ಪುತ್ತೂರಿನ 1,000 ಮಂದಿಗೆ ಉದ್ಯೋಗ ನೀಡಿದರೆ ಕ್ಯಾಂಪ್ಕೋಗೆ 20 ಎಕರೆ ನಿವೇಶನ ಮಂಜೂರು: ಶಾಸಕ ಅಶೋಕ್ ರೈ ಭರವಸೆ

ವಿಟ್ಲ: ಕ್ಯಾಂಪ್ಕೋ ಸಂಸ್ಥೆಯು ಪುತ್ತೂರು ಭಾಗದ ಸುಮಾರು ಒಂದು ಸಾವಿರ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಲ್ಲಿ, ಸಂಸ್ಥೆಯ ಅಭಿವೃದ್ಧಿಗಾಗಿ 20 ಎಕರೆ ನಿವೇಶನವನ್ನು ಮಂಜೂರು ಮಾಡಿಸಿಕೊಡುವುದಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಘೋಷಿಸಿದ್ದಾರೆ. ವಿಟ್ಲದಲ್ಲಿ ಕ್ಯಾಂಪ್ಕೋ ಶಾಖೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಕ್ಯಾಂಪ್ಕೋ ಇಂದು ಬೃಹತ್ ಸಂಸ್ಥೆಯಾಗಿ ಬೆಳೆದು ನಿಂತಿದ್ದು, ಜಿಲ್ಲೆಯ ನೂರಾರು ಜನರಿಗೆ ಉದ್ಯೋಗ ನೀಡುವುದರ ಜೊತೆಗೆ ಕರಾವಳಿಯ ಕೀರ್ತಿಯನ್ನು ದೇಶ-ವಿದೇಶಗಳಲ್ಲಿ ಪಸರಿಸಿದೆ. ಜಿಲ್ಲೆಯ ಕೃಷಿಕರ ಹಿತರಕ್ಷಣೆಗಾಗಿ ಸಂಸ್ಥೆ ಇನ್ನಷ್ಟು … Continue reading ಪುತ್ತೂರಿನ 1,000 ಮಂದಿಗೆ ಉದ್ಯೋಗ ನೀಡಿದರೆ ಕ್ಯಾಂಪ್ಕೋಗೆ 20 ಎಕರೆ ನಿವೇಶನ ಮಂಜೂರು: ಶಾಸಕ ಅಶೋಕ್ ರೈ ಭರವಸೆ