INCIDENT
ಭೀಕರ ಬಿರುಗಾಳಿಗೆ ಆಕಾಶದೆತ್ತರಕ್ಕೆ ಹಾರಿದ ವ್ಯಕ್ತಿ: ಬೆಚ್ಚಿಬೀಳಿಸುವ ವಿಡಿಯೋ ವೈರಲ್!
- Share
- Tweet /home/u338848369/domains/deevatigenews.com/public_html/wp-content/plugins/mvp-social-buttons/mvp-social-buttons.php on line 72
https://deevatigenews.com/wp-content/uploads/2026/05/88-1-1000x600.jpg&description=ಭೀಕರ ಬಿರುಗಾಳಿಗೆ ಆಕಾಶದೆತ್ತರಕ್ಕೆ ಹಾರಿದ ವ್ಯಕ್ತಿ: ಬೆಚ್ಚಿಬೀಳಿಸುವ ವಿಡಿಯೋ ವೈರಲ್!', 'pinterestShare', 'width=750,height=350'); return false;" title="Pin This Post">
ಲಕ್ನೋ: ಉತ್ತರ ಪ್ರದೇಶದಲ್ಲಿ ಬೀಸುತ್ತಿರುವ ಭೀಕರ ಬಿರುಗಾಳಿಯು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಇದೀಗ ವ್ಯಕ್ತಿಯೊಬ್ಬ ಗಾಳಿಯಲ್ಲಿ ಸುಮಾರು 40 ಅಡಿಗೂ ಹೆಚ್ಚು ಎತ್ತರಕ್ಕೆ ಹಾರಿದ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಹೋರ್ಡಿಂಗ್ ಹಿಡಿದಿದ್ದ ವ್ಯಕ್ತಿ ಗಾಳಪಾಲು! ಬರೇಲಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ಬಲವಾದ ಬಿರುಗಾಳಿ ಬೀಸುತ್ತಿದ್ದ ವೇಳೆ ದೊಡ್ಡ ಹೋರ್ಡಿಂಗ್ ಒಂದನ್ನು ಹಿಡಿದು ನಿಂತಿದ್ದ ವ್ಯಕ್ತಿಯೊಬ್ಬರು ಹೋರ್ಡಿಂಗ್ ಸಮೇತ ಗಾಳಿಯಲ್ಲಿ ಹಾರಿ ಹೋಗಿದ್ದಾರೆ. ಸುಮಾರು 40 ಅಡಿ ಎತ್ತರಕ್ಕೆ ವ್ಯಕ್ತಿ ಹಾರುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಸದ್ಯ ಅವರ ಪರಿಸ್ಥಿತಿ ಏನಾಗಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಉತ್ತರ ಪ್ರದೇಶದಲ್ಲಿ ಹೈ ಅಲರ್ಟ್:
ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೀಸಿದ ಬಿರುಗಾಳಿಗೆ ಈಗಾಗಲೇ ಹಲವರು ಪ್ರಾಣ ಕಳೆದುಕೊಂಡಿದ್ದು, ನೂರಾರು ಮನೆ ಹಾಗೂ ಶೆಡ್ಗಳು ನಾಶವಾಗಿವೆ.
ಬುಧವಾರದ ಘಟನೆಯ ನಂತರ ಮುನ್ನೆಚ್ಚರಿಕಾ ಕ್ರಮವಾಗಿ ಮುಂದಿನ 48 ಗಂಟೆಗಳ ಕಾಲ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.
ಜನರು ಅನಗತ್ಯವಾಗಿ ಮನೆಯಿಂದ ಹೊರಬರಬಾರದು ಹಾಗೂ ಸುರಕ್ಷಿತವಾಗಿರಬೇಕು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬಿರುಗಾಳಿಯ ಭೀಕರತೆಗೆ ಸಾಕ್ಷಿಯಾದ ಈ ವೈರಲ್ ವಿಡಿಯೋ ಈಗ ಎಲ್ಲೆಡೆ ಆತಂಕ ಮೂಡಿಸಿದೆ.



INCIDENT
2 ವಾರದಲ್ಲೇ 75 ಟನ್ ಚಿನ್ನ ಮಾರಿದ ಭಾರತ! ರೂಪಾಯಿ ಮೌಲ್ಯ ಕುಸಿತ ತಡೆಯಲು ಆರ್ಬಿಐ ಬಿಗ್ ಸ್ಟೆಪ್
ನವದೆಹಲಿ: ಮಧ್ಯಪ್ರಾಚ್ಯದಲ್ಲಿ (ವೆಸ್ಟ್ ಏಷ್ಯಾ) ಹೆಚ್ಚುತ್ತಿರುವ ಯುದ್ಧದ ಉದ್ವಿಗ್ನತೆ ಹಾಗೂ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಭಾರಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿಯ ಮೌಲ್ಯದ ಭಾರಿ ಕುಸಿತವನ್ನು ನಿಯಂತ್ರಿಸಲು ಮತ್ತು ವಿದೇಶಿ ಕರೆನ್ಸಿ ಆಸ್ತಿಗಳನ್ನು ರಕ್ಷಿಸಲು ಆರ್ಬಿಐ ತನ್ನ ಸಂಗ್ರಹದಿಂದ ಕೇವಲ ಎರಡೇ ವಾರಗಳಲ್ಲಿ ಭಾರಿ ಪ್ರಮಾಣದ ಚಿನ್ನವನ್ನು ಮಾರಾಟ ಮಾಡಿದೆ ಎಂದು ವರದಿಯಾಗಿದೆ.
ಬ್ಲೂಮ್ಬರ್ಗ್ ಎಕನಾಮಿಕ್ಸ್ ಬಿಡುಗಡೆ ಮಾಡಿರುವ ಇತ್ತೀಚಿನ ಆರ್ಥಿಕ ವಿಶ್ಲೇಷಣೆಯ ಪ್ರಕಾರ, ಮೇ 22ಕ್ಕೆ ಕೊನೆಗೊಂಡ ಎರಡು ವಾರಗಳ ಅವಧಿಯಲ್ಲಿ ರಿಸರ್ವ್ ಬ್ಯಾಂಕ್ ಸುಮಾರು 12 ಬಿಲಿಯನ್ ಡಾಲರ್ (ಅಂದಾಜು 1.14 ಲಕ್ಷ ಕೋಟಿ ರೂಪಾಯಿ) ಮೌಲ್ಯದ ಹತ್ತಿರಹತ್ತಿರ 75 ಟನ್ ಚಿನ್ನವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿರುವ ಸಾಧ್ಯತೆಯಿದೆ.
ಚಿನ್ನ ಮಾರಾಟಕ್ಕೆ ಪ್ರಮುಖ ಕಾರಣಗಳೇನು?
ರೂಪಾಯಿ ಮೌಲ್ಯದ ಕುಸಿತಕ್ಕೆ ಬ್ರೇಕ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿ (Strait of Hormuz) ಮುಚ್ಚಲ್ಪಟ್ಟಿರುವುದರಿಂದ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ತೀವ್ರವಾಗಿ ಏರಿಕೆಯಾಗಿದೆ. ಇದರಿಂದಾಗಿ ಭಾರತೀಯ ರೂಪಾಯಿಯ ಮೌಲ್ಯ ಡಾಲರ್ ಎದುರು ಭಾರಿ ಕುಸಿತ ಕಾಣುತ್ತಿದ್ದು, ಇದನ್ನು ನಿಯಂತ್ರಿಸಲು ಆರ್ಬಿಐ ಈ ಕ್ರಮಕ್ಕೆ ಮುಂದಾಗಿದೆ.
ವಿದೇಶಿ ಕರೆನ್ಸಿ ನಗದೀಕರಣ (Forex Liquidity): ಚಿನ್ನ ಮಾರಾಟ ಮಾಡಿದ ಅದೇ ಎರಡು ವಾರಗಳ ಅವಧಿಯಲ್ಲಿ ಆರ್ಬಿಐ ಸುಮಾರು 7.5 ಬಿಲಿಯನ್ ಡಾಲರ್ ಮೌಲ್ಯದ ವಿದೇಶಿ ಕರೆನ್ಸಿ ಆಸ್ತಿಗಳನ್ನು (ಡಾಲರ್) ಖರೀದಿಸಿದೆ. ಪ್ರಸ್ತುತ ಸನ್ನಿವೇಶದಲ್ಲಿ ಚಿನ್ನದ ದಾಸ್ತಾನಿಗಿಂತ ತಕ್ಷಣವೇ ಬಳಸಬಹುದಾದ ಲಿಕ್ವಿಡ್ ನಗದು (ಡಾಲರ್) ಅತ್ಯಗತ್ಯವಾಗಿರುವುದರಿಂದ ಈ ಅದಲು-ಬದಲು ಪ್ರಕ್ರಿಯೆ ನಡೆದಿದೆ.
ತೈಲ ಆಮದು ವೆಚ್ಚದ ಹೊರೆ: ಭಾರತವು ಜಗತ್ತಿನಲ್ಲೇ ಮೂರನೇ ಅತಿ ದೊಡ್ಡ ತೈಲ ಆಮದುದಾರ ದೇಶವಾಗಿದೆ. ಯುದ್ಧದ ಬಿಕ್ಕಟ್ಟಿನಿಂದಾಗಿ ಹೆಚ್ಚುತ್ತಿರುವ ಕರೆಂಟ್ ಅಕೌಂಟ್ ಡೆಫಿಸಿಟ್ (ಚಾಲ್ತಿ ಖಾತೆ ಕೊರತೆ) ನಿಭಾಯಿಸಲು ವಿದೇಶಿ ವಿನಿಮಯ ನಿಧಿಯನ್ನು ಬಲಪಡಿಸುವುದು ಅನಿವಾರ್ಯವಾಗಿದೆ.
ಸುಂಕ ಹೆಚ್ಚಳದ ನಡುವೆಯೂ ಕುಸಿದ ಚಿನ್ನದ ದಾಸ್ತಾನು ಮೌಲ್ಯ!
ಆರ್ಥಿಕ ತಜ್ಞರ ಪ್ರಕಾರ, ಭಾರತ ಸರ್ಕಾರವು ಇತ್ತೀಚೆಗೆ ಮೌಲ್ಯಯುತ ಲೋಹಗಳ (ಚಿನ್ನ ಮತ್ತು ಬೆಳ್ಳಿ) ಮೇಲಿನ ಆಮದು ಸುಂಕವನ್ನು (Import Duty) ಭಾರಿ ಪ್ರಮಾಣದಲ್ಲಿ ಹೆಚ್ಚಿಸಿತ್ತು. ಸಾಮಾನ್ಯ ನಿಯಮಗಳ ಪ್ರಕಾರ ಆಮದು ಸುಂಕ ಹೆಚ್ಚಾದಾಗ ರಿಸರ್ವ್ ಬ್ಯಾಂಕ್ ಬಳಿ ಇರುವ ಚಿನ್ನದ ಮೌಲ್ಯ ತಾನಾಗಿಯೇ ವೃದ್ಧಿಸಬೇಕಿತ್ತು. ಆದರೆ, ಆರ್ಬಿಐನ ಚಿನ್ನದ ದಾಸ್ತಾನಿನ ಒಟ್ಟು ಮೌಲ್ಯದಲ್ಲಿ ಇಳಿಕೆ ಕಂಡುಬಂದಿರುವುದು, ಬ್ಯಾಂಕ್ ಸಕ್ರಿಯವಾಗಿ ಚಿನ್ನವನ್ನು ಮಾರಾಟ ಮಾಡಿದೆ ಎಂಬುದಕ್ಕೆ ಸ್ಪಷ್ಟ ಪುರಾವೆಯಾಗಿದೆ ಎಂದು ಬ್ಲೂಮ್ಬರ್ಗ್ನ ಹಿರಿಯ ಭಾರತೀಯ ಆರ್ಥಿಕ ತಜ್ಞ ಅಭಿಷೇಕ್ ಗುಪ್ತಾ ವಿಶ್ಲೇಷಿಸಿದ್ದಾರೆ.
ಭಾರತದ ಬಳಿ ಸದ್ಯ ಎಷ್ಟಿದೆ ಚಿನ್ನ?
ಒಟ್ಟು ದಾಸ್ತಾನು: 2026ರ ಮಾರ್ಚ್ ಅಂತ್ಯದ ಅಧಿಕೃತ ವರದಿಯ ಪ್ರಕಾರ, ಆರ್ಬಿಐ ಒಟ್ಟು 880.52 ಮೆಟ್ರಿಕ್ ಟನ್ ಚಿನ್ನದ ದಾಸ್ತಾನನ್ನು ಹೊಂದಿತ್ತು.
ದೇಶದೊಳಗಿನ ಸುರಕ್ಷತೆ: ರಷ್ಯಾ-ಉಕ್ರೇನ್ ಯುದ್ಧದ ನಂತರ ಪಾಶ್ಚಿಮಾತ್ಯ ದೇಶಗಳು ರಷ್ಯಾದ ವಿದೇಶಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರಿಂದ ಎಚ್ಚೆತ್ತಿದ್ದ ಭಾರತ, ಬ್ಯಾಂಕ್ ಆಫ್ ಇಂಗ್ಲೆಂಡ್ನಲ್ಲಿದ್ದ ತನ್ನ ಚಿನ್ನವನ್ನು ಭಾರತಕ್ಕೆ ತರಲಾರಂಭಿಸಿತ್ತು. ಪ್ರಸ್ತುತ ಭಾರತದ ಶೇ. 77 ರಷ್ಟು ಚಿನ್ನದ ದಾಸ್ತಾನು ದೇಶದೊಳಗಿನ ಸುರಕ್ಷಿತ ತಿಜೋರಿಗಳಲ್ಲೇ ಇದೆ.
ತಾತ್ಕಾಲಿಕ ಕ್ರಮ: ತಜ್ಞರ ಪ್ರಕಾರ, ಆರ್ಬಿಐನ ಈ ಚಿನ್ನದ ಮಾರಾಟವು ಕೇವಲ ಪ್ರಸ್ತುತ ಬಿಕ್ಕಟ್ಟನ್ನು ಎದುರಿಸಲು ಕೈಗೊಂಡ “ತಾತ್ಕಾಲಿಕ ನಗದು ನಿರ್ವಹಣಾ ಕ್ರಮ” (Temporary Liquidity Measure) ಆಗಿದೆಯೇ ಹೊರತು ಆರ್ಬಿಐ ತನ್ನ ಚಿನ್ನದ ನಿಧಿಯನ್ನು ಕಾಯಂ ಆಗಿ ಕಡಿಮೆ ಮಾಡುತ್ತಿಲ್ಲ. ಮಾರುಕಟ್ಟೆ ಯಥಾಸ್ಥಿತಿಗೆ ಮರಳಿದಾಗ ಆರ್ಬಿಐ ಮತ್ತೆ ಚಿನ್ನವನ್ನು ಖರೀದಿಸಲಿದೆ.
ರೂಪಾಯಿ ಮೌಲ್ಯವು ಇತ್ತೀಚೆಗೆ ಸಾರ್ವಕಾಲಿಕ ಕುಸಿತ ಕಂಡು ಪ್ರತಿ ಡಾಲರ್ಗೆ 96.92 ರ ಗಡಿ ತಲುಪಿತ್ತು. ಆದರೆ ಆರ್ಬಿಐನ ಈ ತಂತ್ರಗಾರಿಕೆಯ ಮಧ್ಯಪ್ರವೇಶದಿಂದಾಗಿ ರೂಪಾಯಿ ಸದ್ಯ ಇತರ ಏಷ್ಯನ್ ಕರೆನ್ಸಿಗಳಿಗಿಂತ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದು, ಜೂನ್ ಆರಂಭದ ವೇಳೆಗೆ 95.17 ರ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ.



Dakshina Kannada
ಮಾನವೀಯತೆಯ ಸಾಕಾರ: ಕುಂಬ್ರದ ಖ್ಯಾತ ವೈದ್ಯ ಡಾ. ವಿಘ್ನೇಶ್ವರ ಭಟ್ ಚಿಕಿತ್ಸೆಗೆ ಹರಿದುಬಂದ ನೆರವು; ಇನ್ನೂ ಬೇಕಿದೆ ಸಹೃದಯಿಗಳ ಸಹಕಾರ
ಪುತ್ತೂರು: ಪುತ್ತೂರು ತಾಲೂಕಿನ ಕುಂಬ್ರದ ‘ಅಮೃತ ಕ್ಲಿನಿಕ್’ನಲ್ಲಿ ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರಿಗೆ ನಿರಂತರವಾಗಿ ಅತ್ಯುತ್ತಮ ವೈದ್ಯಕೀಯ ಸೇವೆ ನೀಡುತ್ತಾ, ಅಪಾರ ಜನಮನ್ನಣೆ ಗಳಿಸಿರುವ ಪಾರಂಪರಿಕ ಶೈಲಿಯ ಜನಪ್ರಿಯ ಕುಟುಂಬ ವೈದ್ಯ ಡಾ. ವಿಘ್ನೇಶ್ವರ ಭಟ್ ಅವರು ಸದ್ಯ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಸಾರ್ವಜನಿಕರ ನೆರವಿನ ಹಸ್ತ ಚಾಚಿದ್ದಾರೆ.
ಕಳೆದ 2-3 ತಿಂಗಳುಗಳಿಂದ ದೈಹಿಕ ಅನಾರೋಗ್ಯ ಎದುರಿಸುತ್ತಿದ್ದ ಅವರಿಗೆ ವೈದ್ಯಕೀಯ ಪರೀಕ್ಷೆಗಳ ನಂತರ ತೀವ್ರತರದ ರಕ್ತದ ಕ್ಯಾನ್ಸರ್ (T-Cell Lymphoma) ಇರುವುದು ಪತ್ತೆಯಾಗಿದೆ. ಸದ್ಯ ಮಂಗಳೂರಿನ ಎಂ.ಐ.ಓ (Mangalore Institute of Oncology) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರಿಗೆ ಈಗಾಗಲೇ ಸುಮಾರು 20 ಲಕ್ಷ ರೂ. ವೆಚ್ಚವಾಗಿದೆ. ಮುಂದಿನ ಹಂತದ ಅಸ್ಥಿಮಜ್ಜೆ ಕಸಿ (Bone Marrow Transplant) ಹಾಗೂ ಇತರ ತುರ್ತು ಚಿಕಿತ್ಸೆಗಳಿಗಾಗಿ ಇನ್ನೂ ಅಂದಾಜು 20 ಲಕ್ಷ ರೂಪಾಯಿಗಳ ಅವಶ್ಯಕತೆಯಿದೆ. ವೈದ್ಯಕೀಯ ವೃತ್ತಿಯನ್ನೇ ನಂಬಿಕೊಂಡಿದ್ದ ಅವರಿಗೆ ಈ ಬೃಹತ್ ಮೊತ್ತವನ್ನು ಹೊಂದಿಸುವುದು ಕಷ್ಟಸಾಧ್ಯವಾಗಿರುವುದರಿಂದ ಸಹೃದಯಿ ಜನರಲ್ಲಿ ಧನಸಹಾಯಕ್ಕಾಗಿ ವಿನಂತಿಸಿಕೊಂಡಿದ್ದರು.

ಕೋಮು ಸೌಹಾರ್ದತೆ ಮೆರೆದ ಶೇಕಮಲೆ ಮಸೀದಿ ಸಮಿತಿ: ಡಾ. ವಿಘ್ನೇಶ್ವರ ಭಟ್ ಅವರ ಕಷ್ಟಕ್ಕೆ ಸ್ಪಂದಿಸಿ ಇತ್ತೀಚೆಗೆ ಶೇಕಮಲೆ ಮಸೀದಿ ಕಮಿಟಿಯವರು “ಮಾನವೀಯತೆಯ ಬಕ್ರೀದ್” ಎಂಬ ಆಶಯದೊಂದಿಗೆ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವ ಮೂಲಕ ಕೋಮು ಸೌಹಾರ್ದತೆ ಮತ್ತು ಜಾತಿಗೆ ತೀತವಾದ ಮಾನವೀಯ ಗುಣವನ್ನು ಸಾರಿದ್ದಾರೆ. ಇವರ ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.

ವಿದೇಶಿ ಉದ್ಯಮಿ ಎಡಕ್ಕಾನ ಮಹಾಬಲೇಶ್ವರ ಶ್ಯಾಂ ಭಟ್ ನೆರವು: ಇದೀಗ ಡಾಕ್ಟರ್ ಅವರ ಚಿಕಿತ್ಸೆಗೆ ಮತ್ತೊಂದು ಆಸರೆಯಾಗಿ ಹೊರದೇಶದ ಖ್ಯಾತ ಉದ್ಯಮಿ ಎಡಕ್ಕಾನ ಮಹಾಬಲೇಶ್ವರ ಶ್ಯಾಂ ಭಟ್ ಅವರು 50,000 ರೂ. ಆರ್ಥಿಕ ಸಹಾಯ ಹಸ್ತ ಚಾಚುವ ಮೂಲಕ ತಮ್ಮ ಉದಾರಿ ಗುಣವನ್ನು ಮೆರೆದಿದ್ದಾರೆ. ಇವರೊಂದಿಗೆ ಹಲವಾರು ಸಹೃದಯಿ ಸಾರ್ವಜನಿಕರು ಕೂಡ ಈಗಾಗಲೇ ತಮ್ಮ ಕೈಲಾದ ಧನಸಹಾಯವನ್ನು ಒದಗಿಸಿದ್ದಾರೆ.
ಇನ್ನೂ ಬೇಕಿದೆ ಸಹೃದಯಿಗಳ ಸಹಕಾರ: ಬಡವರ, ಸಾರ್ವಜನಿಕರ ಕಣ್ಣೊರೆಸುತ್ತಿದ್ದ ವೈದ್ಯರೊಬ್ಬರು ಇಂದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಇವರ ಮುಂದಿನ ಚಿಕಿತ್ಸೆ ಸುಗಮವಾಗಿ ಸಾಗಲು ಇನ್ನು ಕೂಡ ಭಾರಿ ಮೊತ್ತದ ನೆರವಿನ ಅಗತ್ಯವಿದೆ. ಹೀಗಾಗಿ ದೇಶ-ವಿದೇಶಗಳಲ್ಲಿರುವ ದಾನಿಗಳು, ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರು ಉದಾರವಾಗಿ ಧನಸಹಾಯ ಮಾಡುವ ಮೂಲಕ ಡಾ. ವಿಘ್ನೇಶ್ವರ ಭಟ್ ಅವರು ಶೀಘ್ರ ಗುಣಮುಖರಾಗಿ ಮತ್ತೆ ಜನಸೇವೆಗೆ ಮರಳುವಂತೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.
ಧನಸಹಾಯ ಮಾಡಬಯಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮೆ ಮಾಡಬಹುದು:
- ಬ್ಯಾಂಕ್ ಹೆಸರು: ಕರ್ಣಾಟಕ ಬ್ಯಾಂಕ್ (Karnatāka Bank)
- ಶಾಖೆ: ದರ್ಬೆ, ಪುತ್ತೂರು
- ಖಾತೆ ಸಂಖ್ಯೆ (A/c No): 1023202500000601
- ಐಎಫ್ಎಸ್ಸಿ ಕೋಡ್ (IFSC): KARB0001023
- ಗೂಗಲ್ ಪೇ ಸಂಖ್ಯೆ (G-Pay): 961163784



INCIDENT
ಬಿಜೆಪಿಗೆ ತಿರುಗುಬಾಣವಾದ ಪ್ರತಿಭಟನೆ, ಅಮಾಯಕರನ್ನು ದಾಳವಾಗಿಸಿಕೊಂಡ ರಾಜಕೀಯ ಸ್ವಾರ್ಥ: ಹಕ್ಕುಪತ್ರ ಪ್ರತಿಭಟನೆಯ ಅಸಲಿ ಬಣ್ಣ ಬಯಲು ಮಾಡಿದ ಪುಣಚದ ಫಲಾನುಭವಿಗಳು!
ಪುತ್ತೂರು: ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಬಡವರ, ಅಮಾಯಕರ ಹೊಟ್ಟೆಪಾಡಿನ ಸಮಸ್ಯೆಗಳನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ ಎಂಬುದಕ್ಕೆ ಬಂಟ್ವಾಳ ತಾಲೂಕು ಕಚೇರಿ ಎದುರು ನಡೆದ ಹಕ್ಕುಪತ್ರ ಪ್ರತಿಭಟನೆಯೇ ಜೀವಂತ ಸಾಕ್ಷಿಯಾಗಿದೆ. ಪುಣಚ ಗ್ರಾಮದ ಪರಿಶಿಷ್ಟ ಜಾತಿ (ಪ.ಜಾತಿ) ಕಾಲನಿಯ ನಿವಾಸಿಗಳ ಹಕ್ಕುಪತ್ರದ ಹೋರಾಟವನ್ನು ಮುಂದಿಟ್ಟುಕೊಂಡು ವಿಪಕ್ಷ ಬಿಜೆಪಿ ನಡೆಸಿದ ರಾಜಕೀಯ ತಂತ್ರಗಾರಿಕೆ ಇದೀಗ ಸ್ವತಃ ಆ ಪಕ್ಷಕ್ಕೇ ಭಾರಿ ತಿರುಗುಬಾಣವಾಗಿ ಪರಿಣಮಿಸಿದೆ. ತಮಗೆ ತಿಳಿಯದಂತೆ ರಾಜಕೀಯ ಬಲಿಪಶುಗಳಾಗಿದ್ದನ್ನು ಅರಿತ ಬಡಪಾಯಿ ಫಲಾನುಭವಿಗಳು ನೇರವಾಗಿ ಶಾಸಕ ಅಶೋಕ್ ಕುಮಾರ್ ರೈ ಅವರ ಕಚೇರಿಗೆ ಧಾವಿಸಿ, ಇಡೀ ಪ್ರಹಸನದ ಅಸಲಿ ಮುಖವಾಡವನ್ನು ಕಳಚಿಟ್ಟಿದ್ದಾರೆ.
“ನಮ್ಮನ್ನು ಬಳಸಿಕೊಂಡರು, ನಾವು ಶಾಸಕರ ವಿರುದ್ಧ ಪ್ರತಿಭಟನೆ ಮಾಡಿಲ್ಲ”: ಶಾಸಕರ ಕಚೇರಿಯಲ್ಲಿ ಮಾಧ್ಯಮಗಳು ಹಾಗೂ ಶಾಸಕರ ಮುಂದೆ ತಮ್ಮ ಅಳಲನ್ನು ತೋಡಿಕೊಂಡ ಪುಣಚ ಕಾಲನಿಯ ನಿವಾಸಿಗಳು, “ನಾವು ಶಾಸಕ ಅಶೋಕ್ ರೈ ಅವರ ವಿರುದ್ಧ ಯಾವುದೇ ಪ್ರತಿಭಟನೆಯನ್ನು ಮಾಡಿಲ್ಲ. ನಮ್ಮನ್ನು ಬಿಜೆಪಿಯವರು ಅಲ್ಲಿಗೆ ಕರೆದುಕೊಂಡು ಹೋಗಿ ಪ್ರತಿಭಟನೆಯಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಿದ್ದರು. ನಾವು ಯಾರ ವಿರುದ್ಧವೂ ಮಾತನಾಡಿಲ್ಲ. ಆದರೆ ನಮ್ಮ ಹಸಿವು ಮತ್ತು ಹಕ್ಕುಪತ್ರದ ಸಮಸ್ಯೆಯನ್ನು ಕೆಲವರು ತಮ್ಮ ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಕೀಳಾಗಿ ಬಳಸಿಕೊಂಡಿದ್ದಾರೆ” ಎಂದು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರ ಪ್ರಯತ್ನ ನಮಗೆ ಗೊತ್ತು – ಫಲಾನುಭವಿಗಳ ನುಡಿ: ಬಡ ನಿವಾಸಿಗಳು ಮುಂದುವರಿದು ಮಾತನಾಡುತ್ತಾ, “ನಮ್ಮ ಜಾಗದ 94ಸಿ ಹಕ್ಕುಪತ್ರದ ಪ್ರಕ್ರಿಯೆ ಇಷ್ಟರಮಟ್ಟಿಗೆ ಮುಂದುವರಿದಿರುವುದೇ ಶಾಸಕ ಅಶೋಕ್ ರೈ ಅವರ ಪ್ರಾಮಾಣಿಕ ಪ್ರಯತ್ನದಿಂದ ಎಂಬುದು ನಮಗೆ ಮೊದಲಿನಿಂದಲೂ ಗೊತ್ತು. ಆದರೆ ಹಕ್ಕುಪತ್ರ ಇನ್ನೂ ಕೈಗೆ ಸಿಗದೇ ಇರುವುದರಿಂದ, ‘ಪ್ರತಿಭಟನೆ ಮಾಡಿದರೆ ಬೇಗ ಸಿಗುತ್ತದೆ’ ಕಾನೂನು ಪ್ರಕಾರ ನಿಮಗೆ ಕೊಡುವುದಕ್ಕೆ ಆಗುವುದಿಲ್ಲ,ಕಾನೂನು ಮೀರಿ ನಿಮಗೆ ಹಕ್ಕು ಪತ್ರ ಅಶೋಕ್ ರೈ ಮಾಡಿಸಿದ್ದಾರೆ ಅದನ್ನು ಆದಷ್ಟು ಬೇಗ ಪಡೆಯಬೇಕು ಇಲ್ಲವಾದರೆ ಕಷ್ಟ ಎಂದು ಹೇಳಿ ನಮ್ಮನ್ನು ಬಂಟ್ವಾಳ ತಾಲೂಕು ಕಚೇರಿ ಎದರು ಕೂರಿಸಿದ್ದಾರೆ. ನಾವು ನಿಮ್ಮ ವಿರುದ್ದ ಏನೂ ಮಾತನಾಡಿಲ್ಲ,ಸರಕಾರದ ವಿರುದ್ದವೂ ಮಾತನಾಡಿಲ್ಲ ಎಲ್ಲವೂ ಮಾಡಿದ್ದು ಮಾಜಿ ಶಾಸಕ ಸಂಜೀವ ಮಠಂದೂರು ಮತ್ತು ಇನ್ನೊಬ್ಬರು ಎಂದು ಹೇಳುವುದರೊಂದಿಗೆ ರಾಜಕಾರಣಿಗಳ ತಂತ್ರಗಾರಿಕೆಯನ್ನು ಬಯಲು ಮಾಡಿದರು.

ನೀವು ರಾಜಕೀಯಕ್ಕೆ ಬಲಿಪಶುಗಳಾಗಿದ್ದೀರಿ – ಶಾಸಕ ಅಶೋಕ್ ರೈ ಕಳವಳ: ಫಲಾನುಭವಿಗಳ ಮಾತುಗಳನ್ನು ಆಲಿಸಿದ ಶಾಸಕ ಅಶೋಕ್ ರೈ ಅವರು ತೀವ್ರ ಕಳವಳ ವ್ಯಕ್ತಪಡಿಸಿ, ಬಡವರನ್ನು ದಿಕ್ಕು ತಪ್ಪಿಸಿದ ರಾಜಕೀಯ ಪ್ರಮುಖರ ವಿರುದ್ಧ ಕಿಡಿಕಾರಿದರು. “ನಿಮ್ಮ ಹಕ್ಕುಪತ್ರ ಕೊಟ್ಟರೆ ವೈಯಕ್ತಿಕವಾಗಿ ನಾನು ಕಳೆದುಕೊಳ್ಳುವಂಥದ್ದು ಏನೂ ಇಲ್ಲ. ನಾನೇ ಜವಾಬ್ದಾರಿ ತೆಗೆದುಕೊಂಡು ನಿಮ್ಮ ಹಕ್ಕುಪತ್ರದ ಪ್ರಕ್ರಿಯೆಯನ್ನು ಮಾಡಿಸಿಕೊಟ್ಟಿದ್ದೇನೆ. ಎಲ್ಲವೂ ಸರಿಯಾಗಿ ಹಕ್ಕುಪತ್ರ ವಿತರಣೆಯಾಗುವ ಹಂತ ತಲುಪಿದ್ದಾಗ ಈ ರಾಜಕೀಯ ಪ್ರೇರಿತ ಪ್ರತಿಭಟನೆ ನಡೆದಿದೆ. ಈಗ ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವರು ಕಾನೂನು ಹೋರಾಟ (ಕೋರ್ಟ್ ಮೆಟ್ಟಿಲೇರುವುದು) ಆರಂಭಿಸಿದ್ದಾರೆ. ಹಾಗಾಗಿ ಮುಂದಿನ ಬೆಳವಣಿಗೆಗಳು ಕಾನೂನು ಪ್ರಕಾರವೇ ನಡೆಯಬೇಕಾಗುತ್ತದೆ” ಎಂದರು.
ಇದೇ ವೇಳೆ ಪ್ರತಿಭಟನೆಗೆ ಕರೆತಂದವರ ನಡೆಯನ್ನು ಪ್ರಶ್ನಿಸಿದ ಶಾಸಕರು, “ನಿಮ್ಮನ್ನು ಉದ್ರೇಕಿಸಿ ಪ್ರತಿಭಟನೆಗೆ ಕರೆದುಕೊಂಡು ಹೋದವರು ಈಗ ನಿಮ್ಮ ಜೊತೆಯಲ್ಲಿದ್ದಾರೆಯೇ? ಈ ಇಡೀ ವಿಚಾರದಲ್ಲಿ ನೀವು ಬಲಿಪಶುಗಳಾಗಿದ್ದೀರಿ. ಮುಂದೆ ಏನಾಗುತ್ತದೆ ಎಂಬುದನ್ನು ನಾವೆಲ್ಲರೂ ಕಾದು ನೋಡಬೇಕಿದೆ” ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.
ಬಡವರ ಹೆಸರಿನಲ್ಲಿ ಸ್ವಾರ್ಥ ಸಾಧನೆ: ಕೂಲಿ ನಾಲಿ ಮಾಡಿ ಬದುಕುವ ಅಮಾಯಕ ಬಡ ಜನರಿಗೆ ಹಕ್ಕುಪತ್ರದ ಆಸೆ ತೋರಿಸಿ, ಅವರನ್ನು ಆಡಳಿತ ಪಕ್ಷ ಮತ್ತು ಶಾಸಕರ ವಿರುದ್ಧ ಎತ್ತಿಕಟ್ಟುವ ವಿಪಕ್ಷಗಳ ರಾಜಕೀಯ ಗಿಮಿಕ್ ಪುತ್ತೂರಿನಲ್ಲಿ ಸಂಪೂರ್ಣ ಮುಖಭಂಗ ಅನುಭವಿಸಿದೆ. ಬಡವರು ತಮಗಾದ ಅನ್ಯಾಯವನ್ನು ಅರಿತು ಶಾಸಕರ ಕಚೇರಿಗೆ ಬಂದು ಸ್ಪಷ್ಟನೆ ನೀಡಿರುವುದು, ಕರಾವಳಿ ರಾಜಕಾರಣದಲ್ಲಿ ಬಡವರನ್ನು ದಾಳವಾಗಿಸಿಕೊಳ್ಳುವ ‘ಸ್ವಾರ್ಥ ರಾಜಕೀಯ’ದ ಕ್ರೂರ ಮುಖವನ್ನು ಜಗಜ್ಜಾಹೀರು ಮಾಡಿದೆ.



-
crime2 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime4 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala2 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala5 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 weeks agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Dakshina Kannada6 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala4 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala5 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
