ ಸಿಬ್ಬಂಧಿಗಳಾದ ಮುರುಗೇಶ್ ಪರಮೇಶ್ವರ, ಸತೀಶ್, ಸುಬ್ರಹ್ಮಣ್ಯ, ಹರೀಶ್, ನಾಗೇಶ್, ಭವಿತ್ ರೈ ವಿನೋದ್, ನಾಗರಾಜ್, ಕಾರ್ತಿಕ್ ಹಾಗೂ ವಿಶೇಷ ತಂಡದ ಸಿಬ್ಬಂದಿಗಳಾದ ಅದ್ರಾಮ್ , ಪ್ರಶಾಂತ ಎಂ, ಪ್ರವೀಣ್ ರೈ, ಪ್ರಶಾಂತ್ ರೈ, ಹರ್ಷಿತ್, ಸಂಪತ್ ರವರು ಹಾಗೂ ಸೋಕೋ ತಂಡದವರು ಭಾಗವಹಿಸಿರುತ್ತಾರೆ.

.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

government

ಕುಳ ಕಂದಾಯ ಕಚೇರಿ ವಿವಾದ: ದಲ್ಲಾಳಿ ಆರೋಪಕ್ಕೆ ಹರಿನಾಮ ಸಂಕೀರ್ತನಕಾರ ಧರಣ್‌ ಮಾಣಿ ಸ್ಪಷ್ಟನೆ

Published

on

ಮಾಣಿ: ಕುಳ ಗ್ರಾಮದ ಕಂದಾಯ ಕಚೇರಿಯಲ್ಲಿ ತಾವು ಯಾವುದೇ ದಲ್ಲಾಳಿ ಕೆಲಸ ಮಾಡಿಲ್ಲ, ಕೇವಲ ಗೆಳೆತನ ಹಾಗೂ ಗ್ರಾಮದ ಕೆಲಸದ ನಿಮಿತ್ತ ಅಲ್ಲಿಗೆ ಹೋಗುತ್ತಿದ್ದೆ ಎಂದು ಹರಿನಾಮ ಸಂಕೀರ್ತನಕಾರ ಮತ್ತು ರಾಜ್ಯ ಮಟ್ಟದ ಕಲಾವಿದ ಎಲ್. ಕೆ. ಧರಣ್‌ ಮಾಣಿ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ಕುಳ ಕಂದಾಯ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯಲ್ಲಿ ತಮ್ಮ ಹೆಸರನ್ನು ಬಳಸಿ ದಲ್ಲಾಳಿ ಎಂದು ಬಿಂಬಿಸಿರುವುದು ಸತ್ಯಕ್ಕೆ ದೂರವಾದ ವಿಚಾರ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಸುದ್ದಿಯ ಹಿನ್ನೆಲೆ ಮತ್ತು ಸ್ಪಷ್ಟನೆ: “ನಾನು ಕಳೆದ 30 ವರ್ಷಗಳಿಂದ ರಾಜ್ಯ ಮಟ್ಟದ ಕಲಾವಿದನಾಗಿ ಗುರುತಿಸಿಕೊಂಡು ಗೌರವಯುತ ಜೀವನ ನಡೆಸುತ್ತಿದ್ದೇನೆ. ಕಳೆದ 6 ವರ್ಷಗಳಿಂದ ಕುಳ ಗ್ರಾಮದ ಬೆಳೆ ಸಮೀಕ್ಷೆಯನ್ನು ಸಿದ್ಧಪಡಿಸಿ ಗ್ರಾಮ ಕರಣಿಕರಿಗೆ ನೀಡುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೆ. ಈ ಕಾರಣದಿಂದಾಗಿ ಅಲ್ಲಿನ ಗ್ರಾಮ ಕರಣಿಕರು ಹಾಗೂ ಗ್ರಾಮ ಸೇವಕರ ಪರಿಚಯ ಮತ್ತು ಆತ್ಮೀಯತೆ ಇರುವುದು ನಿಜ. ಆದರೆ, ನಾನು ಅಲ್ಲಿ ಯಾವುದೇ ರೀತಿಯ ದಲ್ಲಾಳಿ ಅಥವಾ ಬ್ರೋಕರ್ ಕೆಲಸ ಮಾಡಿಲ್ಲ” ಎಂದು ಧರಣ್ ಮಾಣಿ ತಿಳಿಸಿದ್ದಾರೆ.

“ಸರಕಾರಿ ಉದ್ಯೋಗಿ ರಾಘವ ಅವರಿಂದ ತೊಂದರೆಗೊಳಗಾದ ಸಾರ್ವಜನಿಕರ ಪರವಾಗಿ ಸಚಿನ್ ಎಂಬುವವರು ಫೋಟೋ ತೆಗೆದು ಮೇಲಾಧಿಕಾರಿಗಳಿಗೆ ಹಾಗೂ ಮಾಧ್ಯಮಗಳಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ನಡೆದ ಸಂದರ್ಭದಲ್ಲಿ ನಾನು ಕಚೇರಿಯಲ್ಲಿದ್ದದ್ದು ನಿಜ. ರಾಘವ ಅವರ ಪರಿಚಯದ ಹಿನ್ನೆಲೆಯಲ್ಲಿ ನಾನು ಅಲ್ಲಿಗೆ ಹೋಗುತ್ತಿದ್ದೆ. ಆದರೆ ದೂರುದಾರ ಸಚಿನ್ ಮತ್ತು ರಾಘವ ಅವರು ಸಮೀಪದ ಬಂಧುಗಳಾಗಿದ್ದು, ಅವರೊಳಗೆ ವೈಯಕ್ತಿಕ ವೈಷಮ್ಯಕ್ಕೆ ಅವರು ನೀಡಿದ ದೂರಿನಲ್ಲಿ ನನ್ನ ಹೆಸರನ್ನೂ ಸೇರಿಸಿ, ನಾನು ದಲ್ಲಾಳಿ ಕೆಲಸ ಮಾಡುತ್ತಿದ್ದೇನೆ ಎಂದು ಸುಳ್ಳು ಆರೋಪ ಮಾಡಿರುವುದು ತಮಗೆ ತೀವ್ರ ಬೇಸರ ತಂದಿದೆ” ಎಂದು ಅವರು ಹೇಳಿದ್ದಾರೆ.

ದೂರಿಗೆ ಸಂಬಂಧಿಸಿದಂತೆ ತನಿಖೆಗೆ ಆದೇಶ

ಕುಳ ಗ್ರಾಮ ಆಡಳಿತಾಧಿಕಾರಿ ಕಛೇರಿಯೊಳಗೆ ಖಾಸಗಿ ವ್ಯಕ್ತಿ ಹಾಗೂ ಗ್ರಾಮ ಸಹಾಯಕ ಜೊತೆಯಾಗಿ ಗ್ರಾಮಸ್ಥರಿಗೆ ಹಿಂಸೆ, ಕಿರುಕುಳ ಹಾಗೂ ಹಣಕ್ಕಾಗಿ ಸತಾಯಿಸುತ್ತಿದ್ದಾರೆ ಎಂಬ ವಿಚಾರದಲ್ಲಿ ಸಚಿನ್ ಎಂಬವರು ದೂರು ನೀಡಿದ್ದರು. ಬಂಟ್ವಾಳ ತಹಶೀಲ್ದಾರ್, ಸಹಾಯಕ ಕಮಿಷನರ್, ದ. ಕ.ಜಿಲ್ಲಾಧಿಕಾರಿ, ಕಂದಾಯ ಸಚಿವರು, ರಾಜ್ಯ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳಿಗೆ ನೀಡಿದ ದೂರಿಗೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಲಾಗಿದ್ದು, ಇದರ ಬೆನ್ನಲ್ಲೇ ಧರಣ್ ಮಾಣಿ ನನಗೂ ಈ ದೂರಿಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಾರ್ವಜನಿಕರ ಅನುಮಾನ & ಧರಣ್ ಮಾಣಿ ನಿರ್ಧಾರ: ಗ್ರಾಮಸೇವಕನ ಜೊತೆ ಗೆಳೆತನ ಮಾಡಿದ್ದಕ್ಕೆ ಸಾರ್ವಜನಿಕರು ಧರಣ್ ಮಾಣಿ ಅವರ ಮೇಲೂ ಅನುಮಾನ ವ್ಯಕ್ತಪಡಿಸುವಂತಾಗಿತ್ತು. ಈ ಕುರಿತು ಮಾತನಾಡಿದ ಅವರು, “ರಾಘವ ಅವರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆರೋಪಗಳು ಇವೆ ಎಂದು ನನಗೆ ಮನವರಿಕೆಯಾದ ತಕ್ಷಣವೇ, ನಾನು ಇನ್ನು ಮುಂದೆ ಆ ಕಚೇರಿಗೆ ಹೋಗುವುದಿಲ್ಲ ಮತ್ತು ಅಂತಹ ವ್ಯಕ್ತಿಗಳ ಸಂಪರ್ಕದಿಂದ ದೂರವಿರಲು ತೀರ್ಮಾನಿಸಿದ್ದೇನೆ. ಸಾರ್ವಜನಿಕರಲ್ಲಿ ನನ್ನ ಬಗ್ಗೆ ತಪ್ಪು ಅಭಿಪ್ರಾಯ ಮೂಡುತ್ತಿರುವುದು ವಿಷಾದನೀಯ. ನಾನು ನನ್ನ ಗೌರವಯುತ ಕಲಾ ಸೇವೆಯಲ್ಲಿಯೇ ಮುಂದುವರಿಯಲಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.




Continue Reading

crime

ಕಡಬ: ಕಾಣೆಯಾಗಿದ್ದ ನವವಿವಾಹಿತೆ ಶಿವಮೊಗ್ಗದ ತವರಿನಲ್ಲಿ ಪ್ರತ್ಯಕ್ಷ; ನಿಟ್ಟುಸಿರು ಬಿಟ್ಟ ಕುಟುಂಬಸ್ಥರು!

Published

on

ಕಡಬ: ತಾಲ್ಲೂಕಿನ ನೂಜಿಬಾಳ್ತಿಲ ಗ್ರಾಮದಿಂದ ಚಿನ್ನಾಭರಣಗಳ ಸಮೇತ ನಿಗೂಢವಾಗಿ ನಾಪತ್ತೆಯಾಗಿದ್ದ ನವವಿವಾಹಿತೆ ಕೊನೆಗೂ ಶಿವಮೊಗ್ಗದ ತನ್ನ ತವರು ಮನೆಯಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದು, ಆತಂಕದಲ್ಲಿದ್ದ ಕುಟುಂಬಸ್ಥರು ನಿಟ್ಟುಸಿರು ಬಿಡುವಂತಾಗಿದೆ.

ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ನೀರಾರಿ ಮನೆ ನಿವಾಸಿ ಮೊಹಮ್ಮದ್ ಆಶಿಕ್ (29) ಎಂಬವರ ಪತ್ನಿ ಆರ್ ಫೈನ್ ಮಹ್ತಾಬ್ (18) ಕಾಣೆಯಾದ ಯುವತಿ. ಈಕೆ ಜೂನ್ 7ರ ನಸುಕಿನ ಜಾವ ಗಂಡನ ಮನೆಯಿಂದ ಯಾರಿಗೂ ತಿಳಿಸದೆ ದಿಢೀರ್ ನಾಪತ್ತೆಯಾಗಿದ್ದಳು.

ಮೇ 31 ರಂದು ನಡೆದಿತ್ತು ನಿಕಾಹ್‌:

ಎಫ್.ಐ.ಆರ್. ವಿವರಗಳ ಪ್ರಕಾರ, ಮೊಹಮ್ಮದ್ ಆಶಿಕ್ ಅವರಿಗೂ, ಶಿವಮೊಗ್ಗದ ಕೆ.ಆರ್. ಪುರಂ ರೋಡ್ ನಿವಾಸಿ ಶೇಖ್ ಫಾಯಾಜ್ ಹಮೀದ್ ಅವರ ಮಗಳು ಆರ್ ಫೈನ್ ಮಹ್ತಾಬ್ ಅವರಿಗೂ ಕಳೆದ ಮೇ 31 ರಂದು ಭಾನುವಾರ ಶಿವಮೊಗ್ಗದ ರಿಜ್ವಾನ್ ಮಸೀದಿಯ ಖಾಜಿಗಳ ಸಮಕ್ಷಮದಲ್ಲಿ ಮುಸ್ಲಿಂ ಧಾರ್ಮಿಕ ವಿಧಿವಿಧಾನದಂತೆ ವಿವಾಹ ನಡೆದಿತ್ತು. ಜೂನ್ 2 ರಂದು ಕಲ್ಲುಗುಡ್ಡೆಯ ಜೆ.ಜೆ. ಪ್ಲಾಜಾದಲ್ಲಿ ಮದುವೆ ಔತಣಕೂಟ (ಡಿನ್ನರ್) ಏರ್ಪಡಿಸಲಾಗಿತ್ತು. ಬಳಿಕ ಜೂನ್ 5 ರಂದು ತಂದೆ-ತಾಯಿ ಮಹ್ತಾಬ್‌ಳನ್ನು ನೂಜಿಬಾಳ್ತಿಲದಲ್ಲಿರುವ ಗಂಡನ ಮನೆಗೆ ಕರೆದುಕೊಂಡು ಬಂದು ಬಿಟ್ಟಿದ್ದರು.

ಗಂಡನ ಮೊಬೈಲ್‌ನಲ್ಲಿ ಅಲಾರಾಂ ಸೆಟ್ ಮಾಡಿ ಎಸ್ಕೇಪ್!

ಜೂನ್ 6 ರಂದು ರಾತ್ರಿ ಮನೆಯವರೆಲ್ಲರೂ ಒಟ್ಟಿಗೆ ಊಟ ಮುಗಿಸಿ 10 ಗಂಟೆಗೆ ಮಲಗಿದ್ದರು. ಮಧ್ಯರಾತ್ರಿ 12 ಗಂಟೆಗೆ ಪತಿ ಆಶಿಕ್ ಅವರಿಗೆ ಎಚ್ಚರವಾದಾಗಲೂ ಮಹ್ತಾಬ್ ಪಕ್ಕದಲ್ಲೇ ಮಲಗಿದ್ದಳು. ಆದರೆ, ಜೂನ್ 7ರ ನಸುಕಿನ ಜಾವ 2.00 ಗಂಟೆಗೆ ಆಶಿಕ್ ಅವರ ಮೊಬೈಲ್‌ನಲ್ಲಿ ದಿಢೀರನೆ ಅಲಾರಾಂ ರಿಂಗಣಿಸಿದೆ.

ಅಲಾರಾಂ ಶಬ್ದಕ್ಕೆ ಎದ್ದು ನೋಡಿದ ಆಶಿಕ್ ಅವರಿಗೆ ತೀವ್ರ ಆಘಾತ ಕಾದಿತ್ತು. ಪಕ್ಕದಲ್ಲಿ ಮಲಗಿದ್ದ ಪತ್ನಿ ಮಹ್ತಾಬ್ ಅಲ್ಲಿರಲಿಲ್ಲ! ಗಾಬರಿಗೊಂಡ ಆಶಿಕ್ ಮನೆಯ ಒಳಗೆ, ಹೊರಗೆ ಹಾಗೂ ಪಕ್ಕದಲ್ಲೇ ಇರುವ ಅಣ್ಣನ ಮನೆಯಲ್ಲೂ ಹುಡುಕಾಡಿದ್ದಾರೆ. ಆದರೆ ಎಲ್ಲೂ ಆಕೆ ಪತ್ತೆಯಾಗಿರಲಿಲ್ಲ. ಅಚ್ಚರಿಯ ವಿಷಯವೆಂದರೆ, ತಾನು ಎದ್ದು ಹೋಗುವ ಮುನ್ನ ಪತಿಯ ಮೊಬೈಲ್‌ನಲ್ಲಿ ಆಕೆಯೇ ನಸುಕಿನ ಜಾವ 2 ಗಂಟೆಗೆ ಅಲಾರಾಂ ಸೆಟ್ ಮಾಡಿಟ್ಟು, ತನ್ನ ಮೈಮೇಲಿದ್ದ ಚಿನ್ನಾಭರಣಗಳ ಸಮೇತ ಯಾರಿಗೂ ತಿಳಿಯದಂತೆ ಮನೆಯಿಂದ ಜಾಗ ಖಾಲಿ ಮಾಡಿದ್ದಾಳೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ತವರು ಮನೆಯಲ್ಲಿ ಲ್ಯಾಂಡ್; ಫೈಲ್ ಕ್ಲೋಸ್‌ಗೆ ಕಡಬಕ್ಕೆ ಬರಬೇಕಷ್ಟೇ!

ಮಹತ್ವಾಕಾಂಕ್ಷಿ ಹುಡುಕಾಟದ ಬಳಿಕ, ತವರು ಮನೆಗೂ ಮಾಹಿತಿ ನೀಡಿ, ಪತಿ ಆಶಿಕ್ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸುತ್ತಿದ್ದಂತೆಯೇ, ಮಹ್ತಾಬ್ ಶಿವಮೊಗ್ಗದ ತನ್ನ ತವರು ಮನೆಗೆ ಸುರಕ್ಷಿತವಾಗಿ ಬಂದು ತಲುಪಿರುವ ಸಮಾಧಾನಕರ ಸುದ್ದಿ ಬಂದಿದೆ.

ಆದರೆ, ಮದುವೆಯಾದ ಕೇವಲ ವಾರದಲ್ಲೇ, ಅಷ್ಟು ನಸುಕಿನ ಜಾವ ಪತಿಯ ಮೊಬೈಲ್‌ನಲ್ಲಿ ತಾನೇ ಅಲಾರಾಂ ಇಟ್ಟು ಚಿನ್ನಾಭರಣಗಳೊಂದಿಗೆ ನಾಪತ್ತೆಯಾಗಲು ಅಸಲಿ ಕಾರಣವೇನು? ಎಂಬುದು ಇನ್ನು ನಿಗೂಢವಾಗಿದೆ. ಸದ್ಯ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದರಿಂದ, ಕಾನೂನಾತ್ಮಕ ತನಿಖೆಯ ಫೈಲ್ ಕ್ಲೋಸ್ ಮಾಡಲು ಯುವತಿಯನ್ನು ಕಡಬಕ್ಕೆ ಕರೆತರಬೇಕಾಗಿದ್ದು, ಪೊಲೀಸರ ವಿಚಾರಣೆಯ ಬಳಿಕವಷ್ಟೇ ಈ ಹೈಡ್ರಾಮಾದ ಹಿಂದಿನ ನೈಜ ಕಾರಣ ಬೆಳಕಿಗೆ ಬರಬೇಕಿದೆ




Continue Reading

theft

ವಿಟ್ಲ ವ್ಯಾಪ್ತಿಯಲ್ಲಿ ಮತ್ತೆ ಬ್ಯಾಟರಿ ಕಳ್ಳರ ಅಟ್ಟಹಾಸ: ಒಂದೇ ರಾತ್ರಿ 4 ಲಾರಿಗಳ ಬ್ಯಾಟರಿ ಕಳ್ಳತನ!

Published

on

ವಿಟ್ಲ: ಮಳೆಗಾಲ ಆರಂಭವಾಗುತ್ತಿದ್ದಂತೆ ರಾತ್ರಿ ಹೊತ್ತು ರಸ್ತೆಬದಿ ಹಾಗೂ ಮೈದಾನಗಳಲ್ಲಿ ನಿಲ್ಲಿಸುವ ವಾಹನಗಳ ಬ್ಯಾಟರಿಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುವ ಖದೀಮರ ಗ್ಯಾಂಗ್ ವಿಟ್ಲ ಪರಿಸರದಲ್ಲಿ ಮತ್ತೆ ಸಕ್ರಿಯವಾಗಿದೆ. ಭಾನುವಾರ ರಾತ್ರಿ ಒಂದೇ ದಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕು ಪ್ರತ್ಯೇಕ ವಾಹನಗಳ ಬ್ಯಾಟರಿಗಳನ್ನು ಚೋರರು ಕದ್ದೊಯ್ದಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಸಾಲೆತ್ತೂರು ಮತ್ತು ಕುಡ್ತಮುಗೇರಿನಲ್ಲಿ ರಾತ್ರಿ ಹೊತ್ತು ನಿಲ್ಲಿಸಿದ್ದ ಪಿಕಪ್ ವಾಹನಗಳ ಬ್ಯಾಟರಿಗಳನ್ನು ಕಳವು ಮಾಡಲಾಗಿತ್ತು. ಇದೀಗ ಮತ್ತೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

ಅಳಕೆಮಜಲಿನಲ್ಲಿ ಎರಡು ಲಾರಿಗಳ ಬ್ಯಾಟರಿ ಕಳವು:

ಅಳಕೆಮಜಲು ಮಸೀದಿ ಆವರಣದ ಹೊರಗಡೆ ಎಂದಿನಂತೆ ಭಾನುವಾರ ರಾತ್ರಿ ನಿಲ್ಲಿಸಲಾಗಿದ್ದ ಎರಡು ಲಾರಿಗಳ ಬ್ಯಾಟರಿಗಳನ್ನು ಚೋರರು ಎಗರಿಸಿದ್ದಾರೆ. ಪ್ರವೀಣ್ ಶೆಟ್ಟಿ ಎಂಬವರಿಗೆ ಸೇರಿದ ಗೂಡ್ಸ್ ಲಾರಿ ಹಾಗೂ ಸೋನಾ ಸಾಗರ್ ಇಬ್ರಾಹಿಂ ಎಂಬವರ ಲಾರಿಗಳ ಬ್ಯಾಟರಿಗಳು ಕಳವಾಗಿವೆ. ಸೋಮವಾರ ಬೆಳಗ್ಗೆ ಚಾಲಕರು ಬಂದು ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಮತ್ತೆರಡು ಕಡೆ ಕಳ್ಳತನ:

ಇದೇ ರಾತ್ರಿ ಅಳಕೆಮಜಲು ಜಂಕ್ಷನ್‌ನಿಂದ ಸ್ವಲ್ಪ ಮುಂದಕ್ಕೆ ನಿನ್ನಿಕಲ್ಲು ಸಂಪರ್ಕಿಸುವ ಅಡ್ಡರಸ್ತೆ ಬಳಿ ನಿಲ್ಲಿಸಲಾಗಿದ್ದ ಕೋಳಿ ಸಾಗಾಟದ ಲಾರಿಯಿಂದಲೂ ಬ್ಯಾಟರಿಯನ್ನು ಕದಿಯಲಾಗಿದೆ. ಇದರೊಂದಿಗೆ ಉಕ್ಕುಡ ಚೆಕ್‌ಪೋಸ್ಟ್ ಸಮೀಪದ ಮಸೀದಿ ಬಳಿಯ ಮೈದಾನದಲ್ಲಿ ನಿಲ್ಲಿಸಿದ್ದ ಮತ್ತೊಂದು ಲಾರಿಯ ಬ್ಯಾಟರಿಯನ್ನೂ ಖದೀಮರು ಹೊತ್ತೊಯ್ದಿದ್ದಾರೆ.

ನಾಲ್ಕು ತಿಂಗಳ ಹಿಂದೆಯೂ ನಡೆದಿತ್ತು ಸರಣಿ ಕಳ್ಳತನ:

ವಿಟ್ಲ ಪರಿಸರದಲ್ಲಿ ಬ್ಯಾಟರಿ ಕಳ್ಳರ ಕಾಟ ಇದೇ ಮೊದಲಲ್ಲ. ಇನ್ನು ಸುಮಾರು 4 ತಿಂಗಳ ಹಿಂದೆಯೂ (ಫೆಬ್ರವರಿ ತಿಂಗಳಲ್ಲಿ) ಇದೇ ರೀತಿ ಕಳ್ಳರು ಸರಣಿ ಕಳ್ಳತನ ನಡೆಸಿ ಅಟ್ಟಹಾಸ ಮೆರೆದಿದ್ದರು. ಕೇವಲ 3 ದಿನಗಳ ಅವಧಿಯಲ್ಲಿ ವಿಟ್ಲದ ಕಲ್ಯಾಣಿ ರಸ್ತೆ, ಜಯನಗರ, ಒಕ್ಕೆತ್ತೂರು ಸೇರಿದಂತೆ ವಿಟ್ಲ ಕಸಬಾ ಮತ್ತು ಪೆರುವಾಯಿ ಪರಿಸರದಲ್ಲಿ ನಿಲ್ಲಿಸಲಾಗಿದ್ದ ಒಟ್ಟು 9 ವಾಹನಗಳ ಬ್ಯಾಟರಿಗಳನ್ನು ಕಳ್ಳರು ಲೂಟಿ ಮಾಡಿದ್ದರು. ಆಗಲೂ ಲಾರಿ, ಟಿಪ್ಪರ್, ಪಿಕಪ್ ಹಾಗೂ ಜೆಸಿಬಿ ವಾಹನಗಳನ್ನೇ ಗುರಿಯಾಗಿಸಿಕೊಂಡು ಕಳವು ಮಾಡಲಾಗಿತ್ತು.

ಇದೀಗ ಮಳೆಗಾಲ ಆರಂಭವಾಗುತ್ತಿದ್ದಂತೆ ಮತ್ತೆ ಕಳ್ಳರು ಅದೇ ಚಾಳಿಯನ್ನು ಮುಂದುವರಿಸಿರುವುದು ವಾಹನ ಮಾಲೀಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ – ಪೊಲೀಸರಿಗೆ ದೂರು:

ವಿಟ್ಲ ವ್ಯಾಪ್ತಿಯಲ್ಲಿ ಭಾನುವಾರ ಒಂದೇ ರಾತ್ರಿ ಒಟ್ಟು ನಾಲ್ಕು ವಾಹನಗಳ ಬ್ಯಾಟರಿ ಕಳ್ಳತನ ನಡೆದಿರುವ ಬಗ್ಗೆ ಲಾರಿ ಚಾಲಕರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳ್ಳರ ಕರಾಮತ್ತು ಸ್ಥಳೀಯ ಸಿಸಿಟಿವಿ (CC Camera) ಕ್ಯಾಮರಾಗಳಲ್ಲಿ ದಾಖಲಾಗಿದ್ದು, ಪೊಲೀಸರು ಈ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ.

ವಿಶೇಷ ಸೂಚನೆ (ವಾಹನ ಸವಾರರ ಗಮನಕ್ಕೆ): ಮಳೆಗಾಲದ ಕತ್ತಲನ್ನು ಬಂಡವಾಳ ಮಾಡಿಕೊಳ್ಳುತ್ತಿರುವ ಕಳ್ಳರ ಗ್ಯಾಂಗ್ ಸಕ್ರಿಯವಾಗಿರುವುದರಿಂದ, ವಾಹನ ಮಾಲೀಕರು ರಾತ್ರಿ ವೇಳೆ ಜನಸಂದಣಿ ಇರುವ ಅಥವಾ ಸಿ.ಸಿ. ಕ್ಯಾಮರಾ ನಿಗಾ ಇರುವ ಸುರಕ್ಷಿತ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸುವಂತೆ ವಿನಂತಿಸಲಾಗಿದೆ.




Continue Reading

Trending

Copyright © 2025 Deevatige

error: Content is protected !!