Connect with us

complaint

ವಿಟ್ಲ: ವಸತಿ ಪ್ರದೇಶದಲ್ಲಿ ಅಕ್ರಮ ಮಾಂಸಾಹಾರಿ ಹೋಟೆಲ್ ತೆರೆಯಲು ಹುನ್ನಾರ – ಸಾರ್ವಜನಿಕರ ತೀವ್ರ ವಿರೋಧ ಹಾಗೂ ಪಂಚಾಯತ್‌ಗೆ ದೂರು

Published

on

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಡ್ಡದ ಬೀದಿ ಎಂಬಲ್ಲಿ ವಸತಿ ಪ್ರದೇಶದಲ್ಲಿ ಅನುಮತಿಯಿಲ್ಲದೆ ಅಕ್ರಮವಾಗಿ ಮಾಂಸಾಹಾರಿ ಹೋಟೆಲ್ ಆರಂಭಿಸಲು ಯತ್ನಿಸುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳು ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಅಬ್ದುಲ್ಲಾ ಬಿನ್ ಅದ್ರಾಮ ಬ್ಯಾರಿ ಹಾಗೂ ಇತರ ಪರಿಸರ ನಿವಾಸಿಗಳು ನೀಡಿರುವ ದೂರಿನಲ್ಲಿ, ಈ ಪ್ರದೇಶವು ಸಂಪೂರ್ಣವಾಗಿ ವಸತಿ ಪ್ರದೇಶವಾಗಿದ್ದು, ಇಲ್ಲಿ ಅಪಾರ್ಟ್‌ಮೆಂಟ್‌ಗಳು ಹಾಗೂ ವಾಸದ ಮನೆಗಳಿವೆ. ವೇದಾವತಿ ಎಂಬುವರ ಪುತ್ರ ಸಂತೋಷ್ ಎಂಬುವರಿಗೆ ಸೇರಿದ ಸ್ಥಳದಲ್ಲಿರುವ ವಾಸದ ಮನೆಯಲ್ಲಿ ಅನಧಿಕೃತವಾಗಿ ಮಾಂಸಾಹಾರಿ ಹೋಟೆಲ್ ಉದ್ಯಮ ನಡೆಸಲು ವ್ಯಾಪಕ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಲಾಗಿದೆ.

ದೂರಿನ ಪ್ರಮುಖ ಮುಖ್ಯಾಂಶಗಳು:

  • ಈ ಜಾಗವು ವಾಸದ ಪ್ರದೇಶವಾಗಿದ್ದು, ವಾಣಿಜ್ಯ ಉದ್ದೇಶಕ್ಕೆ ಬಳಸುವುದು ಕಾನೂನು ಬಾಹಿರವಾಗಿದೆ.
  • ಹೋಟೆಲ್ ಆರಂಭಿಸಿದರೆ ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗುವ ಸಂಭವವಿದ್ದು, ತ್ಯಾಜ್ಯಗಳು ಉತ್ಪತ್ತಿಯಾಗಿ ರೋಗರುಜಿನಗಳು ಹರಡುವ ಆತಂಕವಿದೆ.
  • ಈ ಜಾಗದ ಕುರಿತು ವ್ಯಾಜ್ಯಗಳಿದ್ದು, ಗಡಿ ತಕರಾರುಗಳು ಇನ್ನೂ ಮುಗಿದಿರುವುದಿಲ್ಲ.
  • ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡುವುದಕ್ಕೆ ಸ್ಥಳೀಯರ ತೀವ್ರವಾದ ವಿರೋಧವಿದೆ.

ಆದ್ದರಿಂದ ಯಾವುದೇ ಕಾರಣಕ್ಕೂ ಈ ಹೋಟೆಲ್ ಉದ್ಯಮಕ್ಕೆ ಪರವಾನಗಿ ನೀಡಬಾರದೆಂದು ಅಬ್ದುಲ್ಲಾ ಬಿನ್ ಅದ್ರಾಮ ಬ್ಯಾರಿ, ವಿ.ಜೆ. ಸತ್ಯನಾರಾಯಣ ವರ್ಮ, ವಿ.ಆರ್. ನರಸಿಂಹ, ಸಹನಾ ವಿ., ವಿ. ಶಶಿಕಲಾ, ಶ್ಯಾಮಲ, ವಿಜಯಕುಮಾರ್‌, ಬಿಫಾತುಮ, ಅಬ್ದುಲ್‌ ರಹಿಮಾನ್‌, ಸೇರಿದಂತೆ ಅನೇಕ ಸ್ಥಳೀಯ ನಿವಾಸಿಗಳು ಪಂಚಾಯತ್ ಆಡಳಿತವನ್ನು ಒತ್ತಾಯಿಸಿದ್ದಾರೆ.

ಈಗಾಗಲೇ ಮುಖ್ಯಾಧಿಕಾರಿಗಳಿಗೆ ನೀಡಿದ ದೂರಿನ ಬಗ್ಗೆ ಪಟ್ಟಣ ಪಂಚಾಯತ್‌ ಅಧ್ಯಕ್ಷರಾದ ಕರುಣಾಕರ ನಾಯ್ತೊಟ್ಟು ಅವರು ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಾದ್ಯಮಕ್ಕೆ ತಿಳಿಸಿದ್ದಾರೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಗೆ ಬೆದರಿಕೆಯೊಡ್ಡಿ ಹಣ ಸುಲಿಗೆ – ಹೊಯ್ಸಳ ವಾಹನದ ಮೂವರು ಪೊಲೀಸರ ಬಂಧನ.!

Published

on

​ಮಂಗಳೂರು: ನೆಹರು ಮೈದಾನದಲ್ಲಿ ವಾಕಿಂಗ್ ಮಾಡುತ್ತಿದ್ದ ಸಾರ್ವಜನಿಕರೊಬ್ಬರನ್ನು ಬೆದರಿಸಿ ಹಣ ಸುಲಿಗೆ ಮಾಡಿದ ಆರೋಪದಡಿ ಹೊಯ್ಸಳ ವಾಹನದಲ್ಲಿದ್ದ ಮೂವರು ಪೊಲೀಸ್ ಸಿಬ್ಬಂದಿಯನ್ನು ಪಾಂಡೇಶ್ವರ ಠಾಣೆಯ ಪೊಲೀಸರು ಬಂಧಿಸಿ, ಜೈಲಿಗಟ್ಟಿರುವ ಶ್ಲಾಘನೀಯ ಹಾಗೂ ರೋಚಕ ಘಟನೆ ಬೆಳಕಿಗೆ ಬಂದಿದೆ.
​ಬಂಧಿತ ಆರೋಪಿಗಳನ್ನು ಬಾಗಲಕೋಟೆ ಮೂಲದ ಈರಣ್ಣ ಬೆನ್ನಿ, ಸುಳ್ಯ ಮೂಲದ ಉಮಾನಾಥ ಹಾಗೂ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಮೂಲದ ಶಿವರಾಜ್ ಎಂದು ಗುರುತಿಸಲಾಗಿದೆ.
​ವಿಟ್ಲ ಮುಡ್ನೂರು ಗ್ರಾಮದ ನಿವಾಸಿಯಾಗಿದ್ದು, ಪ್ರಸ್ತುತ ಪಾಂಡೇಶ್ವರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಎಲೆಕ್ಟ್ರೀಷಿಯನ್ ನೀಡಿದ ದೂರಿನನ್ವಯ ಈ ಕ್ರಮ ಜರುಗಿಸಲಾಗಿದೆ.

​ ಸತತ ಕಿರುಕುಳ, ಬೆದರಿಕೆ ಒಡ್ಡಿ ಸುಲಿಗೆ:
ಕಳೆದ ಆಗಸ್ಟ್ 25ರಂದು ರಾತ್ರಿ ಸಂತ್ರಸ್ತ ವ್ಯಕ್ತಿ ನೆಹರು ಮೈದಾನದಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಹೊಯ್ಸಳ ವಾಹನದಲ್ಲಿ ಬಂದ ಸಿಬ್ಬಂದಿಗಳಾದ ಈರಣ್ಣ ಬೆನ್ನಿ ಮತ್ತು ಶಿವರಾಜ್, ಸಕಾರಣವಿಲ್ಲದೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ವ್ಯಕ್ತಿಯ ಮೊಬೈಲ್ ಕಸಿದು ಕವರ್‌ನಲ್ಲಿದ್ದ 300 ರೂಪಾಯಿ ತೆಗೆದುಕೊಂಡು, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಳುಹಿಸಿದ್ದರು.
​ಇದಾಗಿ ಎರಡು ದಿನಗಳ ಬಳಿಕ ಮತ್ತೆ ಅದೇ ವ್ಯಕ್ತಿಯನ್ನು ತಡೆದು ನಿಲ್ಲಿಸಿದ ಆರೋಪಿಗಳು, ಅವರ ಬೈಕ್ ಕೀ ಹಾಗೂ ಎಟಿಎಂ ಕಾರ್ಡ್ ಕಿತ್ತುಕೊಂಡಿದ್ದರು. ಎಟಿಎಂನಲ್ಲಿ ಹಣವಿಲ್ಲ ಎಂದಾಗ, ಬಲವಂತವಾಗಿ ಎಟಿಎಂ ಕೇಂದ್ರಕ್ಕೆ ಕರೆದೊಯ್ದು 2,000 ರೂಪಾಯಿ ಡ್ರಾ ಮಾಡಿಸಿಕೊಂಡು ಸುಲಿಗೆ ಮಾಡಿದ್ದರು. ಹಣ ನೀಡದಿದ್ದರೆ ಸುಳ್ಳು ಕೇಸ್ ಹಾಕಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಒಡ್ಡಿದ್ದರು.

​ ನವೆಂಬರ್ 4ರಂದು ಮರುಕಳಿಸಿದ ದೌರ್ಜನ್ಯ:
ನವೆಂಬರ್ 4ರಂದು ರಾತ್ರಿ ವ್ಯಕ್ತಿ ಮತ್ತೆ ವಾಕಿಂಗ್ ಮಾಡುತ್ತಿದ್ದಾಗ ಈರಣ್ಣ ಮತ್ತು ಶಿವರಾಜ್ ತಡೆದು, ಮೊಬೈಲ್ ಹಾಗೂ ಬೈಕ್ ಕೀ ಕಸಿದುಕೊಂಡಿದ್ದಾರೆ. ಬಲವಂತವಾಗಿ ಹೊಯ್ಸಳ ವಾಹನದಲ್ಲಿ ಕುಳ್ಳಿರಿಸಿ “ಫೈನ್ ಕಟ್ಟದಿದ್ದರೆ ಬಿಡುವುದಿಲ್ಲ” ಎಂದು ಗದರಿಸಿ ಪಾಂಡೇಶ್ವರ ಕಡೆಗೆ ಕರೆದೊಯ್ದು ದಬಾಯಿಸಿದ್ದಾರೆ. ಬಳಿಕ ವ್ಯಕ್ತಿಯನ್ನು ಅಲ್ಲಿಯೇ ಬಿಟ್ಟು, ನಾಳೆ ಠಾಣೆಗೆ ಬರುವಂತೆ ಹೇಳಿ ಅವರ ಬೈಕನ್ನು ಆರೋಪಿ ಶಿವರಾಜ್ ಚಲಾಯಿಸಿಕೊಂಡು ಹೋಗಿದ್ದ. ಅದೇ ರಾತ್ರಿ 10:30ರ ಸುಮಾರಿಗೆ ಉಮಾನಾಥ ಎಂಬ ಮತ್ತೊಬ್ಬ ಸಿಬ್ಬಂದಿ ಕರೆ ಮಾಡಿ, ಬೈಕ್ ಹಿಂತಿರುಗಿಸಲು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ.
​ರಕ್ಷಣೆ ನೀಡಬೇಕಾದ ಪೊಲೀಸರೇ ಈ ರೀತಿ ನಿರಂತರವಾಗಿ ಬೆದರಿಸಿ ಹಣ ಸುಲಿಗೆ ಮಾಡುತ್ತಿರುವುದರಿಂದ ಬೇಸತ್ತ ವ್ಯಕ್ತಿ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳೇ ಆದ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.

Continue Reading

Bantawala

ಪುತ್ತೂರು: ಕೆದಿಲ ಸಹಕಾರಿ ಸಂಘದಲ್ಲಿ ಕೋಟ್ಯಂತರ ರೂ. ಅಕ್ರಮ ಆರೋಪ – CEO ಸೇರಿ ಇಬ್ಬರ ವಿರುದ್ಧ FIR

Published

on

ಪುತ್ತೂರು/ಬಂಟ್ವಾಳ: ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘ (ರಿ) ಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಮೇಲೆ ಸಂಘದ CEO ಸೇರಿದಂತೆ ಇಬ್ಬರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಸಂಘದ ಅಧ್ಯಕ್ಷ ಪದ್ಮನಾಭ ಭಟ್ ಅವರು ನ್ಯಾಯಾಲಯಕ್ಕೆ ಖಾಸಗಿ ದೂರು (PCR) ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದಂತೆ ಪುತ್ತೂರು ನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಆರೋಪಿಗಳು:

ಕೇಶವ ಗೌಡ ಕೆ (A1) – CEO, ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘ, ಕೆದಿಲ

ಸಮೀರಾ ರಿಯಾಝ್ (A2) – ಮಂಗಳೂರು, ಕದ್ರಿ ನಿವಾಸಿ

BNS ಕಾಯ್ದೆ ಅಡಿ ಪ್ರಕರಣ: ಭಾರತೀಯ ನ್ಯಾಯ ಸಂಹಿತಾ (BNS) 2023 ರ ಕಲಂ 316(5), 318(4), 336(3), 340(2) r/w 3(5) – ಅಂದರೆ ನಂಬಿಕೆ ದ್ರೋಹ, ವಂಚನೆ, ನಕಲಿ ದಾಖಲೆ ಸೃಷ್ಟಿ ಮತ್ತು ಸಂಚು ರೂಪಿಸಿ ಅಪರಾಧ ಎಸಗಿದ ಆರೋಪದಡಿ FIR ದಾಖಲಾಗಿದೆ.

ದೂರಿನಲ್ಲಿ ಏನಿದೆ?

ದೂರಿನ ಪ್ರಕಾರ, 01/04/2024 ರಿಂದ 31/03/2026 ರ ಅವಧಿಯಲ್ಲಿ ಸಂಘದ ವಹಿವಾಟಿನಲ್ಲಿ ಅಕ್ರಮ ನಡೆದಿದೆ.

ಸಂಘದಲ್ಲಿ ಒಟ್ಟು ರೂ. 31,21,84,821/- ಮೊತ್ತದ ವಹಿವಾಟಿನಲ್ಲಿ ಲೋಪದೋಷಗಳು ಕಂಡುಬಂದಿವೆ ಎಂದು ಲೆಕ್ಕ ಪರಿಶೋಧನೆಯಲ್ಲಿ ತಿಳಿದು ಬಂದಿದೆ.

2025-26 ನೇ ಸಾಲಿನ ಸಾಲ ವಿತರಣೆಯನ್ನು ಪರಿಶೀಲಿಸಿದಾಗ ಸುಮಾರು ರೂ. 6,86,00,000/- ದುರುಪಯೋಗವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

CEO ಕೇಶವ ಗೌಡ ಅವರು CoBank ಸಾಫ್ಟ್‌ವೇರ್‌ನಲ್ಲಿ ಸದಸ್ಯರ ಹೆಸರಿನಲ್ಲಿ ಇಲ್ಲದ ಸಾಲಗಳನ್ನು ಸೃಷ್ಟಿಸಿ, ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿದ್ದಾರೆ ಎಂಬುದು ಆರೋಪ.

ಯೋಗೀಶ್ ಆಚಾರ್ಯ ಎಂಬುವವರ ಮೂಲಕ ಪರಿಚಯವಾದ ಸಮೀರಾ ರಿಯಾಝ್ ಅವರ ಹೆಸರಿನಲ್ಲಿ ರೂ. 1,67,00,000/- ಹಾಗೂ ಒಟ್ಟು ರೂ. 7,26,00,000/- ವರೆಗೆ ಸಾಲ ಮಂಜೂರು ಮಾಡಿ, ನಂತರ ಅವರಿಂದ ರೂ. 6,96,00,000/- ವನ್ನು ಮರುಪಾವತಿಯ ಹೆಸರಿನಲ್ಲಿ ವಸೂಲಿ ಮಾಡಿ ಹೊಂದಾಣಿಕೆ ಮಾಡಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಂಘದ ಆಡಳಿತ ಮಂಡಳಿ ಮತ್ತು ಸಾಲಗಾರರ ಸಭೆಯ ನಡಾವಳಿ ಪುಸ್ತಕದಲ್ಲಿ ತಿದ್ದುಪಡಿ ಮಾಡಿ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದೂ ಆರೋಪಿಸಲಾಗಿದೆ.

ಈ ಬಗ್ಗೆ ಸಂಘದ ಆಡಳಿತ ಮಂಡಳಿ ಪರಿಶೀಲನೆ ನಡೆಸಿ, ಬ್ಯಾಂಕಿನ ನಿರ್ದೇಶಕರಿಗೆ ದೂರು ನೀಡಿತ್ತು. ನಂತರ ಅಧ್ಯಕ್ಷರು ನ್ಯಾಯಾಲಯದ ಮೊರೆ ಹೋಗಿದ್ದರು.

ಪ್ರಕರಣವನ್ನು ಪುತ್ತೂರು ನ್ಯಾಯಾಲಯಕ್ಕೆ 27/10/2026 ರಂದು ಸಂಜೆ 6:30 ಕ್ಕೆ ಹಾಜರುಪಡಿಸಲಾಗಿದ್ದು, ತನಿಖೆಯನ್ನು ASI ವಾಸು ನಾಯ್ಕ ಎಂ ಅವರು ನಡೆಸುತ್ತಿದ್ದಾರೆ. ಪಿಸಿ ಹೆಚ್.ಸಿ ಶಿವಕುಮಾರ್ ನಾಯ್ಕ್ (2278) ಅವರು FIR ಅನ್ನು ನ್ಯಾಯಾಲಯಕ್ಕೆ ತಲುಪಿಸಿದ್ದಾರೆ.

ಸಮೀರಾ ರಿಯಾಜ್ ಅವರು ಪ್ರತಿದಿನ ಕೇಶವ ಗೌಡ ಅವರಿಗೆ ಫೋನ್ ಕರೆ ಮಾಡಿ “ನನಗೆ ಹಣ ನೀಡಬೇಕು, ನೀಡದಿದ್ದರೆ ನಿನ್ನ ವಿರುದ್ಧ ಸುಳ್ಳು ಕಥೆ ಕಟ್ಟಿ ಮಾನ ಹರಾಜು ಹಾಕುತ್ತೇನೆ” ಎಂದು ಮಾನಸಿಕ ಕಿರುಕುಳ ಮತ್ತು ಬ್ಲಾಕ್‌ಮೇಲ್ ಮಾಡಿದ್ದಾರೆ. ಇದಕ್ಕೆ ಹೆದರಿ ಕೇಶವ ಗೌಡ ಅವರು ಹಂತ ಹಂತವಾಗಿ ಒಟ್ಟು ರೂ. 7,26,00,000/- ವನ್ನು ಸಮೀರಾ ರಿಯಾಜ್ ಅವರಿಗೆ ವರ್ಗಾಯಿಸಿರುವುದಾಗಿ ತಿಳಿಸಿದ್ದಾರೆ ಎಂದು FIR ನಲ್ಲಿ ಉಲ್ಲೇಖವಿದೆ.

4. ನಕಲಿ ದಾಖಲೆ ಸೃಷ್ಟಿಯ ಆರೋಪ – ಅತ್ಯಂತ ಗಂಭೀರ ಅಂಶ:
ಪಿರ್ಯಾದಿದಾರರು ಮತ್ತು ಬ್ಯಾಂಕಿನ ನಿರ್ದೇಶಕರು ಬ್ಯಾಂಕಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದಾಗ ಇನ್ನಷ್ಟು ಅಕ್ರಮಗಳು ಬಯಲಾಗಿವೆ ಎಂದು ದೂರಿನಲ್ಲಿ ಹೇಳಲಾಗಿದೆ.

ಕೇಶವ ಗೌಡ ಕೆ ಅವರು ಪಿರ್ಯಾದಿದಾರರ ಸಹಕಾರಿ ಸಂಘಕ್ಕೆ ಮೋಸ ಮತ್ತು ವಂಚನೆ ಮಾಡುವ ಉದ್ದೇಶದಿಂದ ಸಾಲಗಾರರ ಸಾಲದ ಅರ್ಜಿಗಳನ್ನು ನಕಲಿಯಾಗಿ ಸೃಷ್ಟಿಸಿ, ಮಂಜೂರಾತಿ ಮಾಡಿರುವ ಆಡಳಿತ ಮಂಡಳಿಯ ಸಭಾ ನಡಾವಳಿ ಪುಸ್ತಕದ ಹಾಳೆಗಳನ್ನು, ಸಾಲಗಾರರ ಅರ್ಜಿ ಮತ್ತು ಪೂರಕ ದಾಖಲೆಗಳನ್ನು ತಿದ್ದುಪಡಿ ಮಾಡಿ, ನಡಾವಳಿಗೆ ಅಧ್ಯಕ್ಷರು ಮತ್ತು ನಿರ್ದೇಶಕರು ಸಹಿ ಮಾಡಿದ ನಂತರ ತನ್ನ ಅನುಕೂಲಕ್ಕೆ ಹೆಚ್ಚುವರಿಯಾಗಿ ಪಿರ್ಯಾದಿದಾರರ ಅನುಮತಿ ಇಲ್ಲದೆ ಬರೆದು ನಕಲಿ ಸಹಿ ಮಾಡಿದ್ದಾರೆ.

ಸಾಲದ ಅರ್ಜಿಯಲ್ಲಿ ವಕೀಲರ ಲೀಗಲ್ ಒಪಿನಿಯನ್ ಪತ್ರವನ್ನು ನಕಲಿಯಾಗಿ ಸೃಷ್ಟಿಸಿ, ಹಳೆಯ ಲೀಗಲ್ ಒಪಿನಿಯನ್ ಪತ್ರಗಳನ್ನು ಹೊಸ ಸಾಲಗಾರರ ಅರ್ಜಿಗೆ ಇಟ್ಟು ವಕೀಲರ ನಕಲಿ ಸಹಿ ಹಾಕಿದ್ದಾರೆ.
ಸಂಘದ ಕಾನೂನಿನ ಪ್ರಕಾರ ಮಂಜೂರು ಮಾಡಿದ ಸಾಲಗಳನ್ನು ತದನಂತರ ತಿದ್ದುಪಡಿ ಮಾಡಿ ಫೋರ್ಜರಿ ಸಹಿಗಳನ್ನು ಹಾಕಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ.

ಅಷ್ಟೇ ಅಲ್ಲ, ಸಭಾ ನಡಾವಳಿ ಪುಸ್ತಕದಲ್ಲಿ ದಿನಾಂಕಗಳನ್ನು, ಮೊತ್ತಗಳನ್ನು ತಿದ್ದುಪಡಿ ಮಾಡಿ, ಯಾವುದೇ ಇನಿಷಿಯಲ್ ಕೂಡ ಹಾಕದೇ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಪಿರ್ಯಾದಿದಾರರು ಸಹಿ ಮಾಡಿದ ನಂತರ ತಾವೇ ಹೆಚ್ಚುವರಿಯಾಗಿ ನಡಾವಳಿಗಳನ್ನು ಬರೆದಿರುವುದು ಕಂಡುಬಂದಿದೆ.

ಈ ಕೃತ್ಯವನ್ನು 2024 ರಿಂದಲೇ ಕೇಶವ ಗೌಡ ಅವರು ಸಮೀರಾ ರಿಯಾಜ್ ರವರಿಗೆ ಹಣ ನೀಡುವ ಉದ್ದೇಶದಿಂದ ಮಾಡುತ್ತಿರುವುದು ಕಂಡುಬಂದಿದೆ ಎಂದು FIR ನಲ್ಲಿ ವಿವರಿಸಲಾಗಿದೆ.

ಈ ಎಲ್ಲಾ ಕೃತ್ಯದಿಂದ ಪಿರ್ಯಾದಿದಾರರ ಸಂಘಕ್ಕೆ ರೂ. 6,86,00,000/- ವಂಚನೆಯಾಗಿದೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಲಾಗಿತ್ತು. ಪೊಲೀಸರು ಪ್ರಕರಣವನ್ನು Investigation ಹಂತಕ್ಕೆ ತೆಗೆದುಕೊಂಡಿದ್ದು, ತನಿಖೆ ಮುಂದುವರಿದಿದೆ.

Continue Reading

complaint

ವಿಟ್ಲ: ಪರವಾನಿಗೆ ಇಲ್ಲದೆ ವಸತಿ ಪ್ರದೇಶದಲ್ಲಿ ಹೋಟೆಲ್ ನಿರ್ಮಾಣ; ಪಟ್ಟಣ ಪಂಚಾಯತ್‌ನಿಂದ ಕಟ್ಟುನಿಟ್ಟಿನ ನೋಟೀಸ್ ಜಾರಿ! ಮುಂದುವರಿಯುತ್ತಿರುವ ಕಾಮಗಾರಿ ?

Published

on

ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಅಧಿಕೃತ ಅನುಮತಿ ಪಡೆಯದೆ, ವಸತಿ ಉದ್ದೇಶದ ಜಮೀನಿನಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಶೀಟ್ ಅಳವಡಿಸಿ ಹೋಟೆಲ್ ನಿರ್ಮಾಣ ಮಾಡುತ್ತಿರುವ ಅನಧಿಕೃತ ಕಾಮಗಾರಿಯ ವಿರುದ್ಧ ಪಟ್ಟಣ ಪಂಚಾಯತ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಕಾಮಗಾರಿ ಮಾತ್ರ ಸದ್ದಿಲ್ಲದೆ ನಡೆಯುತ್ತಲೇ ಇದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಘಟನೆಯ ವಿವರ:

ವಿಟ್ಲದ ಅಡ್ಡದಬೀದಿ ನಿವಾಸಿ ಶ್ರೀ ಸಂತೋಷ್ ಕುಮಾರ್ ಅವರು ತಮ್ಮ ಮನೆಯ ಹತ್ತಿರ ವಸತಿ ಉದ್ದೇಶದ ಜಮೀನಿನಲ್ಲಿ ಶೀಟ್ ಅಳವಡಿಸಿ ಹೋಟೆಲ್ ಹಾಗೂ ವಾಣಿಜ್ಯ ಉದ್ದೇಶದ ಚಟುವಟಿಕೆಗಳನ್ನು ನಡೆಸುತ್ತಿದ್ದು, ಇದರಿಂದ ಸದರಿ ಪ್ರದೇಶ ಕಲುಷಿತಗೊಳ್ಳುತ್ತಿದೆ ಎಂದು ಸ್ಥಳೀಯರಾದ ಶ್ರೀ ಅಬ್ದುಲ್ ರವರು 2026ರ ಆಗಸ್ಟ್ 04 ರಂದು ವಿಟ್ಲ ಪಟ್ಟಣ ಪಂಚಾಯತ್‌ಗೆ ದೂರು ನೀಡಿದ್ದರು.

ದೂರಿನ ಮೇರೆಗೆ ಎಚ್ಚೆತ್ತ ಪಂಚಾಯತ್ ಆಡಳಿತವು, ತಮ್ಮ ಕಚೇರಿಯ ಕಿರಿಯ ಅಭಿಯಂತರರಿಂದ ಸ್ಥಳ ಪರಿಶೀಲನೆ ನಡೆಸಿ 2026ರ ಸೆಪ್ಟೆಂಬರ್ 01 ರಂದು ವರದಿ ಪಡೆದುಕೊಂಡಿದೆ.

ಪಂಚಾಯತ್‌ನಿಂದ ಎಚ್ಚರಿಕೆ ಹಾಗೂ ಸೂಚನೆ:

ವರದಿಯ ಆಧಾರದ ಮೇಲೆ ಶ್ರೀ ಸಂತೋಷ್ ಕುಮಾರ್ ಅವರಿಗೆ ವಿಟ್ಲ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಯು ನೋಟೀಸ್ ಜಾರಿ ಮಾಡಿದ್ದು, ಕೂಡಲೇ ಶೀಟ್ ಅಳವಡಿಸುವ ಹಾಗೂ ನಿರ್ಮಾಣ ಕೆಲಸವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ಆದರೆ ಪಟ್ಟಣ ಪಂಚಾಯತ್‌ ಕೃಪಾಕಟಾಕ್ಷದಲ್ಲಿ ಕಾಮಗಾರಿ ನಡೆಯುತ್ತಲೇ ಇದೆ ಎಂದು ದೂರುದಾರರು ಆಕ್ರೋಶಿತರಾಗಿದ್ದಾರೆ.

ಯಾವುದೇ ನಿರ್ಮಾಣ ಕಾಮಗಾರಿಯನ್ನು ಮುಂದುವರಿಸಲು ನಿಯಮಾನುಸಾರ ಸೂಕ್ತ ದಾಖಲೆಗಳೊಂದಿಗೆ ಕಚೇರಿಯಿಂದ ಪೂರ್ವಾನುಮತಿ ಪಡೆದುಕೊಳ್ಳಬೇಕು. ತಪ್ಪಿದಲ್ಲಿ, 1964ರ ಪುರಸಭಾ ಕಾಯ್ದೆಯನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನೋಟೀಸ್‌ನಲ್ಲಿ ಕಟ್ಟು ನಿಟ್ಟಾಗಿ ಎಚ್ಚರಿಕೆ ನೀಡಲಾಗಿದೆ.

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!