Connect with us

Uncategorized

29ವರ್ಷಗಳ ಹಿಂದೆ ನಡೆದ ಜೋಡಿ ಕೊಲೆ ಪ್ರಕರಣದ ಆರೋಪಿ ದಂಡುಪಾಳ್ಯ ಗ್ಯಾಂಗ್ ನ ಸದಸ್ಯ ಬಂಧನ.

Published

on

ಮಂಗಳೂರು ನಗರದ ಉರ್ವಾ ಪೊಲೀಸ್ ಠಾಣಾ ಅ.ಕ್ರ ನಂಬ್ರ 113/1997, ಕಲಂ 460, 396, 400 ಐಪಿಸಿ ಪ್ರಕರಣದಲ್ಲಿ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ, “ದಂಡುಪಾಳ್ಯ ಗ್ಯಾಂಗ್” ಎಂದೇ ಕುಖ್ಯಾತಿ ಪಡೆದಿರುವ ಗ್ಯಾಂಗ್ ನ ಸಹಚರ (ಎ-6) ಚಿಕ್ಕ ಹನುಮ @ ಚಿಕ್ಕ ಹನುಮಂತಪ್ಪ @ ಕೆ. ಕೃಷ್ಣಪ್ಪ @ ಕೃಷ್ಣ ಪ್ರಾಯ: 55 ವರ್ಷ, ತಂದೆ: ವೆಂಕಟಪ್ಪ ವಾಸ: ದಂಡುಪಾಳ್ಯ ಗ್ರಾಮ, ಹೊಸಕೋಟೆ ತಾಲೂಕು. ಬೆಂಗಳೂರು ಜಿಲ್ಲೆ. ಹಾಲಿ ವಾಸ: ವಿಜಯನಗರ ಕಾಲೋನಿ, ಬಿ.ಕೆ ಪಳ್ಳಿ, ಮದನಪಳ್ಳಿ, ಅನ್ನಮಯ್ಯ ಜಿಲ್ಲೆ, ಆಂದ್ರಪ್ರದೇಶ ಈತನನ್ನು ಆಂದ್ರಪ್ರದೇಶ ರಾಜ್ಯದ ಅನ್ನಮಯ್ಯ ಜಿಲ್ಲೆಯ, ಮದನಪಳ್ಳೆ ಎಂಬಲ್ಲಿ ಉರ್ವ ಠಾಣಾ ಪೊಲೀಸರು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಮಾನ್ಯ ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

29ವರ್ಷ ಹಿಂದಿನ ಕೊಲೆ ಪಾತಕಿ ಚಿಕ್ಕ ಹನುಮ..
ದಿನಾಂಕ: 11-10-1997 ರಂದು ಮಧ್ಯರಾತ್ರಿ ಮಂಗಳೂರು ತಾಲೂಕು ಉರ್ವಾ ಮಾರಿಗುಡಿ ಕ್ರಾಸ್ ಬಳಿರುವ ಅನ್ವರ್ ಮಹಲ್ ಎಂಬ ಮನೆಗೆ ನುಗ್ಗಿದ ದಂಡುಪಾಳ್ಯ ಗ್ಯಾಂಗ್” ಎಂದೇ ಕುಖ್ಯಾತಿ ಪಡೆದಿರುವ ಗ್ಯಾಂಗ್ ನ ಸಹಚರಗಳಾದ 1) ದೊಡ್ಡ ಹನುಮ @ ಹನುಮ 2)ವೆಂಕಟೇಶ @ ಚಂದ್ರ 3) ಮುನಿಕೃಷ್ಣ @ ಕೃಷ್ಣ ಮತ್ತು 4) ನಲ್ಲತಿಮ್ಮ @ ತಿಮ್ಮ5). ಕೃಷ್ಣ @ ದಂಡುಪಾಳ್ಯ ಕೃಷ್ಣ @ ನಾಗರಾಜ 6) ಚಿಕ್ಕ ಹನುಮ 7) ಕೃಷ್ಣಾಡು @ ಕೃಷ್ಣ 8) ವೆಂಕಟೇಶ್ @ ರಮೇಶ್ ಇವರುಗಳು ಮನೆಯಲ್ಲಿದ್ದ ಶ್ರೀಮತಿ ಲೂವಿಸ್ ಡಿಮೆಲ್ಲೋ, ಪ್ರಾಯ 80 ವರ್ಷ ಹಾಗೂ ರಂಜಿತ್ ವೇಗಸ್, ಪ್ರಾಯ 19 ವರ್ಷ ರವರನ್ನು ಕೊಲೆ ಮಾಡಿ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿರುತ್ತಾರೆ. ಸದ್ರಿ ಆಪಾದಿತರುಗಳ ಮೇಲೆ ತನಿಖೆ ನಡೆಸಿ ದೋಷರೋಪಣಾ ಪಟ್ಟಿಯನ್ನು ಮಾನ್ಯ ನಾಯಾಲಯಕ್ಕೆ ಸಲ್ಲಿಸಿದಂತೆ ಘನ 34 ನೇ ಅಪರ ನಗರ ಸಿವಿಲ್ ಮತ್ತು ಸೆಷನ್ ನ್ಯಾಯಾಧೀಶರು (ವಿಶೇಷ ನ್ಯಾಯಾಲಯ), ಕೇಂದ್ರ ಕಾರಾಗೃಹ ಆವರಣ ಪರಪ್ಪನ ಅಗ್ರಹಾರ ಬೆಂಗಳೂರು ರವರ ಎಸ್.ಸಿ ನಂ. 728/2010 ರಂತೆ ಸದ್ರಿ ನ್ಯಾಯಾಲಯದಲ್ಲಿ ವಿಚಾರಣೆ ಮುಕ್ತಾಯಗೊಂಡು ಇತರೆ 5 ಆಪಾದಿತರು ದೊಡ್ಡ ಹನುಮ @ ಹನುಮ ಸೇರಿ ಘನ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿರುತ್ತದೆ.

ಈ ಪ್ರಕರಣದಲ್ಲಿ ಆಪಾಧಿತನಾದ ಚಿಕ್ಕ ಹನುಮ @ ಚಿಕ್ಕ ಹನುಮಂತಪ್ಪ @ ಕೆ. ಕೃಷ್ಣಪ್ಪ @ ಕೃಷ್ಣ ತನ್ನ ಬುಧ್ಧಿವಂತಿಕೆಯನ್ನು ಬಳಸಿ ಚಿಕ್ಕ ಹನುಮಂತಪ್ಪ @ ಕೆ. ಕೃಷ್ಣಪ್ಪ @ ಕೃಷ್ಣ ಎಂದು ಹೆಸರು ಬದಲಾಯಿಸಿಕೊಂಡು ದಸ್ತಗಿರಿಗೆ ಸಿಗದೇ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಆಂದ್ರಪ್ರದೇಶ ರಾಜ್ಯದಲ್ಲಿ ತಲೆಮರೆಸಿಕೊಂಡಿರುತ್ತಾನೆ. ಈತನ ಮೇಲೆ ಮಂಗಳೂರು ಮಾನ್ಯ JMFC 2ನೇ ನ್ಯಾಯಾಲಯವು 2010 ರಲ್ಲಿ LPC ವಾರೆಂಟ್ ಹೊರಡಿಸಿತ್ತು. ಈತನ ಮೇಲೆ ಕರ್ನಾಟಕ ರಾಜ್ಯದಲ್ಲಿ ಸುಮಾರು 13 ಕೊಲೆ ,ದರೋಡೆ ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದ್ದು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. .

ಈ ಪತ್ತೆ ಕಾರ್ಯದಲ್ಲಿ ಉರ್ವಾ ಪೊಲೀಸ್ ಠಾಣೆಯ ನಿರೀಕ್ಷಕರಾದ ಶ್ಯಾಮ್ ಸುಂಧರ್ ಹೆಚ್.ಎಮ್ , ಪಿಎಸ್ಐ ಗುರಪ್ಪ ಕಾಂತಿ, ಪಿಎಸ್ಐ ಎಲ್.ಮಂಜುಳಾ ಎಎಸ್ಐ ವಿನಯ ಕುಮಾರ್ ಮತ್ತು ಸಿಬ್ಬಂದಿಗಳಾದ ಲಲಿತಲಕ್ಷ್ಮಿ, ಅನಿಲ್, ಪ್ರಮೋದ್, ಆತ್ನಾನಂದ , ಹರೀಶ್ ರವರು ಶ್ರಮಿಸಿರುತ್ತಾರೆ. ಸದ್ರಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಶಾಂಸೆಯನ್ನು ವ್ಯಕ್ತ ಪಡಿಸಿ, ಹೆಚ್ಚು ಬಹುಮಾನಕ್ಕಾಗಿ ಕರ್ನಾಟಕ ರಾಜ್ಯದ ಡಿಜಿ&ಐಜಿಪಿ ರವರಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Uncategorized

ಕಾಲೇಜು ಆವರಣದಲ್ಲಿ 290 ಗ್ರಾಂ ಗಾಂಜಾ ಪತ್ತೆ: ಮೂವರು ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ಪೊಲೀಸರಿಗೊಪ್ಪಿಸಿದ ಆಡಳಿತ ಮಂಡಳಿ

Published

on

ಮಂಗಳೂರು: ಕಾಲೇಜು ಕ್ಯಾಂಪಸ್‌ಗಳನ್ನು ಮಾದಕ ಮುಕ್ತಗೊಳಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ಮಂಗಳೂರಿನ ಕಾಲೇಜೊಂದರ ಆವರಣದಲ್ಲಿ ಗಾಂಜಾ ಹೊಂದಿದ್ದ ಮೂವರು ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.

ವಿದ್ಯಾರ್ಥಿಗಳಿಂದ ಸಣ್ಣ ಸಣ್ಣ ಪ್ಯಾಕೆಟ್‌ಗಳಲ್ಲಿದ್ದ ಸುಮಾರು 290 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ತಪಾಸಣೆ ವೇಳೆ ಸಿಕ್ಕಿಬಿದ್ದ ವಿದ್ಯಾರ್ಥಿಗಳು

ಇತ್ತೀಚೆಗೆ ನಡೆದ ಮಾದಕ ವಸ್ತು ವಿರೋಧಿ ಜಾಗೃತಿ ಅಭಿಯಾನಗಳ ನಂತರ, ಕಾಲೇಜು ಆಡಳಿತ ಮಂಡಳಿಯು ತನ್ನ ನಿಗಾ ವ್ಯವಸ್ಥೆಯನ್ನು ಬಲಪಡಿಸಿ ಸಕ್ರಿಯವಾಗಿ ತಪಾಸಣೆ ಆರಂಭಿಸಿತ್ತು. ಈ ವೇಳೆ ಮೂವರು ವಿದ್ಯಾರ್ಥಿಗಳು ಗಾಂಜಾ ಹೊಂದಿರುವುದು ಕಂಡುಬಂದಿದೆ. ಕಾಲೇಜು ಸಿಬ್ಬಂದಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಮೂವರೂ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.

ಎನ್‌ಡಿಪಿಎಸ್ ಕಾಯ್ದೆಯಡಿ ಎಫ್‌ಐಆರ್

ಘಟನೆಗೆ ಸಂಬಂಧಿಸಿದಂತೆ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ:

ಸೆಕ್ಷನ್ 27(b): ಮಾದಕ ವಸ್ತು ಸೇವನೆ

ಸೆಕ್ಷನ್ 8(c): ಮಾದಕ ದ್ರವ್ಯ ಉತ್ಪಾದನೆ, ಸಾಗಣೆ ಅಥವಾ ಹೊಂದಿರುವುದು

ಗಾಂಜಾವನ್ನು ಕಾಲೇಜು ಆವರಣಕ್ಕೆ ತಂದ ಆರೋಪ ಹೊತ್ತಿರುವ ಮುಖ್ಯ ವಿದ್ಯಾರ್ಥಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ವಿದ್ಯಾರ್ಥಿಯ ಶೈಕ್ಷಣಿಕ ಭವಿಷ್ಯ ಹಾಗೂ ಆತನ ಬಳಿ ಸಿಕ್ಕಿದ ಗಾಂಜಾದ ಪ್ರಮಾಣವನ್ನು ಪರಿಗಣಿಸಿ ನ್ಯಾಯಾಲಯವು ಶ್ಯೂರಿಟಿ ಮೇಲೆ ಜಾಮೀನು ಮಂಜೂರು ಮಾಡಿದೆ.

ಇನ್ನು ಈ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಸರಬರಾಜು ಮಾಡಿದ ಮುಖ್ಯ ಪೆಡ್ಲರ್ (ಸರಬರಾಜುದಾರ) ಪತ್ತೆಗೆ ಪೊಲೀಸರು ಜಾಲ ಬೀಸಿದ್ದು, ತನಿಖೆ ಮುಂದುವರಿದಿದೆ.

ಕಾಲೇಜುಗಳ ಸಕ್ರಿಯ ಪಾತ್ರಕ್ಕೆ ಶ್ಲಾಘನೆ

“ಇದು ಅತ್ಯಂತ ಉತ್ತೇಜನಕಾರಿ ಬೆಳವಣಿಗೆಯಾಗಿದೆ. ನಗರದ ಅನೇಕ ಕಾಲೇಜುಗಳು ಈಗ ಸ್ವಯಂಪ್ರೇರಿತವಾಗಿ ತಪಾಸಣೆ ನಡೆಸುತ್ತಿದ್ದು, ಆಯಾ ಕಾಲೇಜುಗಳ ಮಾದಕ ವಸ್ತು ವಿರೋಧಿ ಸಮಿತಿಗಳು (Anti-Drug Committees – ADCs) ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ಶಿಕ್ಷಣ ಸಂಸ್ಥೆಗಳು ಇದೇ ರೀತಿಯ ಬದ್ಧತೆ ಪ್ರದರ್ಶಿಸಿದರೆ, ಶೀಘ್ರದಲ್ಲೇ ಮಾದಕ ಮುಕ್ತ ಮತ್ತು ಆರೋಗ್ಯಕರ ಕ್ಯಾಂಪಸ್‌ಗಳನ್ನು ನಿರ್ಮಿಸಲು ಸಾಧ್ಯ.”

ಮಂಗಳೂರು ಪೊಲೀಸ್ ಕಮಿಷನರೇಟ್

Continue Reading

Mangaluru

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣಕ್ಕೆ ‘ಬ್ಯಾರಿಸ್ಟರ್‌ ಅತ್ತಾವರ ಎಲ್ಲಪ್ಪ’ ಹೆಸರಿಡಲು ಮನವಿ

Published

on

ಮಂಗಳೂರು: ಸ್ವಾತಂತ್ರ್ಯ ಹೋರಾಟಕ್ಕೆ ಅಪಾರ ಕೊಡುಗೆ ನೀಡಿದ ಹಾಗೂ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದ ನಿರ್ಮಾಣಕ್ಕೆ ಸ್ವಂತ ಜಾಗವನ್ನು ದಾನವಾಗಿ ನೀಡಿದ ಮಹಾನ್ ದೇಶಪ್ರೇಮಿ ಬ್ಯಾರಿಸ್ಟರ್‌ ಅತ್ತಾವರ ಎಲ್ಲಪ್ಪ ಅವರ ಹೆಸರನ್ನು ಮಂಗಳೂರು ಸೆಂಟ್ರಲ್‌ ರೈಲ್ವೇ ಸ್ಟೇಷನ್‌ಗೆ ಮರುನಾಮಕರಣ ಮಾಡಬೇಕು ಹಾಗೂ ನಿಲ್ದಾಣದ ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ಕರ್ನಾಟಕ ಸರಕಾರದ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ಮಾಜಿ ಮೇಯರ್ ಅನಂತ್‌ ಮೈಸೂರು ಆಗ್ರಹಿಸಿದ್ದಾರೆ.

ಆಗಸ್ಟ್ 2ರಂದು ಸಂಜೆ ಮಂಗಳೂರು ಸೆಂಟ್ರಲ್‌ ರೈಲ್ವೇ ಸ್ಟೇಷನ್‌ಗೆ ಭೇಟಿ ನೀಡಿದ ಅವರು, ಗಾಣಿಗ ಸಮಾಜದ ಪ್ರಮುಖ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ, ರೈಲ್ವೇ ಕ್ಷೇತ್ರಾಧಿಕಾರಿ ರಾಕೇಶ್‌ ಕುಮಾರ್‌ ಪಾರಕ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಬಳಿಕ ಮಾತನಾಡಿದ ಅನಂತ್‌ ಮೈಸೂರು, “ಬ್ಯಾರಿಸ್ಟರ್‌ ಅತ್ತಾವರ ಎಲ್ಲಪ್ಪನವರು ಗಾಣಿಗ (ಸಫಲಿಗ) ಸಮಾಜಕ್ಕೆ ಸೇರಿದವರಾಗಿದ್ದು, ದೇಶಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡವರು. ನಿಲ್ದಾಣ ನಿರ್ಮಾಣಕ್ಕೆ ತಮ್ಮದೇ ಜಾಗವನ್ನು ಕೊಡುಗೆಯಾಗಿ ನೀಡಿದ ಅವರ ಸ್ಮರಣಾರ್ಥ ನಿಲ್ದಾಣಕ್ಕೆ ಅವರ ಹೆಸರನ್ನಿಟ್ಟು, ಪ್ರತಿಮೆ ನಿರ್ಮಿಸುವುದು ಅವರಿಗೆ ಸಲ್ಲಿಸುವ ನಿಜವಾದ ಗೌರವ,” ಎಂದರು.

ಪಠ್ಯಪುಸ್ತಕದಲ್ಲೂ ವಿಷಯ ಸೇರ್ಪಡೆಯಾಗಲಿ: ಮೋಹಿತ್‌

ಅಜೇಯ ಭಾರತ ಸಂಸ್ಥಾಪಕ ಮೋಹಿತ್‌ ಬೆಂಗಳೂರು ಮಾತನಾಡಿ, “ಅತ್ತಾವರ ಎಲ್ಲಪ್ಪನವರು ಒಂದು ಸಮಾಜಕ್ಕೆ ಸೀಮಿತವಾದವರಲ್ಲ, ಇಡೀ ದೇಶ ಹೆಮ್ಮೆ ಪಡುವ ವ್ಯಕ್ತಿತ್ವ. ನಿಲ್ದಾಣಕ್ಕೆ ಹೆಸರಿಡುವ ಜತೆಗೆ ಶಾಲಾ ಪಠ್ಯಪುಸ್ತಕಗಳಲ್ಲೂ ಅವರ ಹೋರಾಟದ ಹಾದಿಯ ವಿಷಯಗಳನ್ನು ಸೇರ್ಪಡೆಗೊಳಿಸಬೇಕು. ಈ ಬಗ್ಗೆ ದಕ್ಷಿಣ ಕನ್ನಡ ಸಂಸದ ಕ್ಯಾ| ಬ್ರಿಜೇಶ್‌ ಚೌಟ ಅವರೊಂದಿಗೆ ಚರ್ಚಿಸಲಾಗಿದ್ದು, ಶೀಘ್ರವೇ ಕೇಂದ್ರ ರೈಲ್ವೇ ಸಚಿವ ವಿ. ಸೋಮಣ್ಣ ಅವರ ಗಮನಕ್ಕೂ ತರಲಾಗುವುದು,” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಯಾರಿಸ್ಟರ್‌ ಎಲ್ಲಪ್ಪ ಅವರ ಸೋದರಳಿಯ ಪ್ರಭಾಕರ್‌ ದಾಸ್‌, ದ.ಕ. ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ವಿಶ್ವಾಸ್‌ ಕುಮಾರ್‌ ದಾಸ್‌, ಪುತ್ತೂರು ಗಾಣಿಗ ಯಾನೆ ಸಫಲಿಗರ ಸೇವಾ ಸಂಘದ ಲಕ್ಷ್ಮೀ ಪ್ರಸಾದ್‌ ಬೆಟ್ಟ, ಪ್ರೊ| ಸುರೇಶ್‌ ಕಟೀಲು,‌ ಕಮಲಾಕ್ಷ ಉಳ್ಳಾಲ್‌, ರವೀಂದ್ರ ಟಿ. ಮಂಗಳೂರು, ಭರತ್‌ ಕುಮಾರ್‌ ಅತ್ತಾವರ, ಹರೀಶ್‌ ಮಂಜೇಶ್ವರ, ತಾರನಾಥ ಸುವರ್ಣ, ಪದ್ಮನಾಭ, ಕಾರ್ತಿಕ್‌ ಕಬಕ, ಪ್ರವನ್‌ ಮೆಲ್ಕಾರ್‌ ಉಪಸ್ಥಿತರಿದ್ದರು.

Continue Reading

CONGRESS

ರಾಜ್ಯ ಸಚಿವ ಸಂಪುಟ ವಿಸ್ತರಣೆ: ಕಾಂಗ್ರೆಸ್ ಹೈಕಮಾಂಡ್‌ನಿಂದ ಅಂತಿಮ ಪಟ್ಟಿ ಬಿಡುಗಡೆ!

Published

on

ಬೆಂಗಳೂರು: ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಎಐಸಿಸಿ (AICC) ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಅಂತಿಮ ಅನುಮೋದಿತ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರು ಅನುಮೋದಿಸಿರುವ ಈ ಪಟ್ಟಿಯಲ್ಲಿ 20 ನೂತನ ಸಚಿವರ ಹೆಸರುಗಳು ಹಾಗೂ ಶಾಸಕಾಂಗದ ಪ್ರಮುಖ ಹುದ್ದೆಗಳ ಹೆಸರುಗಳನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ.

ಸಂಪುಟ ಸೇರಲಿರುವ 20 ನೂತನ ಸಚಿವರ ಅಧಿಕೃತ ಪಟ್ಟಿ:

  1. ಪಿ. ಎಂ. ನರೇಂದ್ರಸ್ವಾಮಿ
  2. ಶಿವರಾಜ್ ತಂಗಡಗಿ
  3. ರುದ್ರಪ್ಪ ಲಮಾಣಿ
  4. ಕೆ. ಎಸ್. ಬಸವಂತಪ್ಪ
  5. ಬಿ. ನಾಗೇಂದ್ರ
  6. ಟಿ. ರಘುಮೂರ್ತಿ
  7. ಬಿ. ಝಡ್. ಝಮೀರ್ ಅಹ್ಮದ್ ಖಾನ್
  8. ರಿಜ್ವಾನ್ ಅರ್ಷದ್
  9. ಸಂತೋಷ್ ಲಾಡ್
  10. ಮಧು ಬಂಗಾರಪ್ಪ
  11. ಪುಟ್ಟರಂಗಶೆಟ್ಟಿ
  12. ಎಸ್‌ ಎಸ್‌ ಮಲ್ಲಿಕಾರ್ಜುನ
  13. ಡಾ. ಅಜಯ್ ಸಿಂಗ್
  14. ಎನ್. ಚೆಲುವರಾಯಸ್ವಾಮಿ
  15. ಕೆ. ಎಂ. ಶಿವಲಿಂಗೇಗೌಡ
  16. ಹೆಚ್. ಸಿ. ಬಾಲಕೃಷ್ಣ
  17. ಗಾಯತ್ರಿ ಶಾಂತೇಗೌಡ
  18. ಬಸವರಾಜ ರಾಯರೆಡ್ಡಿ
  19. ವಿಜಯಾನಂದ ಕಾಶಪ್ಪನವರ್
  20. ಲಕ್ಷ್ಮಣ ಸವದಿ

ಶಾಸಕಾಂಗ ಹಾಗೂ ಮೇಲ್ಮನೆಯ ಪ್ರಮುಖ ಹುದ್ದೆಗಳ ನೇಮಕಾತಿ:

ಸಚಿವರ ಪಟ್ಟಿಯ ಜೊತೆಗೆ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಪ್ರಮುಖ ಹುದ್ದೆಗಳಿಗೂ ಅಭ್ಯರ್ಥಿಗಳನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದೆ:

  • ವಿಧಾನಸಭಾ ಸ್ಪೀಕರ್ (ಸಭಾಧ್ಯಕ್ಷರು): ಜಿ. ಎಸ್. ಪಾಟೀಲ್
  • ವಿಧಾನಸಭಾ ಡೆಪ್ಯೂಟಿ ಸ್ಪೀಕರ್ (ಉಪಸಭಾಧ್ಯಕ್ಷರು): ಎ. ಎಸ್. ಪೊನ್ನಣ್ಣ
  • ವಿಧಾನಪರಿಷತ್ ಸಭಾಪತಿ: ಸಲೀಂ ಅಹ್ಮದ್
  • ವಿಧಾನಪರಿಷತ್ ಉಪಸಭಾಪತಿ: ಉಮಾಶ್ರೀ

ಈ ಪಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಮುದ್ರೆ ಒತ್ತಿದ್ದು, ಶೀಘ್ರದಲ್ಲೇ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ

Continue Reading

Trending

Copyright © 2025 Deevatige

error: Content is protected !!