Connect with us

CJP

ನೋಟಿಸ್ ಇಲ್ಲದೆ, ವಿಚಾರಣೆಯಿಲ್ಲದೆ ಮತದಾರರ ಹೆಸರು ತೆಗೆದುಹಾಕುವಂತಿಲ್ಲ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಎಚ್ಚರಿಕೆ

Published

on

ಹೈದರಾಬಾದ್: ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (Special Intensive Revision) ಕುರಿತು ದೇಶಾದ್ಯಂತ ಚರ್ಚೆ ನಡೆಯುತ್ತಿರುವಂತೆಯೇ, ಯಾವುದೇ ಮುನ್ಸೂಚನೆ ಅಥವಾ ನೋಟಿಸ್ ನೀಡದೆ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಸ್ಪಷ್ಟಪಡಿಸಿದ್ದಾರೆ.

ಹೈದರಾಬಾದ್‌ನ NALSAR ಕಾನೂನು ವಿಶ್ವವಿದ್ಯಾಲಯದಲ್ಲಿ ನಡೆದ 19ನೇ NALSAR ನ್ಯಾಯಮೂರ್ತಿ ಬಿ.ಆರ್. ಸಾಹ್ನಿ ಸ್ಮಾರಕ ಮೂಟ್ ಕೋರ್ಟ್ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಇಯಾಗಿ ಭಾಗವಹಿಸಿ ಮಾತನಾಡಿದ ಅವರು, ಈ ವಿಚಾರವಾಗಿ ಕಟು ಶಬ್ದಗಳಲ್ಲಿ ಎಚ್ಚರಿಕೆ ನೀಡಿದ್ದಾರೆ.

ಸಂವಿಧಾನದ 326 ಮತ್ತು 14ನೇ ವಿಧಿಗಳ ನೇರ ಉಲ್ಲಂಘನೆ

ಹೆಚ್ಚಿನ ಸಂಖ್ಯೆಯ ಭಾರತೀಯ ನಾಗರಿಕರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗಲು ಕಾರಣವಾಗುವ ಯಾವುದೇ ಪ್ರಕ್ರಿಯೆಯು ಸಂಪೂರ್ಣವಾಗಿ ನಿರಂಕುಶವಾದುದು ಎಂದು ಬಲವಾಗಿ ಪ್ರತಿಪಾದಿಸಿದ ನ್ಯಾಯಮೂರ್ತಿಗಳು, ಇದು ಭಾರತೀಯ ಸಂವಿಧಾನದ 326ನೇ ವಿಧಿ (ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು) ಹಾಗೂ 14ನೇ ವಿಧಿಗಳ (ಕಾಯ್ದೆಯ ಮುಂದೆ ಸಮಾನತೆ) ನೇರ ಉಲ್ಲಂಘನೆಯಾಗಿದೆ ಎಂದರು.

‘ದೇಹದಿಂದ ಆತ್ಮವನ್ನು ಬೇರ್ಪಡಿಸಿದಂತೆ’

ಲಕ್ಷಾಂತರ ಭಾರತೀಯ ನಾಗರಿಕರನ್ನು ಮತದಾನದ ಹಕ್ಕಿಲ್ಲದವರನ್ನಾಗಿ ಮಾಡುವ ಮೂಲಕ, ಅವರನ್ನು ತಮ್ಮದೇ ದೇಶದಲ್ಲಿ ‘ದ್ವಿತೀಯ ದರ್ಜೆಯ ನಾಗರಿಕರು’ ಎಂದು ಪರಿಗಣಿಸುವಂತಹ ಯಾವುದೇ ಪ್ರಕ್ರಿಯೆಯು ಸ್ವೀಕಾರಾರ್ಹವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ಪ್ರಜೆಯೊಬ್ಬರ ಮತದಾನದ ಹಕ್ಕನ್ನು ಅಥವಾ ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಕಸಿದುಕೊಳ್ಳುವುದು “ದೇಹದಿಂದ ಆತ್ಮವನ್ನು ಬೇರ್ಪಡಿಸಿದಂತೆ” ಎಂದು ಅವರು ಉಪಮೆ ನೀಡಿದರು.

ಮುಖ್ಯಾಂಶಗಳು:

ನಾಗರಿಕರ ವಿಂಗಡನೆಗೆ ಅವಕಾಶವಿಲ್ಲ: ಸಂವಿಧಾನವು ನಾಗರಿಕರನ್ನು ‘ಮತದಾನದ ಹಕ್ಕುಳ್ಳವರು’ ಮತ್ತು ‘ಹಕ್ಕಿಲ್ಲದವರು’ ಎಂದು ಎರಡು ವರ್ಗಗಳಾಗಿ ವಿಂಗಡಿಸಲು ಎಂದಿಗೂ ಅವಕಾಶ ನೀಡುವುದಿಲ್ಲ.

ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ: ಎಷ್ಟೇ ಸಮರ್ಥನೆಗಳನ್ನು ನೀಡಿದರೂ, ನಾಗರಿಕರನ್ನು ಸಾಮೂಹಿಕವಾಗಿ ಹಕ್ಕು ವಂಚಿತರನ್ನಾಗಿಸುವ ಪ್ರಕ್ರಿಯೆಯನ್ನು ಸಮರ್ಥಿಸಲು ಸಾಧ್ಯವಿಲ್ಲ. ಇದು ನಮ್ಮ ಸಾಂವಿಧಾನಿಕ ವ್ಯವಸ್ಥೆಯ ಮೂಲ ಆಶಯದ ಮೇಲಿನ ದಾಳಿಯಾಗಿದೆ.

ಸಂವಿಧಾನವೇ ಅಂತಿಮ: ದೇಶದಲ್ಲಿ ಸಂವಿಧಾನಕ್ಕಿಂತ ಮಿಗಿಲಾದವರು ಯಾರೂ ಇಲ್ಲ. ಯಾವುದೇ ಪ್ರಾಧಿಕಾರವಾಗಲಿ ಅಥವಾ ಯಾವುದೇ ನ್ಯಾಯಾಲಯವಾಗಲಿ ಇಂತಹ ನಿರಂಕುಶ ಪ್ರಕ್ರಿಯೆಗಳನ್ನು ಅನುಮೋದಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಖಡಕ್ ಸಂದೇಶ ರವಾನಿಸಿದ್ದಾರೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ವಿಮಾನದೊಳಗೆ ಹೈಡ್ರಾಮಾ: ಸಿಜೆಪಿ ನಾಯಕರನ್ನು ದಿಢೀರ್ ವಶಕ್ಕೆ ಪಡೆಯಲು ವಿಮಾನದಲ್ಲೇ ಸುತ್ತುವರಿದ ಮಹಿಳಾ ಪೊಲೀಸರು! ಕಾರಣ ಏನು ?

Published

on

ದೆಹಲಿ: ಮುಂಬೈ ಹಾಗೂ ಬೆಂಗಳೂರಿನ ಬಳಿಕ ಇದೀಗ ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್‌ಮಂತರ್‌ನಲ್ಲಿ ಆಯೋಜಿಸಲಾಗಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನಾಯಕರ ಪ್ರತಿಭಟನೆಗೂ ಮುನ್ನವೇ ಹೈಡ್ರಾಮಾ ನಡೆದಿದೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮುಂಬೈನಿಂದ ಆಗಮಿಸಿದ್ದ ಸಿಜೆಪಿ ಸಂಸ್ಥಾಪಕ ಸೇರಿದಂತೆ ಪ್ರಮುಖ ನಾಯಕರನ್ನು ದೆಹಲಿ ವಿಮಾನ ನಿಲ್ದಾಣದಲ್ಲೇ ದಿಢೀರ್ ವಶಕ್ಕೆ ಪಡೆಯಲಾಗಿದೆ. ಅದರಲ್ಲೂ, ಈ ಕಾರ್ಯಾಚರಣೆಗೆ ದೆಹಲಿ ಪೊಲೀಸರು ಉದ್ದೇಶಪೂರ್ವಕವಾಗಿಯೇ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದು ವಿಶೇಷ ಚರ್ಚೆಗೆ ಗ್ರಾಸವಾಗಿದೆ.

ಮುಂಬೈನಿಂದ ಹೊರಟ ಏರ್ ಇಂಡಿಯಾ ವಿಮಾನ ದೆಹಲಿ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದಂತೆಯೇ, ವಿಮಾನದೊಳಗೆ ನುಗ್ಗಿದ ಮಹಿಳಾ ಪೊಲೀಸ್ ಸಿಬ್ಬಂದಿ, ಸಿಜೆಪಿ ನಾಯಕರಾದ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಹಾಗೂ ಅಶುತೋಷ್ ರಂಕಾ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ಮಹಿಳಾ ಪೊಲೀಸರ ಬಳಕೆ ಹಿಂದಿನ ರಣತಂತ್ರವೇನು?

ದೀಪ್ಕೆ ಮತ್ತು ತಂಡವನ್ನು ವಿಮಾನದೊಳಗೆಯೇ ಬಂಧಿಸಲು ಮಹಿಳಾ ಸಿಬ್ಬಂದಿಯನ್ನು ಬಳಸಿಕೊಂಡಿರುವುದರ ಹಿಂದೆ ದೆಹಲಿ ಪೊಲೀಸರ ಎಚ್ಚರಿಕೆಯ ಹೆಜ್ಜೆ ಇದೆ ಎನ್ನಲಾಗಿದೆ. ವಿಮಾನದ ಒಳಭಾಗದ ದಾರಿ (Aisles) ಅತ್ಯಂತ ಕಿರಿದಾಗಿದ್ದು, ಪುರುಷ ಪೊಲೀಸರನ್ನು ಬಳಸಿದರೆ ತಳ್ಳಾಟ, ವಾಗ್ವಾದ ಅಥವಾ ಬಲಪ್ರಯೋಗದಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ದೊಡ್ಡ ಮಟ್ಟದ ನೆಗೆಟಿವ್ ಸುದ್ದಿಯಾಗುವ ಸಾಧ್ಯತೆಯಿತ್ತು.

ಜತೆಗೆ, ಕಳೆದ ಜುಲೈ 20ರಂದು ನಡೆದ ಸಿಜೆಪಿ ಪ್ರತಿಭಟನೆಯ ವೇಳೆ ಪುರುಷ ಪೊಲೀಸರು ವಿದ್ಯಾರ್ಥಿನಿಯರು ಹಾಗೂ ಸಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಅಲ್ಲದೆ, ಪ್ರತಿಭಟನೆಯೊಂದರಲ್ಲಿ ಪ್ರತಿಭಟನಾಕಾರರು ಮಹಿಳಾ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂಬ ಅಪಪ್ರಚಾರವೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಹಿಂದಿನ ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಎಚ್ಚೆತ್ತ ಪೊಲೀಸರು ಈ ಬಾರಿ ಅತ್ಯಂತ ತಂತ್ರಗಾರಿಕೆಯಿಂದ ಮಹಿಳಾ ಸಿಬ್ಬಂದಿಯನ್ನೇ ಕಳುಹಿಸಿ ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ.

ವಿಮಾನದೊಳಗೆ ನಾಯಕರ ಆಕ್ರೋಶ, ವೀಡಿಯೊ ವೈರಲ್

ಮಹಿಳಾ ಪೊಲೀಸರು ವಿಮಾನದೊಳಗೆ ಬಂದು ವಶಕ್ಕೆ ಪಡೆದ ರೀತಿಗೆ ಆಕ್ಷೇಪ ವ್ಯಕ್ತಪಡಿಸಿದ ಅಭಿಜಿತ್ ದೀಪ್ಕೆ, ಪೊಲೀಸರೊಂದಿಗೆ ತೀವ್ರ ವಾಗ್ವಾದ ನಡೆಸಿದರು. “ವಿಮಾನದಿಂದ ಕೆಳಗೆ ಇಳಿಯುವವರೆಗೆ ಕಾಯಬಹುದಿತ್ತಲ್ಲವೇ? ದೇಶ ಎತ್ತ ಸಾಗುತ್ತಿದೆ ನೀವೇ ನೋಡಿ, ನಮ್ಮನ್ನು ನೇರವಾಗಿ ಬಂಧಿಸಲು ವಿಮಾನದೊಳಗೆ ಬಂದಿದ್ದಾರೆ. ಇಂತಹ ಸರ್ವಾಧಿಕಾರಿ ಧೋರಣೆಯನ್ನು ಇಂದಿರಾ ಗಾಂಧಿಯೂ ಮಾಡಿರಲಿಲ್ಲ” ಎಂದು ದೀಪ್ಕೆ ಆಕ್ರೋಶ ಹೊರಹಾಕಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಣ್ಣ ಮಟ್ಟದ ವಾಗ್ಯುದ್ದವನ್ನು ಹೊರತುಪಡಿಸಿ, ಯಾವುದೇ ದೊಡ್ಡ ಗೊಂದಲಕ್ಕೆ ಅವಕಾಶ ನೀಡದೆ ಪೊಲೀಸರು ದೀಪ್ಕೆ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೆ ಒತ್ತಾಯಿಸಿ ಸಿಜೆಪಿ ವತಿಯಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಬಂಧನದಿಂದ ದೆಹಲಿಯಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Continue Reading

BANGALORE

ಮಹಿಳೆಯರಿಗಾಗಿ ಚಪ್ಪಲಿ ಪ್ರತಿಭಟನೆ : ಬೆಂಗಳೂರಿನಲ್ಲಿ ಅಕ್ಟೋಬರ್ 8 ರಂದು ಸಿಇಒ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ; CJP ಕ್ರಮ

Published

on

ಬೆಂಗಳೂರು: ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ವೇಳೆ ಮಹಿಳಾ ಪತ್ರಕರ್ತೆಯರಿಗೆ ದೆಹಲಿ ಪೊಲೀಸರು ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಗಂಭೀರ ಆರೋಪ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ (SIR) ಅಕ್ರಮಗಳನ್ನು ಖಂಡಿಸಿ, ಕಾಕ್ರೋಚ್ ಜನತಾ ಪಾರ್ಟಿ (CJP) ವತಿಯಿಂದ ನಾಳೆ (ಅಕ್ಟೋಬರ್ 8) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ವಿನೂತನ ‘ಮಹಿಳೆಯರಿಗಾಗಿ ಚಪ್ಪಲಿ ಪ್ರತಿಭಟನೆ’ ಹಮ್ಮಿಕೊಳ್ಳಲಾಗಿದೆ.

ನಾಳೆ ಬೆಳಗ್ಗೆ 10:30 ರಿಂದ ಫ್ರೀಡಂ ಪಾರ್ಕ್‌ನಲ್ಲಿ ಈ ಪ್ರತಿಭಟನಾ ಸಭೆ ಹಾಗೂ ಕಾರ್ಯಕ್ರಮಗಳು ಆರಂಭವಾಗಲಿವೆ.

ಪ್ರತಿಭಟನೆಯ ಪ್ರಮುಖ ಮುಖ್ಯಾಂಶಗಳು:

ಪೀಪಲ್ಸ್ ಟ್ರಿಬ್ಯುನಲ್ (ಜನಾಭಿಪ್ರಾಯ ಸಭೆ): ಚಪ್ಪಲಿ ಪ್ರತಿಭಟನೆಗೂ ಮುನ್ನ, ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಅನ್ಯಾಯವಾಗಿ ಹೆಸರು ಕೈಬಿಡಲಾದ ಕನ್ನಡಿಗರೊಂದಿಗೆ ಸಂವಾದ ನಡೆಸಲು ಜನಾಭಿಪ್ರಾಯ ಸಭೆಯನ್ನು ಆಯೋಜಿಸಲಾಗಿದೆ.

ಮಹಿಳಾ ಪತ್ರಕರ್ತೆಯರ ಪರ ಒಗ್ಗಟ್ಟು: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ವಿರುದ್ಧ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳಾ ಪತ್ರಕರ್ತೆಯರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಹಾಗೂ ಅವರ ಪರವಾಗಿ ದನಿಯೆತ್ತಲು ಈ ಚಪ್ಪಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ. “ನಮ್ಮ ಮಹಿಳೆಯರ ಒಗ್ಗಟ್ಟಿಗಾಗಿ ಚಪ್ಪಲ್ ಪ್ರತಿಭಟನೆ” ನಡೆಯಲಿದೆ. “ನಿಮ್ಮೆಲ್ಲರನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೋಡಲು ಎದುರು ನೋಡುತ್ತಿದ್ದೇವೆ!” ಎಂದು ರಾಂಕಾ ಹೇಳಿದ್ದಾರೆ.

CJP ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ರಾಂಕಾ ಅವರ ಪೋಸ್ಟ್ ಅನ್ನು ಹಂಚಿಕೊಂಡು “ಅಕ್ಟೋಬರ್ 8 ರಂದು ಬೆಂಗಳೂರಿನಲ್ಲಿ ಸಿಗೋಣ!” ಎಂದು ಹೇಳಿದ್ದಾರೆ. 

ಪ್ರಮುಖರ ಭಾಗಿ: CJP ಸಂಸ್ಥಾಪಕ ಅಭಿಜೀತ್ ದೀಪ್ಕೆ, ಸಹ-ಸಂಚಾಲಕ ಅಶುತೋಷ್ ರಾಂಕಾ, ವಕ್ತಾರ ಸೌರವ್ ದಾಸ್ ಹಾಗೂ ಖ್ಯಾತ ನಟ ಪ್ರಕಾಶ್ ರಾಜ್ ಸೇರಿದಂತೆ ವಿವಿಧ ನಾಗರಿಕ ಸಮಾಜ ಮತ್ತು ಯುವ ಸಂಘಟನೆಗಳ ಪ್ರಮುಖರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

ಮುಂದಿನ ಹೆಜ್ಜೆ: ಮತದಾರರ ಪಟ್ಟಿ ಅಕ್ರಮಗಳನ್ನು ವಿರೋಧಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ CJP ಆಗ್ರಹಿಸುತ್ತಿದ್ದು, ಬೆಂಗಳೂರಿನ ಪ್ರತಿಭಟನೆಯ ಬೆನ್ನಲ್ಲೇ ಅಕ್ಟೋಬರ್ 10 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಕೂಡ ಸಂಘಟನೆ ಯೋಜಿಸಿದೆ.

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!