Connect with us

Condolences

ಪಿಯು ವಿದ್ಯಾರ್ಥಿನಿಯನ್ನು ಬಲಿ ಪಡೆದ ಪಾಸ್ಟ್ ಪುಡ್

Published

on

ನವದೆಹಲಿ: ‘ಫಾಸ್ಟ್ ಫುಡ್’ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಆಧುನಿಕ ಜೀವನಶೈಲಿಯಲ್ಲಿ ಬಹುತೇಕ ಮಕ್ಕಳು ಹಠ ಹಿಡಿದು ಈ ಆಹಾರ ಪದ್ಧತಿಯನ್ನು ಇಷ್ಟಪಟ್ಟು ಸೇವಿಸುತ್ತಿದ್ದು, ಇದು ನಮ್ಮ ಜೀವವನ್ನೇ ಬಲಿ ತೆಗೆದುಕೊಳ್ಳಬಹುದು ಎಂಬುದಕ್ಕೆ ದೆಹಲಿಯ ಏಮ್ಸ್ನಲ್ಲಿ ನಡೆದ ಒಂದು ದುರಂತ ಘಟನೆ ಸಾಕ್ಷಿಯಾಗಿದೆ. ಜಂಕ್ ಫುಡ್ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಪ್ರಥಮ ಪಿಯು ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿರುವ ಘಟನೆ ದೇಶಾದ್ಯಂತ ಆತಂಕ ಮೂಡಿಸಿದೆ.
ಅಹಾನಾ ಎಂಬ 16 ವರ್ಷದ ವಿದ್ಯಾರ್ಥಿನಿ ಕಳೆದ ಸೋಮವಾರ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (AIIMS) ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಳು. ಕರುಳಿನ ತೀವ್ರತರವಾದ ಸೋಂಕಿನಿOದ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಕೇವಲ 16ನೇ ವಯಸ್ಸಿನಲ್ಲಿಯೇ ಆಕೆಯ ಜೀರ್ಣಾಂಗ ವ್ಯವಸ್ಥೆಯು ಸಂಪೂರ್ಣವಾಗಿ ಹದಗೆಟ್ಟಿತ್ತು ಎಂದರೆ ಜಂಕ್ ಫುಡ್ ಎಷ್ಟು ಅಪಾಯಕಾರಿ ಎಂಬುದನ್ನು ಊಹಿಸಬಹುದು.


ಸಖತ್ ಟೇಸ್ಟಿ ಅಂತ ಫಾಸ್ಟ್ಫುಡ್ ಚಪ್ಪರಿಸಿ ತಿನ್ನೋ ಮುನ್ನ ಎಚ್ಚರ !
ಅಹಾನಾಳ ಕುಟುಂಬದವರು ನೀಡಿರುವ ಮಾಹಿತಿ ಪ್ರಕಾರ, ಆಕೆ ಬಾಲ್ಯದಿಂದಲೂ ಮನೆಯಲ್ಲಿ ತಯಾರಿಸಿದ ಆಹಾರಕ್ಕಿಂತ ಮಾರುಕಟ್ಟೆಯಲ್ಲಿ ಸಿಗುವ ಚೌಮಿನ್, ಮ್ಯಾಗಿ, ಪಿಜ್ಜಾ ಮತ್ತು ಬರ್ಗರ್‌ಗಳನ್ನೇ ಅತಿಯಾಗಿ ಇಷ್ಟಪಡುತ್ತಿದ್ದಳು. ಪೋಷಕರು ಎಚ್ಚರಿಕೆ ನೀಡಿದರೂ, ಮನೆಯವರ ಕಣ್ಣು ತಪ್ಪಿಸಿ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳನ್ನು (ಅhiಠಿs & Sಟಿಚಿಛಿಞs) ತಿನ್ನುತ್ತಿದ್ದಳು. ದೀರ್ಘಕಾಲದ ಈ ಆಹಾರ ಪದ್ಧತಿಯಿಂದಾಗಿ ಆಕೆಯ ಕರುಳುಗಳು ಪರಸ್ಪರ ಅಂಟಿಕೊAಡಿದ್ದವು ಎಂದು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೈದ್ಯರು ಪತ್ತೆಹಚ್ಚಿದ್ದಾರೆ.
ನವೆಂಬರ್ 28 ರಂದು ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಾಗ ಅಹಾನಾಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಆಕೆಯ ಹೊಟ್ಟೆಯಲ್ಲಿ ದ್ರವ ಸಂಗ್ರಹವಾಗಿರುವುದು ಪತ್ತೆಯಾಯಿತು. ಶಸ್ತ್ರಚಿಕಿತ್ಸೆಯ ಮೂಲಕ ಆಕೆಯ ಹೊಟ್ಟೆಯಿಂದ ಬರೋಬ್ಬರಿ ಏಳು ಲೀಟರ್ ದ್ರವವನ್ನು ಹೊರತೆಗೆಯಲಾಗಿತ್ತು. ಅಷ್ಟರ ಮಟ್ಟಿಗೆ ಸೋಂಕು ಆಕೆಯ ದೇಹವನ್ನು ಆವರಿಸಿತ್ತು.


ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿ ಏಮ್ಸ್ಗೆ ದಾಖಲಾದಾಗ ಅಹಾನಾ ಚೇತರಿಸಿಕೊಳ್ಳುವ ಭರವಸೆ ಇತ್ತು. ಆದರೆ ಭಾನುವಾರ ತಡರಾತ್ರಿ ಆಕೆಯ ಸ್ಥಿತಿ ಹಠಾತ್ತನೆ ಹದಗೆಟ್ಟಿತು. ಕರುಳಿನಲ್ಲಿ ಪ್ರಾರಂಭವಾದ ಸೋಂಕು ಶ್ವಾಸಕೋಶಗಳಿಗೆ ಹರಡಿತ್ತು. ಇದರಿಂದ ದೇಹದಲ್ಲಿ ರಕ್ತ ಪರಿಚಲನೆ ಕಡಿಮೆಯಾಗಿ, ಹೃದಯಕ್ಕೆ ರಕ್ತ ಸಾಗಿಸುವ ರಕ್ತನಾಳಗಳು ಮುಚ್ಚಿಹೋಗಿದ್ದವು. ಕೊನೆಗೆ ಹೃದಯಾಘಾತದಿಂದ ಆಕೆ ಸಾವನ್ನಪ್ಪಿದ್ದಾಲೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಘಟನೆಯ ಬೆನ್ನಲ್ಲೇ ಅಮ್ರೋಹಾದ ಮುಖ್ಯ ವೈದ್ಯಾಧಿಕಾರಿ ಡಾ. ಎಸ್.ಪಿ. ಸಿಂಗ್ ಪೋಷಕರಿಗೆ ಕಟ್ಟುನಿಟ್ಟಾದ ಎಚ್ಚರಿಕೆ ನೀಡಿದ್ದಾರೆ. ಫಾಸ್ಟ್ ಫುಡ್‌ಗಳಲ್ಲಿ ಮಸಾಲೆ, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳು ಅಧಿಕವಾಗಿರುತ್ತವೆ. ಇವು ಮಕ್ಕಳ ನೈಸರ್ಗಿಕ ಹಸಿವನ್ನು ಕೊಲ್ಲುತ್ತವೆ. ತಂಪು ಪಾನೀಯಗಳು, ಫ್ರೆಂಚ್ ಫ್ರೈಗಳು ಮಕ್ಕಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ ಎಂದು ತಿಳಿಸಿದ್ದಾರೆ.


ಅಹಾನಾಳ ಸಾವು ಕೇವಲ ಒಂದು ಅಪಘಾತವಲ್ಲ, ಬದಲಿಗೆ ಅದು ಅನಾರೋಗ್ಯಕರ ಆಹಾರ ಪದ್ಧತಿಯ ಪರಿಣಾಮ. ಮಕ್ಕಳನ್ನು ಜಂಕ್ ಫುಡ್‌ನಿಂದ ದೂರವಿಟ್ಟು, ನೈಸರ್ಗಿಕ ಮತ್ತು ಮನೆಯಲ್ಲಿ ತಯಾರಿಸಿದ ಪೌಷ್ಟಿಕ ಆಹಾರದ ಕಡೆಗೆ ಪ್ರೇರೇಪಿಸುವುದು ಇಂದಿನ ತುರ್ತು ಅಗತ್ಯವಾಗಿದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ಕೆಲಿಂಜ ಶಾಲೆಯ ಮುಖ್ಯಶಿಕ್ಷಕಿ ವನಿತಾ ಶೆಟ್ಟಿಗಾರ್ ಹೃದಯಾಘಾತಕ್ಕೆ ಬಲಿ: ವಾರದೊಳಗೆ ಇಬ್ಬರು ಮುಖ್ಯಶಿಕ್ಷಕಿಯರ ಸಾವು!

Published

on

ಬಂಟ್ವಾಳ: ಶಿಕ್ಷಣ ಕ್ಷೇತ್ರಕ್ಕೆ ಆಘಾತಕಾರಿ ಸುದ್ದಿ. ಕೆಲಿಂಜ ಶಾಲೆಯ ಮುಖ್ಯಶಿಕ್ಷಕಿ ವನಿತಾ ಶೆಟ್ಟಿಗಾರ್ (58) ಅವರು ಹೃದಯಾಘಾತದಿಂದ ನ.2ರಂದು ರಾತ್ರಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಿಶೇಷವೆಂದರೆ, ವಾರದ ಹಿಂದಷ್ಟೇ ಸಮೀಪದ ಒಕ್ಕೆತ್ತೂರು ಸರಕಾರಿ ಶಾಲೆಯ ಮುಖ್ಯಶಿಕ್ಷಕಿ ಯಮುನಾ ಅವರು ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದು, ಇದೀಗ ಮತ್ತೋರ್ವ ಮುಖ್ಯಶಿಕ್ಷಕಿಯ ಸಾವು ಶಿಕ್ಷಣ ವಲಯದಲ್ಲಿ ತೀವ್ರ ಶೋಕ ಮೂಡಿಸಿದೆ.

ಗುರುಪುರ ಕೈಕಂಬದ ಕಂದಾವರ ಬೈಲು ನಿವಾಸಿಯಾಗಿದ್ದ ವನಿತಾ ಶೆಟ್ಟಿಗಾರ್ ಅವರು ನ.2ರಂದು ಎಂದಿನಂತೆ ಶಾಲೆಗೆ ತೆರಳಿ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಮನೆಗೆ ಮರಳಿದ್ದರು. ರಾತ್ರಿ ಮನೆಯಲ್ಲಿ ತೀವ್ರ ಎದೆನೋವು ಕಾಣಿಸಿಕೊಂಡು, ಬಳಿಕ ವಾಂತಿಯಾಗಿದ್ದು, ತಕ್ಷಣ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

34 ವರ್ಷಗಳ ಸುದೀರ್ಘ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿದ್ದ ವನಿತಾ ಶೆಟ್ಟಿಗಾರ್ ಅವರು ಅನೇಕ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದರು. ಅವರ ನಿಧನದಿಂದ ಶಿಕ್ಷಕ ವಲಯದಲ್ಲಿ ಶೋಕ ಆವರಿಸಿದೆ. ಸಹೋದ್ಯೋಗಿ ಶಿಕ್ಷಕರು, ಹಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣಾಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಇದಕ್ಕೂ ಮೊದಲು ಅಕ್ಟೋಬರ್ 27ರಂದು ಕೆಲಿಂಜ ಶಾಲೆಯ ಸಮೀಪದ ಒಕ್ಕೆತ್ತೂರು ಸರಕಾರಿ ಶಾಲೆಯ ಮುಖ್ಯಶಿಕ್ಷಕಿ ಯಮುನಾ ಅವರು ಅನಾರೋಗ್ಯದಿಂದ ನಿಧನರಾಗಿದ್ದರು. ಈ ಘಟನೆ ನಡೆದು ವಾರ ಕಳೆಯುವ ಮುನ್ನವೇ ಮತ್ತೊಂದು ಶಾಲೆಯ ಮುಖ್ಯಶಿಕ್ಷಕಿ ವನಿತಾ ಶೆಟ್ಟಿಗಾರ್ ಅವರು ಹೃದಯಾಘಾತಕ್ಕೆ ಬಲಿಯಾಗಿರುವುದು ಸ್ಥಳೀಯ ಶಿಕ್ಷಣ ಸಮುದಾಯಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ.

ವಾರದ ಅಂತರದಲ್ಲಿ ಇಬ್ಬರು ಶಾಲಾ ಮುಖ್ಯಸ್ಥೆಯರನ್ನು ಕಳೆದುಕೊಂಡಿರುವುದು ಶಿಕ್ಷಕ ಸಮುದಾಯದಲ್ಲಿ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ.

Continue Reading

accident

MRPL ಉದ್ಯೋಗಿ ರಾಜೇಶ್ ಎ. ಡಿ’ಸಿಲ್ವಾ ನಿಧನ: ಸಂಸ್ಥೆಯಿಂದ ತೀವ್ರ ಸಂತಾಪ, ಕುಟುಂಬಕ್ಕೆ ₹1.20 ಕೋಟಿ ಪರಿಹಾರ ಘೋಷಣೆ

Published

on

ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಸ್ಥೆಯ ಉದ್ಯೋಗಿ ಶ್ರೀ ರಾಜೇಶ್ ಎ. ಡಿ’ಸಿಲ್ವಾ ಅವರು ಸುಟ್ಟ ಗಾಯಗಳಿಂದಾಗಿ 2026ರ ಅಕ್ಟೋಬರ್ 17ರಂದು ನಿಧನರಾಗಿದ್ದು, ಅವರ ಅಗಲಿಕೆಗೆ MRPL ಆಡಳಿತ ಮಂಡಳಿ ತೀವ್ರ ಕಂಬನಿ ಮಿಡಿದಿದೆ.

ಕಳೆದ ಸೆಪ್ಟೆಂಬರ್ 30, 2026ರಂದು ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋಟ್ರೀಟರ್ (CHT) ಘಟಕದಲ್ಲಿ ನಡೆದ ದುರದೃಷ್ಟಕರ ಘಟನೆಯಲ್ಲಿ ರಾಜೇಶ್ ಅವರು ತೀವ್ರವಾಗಿ ಸುಟ್ಟ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಅಕ್ಟೋಬರ್ 17ರಂದು ಕೊನೆಯುಸಿರೆಳೆದಿದ್ದಾರೆ.

ಕುಟುಂಬಕ್ಕೆ ₹1.20 ಕೋಟಿ ಆರ್ಥಿಕ ನೆರವು

ಈ ಕಷ್ಟದ ಸಮಯದಲ್ಲಿ ಮೃತರ ಕುಟುಂಬದೊಂದಿಗೆ ಆಡಳಿತ ಮಂಡಳಿ ದೃಢವಾಗಿ ನಿಲ್ಲಲಿದ್ದು, ತನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದೆ. ಮೃತರ ಕುಟುಂಬದ ಭವಿಷ್ಯ ಹಾಗೂ ಆರ್ಥಿಕ ಭದ್ರತೆಯ ಹಿತದೃಷ್ಟಿಯಿಂದ ಸಂಸ್ಥೆಯು ₹90 ಲಕ್ಷಗಳ ಎಕ್ಸ್‌ಗ್ರೇಷಿಯಾ (ವಿಶೇಷ) ಪರಿಹಾರ ಘೋಷಿಸಿದೆ. ಇದರೊಂದಿಗೆ, ವಿವಿಧ ಮೂಲಗಳಿಂದ ಸಿಗುವ ಪರಿಹಾರ ಸೇರಿದಂತೆ ಮೃತರ ಕುಟುಂಬಕ್ಕೆ ತಲುಪುವ ಒಟ್ಟು ಆರ್ಥಿಕ ನೆರವಿನ ಮೊತ್ತ ₹1.20 ಕೋಟಿ ಆಗಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

Continue Reading

Condolences

ಮಂಡ್ಯದಲ್ಲಿ ಕಣ್ಣೀರು ತರಿಸುವ ಘಟನೆ: ಬದುಕಿದ್ದಾಗ ಕಡೆಗಣಿಸಿ ಸತ್ತಾಗ ಲಕ್ಷಾಂತರ ರೂ. ಹಂಚಿಕೊಂಡ ಸಂಬಂಧಿಕರು!

Published

on

ಮಂಡ್ಯ: ಮಾನವೀಯತೆ ಮರೆತು, ಹಣಕ್ಕಷ್ಟೇ ಬೆಲೆ ನೀಡುವ ಕಟು ಸತ್ಯಕ್ಕೆ ಸಾಕ್ಷಿಯಾಗುವಂತಹ ಹೃದಯವಿದ್ರಾವಕ ಘಟನೆಯೊಂದು ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿ ನಡೆದಿದೆ. ಆಸರೆ ನೀಡಬೇಕಾದ ಕುಟುಂಬಸ್ಥರಿದ್ದರೂ ಭಿಕ್ಷೆ ಬೇಡಿ ಬದುಕುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟ ನಂತರ, ಅವರ ಮನೆಯಲ್ಲಿ ಬರೋಬ್ಬರಿ ₹8 ಲಕ್ಷಕ್ಕೂ ಅಧಿಕ ನಗದು ಪತ್ತೆಯಾಗಿದ್ದು, ಸತ್ತ ಮೇಲೆ ಆ ಹಣವನ್ನು ಸಂಬಂಧಿಕರು ಹಂಚಿಕೊಂಡಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮಂಡ್ಯ ನಗರದ ಗುತ್ತಲು ನಿವಾಸಿಯಾಗಿದ್ದ ನೂರ್‌ ಎಂಬ ವೃದ್ಧೆ, ಕುಟುಂಬದವರ ನೆರವಿಲ್ಲದೆ ದಶಕಗಳಿಂದ ಊರೂರು ಅಲೆದು ಭಿಕ್ಷಾಟನೆ ಮಾಡುತ್ತಿದ್ದರು. ಸಿಕ್ಕರೆ ಊಟ, ಇಲ್ಲದಿದ್ದರೆ ಉಪವಾಸ ಎಂಬಂತೆ ದಿನ ದೂಡುತ್ತಿದ್ದ ಇವರು, ವಯೋಸಹಜ ಕಾಯಿಲೆಯಿಂದ ತಮ್ಮ ಪುಟ್ಟ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಸಾವಿನ ನಂತರ ಬೆಳಕಿಗೆ ಬಂದ ಲಕ್ಷಾಂತರ ರೂಪಾಯಿ! ವೃದ್ಧೆ ಮೃತಪಟ್ಟ ಸುದ್ದಿ ತಿಳಿದು ಸ್ಥಳೀಯರು ಹಾಗೂ ಸಂಬಂಧಿಕರು ಸೇರಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಬಳಿಕ ಮನೆಯನ್ನು ಪರಿಶೀಲಿಸಿದಾಗ ಮೂಟೆಗಳು ಹಾಗೂ ಪೆಟ್ಟಿಗೆಗಳಲ್ಲಿ ಕಂತೆ ಕಂತೆ ನೋಟುಗಳು ಮತ್ತು ನಾಣ್ಯಗಳು ಪತ್ತೆಯಾಗಿವೆ. ಎಣಿಕೆ ಮಾಡಿದಾಗ ಒಟ್ಟು ಮೊತ್ತ ₹8 ಲಕ್ಷಕ್ಕೂ ಅಧಿಕ ಇರುವುದು ತಿಳಿದುಬಂದಿದೆ.

ಆಶ್ಚರ್ಯ ಎಂದರೆ, ಅಜ್ಜಿ ಬದುಕಿದ್ದಾಗ ತಿರುಗಿಯೂ ನೋಡದ, ಅವರ ಕಷ್ಟಕ್ಕೆ ಸ್ಪಂದಿಸದ ಸಂಬಂಧಿಕರು, ಈ ಹಣ ಪತ್ತೆಯಾಗುತ್ತಿದ್ದಂತೆಯೇ ಅದನ್ನು ಹಂಚಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವೃದ್ಧೆ ಬದುಕಿದ್ದಾಗ ಅನ್ನ ಹಾಕದವರು, ಸತ್ತ ಮೇಲೆ ಅವರ ಕಷ್ಟದ ಹಣಕ್ಕೆ ಮುಗಿಬಿದ್ದಿರುವುದು ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಯಾಗುತ್ತಿದೆ. “ಹಣಕ್ಕೆ ಕೊಡುವ ಬೆಲೆಯನ್ನು ಮನುಷ್ಯತ್ವಕ್ಕೆ ನೀಡದ ಇವರೆಲ್ಲಾ ಮನುಷ್ಯರಾ?” ಎಂದು ಸಾರ್ವಜನಿಕರು ಹಾಗೂ ನೆಟ್ಟಿಗರು ಸಂಬಂಧಿಕರ ಅನಾಗರಿಕ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!