ರೌಡಿ ಶೀಟರ್ ಆರಿಫ್ ಹಂತಕರ ಬೆನ್ನಟ್ಟಿದ ಪೊಲೀಸರು! ರಕ್ತಸಿಕ್ತ ಕಾರು ವಶಕ್ಕೆ

ರೌಡಿ ಶೀಟರ್‌ ಆರೀಫ್‌ ಹತ್ಯೆಯ ಹಂತಕರ ಕಾರನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ವಶಕ್ಕೆ ಪಡೆಯುವ ಮೂಲಕ ಹಂತಕರ ಜಾಡನ್ನು ಪತ್ತೆಹಚ್ಚಿದ್ದಾರೆ. ನಗರದ ಹೊರವಲಯದ ತೊಕ್ಕೊಟ್ಟು ಫ್ಲೈಓವರ್ ಮೇಲೆ ಇಂದು ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಆರಿಫ್ ಎಂಬಾತನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿರುವ ಮಂಗಳೂರು ಪೊಲೀಸರು, ಹಂತಕರ ಕುರಿತು ಮಹತ್ವದ ಸುಳಿವು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾಗುವ ಮುನ್ನವೇ ಸಂಚು ರೂಪಿಸಿದ್ದ ಹಂತಕರು, ಆರಿಫ್‌ನನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ. … Continue reading ರೌಡಿ ಶೀಟರ್ ಆರಿಫ್ ಹಂತಕರ ಬೆನ್ನಟ್ಟಿದ ಪೊಲೀಸರು! ರಕ್ತಸಿಕ್ತ ಕಾರು ವಶಕ್ಕೆ