Connect with us

arrest

ಧರ್ಮಸ್ಥಳ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ ಮಗು ಕರುಣಿಸಿದ್ದ ಪೋಕ್ಸೋ ಪ್ರಕರಣದ ಆರೋಪಿ ಬಂಧನ

Published

on

ಧರ್ಮಸ್ಥಳ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬೆದರಿಕೆಯೊಡ್ಡಿದ್ದ ಆರೋಪಿಯನ್ನು ಧರ್ಮಸ್ಥಳ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಜಂಗಲ್ಪಲ್ಲಿ ನಿವಾಸಿ ಶ್ರೀಕಾಂತ್‌ (21) ಬಂಧಿತ ಆರೋಪಿ.

ಘಟನೆಯ ವಿವರ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಅಪ್ರಾಪ್ತ ಬಾಲಕಿಯ ಮೇಲೆ ಆರೋಪಿ ಶ್ರೀಕಾಂತ್ 2025ರ ಸೆಪ್ಟೆಂಬರ್‌-ನವೆಂಬರ್ ಅವಧಿಯಲ್ಲಿ ಬಲವಂತವಾಗಿ ಅತ್ಯಾಚಾರ ಎಸಗಿ, ಈ ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ. ಘಟನೆಯಿಂದ ಗರ್ಭಿಣಿಯಾದ ಬಾಲಕಿ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದಾಳೆ.

ಈ ಕುರಿತು ಸಂತ್ರಸ್ತೆಯ ಕಡೆಯವರು ನೀಡಿದ ದೂರಿನನ್ವಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಿನಾಂಕ 23.08.2026 ರಂದು ಅಪರಾಧ ಕ್ರಮಾಂಕ 60/2026, ಬಿಎನ್‌ಎಸ್ (BNS) ಕಲಂ 64(2)(m), 65(1), 351(2) ಹಾಗೂ ಪೋಕ್ಸೋ ಕಾಯ್ದೆಯ ಕಲಂ 4(2), 6 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು.

ಬೆಂಗೂಳೂರಿನಲ್ಲಿ ಆರೋಪಿ ಸೆರೆ: ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಳ್ಳಲು ಯತ್ನಿಸಿದ ಆರೋಪಿಯ ಪತ್ತೆಗೆ ಧರ್ಮಸ್ಥಳ ಠಾಣಾ ಪಿ.ಎಸ್.ಐ ಸಮರ್ಥ್ ಆರ್. ಗಾಣಿಗೇರ ಅವರ ನೇತೃತ್ವದಲ್ಲಿ ಹೆಚ್.ಸಿ 418 ವೃಷಭ, ಹೆಚ್.ಸಿ 369 ಮಹೇಶ್ ಹಾಗೂ ಸಿಪಿಸಿ 975 ಚರಣ್ ರಾಜ್ ಅವರನ್ನೊಳಗೊಂಡ ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿತ್ತು.

ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡವು ದಿನಾಂಕ 25.08.2026 ರಂದು ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಆರೋಪಿ ಶ್ರೀಕಾಂತ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಗೆ ಬೆದರಿಕೆಯೊಡ್ಡಿ ಹಣ ಸುಲಿಗೆ – ಹೊಯ್ಸಳ ವಾಹನದ ಮೂವರು ಪೊಲೀಸರ ಬಂಧನ.!

Published

on

​ಮಂಗಳೂರು: ನೆಹರು ಮೈದಾನದಲ್ಲಿ ವಾಕಿಂಗ್ ಮಾಡುತ್ತಿದ್ದ ಸಾರ್ವಜನಿಕರೊಬ್ಬರನ್ನು ಬೆದರಿಸಿ ಹಣ ಸುಲಿಗೆ ಮಾಡಿದ ಆರೋಪದಡಿ ಹೊಯ್ಸಳ ವಾಹನದಲ್ಲಿದ್ದ ಮೂವರು ಪೊಲೀಸ್ ಸಿಬ್ಬಂದಿಯನ್ನು ಪಾಂಡೇಶ್ವರ ಠಾಣೆಯ ಪೊಲೀಸರು ಬಂಧಿಸಿ, ಜೈಲಿಗಟ್ಟಿರುವ ಶ್ಲಾಘನೀಯ ಹಾಗೂ ರೋಚಕ ಘಟನೆ ಬೆಳಕಿಗೆ ಬಂದಿದೆ.
​ಬಂಧಿತ ಆರೋಪಿಗಳನ್ನು ಬಾಗಲಕೋಟೆ ಮೂಲದ ಈರಣ್ಣ ಬೆನ್ನಿ, ಸುಳ್ಯ ಮೂಲದ ಉಮಾನಾಥ ಹಾಗೂ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಮೂಲದ ಶಿವರಾಜ್ ಎಂದು ಗುರುತಿಸಲಾಗಿದೆ.
​ವಿಟ್ಲ ಮುಡ್ನೂರು ಗ್ರಾಮದ ನಿವಾಸಿಯಾಗಿದ್ದು, ಪ್ರಸ್ತುತ ಪಾಂಡೇಶ್ವರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಎಲೆಕ್ಟ್ರೀಷಿಯನ್ ನೀಡಿದ ದೂರಿನನ್ವಯ ಈ ಕ್ರಮ ಜರುಗಿಸಲಾಗಿದೆ.

​ ಸತತ ಕಿರುಕುಳ, ಬೆದರಿಕೆ ಒಡ್ಡಿ ಸುಲಿಗೆ:
ಕಳೆದ ಆಗಸ್ಟ್ 25ರಂದು ರಾತ್ರಿ ಸಂತ್ರಸ್ತ ವ್ಯಕ್ತಿ ನೆಹರು ಮೈದಾನದಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಹೊಯ್ಸಳ ವಾಹನದಲ್ಲಿ ಬಂದ ಸಿಬ್ಬಂದಿಗಳಾದ ಈರಣ್ಣ ಬೆನ್ನಿ ಮತ್ತು ಶಿವರಾಜ್, ಸಕಾರಣವಿಲ್ಲದೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ವ್ಯಕ್ತಿಯ ಮೊಬೈಲ್ ಕಸಿದು ಕವರ್‌ನಲ್ಲಿದ್ದ 300 ರೂಪಾಯಿ ತೆಗೆದುಕೊಂಡು, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಳುಹಿಸಿದ್ದರು.
​ಇದಾಗಿ ಎರಡು ದಿನಗಳ ಬಳಿಕ ಮತ್ತೆ ಅದೇ ವ್ಯಕ್ತಿಯನ್ನು ತಡೆದು ನಿಲ್ಲಿಸಿದ ಆರೋಪಿಗಳು, ಅವರ ಬೈಕ್ ಕೀ ಹಾಗೂ ಎಟಿಎಂ ಕಾರ್ಡ್ ಕಿತ್ತುಕೊಂಡಿದ್ದರು. ಎಟಿಎಂನಲ್ಲಿ ಹಣವಿಲ್ಲ ಎಂದಾಗ, ಬಲವಂತವಾಗಿ ಎಟಿಎಂ ಕೇಂದ್ರಕ್ಕೆ ಕರೆದೊಯ್ದು 2,000 ರೂಪಾಯಿ ಡ್ರಾ ಮಾಡಿಸಿಕೊಂಡು ಸುಲಿಗೆ ಮಾಡಿದ್ದರು. ಹಣ ನೀಡದಿದ್ದರೆ ಸುಳ್ಳು ಕೇಸ್ ಹಾಕಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಒಡ್ಡಿದ್ದರು.

​ ನವೆಂಬರ್ 4ರಂದು ಮರುಕಳಿಸಿದ ದೌರ್ಜನ್ಯ:
ನವೆಂಬರ್ 4ರಂದು ರಾತ್ರಿ ವ್ಯಕ್ತಿ ಮತ್ತೆ ವಾಕಿಂಗ್ ಮಾಡುತ್ತಿದ್ದಾಗ ಈರಣ್ಣ ಮತ್ತು ಶಿವರಾಜ್ ತಡೆದು, ಮೊಬೈಲ್ ಹಾಗೂ ಬೈಕ್ ಕೀ ಕಸಿದುಕೊಂಡಿದ್ದಾರೆ. ಬಲವಂತವಾಗಿ ಹೊಯ್ಸಳ ವಾಹನದಲ್ಲಿ ಕುಳ್ಳಿರಿಸಿ “ಫೈನ್ ಕಟ್ಟದಿದ್ದರೆ ಬಿಡುವುದಿಲ್ಲ” ಎಂದು ಗದರಿಸಿ ಪಾಂಡೇಶ್ವರ ಕಡೆಗೆ ಕರೆದೊಯ್ದು ದಬಾಯಿಸಿದ್ದಾರೆ. ಬಳಿಕ ವ್ಯಕ್ತಿಯನ್ನು ಅಲ್ಲಿಯೇ ಬಿಟ್ಟು, ನಾಳೆ ಠಾಣೆಗೆ ಬರುವಂತೆ ಹೇಳಿ ಅವರ ಬೈಕನ್ನು ಆರೋಪಿ ಶಿವರಾಜ್ ಚಲಾಯಿಸಿಕೊಂಡು ಹೋಗಿದ್ದ. ಅದೇ ರಾತ್ರಿ 10:30ರ ಸುಮಾರಿಗೆ ಉಮಾನಾಥ ಎಂಬ ಮತ್ತೊಬ್ಬ ಸಿಬ್ಬಂದಿ ಕರೆ ಮಾಡಿ, ಬೈಕ್ ಹಿಂತಿರುಗಿಸಲು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ.
​ರಕ್ಷಣೆ ನೀಡಬೇಕಾದ ಪೊಲೀಸರೇ ಈ ರೀತಿ ನಿರಂತರವಾಗಿ ಬೆದರಿಸಿ ಹಣ ಸುಲಿಗೆ ಮಾಡುತ್ತಿರುವುದರಿಂದ ಬೇಸತ್ತ ವ್ಯಕ್ತಿ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳೇ ಆದ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.

Continue Reading

arrest

ಬಿಸಲೆ ಘಾಟಿಯಲ್ಲಿ ಗರ್ಭಿಣಿ ಯುವತಿಗೆ ಹಲ್ಲೆ ನಡೆಸಿ ಚರಂಡಿಗೆ ಎಸೆದ ಪ್ರಿಯಕರ..ನರರಾಕ್ಷಸ ಆರೋಪಿ ಬಂಧನ.

Published

on

ಮಂಗಳೂರು : ಹಾಸನ ಜಿಲ್ಲೆಯ ಯಸಳೂರು ಮಣಿಮುಂಡ ನಿವಾಸಿ ಯುವತಿಯ ಮೇಲೆ ಬಿಸಿಲೆ ಘಾಟಿಯ ನಿರ್ಜನ ಪ್ರದೇಶದಲ್ಲಿ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೊಲೀಸರು ಶೀಘ್ರ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆಗಾಗಿ ಹಾಸನ ಜಿಲ್ಲೆಯ ಯಸಳೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

ಘಟನೆಯ ವಿವರ:
ಕಡಬ ತಾಲೂಕಿನ ಕೊಣಾಜೆ ಗ್ರಾಮದ ಪ್ರಸಾದ್ ಎಂಬಾತನೊಂದಿಗೆ ಸಂತ್ರಸ್ತ ಯುವತಿಯು ಕಳೆದ ಸುಮಾರು 3 ವರ್ಷಗಳಿಂದ ಸ್ನೇಹ ಹಾಗೂ ಪ್ರೇಮ ಸಂಬಂಧ ಹೊಂದಿದ್ದಳು. ದಿನಾಂಕ 04-11-2026 ರಂದು ಸಂಜೆ ಆರೋಪಿ ಪ್ರಸಾದ್, ಯುವತಿಯನ್ನು ಉಪ್ಪಿನಂಗಡಿಯಿಂದ ತನ್ನ ಕಾರಿನಲ್ಲಿ ಕರೆದುಕೊಂಡು ಕುಲ್ಕುಂದ ಮಾರ್ಗವಾಗಿ ಬಿಸಿಲೆ ಘಾಟಿ ರಸ್ತೆಯಲ್ಲಿ ಕರೆದೊಯ್ದಿದ್ದಾನೆ.

ರಾತ್ರಿ ವೇಳೆ ಬಿಸಿಲೆ ಘಾಟಿಯ ಕಾಡಿನ ಮಧ್ಯೆ ದಾರಿಹೋಕರ ಗಮನಕ್ಕೆ ಬಾರದ ಸ್ಥಳದಲ್ಲಿ, ಯುವತಿಯನ್ನು ಕೊಲೆ ಮಾಡುವ ಸ್ಪಷ್ಟ ಉದ್ದೇಶದಿಂದ ಕಬ್ಬಿಣದ ರಾಡ್‌ನಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ತೀವ್ರತೆಗೆ ಯುವತಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ಆಕೆಯನ್ನು ಅಲ್ಲಿಯೇ ಚರಂಡಿಗೆ ಎಸೆದು ಆರೋಪಿ ಕಾಲ್ಕಿತ್ತಿದ್ದಾನೆ.

ಅದ್ಭುತ ಜಾಗೃತಿ ಮತ್ತು ದೂರು ಸಲ್ಲಿಕೆ:
ರಾತ್ರಿಯಿಡೀ ಕಾಡಿನ ನಡುವಿನ ಚರಂಡಿಯಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಗರ್ಭಿಣಿ ಯುವತಿಗೆ, ಮರುದಿನ (05-11-2026) ಬೆಳಿಗ್ಗೆ ಪ್ರಜ್ಞೆ ಮರಳಿದೆ. ತೀವ್ರ ಗಾಯಗಳ ನಡುವೆಯೂ ಧೈರ್ಯ ತಳೆದು ಬಸ್ ಮೂಲಕ ಸುಬ್ರಹ್ಮಣ್ಯಕ್ಕೆ ತಲುಪಿದ ಯುವತಿ, ತಕ್ಷಣವೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಹಾಗೂ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಪೊಲೀಸ್ ಕಾನೂನು ಕ್ರಮಗಳು:
ಎಫ್‌ಐಆರ್ ದಾಖಲು: ದೂರು ಸ್ವೀಕರಿಸಿದ ಸುಬ್ರಹ್ಮಣ್ಯ ಪೊಲೀಸರು ತಕ್ಷಣವೇ ಜೀರೊ ಎಫ್‌ಐಆರ್ (ಅ.ಕ್ರ: Zero-1/2026) ದಾಖಲಿಸಿಕೊಂಡಿದ್ದಾರೆ.

ಭಾರತೀಯ ನ್ಯಾಯ ಸಂಹಿತೆ (BNS 2023) ಕಾಯ್ದೆಯಡಿ ಪ್ರಕರಣ:

Section 118(1): ಅಪಾಯಕಾರಿ ಆಯುಧಗಳಿಂದ ತೀವ್ರ ಗಾಯಗೊಳಿಸುವುದು/ಹಲ್ಲೆ.

Section 109(1): ಕೊಲೆ ಯತ್ನ (Attempt to Murder).
Supreme Today AI

ಪ್ರಕರಣ ವರ್ಗಾವಣೆ ಮತ್ತು ಬಂದನ: ಕೃತ್ಯ ನಡೆದ ಸ್ಥಳವು ಹಾಸನ ಜಿಲ್ಲೆಯ ವ್ಯಾಪ್ತಿಗೆ ಬರುವುದರಿಂದ, ಪ್ರಕರಣವನ್ನು ಮುಂದಿನ ಕಾನೂನು ತನಿಖೆಗಾಗಿ ಹಾಸನ ಜಿಲ್ಲೆಯ ಯಸಳೂರು ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ಆರೋಪಿ ವಶಕ್ಕೆ: ಸುಬ್ರಹ್ಮಣ್ಯ ಪೊಲೀಸರು ಆರೋಪಿ ಪ್ರಸಾದ್‌ನನ್ನು ತ್ವರಿತವಾಗಿ ವಶಕ್ಕೆ ಪಡೆದು, ಯಸಳೂರು ಠಾಣೆಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಆರೋಪಿಗೆ ಬೇರೆ ಮದುವೆ ನಿಶ್ಚಯವಾಗಿದ್ದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾನೆ ಎಂಬ ಆರೋಪಗಳಿದ್ದು, ಯಸಳೂರು ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Continue Reading

arrest

ಮಂಗಳೂರು: 3.8 ಕೆ.ಜಿ. ಗಾಂಜಾ ಸಹಿತ ಪುತ್ತೂರಿನ ಯುವಕ ಅರೆಸ್ಟ್!

Published

on

ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪುತ್ತೂರು ತಾಲೂಕಿನ 23 ವರ್ಷದ ಯುವಕನನ್ನು ಪಣಂಬೂರು ಪೊಲೀಸರು ಬಂಧಿಸಿದ್ದು, ಆತನಿಂದ ಸುಮಾರು 3 ಕೆ.ಜಿ. 800 ಗ್ರಾಂ ಗಾಂಜಾ, ಮೊಬೈಲ್ ಫೋನ್ ಹಾಗೂ ಗಾಂಜಾ ಸಾಗಾಟಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.

ನವೆಂಬರ್ 5ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆ ಕ್ರಾಸ್ ರೈಲ್ವೇ ಬ್ರಿಡ್ಜ್ ಬಳಿ ಗಾಂಜಾ ಮಾರಾಟಕ್ಕೆ ತಂದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಉತ್ತರ ಉಪವಿಭಾಗದ ಎಸಿಪಿ ತಂಡ ಹಾಗೂ ಪಣಂಬೂರು ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದರು.

ಈ ವೇಳೆ ಪುತ್ತೂರು ತಾಲೂಕಿನ ಪಡ್ನೂರು ಅಂಚೆ ವ್ಯಾಪ್ತಿಯ ಪಡ್ಡಾಯೂರ್ ಹೌಸ್ ನಿವಾಸಿ ಮೊಹಮ್ಮದ್ ನಿಸಾರ್ (23) ಎಂಬಾತನನ್ನು ಬಂಧಿಸಲಾಯಿತು. ಆತನ ಬಳಿಯಿದ್ದ ಸುಮಾರು 3 ಕೆ.ಜಿ. 800 ಗ್ರಾಂ ಗಾಂಜಾ (ಅಂದಾಜು ಮೌಲ್ಯ ₹1.90 ಲಕ್ಷ), ₹4 ಸಾವಿರ ಮೌಲ್ಯದ ಮೊಬೈಲ್ ಫೋನ್ ಹಾಗೂ ಗಾಂಜಾ ಸಾಗಾಟಕ್ಕೆ ಬಳಸಿದ್ದ ಕೆಎಲ್ 14 1662 ನೋಂದಣಿ ಸಂಖ್ಯೆಯ ಕಾರನ್ನು (ಅಂದಾಜು ಮೌಲ್ಯ ₹2 ಲಕ್ಷ) ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯು ಸುರತ್ಕಲ್, ಪಣಂಬೂರು, ಕಾವೂರು ಸೇರಿದಂತೆ ಮಂಗಳೂರು ನಗರದ ವಿವಿಧ ಪ್ರಮುಖ ಸ್ಥಳಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದನೆಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಈ ಹಿಂದೆ ಕೂಡ ಹಲವು ಬಾರಿ ಮಂಗಳೂರು ನಗರದಲ್ಲಿ ಗಾಂಜಾ ಮಾರಾಟ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಶಪಡಿಸಿಕೊಂಡ ಗಾಂಜಾ, ಮೊಬೈಲ್ ಹಾಗೂ ಕಾರಿನ ಒಟ್ಟು ಅಂದಾಜು ಮೌಲ್ಯ ₹3.94 ಲಕ್ಷವಾಗಿದೆ. ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 137/2026ರಂತೆ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(C), 20(b)(ii)(A) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!