Connect with us

arrest

ಅಂತಿಮ ವರ್ಷದ ಬಿ.ಸಿ.ಎ ವಿದ್ಯಾರ್ಥಿನಿ ಬಂಧನ; ₹35 ಲಕ್ಷ ಮೌಲ್ಯದ ಹೈಡ್ರೋವಿಡ್ ಗಾಂಜಾ ಜಪ್ತಿ

Published

on

ಮಂಗಳೂರು: ಶೈಕ್ಷಣಿಕ ನಗರಿ ಮಂಗಳೂರಿನಲ್ಲಿ ಮಾದಕ ದ್ರವ್ಯ ಜಾಲದ ವಿರುದ್ಧ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ಭಾರಿ ಮೌಲ್ಯದ ಹೈಡ್ರೋವಿಡ್ (Hydrovid) ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.

ಕಾರ್ಯಾಚರಣೆಯ ವಿವರ

ದಿನಾಂಕ 12-05-2026 ರಂದು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮುಲ್ಕಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಮಾದಕ ದ್ರವ್ಯ ಮಾರಾಟದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪಣಂಬೂರು ಎಸಿಪಿ ತಂಡ ಹಾಗೂ ಮುಲ್ಕಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿತೆಯನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿತೆಯ ಮಾಹಿತಿ

ಬಂಧಿತ ಯುವತಿಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಲಿದೇವರ ಬನ ನಿವಾಸಿ ದಿ. ಮಹಮ್ಮದ್‌ ಗೌಸ್‌ ಅವರ ಮಗಳು ಸುಹಾನಾ (21 ವರ್ಷ) ಎಂದು ಗುರುತಿಸಲಾಗಿದೆ. ಈಕೆ ಕುಂದಾಪುರದ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿ.ಸಿ.ಎ (BCA) ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.

ವಶಪಡಿಸಿಕೊಂಡ ಸೊತ್ತುಗಳು

ಬಂಧಿತಳಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಹೈಡ್ರೋವಿಡ್ ಗಾಂಜಾ: ಸುಮಾರು 1 ಕೆಜಿ 42 ಗ್ರಾಂ (ಅಂದಾಜು ಮಾರುಕಟ್ಟೆ ಮೌಲ್ಯ ₹35,00,000/-). ಮತ್ತು ಕೃತ್ಯಕ್ಕೆ ಬಳಸಲಾದ ಮೊಬೈಲ್ ಫೋನ್ ಮತ್ತು ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ:

ತನಿಖೆಯ ಅಂಶ: ಆರೋಪಿತೆಯು ಈ ಮಾದಕ ವಸ್ತುವನ್ನು ಚೆನ್ನೈ ನಿಂದ ತರಿಸಿಕೊಂಡು, ಮಂಗಳೂರಿನಲ್ಲಿ ಅಕ್ರಮವಾಗಿ ಪೂರೈಕೆ ಮಾಡಿ ಹಣ ಗಳಿಸುವ ಉದ್ದೇಶ ಹೊಂದಿದ್ದಳು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಹಳೆಯ ಅಪರಾಧ ಹಿನ್ನೆಲೆ

ಬಂಧಿತ ಸುಹಾನಾ ಈ ಹಿಂದೆಯೂ ಇಂತಹದೇ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಈಕೆಯ ಮೇಲೆ ಈಗಾಗಲೇ ಕಾವೂರು ಪೊಲೀಸ್ ಠಾಣೆ: ಅ. ಕ್ರ 37/2026 (NDPS ಕಾಯ್ದೆಯಡಿ). ಮತ್ತು ಬೆಂಗಳೂರು ವಿಮಾನ ನಿಲ್ದಾಣ ಕಸ್ಟಮ್ಸ್: O. R No: 177/2025-26 (NDPS ಕಾಯ್ದೆಯ ವಿವಿಧ ಕಲಂ ಅಡಿ). ಪ್ರಕರಣಗಳು ದಾಖಲಾಗಿವೆ:

    ಕಾನೂನು ಕ್ರಮ

    ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 32/2026, ಕಲಂ: 8(ಸಿ), 20(ಬಿ) NDPS ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

    ಮಂಗಳೂರು ಪೊಲೀಸ್ ಕಮೀಷನರ್ ಅವರ ನಿರ್ದೇಶನದಂತೆ ನಡೆದ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಣಂಬೂರು ಎಸಿಪಿ ಮತ್ತು ಮುಲ್ಕಿ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

    ಮಾದಕ ದ್ರವ್ಯಗಳ ಮಾರಾಟ ಮತ್ತು ಸೇವನೆ ಕಾನೂನುಬಾಹಿರ ಹಾಗೂ ಆರೋಗ್ಯಕ್ಕೆ ಹಾನಿಕಾರಕ. ಇಂತಹ ಚಟುವಟಿಕೆಗಳ ಬಗ್ಗೆ ಮಾಹಿತಿ ಇದ್ದಲ್ಲಿ ಕೂಡಲೇ ಪೊಲೀಸರಿಗೆ ತಿಳಿಸಿ.




    ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
    Advertisement

    arrest

    ಮಂಗಳೂರು: 42.7 ಕೆಜಿ ಆನೆದಂತ ವಶ, ಮೂವರು ಅಂತಾರಾಜ್ಯ ಕಳ್ಳಸಾಗಣೆದಾರರ ಬಂಧನ!

    Published

    on

    ಮಂಗಳೂರು: ಅಕ್ರಮವಾಗಿ ಆನೆದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಬೃಹತ್ ಜಾಲವನ್ನು ಭೇದಿಸುವಲ್ಲಿ ಸಿಐಡಿ ಅರಣ್ಯ ಘಟಕ ಯಶಸ್ವಿಯಾಗಿದೆ. ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಮೂವರು ಆರೋಪಿಗಳನ್ನು ಬಂಧಿಸಿದ್ದು, ಬರೋಬ್ಬರಿ 42.7 ಕೆಜಿ ತೂಕದ ಎರಡು ಆನೆದಂತ ಹಾಗೂ ಸಾಗಾಟಕ್ಕೆ ಬಳಸಿದ್ದ ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

    ಜೋಡುಕಟ್ಟೆ ಬಳಿ ಸಿನಿಮೀಯ ಶೈಲಿಯಲ್ಲಿ ದಾಳಿ

    ಮಂಗಳೂರು ನಗರದ ಪಡವು ಗ್ರಾಮದ ಮಾರೋಳಿ ಜೋಡುಕಟ್ಟೆ ಬಳಿ ಗುರುವಾರ ಆನೆದಂತ ಮಾರಾಟ ಮಾಡಲು ಕೆಲವು ವ್ಯಕ್ತಿಗಳು ಸಂಚು ರೂಪಿಸಿದ್ದಾರೆ ಎಂಬ ಖಚಿತ ಮಾಹಿತಿ ಸಿಐಡಿ ಅರಣ್ಯ ಘಟಕಕ್ಕೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳ ತಂಡ, ಸ್ಥಳದ ಮೇಲೆ ಜಂಟಿ ದಾಳಿ ನಡೆಸಿ ದಂತಗಳನ್ನು ಮಾರಾಟ ಮಾಡಲು ಗ್ರಾಹಕರಿಗಾಗಿ ಕಾಯುತ್ತಿದ್ದ ಆರೋಪಿಗಳನ್ನು ರೆಡ್‌ಹ್ಯಾಂಡ್ ಆಗಿ ವಶಕ್ಕೆ ಪಡೆದಿದೆ.

    ಬಂಧಿತ ಆರೋಪಿಗಳ ವಿವರ:

    1. ಶಶಾಂಕ್ ಪುದುವೆಟ್ಟು – ಬೆಳ್ತಂಗಡಿ ತಾಲೂಕು
    2. ಅಬ್ದುಲ್ ಖಾದರ್ – ಮಂಜೇಶ್ವರ, ಕೇರಳ
    3. ಪ್ರಭಾಚಂದ್ರ – ಅಟ್ಟಾವರ, ಮಂಗಳೂರು

    ಪ್ರಮುಖ ಆಸ್ತಿಗಳ ಜಪ್ತಿ: ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಎರಡು ಆನೆದಂತಗಳ ಒಟ್ಟು ತೂಕ 42.7 ಕೆಜಿ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಅಕ್ರಮ ಸಾಗಾಟಕ್ಕೆ ಬಳಸಲಾಗಿದ್ದ ಎರಡು ಕಾರುಗಳನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.

    ಕಾರ್ಯಾಚರಣೆಯ ಯಶಸ್ವಿ ತಂಡ

    ಮಡಿಕೇರಿ ಸಿಐಡಿ ಅರಣ್ಯ ಘಟಕದ ಎಸ್‌ಪಿ ಪವನ್ ನೆಜ್ಜೂರ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ಈ ಹೈ-ವೋಲ್ಟೇಜ್ ಕಾರ್ಯಾಚರಣೆ ನಡೆದಿದೆ. ಮಂಗಳೂರು ಸಿಐಡಿ ಅರಣ್ಯ ಮೊಬೈಲ್ ಸ್ಕ್ವಾಡ್‌ನ ಪಿಎಸ್‌ಐ ದಿಲೀಪ್ ಜಿ.ಆರ್ ನೇತೃತ್ವದ ತಂಡದಲ್ಲಿ ಸಿಬ್ಬಂದಿಗಳಾದ ಜಯರಾಮ್ ಕೆ.ಟಿ, ಬಾಲಕೃಷ್ಣ ಕೆ.ಎಂ, ತಾರಾನಾಥ್ ಎಸ್ ಹಾಗೂ ಅಬ್ದುಲ್ ರೌಫ್ ಸಕ್ರಿಯವಾಗಿ ಪಾಲ್ಗೊಂಡು ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

    ಬಂಧಿತ ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ (Wildlife Protection Act) ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಈ ದಂತಗಳನ್ನು ಎಲ್ಲಿಂದ ತರಲಾಗಿತ್ತು? ಇದರ ಹಿಂದೆ ಬೇರೆ ಯಾವುದಾದರೂ ಅಂತಾರಾಜ್ಯ ದಂಧೆಕೋರರ ಕೈವಾಡವಿದೆಯೇ? ಎಂಬ ಬಗ್ಗೆ ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ




    Continue Reading

    arrest

    ಬಂಟ, ಬಿಲ್ಲವ ಸಮುದಾಯಕ್ಕೆ ಅವಹೇಳನ: ಆರೋಪಿ ಅನಿತಾ ಕಾಸರಗೋಡು ಜೈಲುಪಾಲು

    Published

    on

    ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕರಾವಳಿಯ ಪ್ರತಿಷ್ಠಿತ ಬಂಟ ಮತ್ತು ಬಿಲ್ಲವ ಸಮುದಾಯಗಳ ಕುರಿತು ಅತ್ಯಂತ ಆಕ್ಷೇಪಾರ್ಹ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದ ಆರೋಪಿ ಅನಿತಾ ಕಾಸರಗೋಡು ಅವರನ್ನು ಬರ್ಕೆ ಠಾಣೆಯ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಆರೋಪಿ ಅನಿತಾ ಕಾಸರಗೋಡು ಸದ್ಯ ಕಾನೂನು ಬಲೆಗೆ ಬಿದ್ದು ಜೈಲು ಪಾಲಾಗಿದ್ದಾಳೆ.

    ಕಾನೂನು ಹೋರಾಟದಲ್ಲಿ ಜಯ

    ಬಿಲ್ಲವ ಸಮುದಾಯವನ್ನು ಅತ್ಯಂತ ಕೆಟ್ಟ ಪದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಸಮರ್ಥ ವಾದ ಮಂಡಿಸಲಾಯಿತು. ಸರಕಾರಿ ವಕೀಲರಾದ ಅಶ್ವಿತಾ ವಿ. ಅಮೀನ್, ವಕೀಲರಾದ ಪ್ರಸಾದ್ ಬಂಗೇರ ಮತ್ತು ಅರುಣ್ ಬಂಗೇರ ಅವರು ಸಮಾಜದ ಪರವಾಗಿ ಪ್ರಬಲವಾಗಿ ವಾದಿಸಿ, ಆರೋಪಿಗೆ ಜೈಲು ಶಿಕ್ಷೆ (ನ್ಯಾಯಾಂಗ ಬಂಧನ) ಆಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ಕಾನೂನು ಹೋರಾಟದ ಪ್ರತಿ ಹಂತದಲ್ಲೂ ಹಗಲಿರುಳು ಶ್ರಮಿಸಿ, ನ್ಯಾಯ ಒದಗಿಸುವಲ್ಲಿ ಶ್ರೀ ಗೆಜ್ಜೆಗಿರಿ ಕ್ಷೇತ್ರದ ಉಪಾಧ್ಯಕ್ಷರಾದ ಶ್ರೀ ದೀಪಕ್ ಕೋಟ್ಯಾನ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಇವರಿಗೆ ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಪ್ರಮಲ್ ಕಾರ್ಕಳ ಹಾಗೂ ಸೋಮೇಶ್ವರ ಪುರಸಭಾ ಸದಸ್ಯರಾದ ದೀಪಕ್ ಪಿಲಾರ್ ಅವರು ಸಾಥ್ ನೀಡಿದ್ದಾರೆ.

    ಬಂಟ ಸಮುದಾಯದಿಂದಲೂ ಆಕ್ರೋಶ: ಪುತ್ತೂರಿನಲ್ಲಿ ದೂರು ದಾಖಲು

    ಬಿಲ್ಲವ ಸಮಾಜದ ಜೊತೆಗೆ ಬಂಟ ಸಮುದಾಯವನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಕುರಿತು ಪುತ್ತೂರಿನಲ್ಲೂ ಪ್ರಕರಣ ದಾಖಲಾಗಿದೆ. ಅಪ್ಪಟ ಕರಾವಳಿಯ ಸಂಸ್ಕೃತಿಯ ಭಾಗವಾಗಿರುವ ಬಂಟ ಸಮಾಜಕ್ಕೆ ಅವಮಾನ ಮಾಡಿರುವುದನ್ನು ಖಂಡಿಸಿ, ಪುತ್ತೂರು ಬಂಟರ ಸಂಘದ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ಅವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದರು. ಪ್ರತಿಷ್ಠಿತ ಸಮಾಜದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಗುರವಾಗಿ ಮಾತನಾಡಿರುವುದನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದರು.

    ಮುಂಬಯಿ ಬಿಲ್ಲವ ಸಮಾಜದಿಂದಲೂ ಪೊಲೀಸ್ ದೂರು

    ಆರೋಪಿ ಅನಿತಾ ಕಾಸರಗೋಡು ಇಡೀ ಬಿಲ್ಲವ ಸಮಾಜ ತಲೆತಗ್ಗಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಆಕ್ಷೇಪಾರ್ಹ ಹೇಳಿಕೆಗಳನ್ನು ಮುಂಬಯಿ ಬಿಲ್ಲವ ಸಮಾಜದ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಮುಂಬಯಿ ಬಿಲ್ಲವ ಸಮಾಜದ ಪ್ರಮುಖರು ಹಾಗೂ ಮುಖಂಡರ ನಿಯೋಗವು ಮುಂಬಯಿನ ವಾಕೋಲಾ ಪೊಲೀಸ್ ಠಾಣೆಗೆ (Vakola Police Station) ಖುದ್ದಾಗಿ ಭೇಟಿ ನೀಡಿ, ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕೃತವಾಗಿ ದೂರು ಪತ್ರವನ್ನು ಸಲ್ಲಿಸಿದ್ದರು. ಈ ಮೂಲಕ ದೇಶದ ಯಾವುದೇ ಮೂಲೆಯಲ್ಲಿದ್ದರೂ ಸಮಾಜಕ್ಕೆ ಅವಮಾನ ಮಾಡುವವರನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಗಟ್ಟಿಯಾದ ಸಂದೇಶವನ್ನು ಮುಂಬಯಿ ಬಿಲ್ಲವರು ರವಾನಿಸಿದ್ದರು

    ಬೆಂಗಳೂರಿನಲ್ಲಿ ಅಕ್ಕನ ಮನೆಯಲ್ಲಿ ಬಂಧನ: ಈ ನಡುವೆ, ‘ಬಿರುವೆರ್ ಕುಡ್ಲ’ ಸಂಘಟನೆಯ ಪ್ರಮುಖರಾದ ರಾಕೇಶ್ ಪೂಜಾರಿ ಅವರು ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಗೆ ಅಧಿಕೃತವಾಗಿ ದೂರು ಸಲ್ಲಿಸಿದ್ದರು. ದೂರಿನ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಬರ್ಕೆ ಪೊಲೀಸರು, ಆರೋಪಿಯು ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿರುವುದನ್ನು ಪತ್ತೆ ಹಚ್ಚಿದ್ದಾರೆ. ಬೆಂಗಳೂರಿನಲ್ಲಿರುವ ಆಕೆಯ ಸಹೋದರಿಯ (ಅಕ್ಕನ) ನಿವಾಸದ ಮೇಲೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಯಶಸ್ವಿಯಾಗಿ ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಜೂನ್ 25ರವರೆಗೆ ನ್ಯಾಯಾಂಗ ಬಂಧನ: ಬಂಧಿತ ಆರೋಪಿ ಅನಿತಾ ಕಾಸರಗೋಡು ಅವರನ್ನು ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ಜೂನ್ 25ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

    ಸಮುದಾಯಗಳ ನಡುವೆ ಶಾಂತಿ ಕದಡುವ ಹಾಗೂ ಸಮಾಜದ ಗಣ್ಯ ವ್ಯಕ್ತಿಗಳು ಮತ್ತು ಸಮುದಾಯಗಳಿಗೆ ಅವಮಾನಿಸುವ ಇಂತಹ ಕೃತ್ಯಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ಈಗಲೂ ಆಕ್ರೋಶ ಮುಂದುವರಿದಿದೆ.




    Continue Reading

    arrest

    ಉಡುಪಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಕೋಕಾ ಕಾಯ್ದೆಯಡಿ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಗಳ ಬಂಧನ

    Published

    on

    ಉಡುಪಿ: ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗಂಭೀರ ಸ್ವರೂಪದ ಕೋಕಾ (KOKA) ಕಾಯ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ಇಬ್ಬರು ಕುಖ್ಯಾತ ಆರೋಪಿಗಳನ್ನು ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬಂಧಿತ ಆರೋಪಿಗಳು: ಬಂಧಿತರನ್ನು ಮನೋಜ್ ಕುಲಾಲ್ ಅಲಿಯಾಸ್ ಮನೋಜ್ ಕೋಡಿಕೇರೆ ಹಾಗೂ ಚೇತನ್ ಅಲಿಯಾಸ್ ಚೇತು ಪಡೀಲ್ ಎಂದು ಗುರುತಿಸಲಾಗಿದೆ.

    ಕಾರ್ಯಾಚರಣೆಯ ವಿವರ: ಈ ಆರೋಪಿಗಳ ಪತ್ತೆಗಾಗಿ ಪೊಲೀಸರು ಸಾರ್ವಜನಿಕ ಪ್ರಕಟಣೆ ಹೊರಡಿಸಿ, ಮಾಹಿತಿ ನೀಡಿದವರಿಗೆ 50,000 ರೂ. ನಗದು ಬಹುಮಾನ ಘೋಷಿಸಿದ್ದರು. ಸಾರ್ವಜನಿಕರು ನೀಡಿದ ಖಚಿತ ಮಾಹಿತಿಯ ಆಧಾರದ ಮೇಲೆ ಪೊಲೀಸರು ಇಬ್ಬರನ್ನೂ ಸೆರೆಹಿಡಿದಿದ್ದಾರೆ. ನಿಯಮದಂತೆ ಮಾಹಿತಿ ನೀಡಿದ ಬಾತ್ಮೀದಾರರಿಗೆ ಘೋಷಿತ ನಗದು ಬಹುಮಾನವನ್ನು ಪೊಲೀಸ್ ಇಲಾಖೆ ಹಸ್ತಾಂತರಿಸಿದೆ.

    ಆರೋಪಿಗಳ ಅಪರಾಧ ಹಿನ್ನೆಲೆ:

    ಮನೋಜ್ ಕೋಡಿಕೇರೆ: ಈತನ ವಿರುದ್ಧ ಒಟ್ಟು 19 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಉಡುಪಿ ಜಿಲ್ಲೆಯಲ್ಲಿ 2 ಮತ್ತು ಮಂಗಳೂರು ನಗರದಲ್ಲಿ 17 ಪ್ರಕರಣಗಳು ಸೇರಿವೆ. ಈತನ ಮೇಲೆ 3 ಕೊಲೆ ಪ್ರಕರಣ, 5 ಕೊಲೆ ಯತ್ನ, 1 ಅಪಹರಣ ಹಾಗೂ 10 ಹಲ್ಲೆ ಮತ್ತು ದೋಚಿದ ಪ್ರಕರಣಗಳಿವೆ.

    ಚೇತನ್ ಅಲಿಯಾಸ್ ಚೇತು ಪಡೀಲ್: ಈತನ ವಿರುದ್ಧ ಒಟ್ಟು 13 ಪ್ರಕರಣಗಳು ದಾಖಲಾಗಿವೆ (ಮಂಗಳೂರು-9, ಉಡುಪಿ-2, ದಕ್ಷಿಣ ಕನ್ನಡ-2). ಇದರಲ್ಲಿ 2 ಕೊಲೆ ಪ್ರಕರಣ, 2 ಕೊಲೆ ಯತ್ನ, 1 ಅಪಹರಣ, 2 ಮಾದಕ ದ್ರವ್ಯ ಸೇವನೆ ಹಾಗೂ 6 ಹಲ್ಲೆ ಮತ್ತು ದೋಚಿದ ಪ್ರಕರಣಗಳು ಸೇರಿವೆ.

    ತಲೆಮರೆಸಿಕೊಂಡಿದ್ದ ಈ ಭೀಕರ ಅಪರಾಧ ಹಿನ್ನೆಲೆಯುಳ್ಳ ರೌಡಿಗಳನ್ನು ಬಂಧಿಸುವ ಮೂಲಕ ಉಡುಪಿ ಪೊಲೀಸರು ಸಾರ್ವಜನಿಕರಲ್ಲಿ ಭರವಸೆ ಮೂಡಿಸಿದ್ದಾರೆ.




    Continue Reading

    Trending

    Copyright © 2025 Deevatige

    error: Content is protected !!