Kasaragod
ಸ್ವಾಮಿಯೇ….ಶರಣಂ ಅಯ್ಯಪ್ಪ ; ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ
- Share
- Tweet /home/u338848369/domains/deevatigenews.com/public_html/wp-content/plugins/mvp-social-buttons/mvp-social-buttons.php on line 72
https://deevatigenews.com/wp-content/uploads/2026/01/Makarajyothi-darshanam-1.jpg&description=ಸ್ವಾಮಿಯೇ….ಶರಣಂ ಅಯ್ಯಪ್ಪ ; ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ', 'pinterestShare', 'width=750,height=350'); return false;" title="Pin This Post">
ಸ್ವಾಮಿಯೇ…. ಶರಣಂ ಅಯ್ಯಪ್ಪ ಎಂಬ ಲಕ್ಷಾಂತರ ಭಕ್ತರ ಮುಗಿಲು ಮುಟ್ಟುವ ಭಕ್ತಿಪರವಶತೆಯ ಕೂಗಿಗೆ ಪ್ರತ್ಯಕ್ಷವಾದ ಸಾಕ್ಷಾತ್ ದೇವಸ್ವರೂಪಿ ಮಕರಜ್ಯೋತಿ !
ಈ ವರ್ಷದ ಮಕರಸಂಕ್ರಾoತಿಯ ಶುಭ ಘಳಿಗೆಯಂದು ಸಂಜೆ ಕಂಡುಬoದ ಅದ್ಭುತ ಕ್ಷಣಕ್ಕೆ ಲಕ್ಷಾಂತರ ಕೋಟಿ ಭಕ್ತರು ಸಾಕ್ಷಿಯಾಗಿ ಜನ್ಮ ಸಾರ್ಥಕತೆ ಪಡೆದ ಭಾವನೆಯೊಂದಿಗೆ ಭಗವಂತನ ನಾಮಸ್ಮರಣೆಯನ್ನು ಮಾಡುತ್ತಾ ಕುಣಿದಾಡಿದರು.

ಮಕರ ಸಂಕ್ರಮಣ ದಿನವಾದ ಇಂದು ಶಬರಿಮಲೆಯ ಪೊನ್ನಂಬಲಮೇಡು ಬೆಟ್ಟದಲ್ಲಿ ಸಂಜೆ ಮೂರು ಬಾರಿ ಮಕರ ಜ್ಯೋತಿ ಕಾಣಿಸಿಕೊಂಡು ಭಕ್ತರು ಭಕ್ತಿಯ ಪರವಶತೆಯಲ್ಲಿ ತೇಲಾಡಿದರು.
ಪ್ರತಿ ವರ್ಷದಂತೆ ಈ ಬಾರಿಯು ಶಬರಿಮಲೆಯಲ್ಲಿ (shabarimale) ಮಕರ ಜ್ಯೋತಿ (makara jyothi) ದರ್ಶನ ಪಡೆದು ಅಯ್ಯಪ್ಪ ಸ್ವಾಮಿ ಭಕ್ತರು (ayyappa deevotees) ಪುನೀತರಾಗಿದ್ದಾರೆ.
ಸಂಜೆ 6.45ಕ್ಕೆ ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನವಾಗಿದೆ. ಮಕರ ಜ್ಯೋತಿಯನ್ನ ಕಣ್ತುಂಬಿಕೊoಡ ಭಕ್ತರು ‘ಸ್ವಾಮೀಯೇ ಶರಣಂ ಅಯ್ಯಪ್ಪ’ ದೇವರನ್ನ ಸ್ಮರಿಸಿದರು. ಮಕರ ಸಂಕ್ರಮಣ (makara sankrathi) ದಿನವಾದ ಇಂದು ಶಬರಿಮಲೆಯ ಪೊನ್ನಂಬಲಮೇಡು ಬೆಟ್ಟದಲ್ಲಿ ಸಂಜೆ ಮೂರು ಬಾರಿ ಮಕರ ಜ್ಯೋತಿ ಕಾಣಿಸಿಕೊಂಡಿತು. ಈ ಅಮೃತ ಘಳಿಗೆಗಾಗಿ ಕಾದಿದ್ದ ಲಕ್ಷಾಂತರ ಭಕ್ತರು ದಿವ್ಯ ಜ್ಯೋತಿಯ ಬೆಳಕನ್ನು ನೋಡಿ ಕಣ್ತುಂಬಿಕೊoಡರು.
ಬೆಳಕಿನ ರೂಪದಲ್ಲಿ ಅಯ್ಯಪ್ಪ ಸ್ವಾಮಿ ದರ್ಶನ
ದೇವರನಾಡು ಕೇರಳದಲ್ಲಿರುವ ಶಬರಿಮಲೆಯಲ್ಲಿ ಮಕರ ಸಂಕ್ರಾತಿಯ ಸಂಭ್ರಮ ಮುಗಿಲು ಮುಟ್ಟಿದೆ. ಪ್ರತಿವರ್ಷದಂತೆ ಈ ಬಾರಿಯು ಕೂಡ ಪೊನ್ನಂಬಲಮೇಡು ಬೆಟ್ಟದಲ್ಲಿ ಸಂಜೆ ಮೂರು ಬಾರಿ ಮಕರ ಜ್ಯೋತಿ ದರ್ಶನವಾಯಿತು. ಬೆಳಕಿನ ರೂಪದಲ್ಲಿ ಕಾಣಿಸಿಕೊಂಡ ಅಯ್ಯಪ್ಪಸ್ವಾಮಿಯನ್ನು ಕಣ್ತುಂಬಿಕೊoಡ ಭಕ್ತರು ಸ್ವಾಮಿಯೇ ಶರಣಂ ಅಯ್ಯಪ್ಪ ಘೋಷಣೆ ಕೂಗಿದರು. ಮೂರು ಬಾರಿ ದರ್ಶನವಾಗುವ ಅಯ್ಯಪ್ಪ ಜ್ಯೋತಿಯನ್ನು ಕಣ್ತುಂಬಿಕೊoಡು ಪುನೀತರಾದರು. ವರ್ಷದ ಅದ್ಭುತ ಕ್ಷಣಕ್ಕೆ ಕೋಟ್ಯಾಂತರ ಭಕ್ತರು ಸಾಕ್ಷಿಯಾದರು.
DEATH
ಕಣಜದ ಹುಳು ಕಡಿದು ಶಿಕ್ಷಕ ದಾರುಣ ಸಾವು; ಕೃಷಿ ಭೂಮಿ ಸ್ವಚ್ಛಗೊಳಿಸುವಾಗ ನಡೆದ ದಾಳಿ
ಕಾಸರಗೋಡು: ಕೃಷಿ ಜಾಗದ ಪೊದೆ ಕಾಡು ಕಡಿದು ಶುಚೀಕರಿಸುವಾಗ ಕಣಜದ ಹುಳುಗಳ ದಾಳಿಗೆ ಒಳಗಾಗಿ ಶಿಕ್ಷಕರೊಬ್ಬರು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಕಾಸರಗೋಡು ಜಿಲ್ಲೆಯ ಬಳಾಂತೋಡು ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಅಧ್ಯಾಪಕ, ಕಾಞಂಗಾಡು ಚಾಮುಂಡಿಕುನ್ನ್ ನಿವಾಸಿ ವಿಜಯನ್ ಮಾಸ್ತರ್ (56) ಮೃತಪಟ್ಟವರು.
ಘಟನೆ ವಿವರ
ಇಂದು ಬೆಳಿಗ್ಗೆ ವಿಜಯನ್ ಮಾಸ್ತರ್ ತಮ್ಮ ಭೂಮಿಯನ್ನು ಕಾರ್ಮಿಕರೊಂದಿಗೆ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಮಣ್ಣಿನ ಹುತ್ತದಲ್ಲಿ ಗೂಡು ಕಟ್ಟಿದ್ದ ಕಣಜದ ಹುಳುಗಳು ಏಕಾಏಕಿ ಗುಂಪಾಗಿ ದಾಳಿ ನಡೆಸಿವೆ.
ಕಣಜದ ಹುಳುಗಳ ತೀವ್ರ ದಾಳಿಗೆ ಒಳಗಾದ ವಿಜಯನ್ ಮಾಸ್ತರ್ರನ್ನು ಕೂಡಲೇ ಬಂದಡ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ನಾಲ್ವರು ಕಾರ್ಮಿಕರಿಗೆ ಗಾಯ
ಇವರ ಜೊತೆಗಿದ್ದ ನಾಲ್ವರು ಕಾರ್ಮಿಕರೂ ಕಣಜದ ಹುಳು ಕಡಿತಕ್ಕೆ ಒಳಗಾಗಿದ್ದಾರೆ. ಅದೃಷ್ಟವಶಾತ್ ಅವರು ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ.
ಈ ಅಧ್ಯಯನ ವರ್ಷವೇ ಸೇವಾ ನಿವೃತ್ತಿ ಪಡೆಯಲು ಸಿದ್ಧತೆಯಲ್ಲಿದ್ದ ವಿಜಯನ್ ಮಾಸ್ತರ್ ದಾರುಣವಾಗಿ ಮೃತಪಟ್ಟಿರುವುದು ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಊರವರನ್ನು ಕಣ್ಣೀರಲ್ಲಿ ಮುಳುಗಿಸಿದೆ. ಶಿಕ್ಷಣ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರವಾಗಿತ್ತು ಎಂದು ಸ್ಥಳೀಯರು ಕಂಬನಿ ಮಿಡಿದಿದ್ದಾರೆ.



accident
ವೈದ್ಯ ಪವಾಡಸದೃಶ ಪಾರು; ಚಲಿಸುವ ಕಾರಿನ ಮೇಲೆ ಮರ ಬಿದ್ದು ಕಾರು ಸಂಪೂರ್ಣ ಜಖಂ
ಪೆರ್ಲ: ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಮಣಿಯಂಪಾರೆಯಲ್ಲಿ ಚಲಿಸುವ ಕಾರಿನ ಮೇಲೆ ಮರ, ವಿದ್ಯುತ್ ಕಂಬ ಹಾಗೂ ತಂತಿ ಕುಸಿದು ಬಿದ್ದು ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಸೀತಾಂಗೋಳಿಯ ವೈದ್ಯ ಡಾ. ವಿಷ್ಣು ಪ್ರಸಾದ್ ಬರೆಕೆರೆ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೂದಲೆಳೆ ಅಂತರದಲ್ಲಿ ಜೀವದಾನ
ಸೀತಾಂಗೋಳಿಯಲ್ಲಿ ಕ್ಲಿನಿಕ್ ನಡೆಸುತ್ತಿರುವ ಪೆರ್ಲ ನಿವಾಸಿ ಡಾ. ವಿಷ್ಣು ಪ್ರಸಾದ್ ಬರೆಕೆರೆ ಅವರೇ ಈ ಅಪಾಯದಿಂದ ಪಾರಾದವರು. ಇವರು ಯಕ್ಷಪ್ರೇಮಿ ಮತ್ತು ಯಕ್ಷ ಪ್ರೋತ್ಸಾಹಕರಾಗಿದ್ದಾರೆ. ಡಾ.ವಿಷ್ಣುಪ್ರಸಾದ್ ಬರೆಕೆರೆ ಕ್ಲಿನಿಕ್ನಿಂದ ಉಕ್ಕಿನಡ್ಕ ನೆಲ್ಲಿಕುಂಜದ ದೇವಸ್ಥಾನದ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಭಾರಿ ಗಾಳಿಯ ಕಾರಣ ರಸ್ತೆ ಬದಿಯಲ್ಲಿದ್ದ ಮರವು ಹಠಾತ್ತನೆ ಕಾರಿನ ಮೇಲೆ ಉರುಳಿ ಬಿತ್ತು.

ವಿದ್ಯುತ್ ವ್ಯತ್ಯಯ ಮತ್ತು ಹಾನಿ
ಅಪಘಾತದ ತೀವ್ರತೆಗೆ ಕಾರು ಭಾರೀ ಪ್ರಮಾಣದಲ್ಲಿ ಅಪ್ಪಚ್ಚಿಯಾಗಿದೆ. ಕಾರಿನೊಳಗೆ ಸಿಲುಕಿಕೊಂಡಿದ್ದ ವೈದ್ಯರನ್ನು ಸ್ಥಳೀಯ ನಾಗರಿಕರು ಕೂಡಲೇ ಕಾರ್ಯಪ್ರವೃತ್ತರಾಗಿ ಹೊರತೆಗೆದು ರಕ್ಷಿಸಿದ್ದಾರೆ. ವೈದ್ಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ದೊಡ್ಡ ಅನಾಹುತ ತಪ್ಪಿದೆ.
ಮರ ಮತ್ತು ವಿದ್ಯುತ್ ಕಂಬ ಕುಸಿದ ಪರಿಣಾಮ ರಾತ್ರಿ ಸುದೀರ್ಘ ಕಾಲ ಪರಿಸರದ ವಿದ್ಯುತ್ ವಿತರಣೆ ಸ್ಥಗಿತಗೊಂಡಿತ್ತು. ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.
ಮಳೆಗಾಲದಲ್ಲಿ ರಸ್ತೆ ಬದಿಯ ಶಿಥಿಲ ಮರಗಳು ಹಾಗೂ ವಿದ್ಯುತ್ ಕಂಬಗಳ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.



DEATH
ಸಾವಿನಲ್ಲೂ ಒಂದಾದ ಪ್ರೇಮಿಗಳು: ಭಾವಿ ಪತಿಯ ಸಮಾಧಿ ಪಕ್ಕದಲ್ಲೇ ಯುವತಿಯ ಅಂತ್ಯಸಂಸ್ಕಾರ!
ಮಂಜೇಶ್ವರ/ಕಾಸರಗೋಡು: ಪ್ರೀತಿ ಎನ್ನುವುದು ಕೇವಲ ಬದುಕಿದ್ದಾಗ ಮಾತ್ರವಲ್ಲ, ಸಾವಿನ ನಂತರವೂ ಶಾಶ್ವತ ಎಂಬುದಕ್ಕೆ ಕೇರಳದ ಕಾಸರಗೋಡಿನಲ್ಲಿ ನಡೆದ ಈ ಕರುಣಾಜನಕ ಘಟನೆ ಸಾಕ್ಷಿಯಾಗಿದೆ. ವಿಧಿಯ ಆಟಕ್ಕೆ ಸೋತ ಪ್ರೇಮಿಗಳಿಬ್ಬರು ಕೊನೆಗೂ ಸಾವಿನ ಮಡಿಲಲ್ಲಿ ಒಂದಾಗಿದ್ದಾರೆ.
ಘಟನೆಯ ಹಿನ್ನೆಲೆ:
ಮಂಜೇಶ್ವರದ ಕಿದೂರು ಕುಂಟಂಗೇರಡ್ಕ ನಿವಾಸಿ ಪ್ರಫುಲ್ಲಾ (26) ಮತ್ತು ತಮಿಳುನಾಡು ಮೂಲದ ಬ್ಯಾಂಕ್ ಉದ್ಯೋಗಿ ಮಣಿ ಅವರ ವಿವಾಹ ನಿಶ್ಚಯವಾಗಿತ್ತು. ಸುಮಾರು ನಾಲ್ಕು ತಿಂಗಳ ಹಿಂದೆ ಇವರ ನಿಶ್ಚಿತಾರ್ಥವು ಅತ್ಯಂತ ಅದ್ಧೂರಿಯಾಗಿ ನಡೆದಿತ್ತು. ಇನ್ನೇನು ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎನ್ನುವಷ್ಟರಲ್ಲಿ ವಿಧಿ ಬೇರೆಯದೇ ಆಟವಾಡಿದ್ದ. ಸುಮಾರು ಒಂದು ತಿಂಗಳ ಹಿಂದೆ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಮಣಿ ಸಾವನ್ನಪ್ಪಿದ್ದರು. ತನ್ನ ಭಾವಿ ಪತಿಯ ಅಗಲಿಕೆಯನ್ನು ತಾಳಲಾರದ ಪ್ರಫುಲ್ಲಾ ತೀವ್ರ ಖಿನ್ನತೆಗೊಳಗಾಗಿದ್ದರು.
ಡೆತ್ನೋಟ್ನಲ್ಲಿತ್ತು ಕೊನೆಯ ಆಸೆ:
ಮಣಿಯ ಅಗಲಿಕೆಯಿಂದ ನೊಂದಿದ್ದ ಪ್ರಫುಲ್ಲಾ, ಕಳೆದ ಭಾನುವಾರ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಆಕೆ ಬರೆದಿದ್ದ ಡೆತ್ನೋಟ್ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡುವಂತಿದೆ. “ನನ್ನನ್ನು ಮಣಿಯ ಸಮಾಧಿಯ ಪಕ್ಕದಲ್ಲೇ ಹೂಳಬೇಕು” ಎಂಬುದು ಆಕೆಯ ಕೊನೆಯ ಆಸೆಯಾಗಿತ್ತು.

ಸಾವಿನಲ್ಲೂ ಒಂದಾದ ಜೋಡಿ:
ಮಗಳ ಅಂತಿಮ ಬಯಕೆಯನ್ನು ಗೌರವಿಸಿದ ತಂದೆ ಜಯಾನಂದ್ ಮತ್ತು ಕುಟುಂಬಸ್ಥರು, ಮಣಿಯ ಕುಟುಂಬದವರೊಂದಿಗೆ ಮಾತುಕತೆ ನಡೆಸಿದರು. ಅವರ ಒಪ್ಪಿಗೆಯ ಮೇರೆಗೆ ಪ್ರಫುಲ್ಲಾ ಅವರ ಮೃತದೇಹವನ್ನು ಕಾಸರಗೋಡಿನಿಂದ ಸುಮಾರು ನೂರಾರು ಕಿಲೋಮೀಟರ್ ದೂರದಲ್ಲಿರುವ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಳ್ಳಿಯೂರು ಗ್ರಾಮಕ್ಕೆ ಕೊಂಡೊಯ್ಯಲಾಯಿತು.
ಅಲ್ಲಿನ ಸ್ಮಶಾನದಲ್ಲಿ ಮಣಿಯ ಸಮಾಧಿಯ ಪಕ್ಕದಲ್ಲೇ ಪ್ರಫುಲ್ಲಾ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಎರಡೂ ಕುಟುಂಬಗಳ ಸದಸ್ಯರು ಉಪಸ್ಥಿತರಿದ್ದು, ಕಂಬನಿಯ ವಿದಾಯ ಹೇಳಿದರು.
ಹೂವಿನಿಂದ ಅಲಂಕರಿಸಲ್ಪಟ್ಟ ಪಕ್ಕದ ಎರಡು ಸಮಾಧಿಗಳು ಈ ಪ್ರೇಮಕಥೆಯ ದುರಂತ ಅಂತ್ಯಕ್ಕೆ ಸಾಕ್ಷಿಯಾಗಿ ನಿಂತಿವೆ. ಪ್ರಸ್ತುತ ಈ ಘಟನೆಯ ವೀಡಿಯೊ ಮತ್ತು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಜೋಡಿಯ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ.



-
crime2 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime4 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala2 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala5 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 weeks agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Dakshina Kannada6 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala4 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala5 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
