karavali
ತನ್ನಿಂದ ತಾನೇ ತೂಗಿದ ಪಿಲಿಚಂಡಿ ದೈವದ ಉಯ್ಯಾಲೆ; ಬೈಕಂಪಾಡಿಯಲ್ಲಿ ನಡೆಯಿತು ಬೆಚ್ಚಿಬೀಳಿಸೋ ಘಟನೆ
- Share
- Tweet /home/u338848369/domains/deevatigenews.com/public_html/wp-content/plugins/mvp-social-buttons/mvp-social-buttons.php on line 72
https://deevatigenews.com/wp-content/uploads/2026/02/daiva-1-1000x600.jpg&description=ತನ್ನಿಂದ ತಾನೇ ತೂಗಿದ ಪಿಲಿಚಂಡಿ ದೈವದ ಉಯ್ಯಾಲೆ; ಬೈಕಂಪಾಡಿಯಲ್ಲಿ ನಡೆಯಿತು ಬೆಚ್ಚಿಬೀಳಿಸೋ ಘಟನೆ', 'pinterestShare', 'width=750,height=350'); return false;" title="Pin This Post">
ಹುಲಿ ದೈವ ಮಾಡಿತು ಪವಾಡ, ನೇಮೋತ್ಸವದ ವೇಳೆ ಬಹಿರಂಗವಾಯಿತು ಬೆಚ್ಚಿ ಬೀಳೋ ಸತ್ಯ! ಇದು ಪಿಲ್ಚಂಡಿ ಕಾರ್ಣಿಕ! ತುಳುನಾಡು ದೈವದೇವರ ನಾಡು.ಇಲ್ಲಿನ ನಾಗಾರಾಧನೆ, ದೈವಾರಾಧನೆಗಳೇ ವಿಶಿಷ್ಠವಾಗಿದ್ದು, ಇಲ್ಲಿನ ದೈವಗಳು ತಮ್ಮ ಕಾರಣಿಕವನ್ನು ಮೆರೆಯುತ್ತಿರುವುದು ಆಗಾಗ ಬೆಳಕಿಗೆ ಬರುತ್ತಿದ್ದು, ಇದೀಗ ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ವಲಯದ ಕುಡುಂಬೂರು ನಡುಗಿರಿಯಲ್ಲಿರುವ ಜಾರಂದಾಯ ಹಾಗೂ ಸಹಪರಿವಾರ ದೈವಸ್ಥಾನದಲ್ಲಿ ನಡೆದ ಪಿಲಿಚಂಡಿ ದೈವದ ನೇಮೋತ್ಸವದ ವೇಳೆ ದೈವದ ಉಯ್ಯಾಲೆ ತನ್ನಿಂದ ತಾನೇ ತೂಗಿದ ದೃಶ್ಯ ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.
ಮಂಗಳೂರು: ನೆರೆದವರಿಗೆ ಅಚ್ಚರಿ, ವಿಸ್ಮಯ, ಭಯ (Fear) ಎಲ್ಲವೂ ಒಟ್ಟಿಗೆ ಆದ ಭಾವ! ಕಲಿಯುಗದಲ್ಲೂ ಕಾರ್ಣಿಕ ತೋರುತ್ತಿರುವ ದೈವಗಳ (Demi God) ಇರುವಿಕೆಗೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೆ? ಇದು ಫಿಸಿಕ್ಸ್ ಮೀರಿದ್ದು, ವಿಜ್ಞಾನ ದಾಟಿದ್ದು ಹಾಗೆಯೇ ಇದನ್ನು ನೋಡಲು ಬೇರೆಯದೇ ಕಣ್ಣು ಬೇಕು! ನೇಮೋತ್ಸವದ ವೇಳೆ ತನ್ನಿಂದ ತಾನೇ ದೈವದ ಉಯ್ಯಾಲೆ ತೂಗಿ, ಮಂಗಳೂರಿನಲ್ಲಿ (Mangaluru) ಮತ್ತೆ ದೈವ ಪವಾಡಕ್ಕೆ ಭಕ್ತ ವರ್ಗಕ್ಕೆ ಅಚ್ಚರಿ (Surprise) ಸೃಷ್ಟಿಯಾಗಿದೆ.

ಬೈಕಂಪಾಡಿಯಲ್ಲಿ ನಡೆಯಿತು ಬೆಚ್ಚಿಬೀಳಿಸೋ ಘಟನೆ
ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಕುಡುಂಬೂರು ನಡುಗಿರಿ ದೈವಸ್ಥಾನದಲ್ಲಿ ಘಟನೆಯಾಗಿದ್ದು, ಪಿಲಿಚಂಡಿ ನೇಮೋತ್ಸವದಲ್ಲಿ ತನ್ನಿಂದ ತಾನೇ ತೂಗಿದ ದೈವದ ಉಯ್ಯಾಲೆ ತೂಗಿದೆ. ಉಯ್ಯಾಲೆ ರೀತಿಯ ದೈವದ ಮಂಚದಲ್ಲಿ ದೈವ ತನ್ನ ಪವಾಡ ತೋರಿಸಿದೆ.
ಪಿಲಿಚಾಮುಂಡಿ ದೈವದ ನೇಮೋತ್ಸವಕ್ಕೆ ಗಗ್ಗರ ಇಡುವಾಗ ನಡೆದ ಘಟನೆಯ ವಿಡಿಯೋ ವೈರಲ್ ಆಗಿದೆ. ಉಗ್ರಾವೇಶದಲ್ಲಿದ್ದ ಪಿಲಿಚಂಡಿ ದೈವದ ನೇಮೋತ್ಸವದ ವೇಳೆ ದೊಡ್ಡ ಸದ್ದು ಕೇಳಿ ಬಂದಿದ್ದು, ಸಿಡಿತದ ಮಾದರಿಯ ಸದ್ದು ಏನು ಎಂದು ನೋಡಲು ಹೋದವರಿಗೆ ಅಚ್ಚರಿಯಾಗಿತ್ತು. ನೇಮೋತ್ಸವ ನಡೆಯುತ್ತಿದ್ದ ಜಾಗದ ಮುಂಭಾಗವೇ ಹೊಳ್ಳರ ಚಾವಡಿ ಇದ್ದು, ಹೊಳ್ಳರ ಚಾವಡಿಯ ತೂಗುಯ್ಯಾಲೆಯಲ್ಲಿ ಪವಾಡವಾಗಿದೆ. ತನ್ನಿಂದ ತಾನೇ ತೂಗಾಡುತ್ತಿದ್ದ ದೈವಗಳ ತೂಗುಯ್ಯಾಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಾನೇ ತೂಗಾಡಿದೆ ಎಂದು ಹೇಳಿತು ಹುಲಿ ದೈವ!
ʼತೂಗುಯ್ಯಾಲೆ ಕಾರ್ಣಿಕʼದ ಹಿಂದಿನ ರಹಸ್ಯವನ್ನು ಪಿಲಿಚಂಡಿ ದೈವ ಬಿಚ್ಚಿಟ್ಟಿದೆ. ಉಯ್ಯಾಲೆಯನ್ನು ನಾನೇ ತೂಗಿದ್ದು ಎಂದು ಪಿಲಿಚಂಡಿ ದೈವ ಹೇಳಿದೆ. ನಾನೇ ಉಯ್ಯಾಲೆಯಲ್ಲಿ ಕುಳಿತು ತೂಗಾಡಿದೆ ಎಂದ ದೈವ ಕೈ ಭಾಷೆಯಲ್ಲಿ ಅಭಯ ನೀಡಿದೆ. ಇದು ನಮಗೆ ದೈವ ಅನುಗ್ರಹ ನೀಡಿದ ಕ್ಷಣ ಎಂದ ಆಡಳಿತ ವರ್ಗ ಹೇಳಿದೆ.
ನಾಲ್ಕು ವರ್ಷದ ಹಿಂದೆಯೂ ಇದೇ ಮಾದರಿಯ ಘಟನೆ ನಡೆದಿದ್ದು, ಜಾರಂದಾಯ ಗಗ್ಗರ ಇಡುವಾಗ ಇದೇ ರೀತಿಯ ಸದ್ದು ಕೇಳಿಬಂದಿತ್ತು. ತಿರುಗಿ ನೋಡಿದ ವೇಳೆ ಹೊಳ್ಳರ ಚಾವಡಿಯಲ್ಲಿ ವಿಸ್ಮಯ ಕಂಡುಬಂದಿದ್ದು, ತನ್ನಿಂದ ತಾನೇ ತೂಗುಯ್ಯಾಲೆ ತೂಗಾಡುತ್ತಿತ್ತು. ಕೈಗಾರಿಕೆಗಳ ಅಟ್ಟಹಾಸದ ನಡುವೆ ದೈವ ಸಾನಿಧ್ಯ ಮತ್ತೆ ತಲೆ ಎತ್ತಿದ್ದೇ ರೋಚಕವಾಗಿದ್ದು, ಊರಿಗೆ ಊರೇ ಒಕ್ಕಲೆದ್ದರೂ ದೈವ ಸಾನಿಧ್ಯ ಉಳಿದಿತ್ತು. ಸುಮಾರು 30 ವರ್ಷಗಳ ಹಿಂದೆ ಕೃಷಿ ಭೂಮಿಯಾಗಿದ್ದ ನಡುಗಿರಿಯ ದೈವ ಭೂಮಿಯಾಗಿತ್ತು. ದೈವ ಸಾನಿಧ್ಯ ಸೇರಿದಂತೆ ಇಡೀ ಭೂಮಿಯನ್ನು ಕೈಗಾರಿಕೆಗಳಿಗಾಗಿ ಸರಕಾರ ವಶಪಡಿಸಿಕೊಂಡಿತ್ತು. ಬೇರೆ ಕಡೆ ಊರು ಹಾಗೂ ಅಲ್ಲಿದ್ದ ಜನರು ಸ್ಥಳಾಂತರವಾಗಿದ್ದರು.

ಪಿಲಿಚಂಡಿಗೆ ಬಾಗಿತ್ತು ಸರ್ಕಾರ!
ಇದೇ ಉಯ್ಯಾಲೆಯಲ್ಲಿ ಐದು ದೈವ ಶಕ್ತಿಗಳಿಗೆ ಹೂವು ಇಟ್ಟು ಹಿರಿಯರು ಆರಾಧನೆ ಮಾಡುತ್ತಿದ್ದರು. 33 ವರ್ಷಗಳ ಹಿಂದೆ ಕಾನೂನು ವ್ಯಾಜ್ಯದಿಂದ ಜಾತ್ರೋತ್ಸವ ನಿಂತಿತ್ತು. ಒಂದಲ್ಲ ಒಂದು ದಿನ ಭೂಮಿಯಿಂದ ಎದ್ದು ಬರುತ್ತೇನೆ ಎಂದು ಜಾರಾಂದಾಯ ದೈವ ಅಭಯ ನೀಡಿತ್ತು. ಪವಾಡಸದೃಶವಾಗಿ ಕೆಇಡಿಬಿಯಿಂದ ದೈವಾರಾಧನೆಗಾಗಿ ಮರಳಿ ಭೂಮಿ ಸಿಕ್ಕಿತು. 2019ರಲ್ಲಿ ಮತ್ತೆ ಜೀರ್ಣೋದ್ಧಾರಕ್ಕೆ ಭಕ್ತರು ಮುಂದಾಗಿದ್ದು, 2022ರಲ್ಲಿ ಮತ್ತೆ ದೈವ ಸಾನಿಧ್ಯದ ಜೀರ್ಣೋದ್ಧಾರ ನಡೆದು ನೇಮೋತ್ಸವ ಆರಂಭವಾಗಿತ್ತು.
Miracle: ಕಾಂತಾರದ ಹುಲಿ ದೈವ ಮಾಡಿತು ಪವಾಡ, ನೇಮೋತ್ಸವದ ವೇಳೆ ಬಹಿರಂಗವಾಯಿತು ಬೆಚ್ಚಿ ಬೀಳೋ ಸತ್ಯ! ಇದು ಪಿಲ್ಚಂಡಿ ಕಾರ್ಣಿಕ
AWARNESS
ವೈರಲ್ ಹುಚ್ಚಿಗೆ ಬಲಿಯಾಗುತ್ತಿದ್ದಾರೆಯೇ ಹೆಣ್ಣುಮಕ್ಕಳು? ಸಾಮಾಜಿಕ ಜಾಲತಾಣಗಳಲ್ಲಿ ಕರಪತ್ರ ವೈರಲ್!
ಮಂಗಳೂರು: ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ “ವೈರಲ್” ಆಗುವ ಮತ್ತು ಲೈಕ್ಸ್-ಫಾಲೋವರ್ಸ್ ಗಳಿಸುವ ಹುಚ್ಚು ಕೆಲವು ಯುವಕರಲ್ಲಿ ಮಿತಿಮೀರಿದೆ. ಮಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಂಕ್ (Prank) ಮತ್ತು ಶಾರ್ಟ್ ವಿಡಿಯೋಗಳ ಹೆಸರಿನಲ್ಲಿ ಹೆಣ್ಣುಮಕ್ಕಳಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುವ ಕರಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಏನಾಗುತ್ತಿದೆ ಮಂಗಳೂರಿನಲ್ಲಿ?
ವೈರಲ್ ಆಗಿರುವ ಕರಪತ್ರದ ಮಾಹಿತಿಯ ಪ್ರಕಾರ, ಮಂಗಳೂರಿನ ರೈಲ್ವೆ ಸ್ಟೇಷನ್, ಶಾಪಿಂಗ್ ಮಾಲ್ಗಳು, ಕಾಲೇಜು ರಸ್ತೆ ಹಾಗೂ ಮಾರುಕಟ್ಟೆ ಪ್ರದೇಶಗಳನ್ನು ಈ ತಂಡಗಳು ತಮ್ಮ ಪ್ರಮುಖ ಅಡ್ಡಾಗಳನ್ನಾಗಿ ಮಾಡಿಕೊಂಡಿವೆ. ಕೈಯಲ್ಲಿ ಹಣದ ಕಂತೆ ಅಥವಾ ಗಿಫ್ಟ್ ಬ್ಯಾಗ್ ಹಿಡಿದುಕೊಂಡು ಓಡಾಡುವ ಈ ಯುವಕರು, ಒಂಟಿಯಾಗಿರುವ ಯುವತಿಯರನ್ನು ಅಡ್ಡಗಟ್ಟಿ “ಒಂದು ಕ್ವಶ್ಚನ್ ಕೇಳ್ತೀವಿ”, “ಇನ್ಸ್ಟಾಗ್ರಾಮ್ ಫಾಲೋ ಮಾಡಿದರೆ ಜುಜುಬಿ ಗಿಫ್ಟ್ ಕೊಡ್ತೀವಿ” ಎಂದು ಮಾತು ಆರಂಭಿಸುತ್ತಾರೆ. ತದನಂತರ ಅವರ ಮೊಬೈಲ್ ನಂಬರ್ ಕೇಳುವುದು ಮತ್ತು ಬಲವಂತವಾಗಿ ಸ್ನೇಹ ಬೆಳೆಸಲು ಯತ್ನಿಸುವ ದೂರುಗಳು ಕೇಳಿಬರುತ್ತಿವೆ.

ವೈರಲ್ ಹುಚ್ಚು ಮತ್ತು ಬ್ಲ್ಯಾಕ್ಮೇಲ್ ತಂತ್ರ!
ಕೆಲವು ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಮ್ ಚಾನೆಲ್ಗಳು ಕೇವಲ ವ್ಯೂಸ್ ಮತ್ತು ಫಾಲೋವರ್ಸ್ಗಾಗಿ ಹೆಣ್ಣುಮಕ್ಕಳ ಅನುಮತಿ ಇಲ್ಲದೆ ಅವರ ವಿಡಿಯೋಗಳನ್ನು ಚಿತ್ರೀಕರಿಸುತ್ತಿವೆ. ಅವರ ಮುಜುಗರದ ಕ್ಷಣಗಳನ್ನು ಲಕ್ಷಾಂತರ ವೀಕ್ಷಕರಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಕಾಸರಗೋಡು ಮತ್ತು ಉಪ್ಪಳ ಭಾಗದ ಕೆಲವು ಯುವಕರು ಮಂಗಳೂರಿಗೆ ಬಂದು ಇಂತಹ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕರಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದು ಕೇವಲ ತಮಾಷೆಯಲ್ಲ, ಇದೊಂದು ದೊಡ್ಡ ಅಪಾಯಕಾರಿ ಟ್ರ್ಯಾಪ್ ಆಗಿದೆ. ಇನ್ಸ್ಟಾಗ್ರಾಮ್ ಸ್ನೇಹದ ಹೆಸರಿನಲ್ಲಿ ಅಪ್ರಾಪ್ತರನ್ನು ಅಪಹರಿಸಿ ಕಿರುಕುಳ ನೀಡಿದ ಘಟನೆಗಳು ಈ ಹಿಂದೆ ನಡೆದಿವೆ. ಒಮ್ಮೆ ಮೊಬೈಲ್ ನಂಬರ್ ಅಥವಾ ಫೋಟೋಗಳು ಇವರ ಕೈ ಸೇರಿದರೆ, ಮುಂದೆ ಅದನ್ನು ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡುವ ಸಾಧ್ಯತೆಗಳು ಹೆಚ್ಚಿರುತ್ತವೆ.
ನಮ್ಮ ಜವಾಬ್ದಾರಿ ಏನು? (ಜಾಗೃತಿ ಮಾರ್ಗಸೂಚಿ)
ಯುವತಿಯರೇ ಎಚ್ಚರ:
ಸಾರ್ವಜನಿಕ ಸ್ಥಳಗಳಲ್ಲಿ ಅಪರಿಚಿತರು ಗಿಫ್ಟ್ ಆಮಿಷ ಒಡ್ಡಿದರೆ ತಕ್ಷಣವೇ “ಬೇಡ” ಎಂದು ನಿರಾಕರಿಸಿ.
ಯಾವುದೇ ಕಾರಣಕ್ಕೂ ಅಪರಿಚಿತರಿಗೆ ಮೊಬೈಲ್ ಸಂಖ್ಯೆಯನ್ನು ನೀಡಬೇಡಿ.
ಒಂಟಿಯಾಗಿದ್ದಾಗ ಇಂತಹ ಪ್ರಾಂಕ್ ಮಾಡುವವರಿಂದ ದೂರವಿರಿ. ನಿಮ್ಮ ಅನುಮತಿ ಇಲ್ಲದೆ ವಿಡಿಯೋ ಮಾಡಿದರೆ ಧೈರ್ಯದಿಂದ ಜೋರಾಗಿ ಪ್ರಶ್ನಿಸಿ.
ಪೋಷಕರ ಗಮನಕ್ಕೆ:
ನಿಮ್ಮ ಹೆಣ್ಣುಮಕ್ಕಳಿಗೆ ಇಂತಹ ಸಾಮಾಜಿಕ ಜಾಲತಾಣಗಳ ಅಪಾಯಗಳ ಬಗ್ಗೆ ತಿಳಿಹೇಳಿ.
ಅಪರಿಚಿತರ ಫ್ರೆಂಡ್ ರಿಕ್ವೆಸ್ಟ್, ಆನ್ಲೈನ್ ಸ್ನೇಹ ಹಾಗೂ ಗಿಫ್ಟ್ಗಳ ಆಮಿಷದಿಂದ ದೂರವಿರಲು ಸೂಚಿಸಿ.
ಮಕ್ಕಳ ಫೋನ್ ಹಾಗೂ ಅವರ ದಿನನಿತ್ಯದ ಚಟುವಟಿಕೆಗಳ ಮೇಲೆ ನಿಗಾ ಇರಿಸಿ.
ಸಾರ್ವಜನಿಕರೇ ಧ್ವನಿ ಎತ್ತಿ:
ಮಾಲ್, ಕಾಲೇಜು ಅಥವಾ ಬಸ್ ಸ್ಟ್ಯಾಂಡ್ಗಳಲ್ಲಿ ಇಂತಹ ಪುಂಡಾಟಿಕೆ ಅಥವಾ ಹೆಣ್ಣುಮಕ್ಕಳಿಗೆ ಮುಜುಗರ ಉಂಟುಮಾಡುವ ದೃಶ್ಯಗಳು ಕಂಡುಬಂದರೆ ಸುಮ್ಮನೆ ಇರಬೇಡಿ.
ತಕ್ಷಣವೇ ಅಲ್ಲಿನ ಸೆಕ್ಯೂರಿಟಿ ಅಥವಾ ಪೊಲೀಸ್ ಇಲಾಖೆಗೆ ದೂರು ನೀಡಿ.
ಮುಖ್ಯ ಮಾಹಿತಿ: ಮಂಗಳೂರಿನ ಸಂಸ್ಕೃತಿ ಮತ್ತು ಹೆಣ್ಣುಮಕ್ಕಳ ಘನತೆಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಯಾವುದೇ ತುರ್ತು ಸಂದರ್ಭದಲ್ಲಿ ನೆರವಿಗಾಗಿ ಮಂಗಳೂರು ಸಿಟಿ ಪೊಲೀಸ್ ಕಂಟ್ರೋಲ್ ರೂಮ್: 0824-2220500 ಅಥವಾ ತುರ್ತು ಸಹಾಯವಾಣಿ 112 ಅನ್ನು ಸಂಪರ್ಕಿಸಬಹುದಾಗಿದೆ.
ಯಾವುದೇ ಅನಾಹುತ ನಡೆದ ಮೇಲೆ ಅನುಭವಿಸುವ ಬದಲು, “ಈಗಲೇ ಎಚ್ಚೆತ್ತುಕೊಳ್ಳೋಣ, ಸುರಕ್ಷಿತರಾಗಿರೋಣ.”
ವಿನೋದದ ಹೆಸರಿನಲ್ಲಿ ಇತರರ ಸ್ವತಂತ್ರ ಮತ್ತು ಗೌರವಕ್ಕೆ ಧಕ್ಕೆ ತರುವ ಹಕ್ಕು ಯಾರಿಗೂ ಇಲ್ಲ. ಇಂತಹ ಘಟನೆಗಳು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ ಪೊಲೀಸರ ಗಮನಕ್ಕೆ ತರಬೇಕು.



Agriculture
ಕರಾವಳಿಯಲ್ಲಿ ರೇಷ್ಮೆ ಕೃಷಿ ಪುನರುಜ್ಜೀವನ: ವಿಟ್ಲದ ಎಫ್ಪಿಸಿಯಿಂದ ಮಹತ್ವದ ಹೆಜ್ಜೆ
ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲವನ್ನು ಕೇಂದ್ರವಾಗಿಸಿಕೊಂಡು ಕಾರ್ಯಾಚರಿಸುತ್ತಿರುವ ಕರಾವಳಿ ಜಿಲ್ಲೆಗಳ ರೈತ ಉತ್ಪಾದಕ ಸಂಸ್ಥೆ (ಭಾರತ್ ಅಗ್ರಿ ಡೆವಲಪ್ಮೆಂಟ್ ಎಫ್ಪಿಸಿಎಲ್) ಕರಾವಳಿ ಭಾಗದಲ್ಲಿ ನಶಿಸಿಹೋಗುತ್ತಿದ್ದ ರೇಷ್ಮೆ ಕೃಷಿಯನ್ನು ಪುನರುಜ್ಜೀವನಗೊಳಿಸಲು ಮಹತ್ವಾಕಾಂಕ್ಷಿ ಯೋಜನೆಯನ್ನು ಹಮ್ಮಿಕೊಂಡಿದೆ.
ಇತ್ತೀಚೆಗೆ ರಾಜ್ಯ ರೇಷ್ಮೆ, ಪಶುಸಂಗೋಪನೆ ಹಾಗೂ ರೇಷ್ಮೆ ಕೃಷಿ ಸಚಿವರಾದ ಕೆ. ವೆಂಕಟೇಶ್ ಅವರು ಕರಾವಳಿ ಭಾಗದಲ್ಲಿ ರೇಷ್ಮೆ ಕೃಷಿಗೆ ಉತ್ತೇಜನ ನೀಡುವ ಈ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕರಾವಳಿಯ ರೈತರು ಅಡಿಕೆಗೆ ಪರ್ಯಾಯವಾಗಿ ರೇಷ್ಮೆ ಕೃಷಿಯತ್ತ ಗಮನ ಹರಿಸಬೇಕು ಎಂದು ಕರೆ ನೀಡಿದ್ದಾರೆ.

ಮೊದಲ ಹಂತದಲ್ಲಿ 50 ಎಕರೆ ರೇಷ್ಮೆ ತೋಟ ಸ್ಥಾಪನೆ
ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ಕರಾವಳಿಯಲ್ಲಿ ರೇಷ್ಮೆ ಕೃಷಿ ಸಂಪೂರ್ಣ ಕುಸಿದಿತ್ತು. ಆದರೆ, ಪ್ರಸ್ತುತ ಭಾರತ್ ಅಗ್ರಿ ಡೆವಲಪ್ಮೆಂಟ್ ಸಂಸ್ಥೆಯು ಮೊದಲ ಹಂತದಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ರೇಷ್ಮೆ ಹುಳು ಸಾಕಾಣಿಕೆಯನ್ನು ಆರಂಭಿಸುವ ಗುರಿ ಹೊಂದಿದ್ದು, ಈಗಾಗಲೇ ವಿಟ್ಲದ ಸುತ್ತಮುತ್ತ ಮೂರು ಎಕರೆ ಪ್ರದೇಶದಲ್ಲಿ ಮುಲ್ಬೆರಿ (ಹಿಪ್ಪುನೇರಳೆ) ತೋಟಗಳನ್ನು ಯಶಸ್ವಿಯಾಗಿ ಸ್ಥಾಪಿಸಲಾಗಿದೆ. ಅಡಿಕೆ ಬೆಳೆಗೆ ಕನಿಷ್ಠ ಮೂರು ವರ್ಷ ಕಾಯಬೇಕಾಗಿರುವ ಹಿನ್ನೆಲೆಯಲ್ಲಿ, ಪ್ರತಿ ತಿಂಗಳು ಆದಾಯ ತಂದುಕೊಡುವ ರೇಷ್ಮೆ ಕೃಷಿ ಕರಾವಳಿ ರೈತರಿಗೆ ಅತ್ಯುತ್ತಮ ಪರ್ಯಾಯ ಬೆಳೆಯಾಗಲಿದೆ.
ಮುಲ್ಬೆರಿ ಸೊಪ್ಪಿನ ಕೊರತೆ ನೀಗಿಸಲು ನೂತನ ಯೋಜನೆ
ರೇಷ್ಮೆ ಕೃಷಿಗೆ ಪ್ರಮುಖವಾಗಿ ಬೇಕಾಗುವ ಮುಲ್ಬೆರಿ ಸೊಪ್ಪಿನ ಕೊರತೆಯನ್ನು ನೀಗಿಸಲು ವಿಟ್ಲ ಸುತ್ತಮುತ್ತ ಮೂರು ನರ್ಸರಿಗಳನ್ನು ಸ್ಥಾಪಿಸಲಾಗಿದೆ. ಪ್ರತಿಯೊಂದು ತಾಲೂಕಿನಲ್ಲೂ ಸುಮಾರು 20 ಎಕರೆ ಜಾಗವನ್ನು ಗುತ್ತಿಗೆಗೆ ಪಡೆದು ಮುಲ್ಬೆರಿ ಬೆಳೆಸಲು ಸಂಸ್ಥೆ ಮುಂದಾಗಿದೆ. ಸ್ಥಳಾವಕಾಶದ ಕೊರತೆ ಇರುವ ಸಣ್ಣ ರೈತರಿಗೆ ಎಲೆಗಳನ್ನು ಪೂರೈಸುವ ವಿನೂತನ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ. ಕಡಿಮೆ ಜಾಗ ಹೊಂದಿರುವ ರೈತರು ತಮ್ಮ ಖಾಲಿ ಜಾಗದಲ್ಲಿ ಸಣ್ಣ ಶೆಡ್ ನಿರ್ಮಿಸಿ ರೇಷ್ಮೆ ಹುಳು ಸಾಕಾಣಿಕೆ ಮಾಡಬಹುದಾಗಿದೆ. ಈಗಾಗಲೇ ಮುಲ್ಬೆರಿ ಕೃಷಿಗಾಗಿ ವಿಟ್ಲದಲ್ಲಿ 10 ಎಕರೆ ಹಾಗೂ ಸುಳ್ಯದಲ್ಲಿ 2 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ.

ವಿಜ್ಞಾನಿಗಳ ನೇಮಕ ಮತ್ತು ತರಬೇತಿ
ಗ್ರಾಮ ಪಂಚಾಯತ್ ಮಟ್ಟದಲ್ಲಿ ಮುಲ್ಬೆರಿ ಬೆಳೆಯ ಉಸ್ತುವಾರಿ ಮತ್ತು ನಿರ್ವಹಣೆಗಾಗಿ ಇಬ್ಬರು ತಜ್ಞ ವಿಜ್ಞಾನಿಗಳನ್ನು ಹಾಗೂ ರೇಷ್ಮೆ ಸಖಿಯರನ್ನು ನೇಮಿಸುವ ಯೋಜನೆ ಜಾರಿಯಲ್ಲಿದೆ. ರೇಷ್ಮೆ ಹುಳುಗಳ ರೋಗ ನಿಯಂತ್ರಣ ಹಾಗೂ ಉತ್ತಮ ಇಳುವರಿಗಾಗಿ ರೈತರಿಗೆ ತರಬೇತಿ ನೀಡಲು ರೇಷ್ಮೆ ತರಬೇತಿ ಕೇಂದ್ರವನ್ನು ತೆರೆಯುವ ಪ್ರಸ್ತಾವನೆಯೂ ಸರಕಾರದ ಮುಂದಿದೆ. ಬೆಳ್ತಂಗಡಿಯ ಗೇರುಕಟ್ಟೆಯಲ್ಲಿರುವ ಇಲಾಖೆಯ ರೇಷ್ಮೆ ಕೇಂದ್ರವನ್ನು ವಾರ್ಷಿಕ 30,000 ಕೆ.ಜಿ. ರೇಷ್ಮೆ ಗೂಡು ಉತ್ಪಾದಿಸುವ ಅತ್ಯಾಧುನಿಕ ಘಟಕವನ್ನಾಗಿ ಪರಿವರ್ತಿಸಿ ರೈತರಿಗೆ ಪೂರೈಸಲಾಗುತ್ತಿದೆ.
ಮಾರುಕಟ್ಟೆ ಕೊರತೆಗೆ ಶಾಶ್ವತ ಪರಿಹಾರ
ಈ ಹಿಂದೆ ಕರಾವಳಿ ಭಾಗದಲ್ಲಿ ಸಮೀಪದ ಮಾರುಕಟ್ಟೆ ಇಲ್ಲದ ಕಾರಣ ರೈತರು ರೇಷ್ಮೆ ಗೂಡುಗಳನ್ನು ಮಾರಾಟ ಮಾಡಲು ಹಾಸನ ಅಥವಾ ರಾಮನಗರದವರೆಗೆ ಹೋಗಬೇಕಾದ ಅನಿವಾರ್ಯತೆ ಇತ್ತು. ಕಾರ್ಮಿಕರ ಕೊರತೆ ಮತ್ತು ಭಾರೀ ಮಳೆಯಿಂದಾಗಿ ರೈತರು ನಷ್ಟ ಅನುಭವಿಸಿದ್ದರು. ಈ ಸಮಸ್ಯೆಗೆ ಪರಿಹಾರವಾಗಿ, 2020 ರಿಂದ ನಿಷ್ಕ್ರಿಯವಾಗಿದ್ದ ದಕ್ಷಿಣ ಕನ್ನಡ-ಉಡುಪಿ ರೇಷ್ಮೆ ರೈತರ ಸಂಘವನ್ನು ಪುನರುಜ್ಜೀವನಗೊಳಿಸಲು ತೀರ್ಮಾನಿಸಲಾಗಿದೆ. ಸ್ಥಳೀಯವಾಗಿಯೇ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮೂಲಕ ಕರಾವಳಿಯ ರೇಷ್ಮೆ ಬೆಳೆಗಾರರಿಗೆ ಆರ್ಥಿಕ ಭದ್ರತೆ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಸಂಸ್ಥೆಯ ಪ್ರಮುಖರು ತಿಳಿಸಿದ್ದಾರೆ.

ಭಾರತ್ ಅಗ್ರಿ ಡೆವಲಪ್ಮೆಂಟ್ ಎಫ್ಪಿಸಿಎಲ್ (Bharath Agri Development Farmers Producer Company Limited – FPCL) ಎನ್ನುವುದು ರೈತರ ಕಲ್ಯಾಣ ಮತ್ತು ಕೃಷಿ ಅಭಿವೃದ್ಧಿಗಾಗಿ ಸ್ಥಾಪಿಸಲಾದ ಒಂದು ರೈತ ಉತ್ಪಾದಕ ಕಂಪನಿ (Farmers Producer Company) ಆಗಿದೆ.
ಇದು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ (MCA) ಅಡಿಯಲ್ಲಿ ಜೂನ್ 13, 2024 ರಂದು ಅಧಿಕೃತವಾಗಿ ನೋಂದಣಿಯಾಗಿದೆ.
ಈ ಸಂಸ್ಥೆಯ ಪ್ರಮುಖ ವಿವರಗಳು ಈ ಕೆಳಗಿನಂತಿವೆ:
1. ಮುಖ್ಯ ಕಚೇರಿ ಮತ್ತು ಕಾರ್ಯಾಚರಣೆ
ನೋಂದಾಯಿತ ಕಚೇರಿ: ಲಕ್ಷ್ಮಿ ಕೃಷ್ಣ ಟವರ್, ಬಲ್ಮಠ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ (ಪಿನ್: 575002).
ಸ್ಥಳೀಯ ಶಾಖೆ/ಕಚೇರಿ: ಇದರ ಜಿಎಸ್ಟಿ (GST) ನೋಂದಣಿಯ ಪ್ರಕಾರ, ವಿಟ್ಲ-ಪುತ್ತೂರು ರಸ್ತೆಯ ವಿಟ್ಲದ ಶ್ರೀ ಮಂಜುನಾಥ ಸ್ವಾಮಿ ಸಂಕೀರ್ಣದಲ್ಲೂ ಇದು ತನ್ನ ವ್ಯವಹಾರದ ಸ್ಥಳವನ್ನು ಹೊಂದಿದೆ.
2. ಪ್ರಮುಖ ಉದ್ದೇಶಗಳು (FPO/FPC ಗಳ ಕೆಲಸ)
ಒಂದು ರೈತ ಉತ್ಪಾದಕ ಕಂಪನಿಯಾಗಿ (FPC), ಇದು ಪ್ರಮುಖವಾಗಿ ಈ ಕೆಳಗಿನ ಉದ್ದೇಶಗಳನ್ನು ಹೊಂದಿರುತ್ತದೆ:
ರೈತರ ಒಕ್ಕೂಟ: ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಒಂದೆಡೆ ಸೇರಿಸಿ, ಅವರಿಗೆ ಕೃಷಿಯಲ್ಲಿ ಮಾರುಕಟ್ಟೆ ಶಕ್ತಿಯನ್ನು ಒದಗಿಸುವುದು.
ಕೃಷಿ ಪರಿಕರಗಳ ಪೂರೈಕೆ: ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳು, ರಸಗೊಬ್ಬರಗಳು, ಜೈವಿಕ ಪೋಷಕಾಂಶಗಳು ಮತ್ತು ಆಧುನಿಕ ಕೃಷಿ ಉಪಕರಣಗಳನ್ನು ರೈತರಿಗೆ ನ್ಯಾಯಯುತ ಬೆಲೆಯಲ್ಲಿ ತಲುಪಿಸುವುದು.
ಮಾರುಕಟ್ಟೆ ವ್ಯವಸ್ಥೆ: ರೈತರು ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಮತ್ತು ಯೋಗ್ಯ ಬೆಲೆ ಸಿಗುವಂತೆ ನೇರ ಮಾರುಕಟ್ಟೆ ಸಂಪರ್ಕ ಕಲ್ಪಿಸುವುದು.
ಈ ಆಡಳಿತ ಮಂಡಳಿಯಲ್ಲಿ ಎಂ ಪ್ರಸಾದ್ ಶೆಟ್ಟಿ ನೇತೃತ್ವದ ನಿರ್ದೇಶಕರ ಮತ್ತು ಸಲಹಾ ಸಮಿತಿಗಳನ್ನು ರಾಜ್ಯಮಟ್ಟದಲ್ಲಿ ಜವಾಬ್ದಾರಿತವಾಗಿ ಮಾಡಲು ಸಂಸ್ಥೆಯಿಂದ ವಿಶೇಷ ತಂಡಗಳನ್ನು ರಚಿಸಲಾಗಿದೆ. ಸಣ್ಣ ಹಿಡುವಳಿದಾರರಾದ ಸ್ಥಳೀಯ ರೈತರಿಗೆ ತಾಂತ್ರಿಕತೆ, ಸೌಲಭ್ಯ ಹಾಗೂ ಮಾರುಕಟ್ಟೆ ಬೆಂಬಲ ನೀಡಿ ಅವರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.



Dakshina Kannada
ಕರಾವಳಿ ಮಕ್ಕಳಾಟ ಅಲ್ಲ, ಉಸ್ತುವಾರಿ ಆಯ್ಕೆಯಲ್ಲಿ ಎಚ್ಚರ ತಪ್ಪಿದರೆ ಇಡೀ ರಾಜ್ಯಕ್ಕೆ ಗಂಡಾಂತರ: ಮುನೀರ್ ಕಾಟಿಪಳ್ಳ ಎಚ್ಚರಿಕೆ
ಮಂಗಳೂರು: ಸಿದ್ದರಾಮಯ್ಯ ಅವರ ರಾಜೀನಾಮೆ ಅಂಗೀಕಾರವಾಗುತ್ತಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಣ್ಣದೊಂದು ಆತಂಕದ ವಾತಾವರಣ ಶುರುವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಕಳವಳ ವ್ಯಕ್ತಪಡಿಸಿದ್ದಾರೆ. ಹೊಸ ಆಡಳಿತಗಾರರು ಹಾಗೂ ಉಸ್ತುವಾರಿಗಳ ಆಯ್ಕೆಯು ಕರಾವಳಿಯ ಕಾನೂನು ಸುವ್ಯವಸ್ಥೆಯ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಅವರು ಗಂಭೀರ ಎಚ್ಚರಿಕೆಯನ್ನು ನೀಡಿದ್ದಾರೆ.

ಐಪಿಎಸ್ ಅಧಿಕಾರಿಗಳ ಬದಲಾವಣೆ ಆತಂಕ:
ಜಿಲ್ಲೆಯಲ್ಲಿ ಸದ್ಯ ಕಾನೂನು ಸುವ್ಯವಸ್ಥೆಯ ಮೇಲೆ ಬಿಗಿ ಹಿಡಿತ ಹೊಂದಿರುವ ದಕ್ಷಿಣ ಕನ್ನಡದ ದಕ್ಷ ಐಪಿಎಸ್ ಅಧಿಕಾರಿಗಳನ್ನು ಬದಲಾಯಿಸುವ ಅಥವಾ ಹೊಸ ಆಡಳಿತಗಾರರು ಅವರ ಕೈಗಳನ್ನು ಕಟ್ಟಿ ಹಾಕುವ ಸಾಧ್ಯತೆಗಳೇ ಈ ಆತಂಕಕ್ಕೆ ಮುಖ್ಯ ಕಾರಣವಾಗಿದೆ. ಇದರೊಂದಿಗೆ ಜಿಲ್ಲೆಯ ಕಂದಾಯ ಆಡಳಿತವನ್ನು ಜನಸ್ನೇಹಿಗೊಳಿಸುವ ದೊಡ್ಡ ಸವಾಲು ಕೂಡ ಹೊಸ ಆಡಳಿತದ ಮೇಲಿದೆ. ಜಿಲ್ಲೆಯ ಹಿತದೃಷ್ಟಿಯಿಂದ “ಒಂದೆರಡು ಹೆಸರುಗಳು ಸಚಿವರಾಗಿ ಬಾರದಿರಲಿ” ಎನ್ನುವುದೇ ಬಹುತೇಕ ಜನರ ಪ್ರಾರ್ಥನೆಯಾಗಿದೆ ಎಂದು ಅವರು ಹೇಳಿದ್ದಾರೆ.

ಹರಿಪ್ರಸಾದ್, ರಮಾನಾಥ ರೈ ಅವರಂಥ ನಾಯಕತ್ವಕ್ಕೆ ಆಗ್ರಹ:
“ಕಳೆದ ವರ್ಷ ಸರಣಿ ಕೊಲೆಗಳು, ಮತೀಯ ಸಂಘರ್ಷದ ಚಟುವಟಿಕೆಗಳಿಂದ ಜಿಲ್ಲೆ ಹೈರಾಣಾಗಿ ಹೋಗಿದ್ದ ಸಂದರ್ಭದಲ್ಲಿ, ಪರಿಸ್ಥಿತಿಯನ್ನು ನಿಭಾಯಿಸಲು ಬಿ. ಕೆ. ಹರಿಪ್ರಸಾದ್ ಅಥವಾ ರಮಾನಾಥ ರೈ ಅವರಂತಹ ಹಿರಿಯ ನಾಯಕರ ಕೈಗೆ ಅಧಿಕಾರ ಸಿಗಬೇಕು ಎಂದು ಜನತೆ ಆಗ್ರಹಿಸುತ್ತಿದ್ದರು” ಎಂಬುದನ್ನು ಮುನೀರ್ ಕಾಟಿಪಳ್ಳ ಈ ಸಂದರ್ಭದಲ್ಲಿ ನೆನಪಿಸಿದ್ದಾರೆ.
ಬಾಲ ಬಿಚ್ಚಲು ಕಾಯುತ್ತಿವೆ ಅನಾಹುತಕಾರಿ ಶಕ್ತಿಗಳು:
ಹೊಸ ಮುಖ್ಯಮಂತ್ರಿಗಳು, ರಾಜೀನಾಮೆ ನೀಡಿರುವ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣರು ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತಿಸಬೇಕಾಗಿದೆ. ಸರಿಯಾದವರ ಕೈಗೆ ಜಿಲ್ಲೆಯ ಆಡಳಿತ ನೀಡದಿದ್ದಲ್ಲಿ, ಕಳೆದ ಒಂದು ವರ್ಷದಿಂದ ಉಸಿರು ಬಿಗಿಹಿಡಿದು ಕಾಯುತ್ತಿರುವ ಮತೀಯ ಶಕ್ತಿಗಳು ಮತ್ತು ಅನಾಹುತಕಾರಿ ಮಾಫಿಯಾಗಳು ಜಿಲ್ಲೆಯಲ್ಲಿ ಮತ್ತೆ ಮೇಲುಗೈ ಸಾಧಿಸಲಿವೆ. ಅವರು ಒಮ್ಮೆ ಬಾಲ ಬಿಚ್ಚಿದರೆ ಮುಂದೆ ನಿಯಂತ್ರಣ ಮಾಡುವುದು ಅಸಾಧ್ಯವಾಗುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಕಾಂಗ್ರೆಸ್ ನಾಯಕತ್ವಕ್ಕೆ ನೇರ ಎಚ್ಚರಿಕೆ:
ಮುಂದಿನ ದಿನಗಳಲ್ಲಿ ಚುನಾವಣೆ ಬರಲಿದ್ದು, ರಾಜ್ಯ ಸರ್ಕಾರದ ಅಧಃಪತನಕ್ಕೆ ಕರಾವಳಿಯ ಅಧ್ವಾನಗಳೇ ಸಾಕಾಗುತ್ತದೆ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಮರೆಯಬಾರದು.
ಸೈದ್ಧಾಂತಿಕವಾಗಿ ಹಾಗೂ ಆಡಳಿತಾತ್ಮಕವಾಗಿ ದೃಢವಾಗಿ ಇರುವವರಿಗೆ ಮಾತ್ರ ಜವಾಬ್ದಾರಿ ನೀಡಿ.
ವಿಪರೀತ ಹಣದ ಹುಚ್ಚು ಇರುವವರ ಕೈಗೆ ಜಿಲ್ಲೆಯ ಉಸ್ತುವಾರಿ ಅಥವಾ ಸಚಿವ ಸ್ಥಾನದ ಅವಕಾಶ ನೀಡದಂತೆ ಎಚ್ಚರ ವಹಿಸಿ.
“ಕರಾವಳಿ ಎಂಬುದು ಮಕ್ಕಳಾಟ ಅಲ್ಲ. ಇಲ್ಲಿ ಎಚ್ಚರ ತಪ್ಪಿದರೆ ಅದರ ಭೀಕರ ಪರಿಣಾಮವನ್ನು ಇಡೀ ರಾಜ್ಯವೇ ಅನುಭವಿಸಬೇಕಾಗುತ್ತದೆ” ಎಂದು ಮುನೀರ್ ಕಾಟಿಪಳ್ಳ ಅತ್ಯಂತ ಕಡಕ್ ಆಗಿ ಎಚ್ಚರಿಸಿದ್ದಾರೆ



-
crime2 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime4 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala2 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala5 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 weeks agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Dakshina Kannada6 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala4 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala5 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
